ಪೆಟ್ರೋಲ್‌ಗಿಂತ ಡೀಸೆಲ್ ಕಾರು ಯಾಕೆ ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಡೀಸೆಲ್ ಕಾರುಗಳು ತನ್ನ ಮಾರಾಟವನ್ನು ಕಳೆಗುಂದುತ್ತಿದೆ ಎಂಬುದರ ಬಗ್ಗೆ ಲೇಖನವೊಂದನ್ನು ಬರೆದಿದ್ದೆವು. ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಅಂತರ ಕಡಿಮೆಯಾಗಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿತ್ತು.

ಆದರೆ ವಿಶ್ಲೇಷಕರನ್ನು ಸಮೀಪಿಸಿದಾಗ ಈಗಲೂ ಪೆಟ್ರೋಲ್ ಕಾರುಗಳಿಂದ ಡೀಸೆಲ್ ಎಂಜಿನ್ ಕಾರುಗಳೇ ಶ್ರೇಷ್ಠ ಎಂಬ ಮಾತು ಕೇಳಿಬರುತ್ತಿದೆ. ಅದು ಏಕೆ ಅಂತೀರಾ? ಇದರ ಹಿಂದಿರುವ ವೈಜ್ಞಾನಿಕ ಕಾರಣವಾದರೂ ಏನು ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಕೆಳಗೆ ಕೊಟ್ಟಿರುವ ಚಿತ್ರ ಸಂಪುಟದತ್ತ ಮುಂದುವರಿಯಿರಿ.

ದೀರ್ಘ ಪಯಣ

ದೀರ್ಘ ಪಯಣ

ನಿಜವಾಗ್ಲೂ ನಿಮ್ಮ ದೈನಂದಿನ ಪಯಣದಲ್ಲಿ ಅಧಿಕ ದೂರ ಪಯಣಿಸುವುದಾದ್ದಲ್ಲಿ ನಿಸ್ಸಂಶಯವಾಗಿಯೂ ಡೀಸೆಲ್ ಕಾರನ್ನು ಖರೀದಿ ಮಾಡುವುದು ಹೆಚ್ಚು ಸೂಕ್ತ. ಅಂದರೆ ದೈನಂದಿನ 70ರಿಂದ 90 ಕೀ.ಮೀ. ಅಥವಾ ಅದಕ್ಕಿಂತಲೂ ಹೆಚ್ಚು ಪಯಣಿಸುವುದರಲ್ಲಿ ನಿಮಗೆ ಡೀಸೆಲ್ ಕಾರು ಹೆಚ್ಚು ಹೊಂದಿಕೆಯಾದಿತ್ತು. ಡೀಸೆಲ್ ಕಾರುಗಳನ್ನು ಪರಿಗಣಿಸಿದಾಗ ಪೆಟ್ರೋಲ್ ಮಾದರಿಗಳು ಹೆಚ್ಚು ಶಕ್ತಿಶಾಲಿ ಎನಿಸಿದರೂ ಕಡಿಮೆ ಮೈಲೇಜ್ ನೀಡುತ್ತದೆ. ಇದರಿಂದಾಗಿ ಹೆಚ್ಚು ಚಾಲನಾ ವೆಚ್ಚ ಖರ್ಚಾಗಲಿದೆ. ಹಾಗಾಗಿ ದೈನಂದಿನ 20ರಿಂದ 25 ಕೀ.ಮೀ ಸಂಚರಿಸುವುದಾದ್ದಲ್ಲಿ ಪೆಟ್ರೋಲ್ ಕಾರು ಹೊಂದಿಕೆಯಾಗಲಿದೆ.

ವಾಣಿಜ್ಯ ಬಳಕೆ

ವಾಣಿಜ್ಯ ಬಳಕೆ

ನಿಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಕಾರನ್ನು ಬಳಸುವುದಾದ್ದಲ್ಲಿ ಪೆಟ್ರೋಲ್ ಕಾರು ಓಕೆ ಎನ್ನಬಹುದು. ಆದರೆ ವಾಣಿಜ್ಯ ಅಥವಾ ವ್ಯಾಪಾರ ಅಗತ್ಯಗಳಿಗಾಗಿ ಡೀಸೆಲ್ ಮಾದರಿ ಆಯ್ಕೆ ಬೆಸ್ಟ್. ಮೇಲೆ ತಿಳಿಸಿದಂತೆಯೇ ಆರ್ಥಿಕತೆಯ ದೃಷ್ಟಿಕೋನದಲ್ಲೂ ಡೀಸೆಲ್ ಕಾರುಗಳು ನಿಮಗೆ ಹೆಚ್ಚು ಇಂಧನ ಕ್ಷಮತೆ ನೀಡುತ್ತದೆ.

ಹೆಚ್ಚು ಮೈಲೇಜ್

ಹೆಚ್ಚು ಮೈಲೇಜ್

ಈಗಾಗಲೇ ತಿಳಿಸಿರುವಂತೆಯೇ ಪೆಟ್ರೋಲ್‌ಗಿಂತ ಡೀಸೆಲ್ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತದೆ. ಸಣ್ಣ ಕಾರುಗಳಲ್ಲಿ ಇದು ಹೆಚ್ಚು ಭಾಸವಾಗದಿದ್ದರೂ ದೊಡ್ಡ ಕಾರು ಆಯ್ಕೆ ಮಾಡುವಾಗ ಖಂಡಿತವಾಗಿಯೂ ಇದು ನಿಮ್ಮ ಅನುಭವಕ್ಕೆ ಬರಲಿದೆ. ತಜ್ಞರ ಪ್ರಕಾರ 3 ಲೀಟರ್ ಪೆಟ್ರೋಲ್ ಎಂಜಿನ್ ಕಾರೊಂದು ಪ್ರತಿ ಲೀಟರ್‌ಗೆ 8ರಿಂದ 9 ಕೀ.ಮೀ. ಮೈಲೇಜ್ ನೀಡುವುದಾದರೆ ಡೀಸೆಲ್ ಕಾರುಗಳಲ್ಲಿ ಈ ಪ್ರಮಾಣ 11ರಿಂದ 12ರಷ್ಟು ಕೀ.ಮೀ.ಗಳಷ್ಟು ಆಗಿರಲಿದೆ. ಇದು ಶೇಕಡಾ 15ರಿಂದ 20ರಷ್ಟು ಹೆಚ್ಚಾಗಿದೆ.

ಆದರೆ 800ಸಿಸಿಗಳಂತಹ ಸಣ್ಣ ಕಾರುಗಳ ವಿಚಾರಕ್ಕೆ ಬಂದಾಗ ಕಡಿಮೆ ಮಾಲಿಕತ್ವ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಹೊಂದಿರುವ ಪೆಟ್ರೋಲ್ ಕಾರುಗಳು ತನ್ನ ಪ್ರತಿಸ್ಪರ್ಧಿ ಡೀಸೆಲ್ ಕಾರುಗಳನ್ನು ಮೀರಿ ನಿಂತಿದೆ.

ಯುರೋಪಿಯನ್ ಬ್ರಾಂಡ್

ಯುರೋಪಿಯನ್ ಬ್ರಾಂಡ್

ಡೀಸೆಲ್ ಕಾರು ಆಯ್ಕೆ ವಿಚಾರದಲ್ಲಿ ಯುರೋಪಿಯನ್ ಬ್ರಾಂಡ್ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಫೋಕ್ಸ್‌ವ್ಯಾಗನ್, ಆಡಿ, ಬಿಎಂಡಬ್ಲ್ಯುಗಳಂತಹ ಯುರೋಪ್‌ನ ವಾಹನ ತಯಾರಕ ಸಂಸ್ಥೆಗಳು ಹೆಚ್ಚೆಚ್ಚು ಡೀಸೆಲ್ ಕಾರುಗಳನ್ನು ಉತ್ಪಾದಿಸುತ್ತಿದೆ. ಮಾಡುತ್ತಿದೆ. ಇನ್ನೊಂದೆಡೆ ಪೆಟ್ರೋಲ್ ಮೇಲೆ ಅತಿ ಹೆಚ್ಚು ಹೂಡಿಕೆ ಮಾಡುತ್ತಿರುವ ಜಪಾನ್ ಹಾಗೂ ಅಮೆರಿಕದ ವಾಹನ ತಯಾರಕ ಸಂಸ್ಥೆಗಳು ಅತ್ಯುತ್ತಮ ಪೆಟ್ರೋಲ್ ಕಾರುಗಳನ್ನು ಹೊಂದಿದೆ. ನಿಮ್ಮ ಮಾಹಿತಿಗಾಗಿ ಮಾರುತಿ ಸಂಸ್ಥೆಯು ಫಿಯೆಟ್ ಡೀಸೆಲ್ ಎಂಜಿನ್‌ಗಳನ್ನು ಬಳಕೆ ಮಾಡುತ್ತಿದೆ. ಅಷ್ಟೇ ಯಾಕೆ ಕಳೆದ ವರ್ಷದ ವರೆಗೂ ಹೋಂಡಾ ಬಳಿ ಡೀಸೆಲ್ ಎಂಜಿನ್ ಇರಲಿಲ್ಲ ಎಂಬುದು ಸಹ ಗಮನಾರ್ಹವೆನಿಸುತ್ತದೆ.

ದೀರ್ಘ ಎಂಜಿನ್ ಬಾಳ್ವಿಕೆ

ದೀರ್ಘ ಎಂಜಿನ್ ಬಾಳ್ವಿಕೆ

ನಿಮಗೆ ಎಂಜಿನ್ ಹೆಚ್ಚು ಬಾಳ್ವಿಕೆ ಬರಬೇಕೆಂದರೆ ಡೀಸೆಲ್ ಎಂಜಿನ್‌ಗಳನ್ನು ಆಯ್ಕೆ ಮಾಡಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ಡೀಸೆಲ್ ಎಂಜಿನ್‌ಗಳು ಕಂಪ್ರೆಷನ್ ಟೈಪ್ ಇಗ್ನಿಷನ್‌ನಿಂದ ಕೆಲಸ ಮಾಡುತ್ತಿದ್ದು, ಇನ್ನೊಂದೆಡೆ ಪೆಟ್ರೋಲ್ ಎಂಜಿನ್ ಸ್ಪಾರ್ಕ್ ಇಗ್ನಿಷನ್ ವ್ಯವಸ್ಥೆ ಹೊಂದಿದೆ. ಇದರಿಂದಾಗಿ ಡೀಸೆಲ್ ಎಂಜಿನ್ ಬಾಳ್ವಿಕೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಸರಿಯಾಗಿ ನಿರ್ವಹಣೆ ಮಾಡಿದ ಡೀಸೆಲ್ ಎಂಜಿನ್‌ಗಳು 3ರಿಂದ ಕೆಲವೊಂದು ಬಾರಿ 5 ಲಕ್ಷ ಕೀ.ಮೀ. ವರೆಗೂ ನಿರ್ವಹಣೆ ನೀಡಲಿದೆ. ಇನ್ನೊಂದೆಡೆ ಪೆಟ್ರೋಲ್ ಕಾರು ಒಂದು ಲಕ್ಷ ಕೀ.ಮೀ. ವರೆಗೆ ಮಾತ್ರ ಹೊಂದಿರುತ್ತದೆ. ಸಹಜವಾಗಿಯೇ ಡೀಸೆಲ್ ಕಾರು ನಿರ್ವಹಣೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಮರು ಮಾರಾಟ ಮೌಲ್ಯ (depreciation cost)

ಮರು ಮಾರಾಟ ಮೌಲ್ಯ (depreciation cost)

ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ಕಾರುಗಳ ಮರು ಮಾರಾಟ ಮೌಲ್ಯ ಸಹ ಹೆಚ್ಚಿರುತ್ತದೆ. ಅಂದರೆ ದೇಶೀಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಡೀಸೆಲ್ ಕಾರುಗಳ ಮೌಲ್ಯ ಪೆಟ್ರೋಲ್ ಕಾರಿಗಿಂತ ಹೆಚ್ಚಾಗಿದೆ.

ಉತ್ತಮ ನಿರ್ವಹಣೆ

ಉತ್ತಮ ನಿರ್ವಹಣೆ

ಹೆಚ್ಚು ಆರ್‌ಪಿಎಂ ನಿರ್ವಹಿಸಬಲ್ಲ ಪೆಟ್ರೋಲ್ ಎಂಜಿನ್‌ಗಳು ಅತ್ಯುತ್ತಮ ಕ್ಷಮತೆ ಹೊಂದಿವೆ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಸ್ಪಾರ್ಕ್ ಇಗ್ನಿಷನ್ ಹಾಗೂ ಹಗುರ ಭಾರವನ್ನು ಹೊಂದಿರುತ್ತದೆ. ಸಹಜವಾಗಿಯೇ ತಾಂತ್ರಿಕವಾಗಿ ಪೆಟ್ರೋಲ್ ಎಂಜಿನ್‌ಗಳು ಉನ್ನತ ದರ್ಜೆ ಕಾಯ್ದುಕೊಂಡಿದೆ. ಆದರೆ ಹೈ ಟೆಕ್ ಡೀಸೆಲ್ ಎಂಜಿನ್‌ಗಳ ಮುಂದೆ ಇದು ಏನು ಅಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಲ್ಲದೆ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌ಗಳು ನಿರ್ವಹಣೆಗೆ ಉತ್ತೇಜನ ನೀಡುತ್ತದೆ.

ಪೆಟ್ರೋಲ್‌ಗಿಂತ ಡೀಸೆಲ್ ಕಾರು ಯಾಕೆ ಬೆಸ್ಟ್?

ಅಂದ ಹಾಗೆ ನಿಮ್ಮ ಬಳಿ ಡೀಸೆಲ್ ಅಥವಾ ಪೆಟ್ರೋಲ್ ಕಾರು ಇದೆಯೇ ? ನಿಮ್ಮ ಕಾರಿನ ನಿರ್ವಹಣೆ ಹಾಗೂ ಮೈಲೇಜ್ ಇತ್ಯಾದಿ ವಿಚಾರಗಳ ಬಗ್ಗೆ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿರಿ.


Most Read Articles

Kannada
English summary
Why diesel cars still better than petrol Cars. Here are some cases when a diesel variant would make sense
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X