ಫೆರಾರಿ ಕೆಂಪು ಸುಂದರಿಯನ್ನು ನಿಮ್ ಸುಂದ್ರಿಗೆ ಕೊಡಿ

ಗುರುವಾರ, ಫೆಬ್ರವರಿ 9, 2012, 14:24 [IST]
Gift Your Valentine Ferrari 458 Spider Red Car
ಪ್ರೇಮಿಗಳ ದಿನಕ್ಕೆ ನೀಡಬಹುದಾದ ದುಬಾರಿ ಕೆಂಪು ಕಾರುಗಳ ಪಟ್ಟಿಯಲ್ಲಿ ಫೆರಾರಿ ಕಾರೊಂದು ಅಗ್ರಸ್ಥಾನದಲ್ಲಿದೆ. ಫೆರಾರಿ 458 ಹೆಸರಿನ ಈ ಕಂಡು ಕೆಂಪು ಕಾರು ಎಲ್ಲರ ಕಣ್ಮನ ಸೆಳೆಯುವಂತಿದೆ. ಕೆಂಪು ಎಂದರೆ ಫ್ಯಾಷನ್. ರೋಷ ಮತ್ತು ಪ್ರೀತಿಯ ಸಂಕೇತವಾಗಿರುವ ಕೆಂಪು ಬಣ್ಣದ ಈ ಕಾರಿನ ಕುರಿತು ಕೊಂಚ ಮಾಹಿತಿ ಇಲ್ಲಿದೆ.

ಈ ಕಾರು 458 ಇಟಲಿಯಾ ಫ್ಯಾಮಿಲಿ ಸೇರಿದ್ದು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ. ಇದು 4499 ಸಿಸಿಯ ವಿ8 ಎಂಜಿನ್ ಹೊಂದಿದೆ. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಕೇವಲ 3.4 ಸೆಕೆಂಡಿನಲ್ಲಿ 0-100 km/h ವೇಗ ಪಡೆದುಕೊಳ್ಳಬಹುದಾಗಿದೆ.

ಈ ಕಾರು ಪ್ರತಿಲೀಟರ್ ಇಂಧನಕ್ಕೆ 11.9 ಕಿ.ಮೀ. ಮೈಲೇಜ್ ನೀಡುತ್ತದೆ. ಇದು ಡ್ಯೂಯಲ್ ಕ್ಲಚ್, 7 ಸ್ಪೀಡಿನ ಎಫ್1 ಗೇರ್ ಬಾಕ್ಸ್ ಹೊಂದಿದೆ. ಅತ್ಯಧಿಕ ಕಾರ್ಯಕ್ಷಮತೆಯ ಎಬಿಎಸ್ ಸಿಸ್ಟಮ್ ಸೇರಿದಂತೆ ಹತ್ತು ಹಲವು ಫೀಚರುಗಳನ್ನು ಹೊಂದಿದೆ.
Topics: ಕಾರು, car
English summary
The colour red dominates during the season of love,mostly on Valentine's day. If you are thinking of gifting something really wonderful and valuable to your loved ones, then we suggest you gift one of these Ferrari 458 Spider Car.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.