ಹೊಸ ಕಾರು ವಾರಂಟಿ: ನಿಮಗಿದು ಗೊತ್ತೆ?

ನೀವು ಅಧಿಕೃತ ಸರ್ವಿಸ್ ಸ್ಟೇಷನಿನಲ್ಲೇ ಕಾರು ಸರ್ವಿಸ್ ಮಾಡಿಸ್ಕೊಳ್ಳಿ ಎಂದು ಎಲ್ಲಾ ಕಾರು ಕಂಪನಿಗಳು ರೆಕಮಂಡ್ ಮಾಡುತ್ತವೆ. ವಾರಂಟಿ ಮುಗಿಯೋ ಮುನ್ನ ಉಚಿತ ಸೇವೆ ದೊರಕುತ್ತದೆ. ಇದಕ್ಕಾಗಿ ಕಾರು ತಯಾರಕ ಕಂಪನಿಯ ನೆಟ್ವರ್ಕುಗಳನ್ನೇ ಬಳಸಬೇಕಾಗುತ್ತದೆ.

ಒಮ್ಮೊಮ್ಮೆ ಕಾರು ಸರ್ವಿಸ್ ಮತ್ತು ರಿಪೇರಿ ಬಿಲ್ ಕಾರಿನ ಲೈಫ್ ಟೈಮ್ ವೆಚ್ಚದ ಶೇಕಡ 40ರಷ್ಟು ಇರುತ್ತದೆ. ರಸ್ತೆ ಬದಿಯ ಮಾಮೂಲು ಗ್ಯಾರೇಜುಗಳಿಗಿಂತ ಲೇಬರ್ ಚಾರ್ಜ್ ಎರಡು ಪಟ್ಟು ಇರಬಹುದು. ಹೀಗಾಗಿ ವಾರಂಟಿ ಮುಗಿದ ಕೂಡಲೇ ಕೆಲವರು ಇಂತಹ ಗ್ಯಾರೇಜುಗಳಲ್ಲಿ ರಿಪೇರಿ ಮಾಡಿಸಿಕೊಳ್ಳುತ್ತಾರೆ.

ಆದರೆ ಕಾರು ಮಾರಾಟ ಮಾಡುವ ಸಮಯದಲ್ಲಿ ನೀವು ಅಧಿಕೃತ ಡೀಲರುಗಳ ಬಳಿ ರಿಪೇರಿ ಮಾಡಿಸಿಕೊಂಡ ಇತಿಹಾಸವಿದ್ದರೆ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಕೆಲವು ಖಾಸಗಿ ರಿಪೇರಿದಾರರು ನಿಮ್ಮ ಹೊಸ ಕಾರಿನ ಬಿಡಿಭಾಗ ಕದ್ದು, ನಕಲಿ ಭಾಗ ಜೋಡಿಸುವ ಅಪಾಯವೂ ಇದೆ.

ವಾರಂಟಿ ರಕ್ಷಣೆ ಹೇಗೆ?: ನಿಗದಿತ ಕಾಲಕ್ಕೆ ತಕ್ಕಂತೆ ಕಾರನ್ನು ಸರ್ವಿಸ್ ಮಾಡಿಸ್ಕೊಬೇಕು. ಪ್ರತಿಸಾರಿ ಸರ್ವಿಸ್ ಮಾಡಿಸ್ಕೊಂಡಾಗಲೂ ಸರ್ವಿಸ್ ಬುಕ್ಕಿಗೆ ಸ್ಟಾಂಪ್ ಹಾಕಿಸ್ಕೊಕೆ ಮರೆಯಬಾರದು.

ನೀವು ಕಾರನ್ನು ಮೊಡಿಫಿಕೇಷನ್ ಮಾಡುವುದರಿಂದ ಕಾರಿನ ವಾರಂಟಿ ಅಸಿಂಧುಗೊಳ್ಳಬಹುದು. ಫರ್ಮಾಮೆನ್ಸ್ ಬೂಸ್ಟಿಂಗ್ ಆಕ್ಸೆಸರಿ ಹಾಕಿದರೂ ವಾರೆಂಟಿ ಅನೂರ್ಜಿತಗೊಳ್ಳುವ ಸಾಧ್ಯತೆಯಿದೆ. ಸಿಎನ್ಜಿ/ಎಲ್ ಪಿಜಿ ಕಿಟ್ ಹಾಕಿಸ್ಕೊಂಡ್ರೂ ವಾರಂಟಿ ಮೇಲೆ ಪರಿಣಾಮ ಬೀರಬಹುದು.

ಒಂದ್ವಿಷ್ಯ ಖಚಿತಪಡಿಸಿಕೊಳ್ಳಿ. ಕಾರು ವಾರಂಟಿ ಕಾರು ಕಂಪನಿ ಹೆಸರಲ್ಲಿರಬೇಕು. ಡೀಲರ್ ಅಥವಾ ಶೋರೂಂ ಹೆಸರಲ್ಲಿ ಇರಬಾರದು. ಕಾರಿಗೆ ಆಕ್ಸೆಸರಿ ಅಳವಡಿಸಿಕೊಳ್ಳುವ ಮುನ್ನ ವಾರಂಟಿ ಪುಸ್ತಕವನ್ನೊಮ್ಮೆ ಗಮನವಿಟ್ಟು ಓದಿಕೊಳ್ಳಿ.

ವಾರಂಟಿ ಅಂದ್ರೆ ಇಷ್ಟೇ ಅಲ್ಲ. ಮುಂದಿನ ಪುಟನೋಡಿ.

Most Read Articles

Kannada
English summary
A car's warranty is determined by where you get the car serviced. Always buy your spares from authorized dealers and get the repairs done at authorized workshops to prevent cancellation of warranty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X