ಬಿಳಿ ಬಣ್ಣದ ಕಾರು ಖರೀದಿ ಹೆಚ್ಚು ಸೂಕ್ತ ಯಾಕೆ?

By Nagaraja

ಜಗತ್ತಿನೆಲ್ಲೆಡೆ ಬಿಳಿ ಬಣ್ಣಗಳ ಕಾರು ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ. ಭಾರತ ಸೇರಿದಂತೆ ಉತ್ತರ ಅಮೆರಿಕಾ ಹಾಗೂ ಜಪಾನ್ ರಾಷ್ಟ್ರಗಳಲ್ಲೂ ವೈಟ್ ಕಾರು ಬಳಕೆ ಹೆಚ್ಚಾಗಿದೆ.

ಜನರು ಬಿಳಿ ಕಾರನ್ನು ಇಷ್ಟಪಡಲು ಅನೇಕ ಕಾರಣಗಳಿವೆ. ಹಾಗಿದ್ದರೂ ಅಂತಿಮವಾಗಿ ಖರೀದಿಗಾರ ತಮ್ಮದೇ ಆದ ನಿರ್ದಿಷ್ಟ ಕಾರಣವನ್ನು ಹೊಂದಿರುತ್ತಾನೆ.

ರಿ ಸೇಲ್ ಮೌಲ್ಯ ಜಾಸ್ತಿಯಾಗಿರುವುದು, ಸುರಕ್ಷತೆ ಮಾನದಂಡ ಸಾಬೀತಾಗಿರುವುದು ಹಾಗೂ ಪರಿಸರ ಸ್ನೇಹಿ ಆಗಿದ್ದರಿಂದ ಸಾಮಾನ್ಯವಾಗಿ ಗ್ರಾಹಕರು ಬಿಳಿ ಕಾರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನು ಸುಲಭ ವಿಚಾರವೆಂದರೆ ವೈಟ್ ಕಾರುಗಳು ಹೆಚ್ಚು ಅಂದವಾಗಿ ಗೋಚರಿಸುತ್ತದೆ.

ಡುಪೊಂಟ್ ಗ್ಲೋಬಲ್ ಆಟೋಮೋಟಿವ್ ಕಲರ್ ಪೊಪ್ಯುಲಾರಿಟಿ ವರದಿ (DuPont Global Automotive Color Popularity Report) ಪ್ರಕಾರ ಬಿಳಿ ಜತೆಗೆ ಕಪ್ಪು ಹಾಗೂ ಸಿಲ್ವರ್ ಬಣ್ಣದ ಕಾರುಗಳಿಗೆ ಗ್ರಾಹಕರು ಹೆಚ್ಚಿನ ಮಾನ್ಯತೆ ಕೊಡುತ್ತಾರೆ. ಇದುವೇ ವಿಶ್ವದ್ಯಾಂತ ಬಿಳಿ ಕಾರಿನ ಯಶಸ್ಸಿಗೆ ಕಾರಣವಾಗಿದೆ.

ಹಾಗಿದ್ದರೆ ಬಿಳಿ ಬಣ್ಣದ ಕಾರು ಖರೀದಿ ಹೆಚ್ಚು ಸೂಕ್ತ ಯಾಕೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿಯೋಣ ಬನ್ನಿ...

ಕ್ಲಾಸಿಕ್ ಸ್ಟೈಲ್

ಕ್ಲಾಸಿಕ್ ಸ್ಟೈಲ್

ಬಿಳಿ ಬಣ್ಣದ ಕಾರುಗಳ ಕ್ಲಾಸಿಕ್ ಶೈಲಿ ಅತಿ ಹೆಚ್ಚು ಆಕರ್ಷಿಸುತ್ತಿದೆ. ಖರೀದಿಗಾರರ ಪ್ರಕಾರ ಬಿಳಿ ಬಣ್ಣದ ಕಾರುಗಳು ವರ್ಷಗಳು ಉರುಳಿದರೂ ಹೊಸ ರೂಪವನ್ನು ಪಡೆದುಕೊಂಡಿರುತ್ತದೆ. ಹಾಗಾಗಿ ಹಣಕಾಸು ಸಮಸ್ಯೆ ಇದ್ದವರಿಗೆ ಬಿಳಿ ಕಾರು ಹೆಚ್ಚು ಸೂಕ್ತವೆನಿಸುತ್ತದೆ.

ಕಾರಿನ ಮೌಲ್ಯ ಹೆಚ್ಚು

ಕಾರಿನ ಮೌಲ್ಯ ಹೆಚ್ಚು

ಇನ್ನು ಕೆಲವರ ಪ್ರಕಾರ ಪಿಯರ್ಲ್ ವೈಟ್ ಕಾರಿನ ಮೌಲ್ಯವನ್ನು ಹೆಚ್ಚಿಸುತ್ತದೆ. ದೀರ್ಫಾವಧಿಯನ್ನು ದೃಷ್ಟಿಕೋನದಲ್ಲಿಡುವಾಗ ಈ ಎಲ್ಲ ವಿಚಾರಗಳು ಅತಿ ಹೆಚ್ಚು ಮಹತ್ವವನ್ನು ಗಿಟ್ಟಿಸಿಕೊಳ್ಳುತ್ತದೆ. ವೈಟ್ ಕಲರ್ ಕಾರಿಗೆ ಹೋಲಿಸಿದರೆ ಡೇ ಟೈಮ್‌ನಲ್ಲಿ ಇತರ ಕಾರುಗಳು ಸೂರ್ಯ ಕಿರಣವನ್ನು ಅತ್ಯಂತ ಹೆಚ್ಚು ಹೀರುತ್ತವೆ.

ರಿ ಸೇಲ್ ಮೌಲ್ಯ ಜಾಸ್ತಿ

ರಿ ಸೇಲ್ ಮೌಲ್ಯ ಜಾಸ್ತಿ

ಇನ್ನು ಇತರ ಬಣ್ಣಗಳ ಕಾರುಗಳನ್ನು ಹೋಲಿಸಿದಾಗ ಬಿಳಿ ಬಣ್ಣದ ಕಾರುಗಳ ರಿ ಸೇಲ್ ಮೌಲ್ಯ ಹೆಚ್ಚಾಗಿದೆ. ಹಾಗೆಯೇ ಇತರ ಬಣ್ಣಗಳ ಕಾರುಗಳಿಗೆ ನಿರ್ವಹಣಾ ವೆಚ್ಚ ಕೂಡಾ ಜಾಸ್ತಿಯಾಗಿರುತ್ತದೆ.

ಸುರಕ್ಷತಾ ಮಾನದಂಡ

ಸುರಕ್ಷತಾ ಮಾನದಂಡ

ಸುರಕ್ಷತೆಯ ದೃಷ್ಟಿಕೋನದಿಂದಲೂ ಬಿಳಿ ಬಣ್ಣದ ಕಾರು ಖರೀದಿ ಹೆಚ್ಚು ಸೂಕ್ತವಾಗಿದೆ. ವೈಟ್ ಬಣ್ಣದ ಕಾರುಗಳು ವಿಶೇಷವಾಗಿ ರಾತ್ರಿ ಪಯಣದ ವೇಳೆ ಹೆಚ್ಚು ಗೋಚರತೆಯನ್ನು ಹೊಂದಿದ್ದು, ಯಾವುದೇ ಹವಾಮಾನದಲ್ಲೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ.

ಕಡಿಮೆ ಎ.ಸಿ

ಕಡಿಮೆ ಎ.ಸಿ

ಇನ್ನು ತಾಂತ್ರಿಕತೆ ದೃಷ್ಟಿಕೋನದಿಂದಲೂ ಬಿಳಿ ಕಾರು ನೆಚ್ಚಿನ ಆಯ್ಕೆಯಾಗಿರಲಿದೆ. ಕಡಿಮೆ ಎಸಿ, ಕಡಿಮೆ ಗ್ಯಾಸ್ ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಕಾರನ್ನು ತಂಪಾಗಿರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಶುಭ್ರವಾದ ಕಲರ್

ಶುಭ್ರವಾದ ಕಲರ್

ಬಿಳಿ ಬಣ್ಣದ ಕಾರು ಖರೀದಿ ಮಾಡುವ ಬಹುತೇಕ ಗ್ರಾಹಕರ ಅಭಿಪ್ರಾಯದಂತೆ ಶುಭ್ರವಾದ ಕಲರ್ ಹೆಚ್ಚು ಪ್ರಿಯವೆನಿಸಿದೆ. ಇದು ಕಾರಿಗೆ ಪರಿಪೂರ್ಣತೆ, ತಾಜಾತನ ಹಾಗೂ ಶುಭ್ರತನ ನೀಡುತ್ತದೆ. ಹೆಚ್ಚು ಧೂಳಿನ ಕಣಗಳು ಅಂಟಿಕೊಳ್ಳುವುದಿಲ್ಲವಾಗಿದ್ದರಿಂದ ವಾಶ್ ಮಾಡುವ ಸಂದರ್ಭದಲ್ಲಿ ನೀರಿನ ಬಳಕೆ ಕೂಡಾ ಕಡಿಮೆ ಮಾಡಲಿದೆ.

ನಿಮ್ಮ ಫೇವರಿಟ್ ಯಾವುದು?

ನಿಮ್ಮ ಫೇವರಿಟ್ ಯಾವುದು?

ಇದೀಗ ಹೇಳಿ ನಿಮ್ಮ ನೆಚ್ಚಿನ ಕಾರು ಕಲರ್ ಯಾವುದು? ಹಾಗೆಯೇ ಯಾವ ಬಣ್ಣದ ಕಾರು ಖರೀದಿ ಮಾಡಲು ಬಯಸುವೀರಾ? ನಿಮ್ಮ ಎಲ್ಲ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ...

Most Read Articles

Kannada
English summary
White is a popular color for cars worldwide.There are many reasons why this is so, but ultimately each car buyer has his or her own reasons for selecting a specific hue. Some commonly stated reasons for the popularity of white cars include the resale value of a classic color, proven safety, and environmental factors. They are also thought of as being easier to keep looking clean.
Story first published: Saturday, February 23, 2013, 9:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X