ಆವೇಶದ ಹಮ್ಮರ್ ಹಮ್ಮೀರ ದರ್ಶನ್ ತೂಗುದೀಪ

By * ಪಿಸಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸುದ್ದಿಯಲ್ಲಿದ್ದಾರೆ. ನಿನ್ನೆ ರಾತ್ರಿ ಪಾನಮತ್ತನಾಗಿ ಬಂದು ಪತ್ನಿ, ಮಗುವಿನ ಮೇಲೆ ಹಲ್ಲೆ ಮಾಡಿದ್ದು ಆರೋಪ. ದರ್ಶನ್ ತೂಗುದೀಪ ಅವರಿಗೆ ಒಂದಿಷ್ಟು ಆವೇಶ, ಕೋಪ ಜಾಸ್ತಿಯಂತೆ. ಆದರೂ ಅವರ ಕೆಲವು ಸಿನಿಮಾಗಳಲ್ಲಿ ಫೈಟ್ ನಂತೆಯೇ ಹಾಸ್ಯ, ಮ್ಯಾನರಿಸಂ ಇರುತ್ತದೆ.

ಇಂತಹ ಆವೇಶದ ದರ್ಶನ್ ಬಳಿ ಸಾಕಷ್ಟು ಕುದುರೆಗಳಿವೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಎಷ್ಟು ಕಾರುಗಳಿವೆ. ಯಾವ ಕಾರುಗಳಿವೆ ಅನ್ನೋದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ ಅನ್ನೋದು ನನ್ನ ಮೌಢ್ಯ. ಅವರಲ್ಲಿ ಆಡಿ ಎ6 ಮತ್ತು ಟೊಯೊಟಾ ಫಾರ್ಚ್ಯುನರ್ ಕಾರುಗಳಿವೆ.

ದರ್ಶನ್ ಕಾರು ಗ್ಯಾರೇಜಿಗೆ ಹೊಸದಾಗಿ ಕೆಲವು ವರ್ಷಗಳ ಹಿಂದೆ(2008)ಕ್ಕೆ ಜೊತೆಯಾದದ್ದು ಹಮ್ಮರ್ ಎಚ್ 3 ಕಾರು. ಇದನ್ನು ದುಬೈನಲ್ಲಿ ಆಮದು ಮಾಡಿಕೊಳ್ಳಲಾಗಿತ್ತು.

ದರ್ಶನ್ ತೂಗುದೀಪ ಬಳಿಯಿರುವ ಹಮ್ಮರ್ ಎಚ್3 ನೆಪವನ್ನಿಟ್ಟುಕೊಂಡು ಹಮ್ಮರ್ ಕಾರಿನ ಕುರಿತು ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ. ಇದು ಹೆಚ್ಚಿನ ಸೆಲೆಬ್ರಿಟಿಗಳಿಗೆ ಇಷ್ಟವಾದ ಕಾರು. ಹಮ್ಮರ್ ಎಚ್3- ಆಫ್ ರೋಡಿಗೂ ಸೈ ಎನಿಸುವ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್. ಹಮ್ಮರ್ ಎಚ್3 ಅಂದ್ರೆ ಆವೇಶದ ಕಾರು. ಥೇಟ್ ದರ್ಶನ್ ನಂತೆ!

ಒಂದನೊಂದು ಕಾಲದಲ್ಲಿ: ಹಮ್ಮರ್ ಅಂದ್ರೆ ಟ್ರಕ್ ನಂತಹ ಕಾರು. ಆರಂಭದಲ್ಲಿ ಈ ಬ್ರಾಂಡ್ ಹೊಂದಿದ್ದದ್ದು ಎಎಂ ಜನರಲ್ ಮೋಟರ್ಸ್. ನಂತರ ಇದನ್ನು ಡೆಟ್ರೈಟ್ ಮೂಲದ ಜನರಲ್ ಮೋಟರ್ಸ್ ಸ್ವಾಧೀನಪಡಿಸಿಕೊಂಡಿತ್ತು.

ಜನರಲ್ ಮೋಟರ್ಸ್ ಹಮ್ಮರ್ ಬ್ರಾಂಡಿನಲ್ಲಿ ಮೂರು ಆವೃತ್ತಿಗಳನ್ನು ಹೊರತಂದಿದೆ. ಅದರ ಹೆಸರು ಹಮ್ಮರ್ ಎಚ್3, ಹಮ್ಮರ್ ಎಚ್2 ಮತ್ತು ಹಮ್ಮರ್ ಎಚ್1. ಅದರಲ್ಲಿ ಎಚ್3 ಕಾರು ಕನ್ನಡ ಚಿತ್ರನಟ ದರ್ಶನ್ ತೂಗುದೀಪ ಬಳಿಯಿದೆ.

ಎಂಜಿನ್ ಮಾಹಿತಿ: ಹಮ್ಮರ್ ಎಚ್3 ಕಾರು 3,700ಸಿಸಿಯ ಡೀಸೆಲ್ ಎಂಜಿನ್ ಹೊಂದಿದೆ. ಇದು 5,800ಆರ್ ಪಿಎಂಗೆ 239 ಹಾರ್ಸ್ ಪವರ್ ನೀಡುತ್ತದೆ. ಈ ವಾಹನ ಎದುರುಭಾಗದಲ್ಲಿ ವೆಂಟಿಲೇಟೆಡ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸಿಸ್ಟಮ್ ಹೊಂದಿದೆ. ಇದು 4 ಆಟೋಮ್ಯಾಟಿಕ್ ಗೇರ್ ಹೊಂದಿದೆ. ಇದರ ಇಂಧನ ಟ್ಯಾಂಕ್ ಸಾಮರ್ಥ್ಯ 88 ಲೀಟರ್ ಆಗಿದೆ.

ದರ: ಸ್ಪೋರ್ಟ್ಸ್ ಯುಟಿಲಿಟಿ ಸೆಗ್ಮೆಂಟಿಗೆ ಹೋಲಿಸಿದರೆ ಹಮ್ಮರ್ ಕೊಂಚ ದುಬಾರಿ ಕಾರು. ಇದರ ದರ ಸುಮಾರು 40 ಲಕ್ಷ ರು. ಆಸುಪಾಸಿನಲ್ಲಿದೆ. ಆದರೆ ದರ್ಶನ್ ತೂಗುದೀಪ, ಜಾನ್ ಅಬ್ರಾಹಂನಂತಹ ಆವೇಶದ ನಟರಿಗೆ ಈ ಕಾರು ಸವಾರಿ ಇಷ್ಟವಂತೆ.

ಮೈಲೇಜ್: ಮೈಲೇಜ್ ವಿಷ್ಯ ತೃಪ್ತಿದಾಯಕವಲ್ಲ. ಯಾಕೆಂದರೆ ಇದು ಸಿಟಿ ರಸ್ತೆಗಳಲ್ಲಿ ಪ್ರತಿಲೀಟರ್ ಡೀಸಲ್ ಗೆ 6 ಕಿ.ಮೀ. ಮತ್ತು ಹೆದ್ದಾರಿ ರಸ್ತೆಯಲ್ಲಿ ಪ್ರತಿಲೀಟರ್ ಗೆ 7 ಕಿ.ಮೀ. ಮೈಲೇಜ್ ನೀಡುತ್ತದೆ.

ಇಂಟಿರಿಯರ್ ಗೆ ಇಣುಕಿ: ಇಂಟಿರಿಯರ್ ಗೆ ಇಣುಕಿದಾಗ ಈ ಕಾರಿನಲ್ಲಿ ಕೆಲವು ಆಕರ್ಷಕ ವಿಷಯಗಳು ಗಮನ ಸೆಳೆಯುತ್ತವೆ. ಅತ್ಯುತ್ತಮ ಗುಣಮಟ್ಟದ ಮೆಟಿರಿಯಲ್ಸ್ ಒಳಗಡೆ ಇದೆ. ಉಳಿದಂತೆ ಬ್ಲೂಟೂಥ್, ರಿಮೋಟ್ ಕಿಲೆಸ್ ಎಂಟ್ರಿ, ಪವರ್ ವಿಂಡೋ, 6 ಡಿಸ್ಕ್ ಸಿಡಿ ಪ್ಲೇಯರ್ ಮತ್ತು ಡಿವಿಡಿ ಮನರಂಜನೆ ಸಾಧನವಿದೆ. ಇದರಲ್ಲಿ ಕ್ಲೈಮೇಟ್ ಕಂಟ್ರೊಲ್ ಫೀಚರ್ಸ್ ಕೂಡ ಇದೆ.

Most Read Articles

Kannada
English summary
Darshan Thoogudeep Car Craze: Darshan owned brand new Hummer H3 Car(Imported from Dubai). He also Owned Audi A6, Toyota Fortuner. Here is full details of Hummer H3. Hummer H3 Review, Specification, Mileage etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X