ದೈನಂದಿನ ಪ್ರಯಾಣಿಕಗಾಗಿ ವಿಮಾನಯಾನದಲ್ಲಿ ಬಚ್ಚಿಟ್ಟ 10 ರಹಸ್ಯಗಳು!

ಪ್ರತಿಯೊಬ್ಬ ಯಾತ್ರಿಕರು ತಿಳಿದುಕೊಳ್ಳಬೇಕಾದ ವಿಮಾನಯಾನದ ಸತ್ಯಗಳು

By Nagaraja

ವಿಮಾನಯಾನಗಳ ಬಗ್ಗೆ ಸಾಕಷ್ಟು ಕಟ್ಟುಕಥೆಗಳನ್ನು ನಾವು ಕೇಳಿರುತ್ತೇವೆ. ಆಧುನಿಕ ಜಗತ್ತಿನಲ್ಲಿ ಇವೆಲ್ಲದಕ್ಕೂ ಯಾರೂ ಆಸ್ಪದ ಕೊಡುವುದಿಲ್ಲ. ಜಗತ್ತಿನ ಅತ್ಯಂತ ಸುರಕ್ಷಿತ ವ್ಯವಸ್ಥೆಗಳಲ್ಲಿ ವಿಮಾನಯಾನ ಒಂದಾಗಿದೆ. ವಿಮಾನಯಾನದಲ್ಲಿ ನೀಡುವ ಆಹಾರ ರುಚಿಕರವಲ್ಲವೇ? ಯಾತ್ರಿಕ ಗಗನಯಾತ್ರಿ ಎಂದೆನಿಸಿಕೊಳ್ಳುವ ಸಾಧ್ಯತೆ ಇದೆಯೇ ? ಅತ್ಯಂತ ಎತ್ತರದಲ್ಲಿ ಹಾರುವಾಗ ಉಸಿರಾಟದ ತೊಂದರೆ ಕಾಡುತ್ತಿದೆಯೇ ? ಎಂಬಿತ್ಯಾದಿ ಕುತೂಹಲದಾಯಕ 10 ರಹಸ್ಯಗಳ ಬಗ್ಗೆ ಇಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗುವುದು.

01. ಗಗನಯಾತ್ರಿ

01. ಗಗನಯಾತ್ರಿ

ಸಮುದ್ರ ಮಟ್ಟಕ್ಕಿಂತ 10,000 ಮೀಟರ್ ಎತ್ತರದಲ್ಲಿ ಹಾರುವ ನೀವು ಗಗನಯಾತ್ರಿ ಎನಿಸಿಕೊಳ್ಳಲು ಮತ್ತಷ್ಟು 90 ಕೀ.ಮೀ. ಗಳಷ್ಟು ಎತ್ತರವನ್ನು ಕ್ರಮಿಸಬೇಕಿದೆ. ಫೇಡರೇಷನ್ ಏರೋನಾಟಿಕ್ ಇಂಟರ್ ನ್ಯಾಷನಲ್ (ಎಫ್ ಎಐ) ಪ್ರಕಾರ ಗಗನಯಾತ್ರಿಕನೊಬ್ಬ 'ಕರ್ಮನ್' ಗೆರೆ ದಾಟಲು ಸಮುದ್ರ ಮಟ್ಟಕ್ಕಿಂತ 100 ಕೀ.ಮೀ. ಎತ್ತರದಲ್ಲಿ ಹಾರಾಡಬೇಕು. ಇಷ್ಟೊಂದು ಎತ್ತರದಲ್ಲಿ ಹಾರಾಡುವ ವಿಮಾನಗಳನ್ನು ವಿಮಾನ ಎಂಬುದರ ಬದಲಾಗಿ ಗಗನ ನೌಕೆ ಎಂದು ಹೆಸರಿಸಲಾಗುತ್ತದೆ.

02. ಉಸಿರಾಟದ ಪ್ರಭಾವ

02. ಉಸಿರಾಟದ ಪ್ರಭಾವ

ಕಡಿಮೆ ಒತ್ತಡದ ಪರಿಸ್ಥಿತಿಯಲ್ಲಿ ಮಾನವ ದೇಹವು ಆಮ್ಲಜನಕವನ್ನು ಹೊರತೆಗೆಯುವ ಮತ್ತು ಹೀರಿಕೊಳ್ಳುವಷ್ಟು ಉತ್ತಮವಲ್ಲ. ಹಾಗಾಗಿ ಎಲ್ಲ ವಾಣಿಜ್ಯ ವಿಮಾನಗಳು ಎತ್ತರದಲ್ಲಿ ಹಾರಾಡುವಾಗ ಕ್ಯಾಬಿನ್ ಗಾಳಿ ಒತ್ತಡವನ್ನು ಕಾಪಾಡಿಕೊಳ್ಳುತ್ತದೆ. ಹೊರಗಡೆಯ ಗಾಳಿಯು ಹೆಚ್ಚು ಶೀತ ಹಾಗೂ ಒಣವಾಗಿರುತ್ತದೆ. ಇದನ್ನು ಒಳಗಡೆಯಲ್ಲಿ ಫಿಲ್ಟರ್ ಮಾಡಿದ ಗಾಳಿಯೊಂದಿಗೆ ಮಿಶ್ರಣ ಮಾಡಲಾಗುತ್ತದೆ.

03. ಆಹಾರಕ್ಕೆ ರುಚಿ ಕಡಿಮೆ

03. ಆಹಾರಕ್ಕೆ ರುಚಿ ಕಡಿಮೆ

ವಿಮಾನದಲ್ಲಿ ಹಾರುವಾಗ ಆಹಾರದ ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಡಿಮೆ ಸೂಕ್ಷ್ಮತೆಯನ್ನು ಹೂಂದಿರುತ್ತದೆ. ಕಡಿಮೆ ಹಾಗೂ ಒಣ ಒತ್ತಡದ ಕ್ಯಾಬಿನ್ ನಿಂದಾಗಿ ಆಹಾರದ ಉಪ್ಪು, ಹುಳಿ, ಕಹಿ, ಸಿಹಿ ಮತ್ತು ಸ್ವಾರಸ್ಯವನ್ನು ರುಚಿ ಮಾಡುವ ಸಾಮರ್ಥ್ಯವು ಕಡಿಮೆಯಾಗಿರುತ್ತದೆ. ಹಾಗೆಯೇ ಕಡಿಮೆ ಒತ್ತಡದ ವಾಯು ಪ್ರದೇಶದಿಂದಾಗಿ ಕಾಫಿ, ಟೀ ಸಹ ಕಡಿಮೆ ಬಿಸಿಯಾಗಿರುತ್ತದೆ.

04. ಇಂಧನ

04. ಇಂಧನ

ಪೆಟ್ರೋಲಿಯಂ ಆಧಾರಿತ ವಿಶೇಷ ರೀತಿಯ ಇಂಧನವನ್ನು ವಿಮಾನಯಾನಕ್ಕಾಗಿ ಬಳಸಲಾಗುತ್ತದೆ. ಸಾಧಾರಣ ಇಂಧನಗಳಿಗೆ ಹೋಲಿಸಿದಾಗ ಇದು ಅತ್ಯುನ್ನತ್ತ ಗುಣಮಟ್ಟವನ್ನು ಹೊಂದಿದ್ದು, ಸಾಮಾನ್ಯವಾಗಿ ಗರಿಷ್ಠ ತಾಪಮಾನದಲ್ಲಿ ಸ್ಪೋಟಗೊಳ್ಳದಂತೆ ಅಥವಾ ಹಿಮಗಟ್ಟದಂತೆ ನೋಡಿಕೊಳ್ಳುವ ಮೂಲಕ ಅಪಾಯವನ್ನು ಕಡಿಮೆ ಮಾಡುತ್ತದೆ. 2020ರ ವೇಳೆಯಾಗುವಾಗ ಜೈವಿಕ ಇಂಧನ ಬಳಕೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ.

05. ವಿಮಾನ ಹಿಂದೆ ಸಣ್ಣ ಟರ್ಬೈನ್

05. ವಿಮಾನ ಹಿಂದೆ ಸಣ್ಣ ಟರ್ಬೈನ್

ಸಾಮಾನ್ಯವಾಗಿ ಬೃಹತ್ ವಿಮಾನಗಳ ಹಿಂದುಗಡೆ ರೆಕ್ಕೆಗಳಲ್ಲಿ ಸಣ್ಣದಾದ ಗ್ಯಾಸ್ ಟರ್ಬೈನ್ ಗಳನ್ನು ಜೋಡಿಸಲಾಗಿರುತ್ತದೆ. ಇದನ್ನು ಆಕ್ಸಿಲರಿ ಪವರ್ ಯುನಿಟ್ ಅಥವಾ ಎಪಿಯು ಎಂದು ಕರೆಯಲಾಗುತ್ತದೆ. ಇದನ್ನು ವಿಮಾನವನ್ನು ಮುಂದಕ್ಕೆ ತಳ್ಳಲು ಬಳಕೆ ಮಾಡಲಾಗುತ್ತಿಲ್ಲ ಬದಲಾಗಿ ಎಸಿಗಳಂತಹ ಎಲೆಕ್ಟ್ರಿಕ್ ವ್ಯವಸ್ಥೆಗಳಿಗೆ ಪವರ್ ನೀಡುತ್ತದೆ. ಇನ್ನು ತುರ್ತು ಪರಿಸ್ಥಿತಿಯಲ್ಲಿ ವಿಮಾನಗಳ ನಿಯಂತ್ರಣ ವ್ಯವಸ್ಥೆಗೆ ಸಹಕಾರಿಯಾತ್ತದೆ.

06. ಹಸಿರು ವಿಮಾನಯಾನ

06. ಹಸಿರು ವಿಮಾನಯಾನ

1950ರ ದಶಕದ ಬಳಿಕ ವಾಣಿಜ್ಯ ವಿಮಾನಗಳು ಹೆಚ್ಚೆಚ್ಚು ಬಳಕೆಯಲ್ಲಿದ್ದು, ಶೇಕಡಾ 70ರಷ್ಟು ಇಂಧನ ವ್ಯಯ ಮತ್ತು ಕಾರ್ಬನ್ ಡೈ ಓಕ್ಸೈಡ್ ಎಮಿಷನ್ ಬಳಕೆಯಲ್ಲಿ ಕಡಿಮೆಯಾಗಿದೆ. ಆಧುನಿಕ ವಿಮಾನಗಳು ಹಸಿರುಯಾನಕ್ಕೆ ಹೆಚ್ಚಿನ ಒತ್ತು ನೀಡಿದೆ.

07. ಪುಟಾಣಿ ರೆಕ್ಕೆ

07. ಪುಟಾಣಿ ರೆಕ್ಕೆ

ವಿಮಾನಗಳ ರೆಕ್ಕೆಗಳ ಕೆಳಭಾಗದಲ್ಲಿ ಗರಿಷ್ಠ ಒತ್ತಡವನ್ನು ಮತ್ತು ಮೇಲ್ಬಾಗದಲ್ಲಿ ಕಡಿಮೆ ಒತ್ತಡವನ್ನುಂಟು ಮಾಡುತ್ತದೆ. ಇದು ರೆಕ್ಕೆ ತುದಿಯಲ್ಲಿ ಪ್ರಕ್ಷುಬ್ಧ ಸುಳಿಯನ್ನುಂಟು ಮಾಡಲಿದ್ದು, ಇದರಿಂದ ಇಂಧನ ದಕ್ಷತೆಯು ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ರೆಕ್ಕೆ ತುದಿಯಲ್ಲಿ ಮೇಲಕ್ಕೆ ಸರಿಸಿದ ರೆಕ್ಕೆಗಳು ಈ ಪ್ರಕ್ಷುಬ್ಧವನ್ನು ಮೆದುಗೊಳಿಸಲಿದೆ. ಇದರಿಂದ ಕಡಿಮೆ ಇಂಧನವು ತಗುಲಲಿದೆ.

08. ಚಿಕಾಗೊ ವಿಮಾನ ನಿಲ್ದಾಣ

08. ಚಿಕಾಗೊ ವಿಮಾನ ನಿಲ್ದಾಣ

ಜಗತ್ತಿನ ಅತಿ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಚಿಕಾಗೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ 37 ಸೆಕೆಂಡುಗಳಿಗೊಂದು ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುತ್ತಿದೆ.

09. ವಿಷಾಹಾರ

09. ವಿಷಾಹಾರ

ವಿಷಾಹಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಪೈಲಟ್ ಮತ್ತು ಸಹ ಪೈಲಟ್ ಗಳಿಗೆ ವಿಭಿನ್ನವಾದ ಆಹಾರ ಕ್ರಮವನ್ನು ಅನುಸರಿಸಲಾಗುತ್ತದೆ.

10. ನೀರು ಆವಿ

10. ನೀರು ಆವಿ

ಗಾಳಿಯಲ್ಲಿ ಸರಾಸರಿ ಮೂರು ತಾಸುಗಳ ಪ್ರಯಾಣದ ವೇಳೆ ಮಾನವ ಶರೀರದಿಂದ 1.5 ಲೀಟರ್ ನೀರು ಆವಿಯಾಗಲಿದೆ.


Most Read Articles

Kannada
English summary
10 interesting facts for frequent flyers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X