ಟಾಪ್ 10: ಇವು ವಿಶ್ವದಲ್ಲೇ ಅತಿ ಉದ್ದವಾದ ಗೂಡ್ಸ್ ರೈಲುಗಳು- ಭಾರತದಲ್ಲಿರುವ ಉದ್ದದ ರೈಲು ಯಾವುದು ಗೊತ್ತಾ..!!

ವಿಶ್ವಾದ್ಯಂತ ಇಂದು ವಿವಿಧ ರೀತಿಯ ರೈಲ್ವೆ ಸೇವೆಗಳು ಲಭ್ಯವಿದ್ದು, ಗೂಡ್ಸ್ ರೈಲು ಸೇವೆಗಳಿಂದ ಬರುವ ಆದಾಯ ಆಯಾ ರಾಷ್ಟ್ರಗಳ ಆರ್ಥಿಕಾಭಿವೃದ್ಧಿಯಲ್ಲೂ ಬಹುಮುಖ್ಯಪಾತ್ರ ವಹಿಸುತ್ತವೆ. ಅಂತಹ ಪ್ರಮುಖ ಹತ್ತು ಗೂಡ್ಸ್ ರೈಲ್ವೆಗಳ ಮಾಹಿತಿ ಇಲ್ಲಿದೆ.

Written By:

ಬೃಹತ್ ಪ್ರಮಾಣದ ಸರಕು-ಸೇವೆಗಳನ್ನು ಸಾಗಿಸಬಲ್ಲ ಸಾಮರ್ಥ್ಯದ ಆಧಾರದ ಮೇಲೆ ವಿಶ್ವದ ಪ್ರಮುಖ ಹತ್ತು ಗೂಡ್ಸ್ ರೈಲ್ವೆಗಳ ಪಟ್ಟಿಯನ್ನು ಇಲ್ಲಿ ಸಿದ್ಧಪಡಿಸಲಾಗಿದೆ. ಇವುಗಳನ್ನು ಇದುವರೆಗೆ ಅತಿ ದೊಡ್ಡ ಗೂಡ್ಸ್ ರೈಲುಗಳೆಂದೇ ಪರಿಗಣಿಸಿಲಾಗಿದ್ದು, ಭಾರತದಲ್ಲೂ ಕೆಲವು ರೈಲ್ವೆಗಳು ವಿಶ್ವದರ್ಜೆಯ ಕಾರ್ಯಕ್ಷಮತೆ ಹೊಂದಿವೆ.

10. ದಿ ಘಂ, ಆಸ್ಟ್ರೇಲಿಯಾ

ವಿಶ್ವದ ಅತಿಉದ್ದದ ರೈಲುಗಳಲ್ಲಿ ಆಸ್ಟ್ರೇಲಿಯಾದ ದಿ ಘಂ ಕೂಡಾ ಪ್ರಮುಖವಾದದ್ದು. 1200-ಮೀಟರ್ ಉದ್ದಹೊಂದಿರುವ ದಿ ಘಂ ರೈಲು, ಅತಿದೊಡ್ಡ ಪ್ಯಾಸೆಂಜರ್ ರೈಲು. ಇದು ಮೊಟ್ಟ ಮೊದಲ ಬಾರಿಗೆ 1800ರಲ್ಲಿ ತನ್ನ ಸೇವೆಯನ್ನು ಆರಂಭಿಸಿತ್ತು. ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಸಂಚರಿಸುವ ದಿ ಘಂ ರೈಲು, 2979 ಕಿಲೋ ಮೀಟರ್ ದೂರವರೆಗೆ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ.

09.ಮಾರುತಿ ಸರಕು ಟ್ರೈನ್, ಭಾರತ

ವಿಶ್ವದ ಪ್ರಮುಖ ಗೂಡ್ಸ್ ರೈಲುಗಳಲ್ಲಿ ಭಾರತದ ಮಾರುತಿ ಸರಕು ರೈಲು ಕೂಡಾ ಅತಿ ದೊಡ್ಡದಾಗಿದೆ. ಇದು ದೇಶದಲ್ಲೇ ಅತಿಉದ್ದದ ಗೂಡ್ಸ್ ರೈಲು ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, 188 ವೇಗಾನ್‌ಗಳನ್ನು ಹೊಂದಿದೆ. ಸುಮಾರು 1400 ಮೀಟರ್ ಉದ್ದವಾಗಿದ್ದು, ಉತ್ತರ ಪ್ರದೇಶದ ಬಿಲಾಸ್ಪುರ್‌ದಿಂದ ಮಧ್ಯಪ್ರದೇಶದ ಭೂಸ್ವಾಲ್ ವರೆಗೆ ಸಂಚರಿಸುತ್ತದೆ. 2011ರಲ್ಲಿ ಮೊದಲ ಬಾರಿಗೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು.

08. ರಿಯೋ ಟಿಂಟೋ ರೈಲ್ವೆ ಸರ್ವಿಸಸ್, ಆಸ್ಟ್ರೇಲಿಯಾ

2400 ಮೀಟರ್ ಉದ್ದವಿರುವ ರಿಯೋ ಟಿಂಟೋ ರೈಲ್ವೆ ಸರ್ವಿಸಸ್ ವಿಶ್ವದ ಪ್ರಮುಖ ಗೂಡ್ಸ್ ರೈಲುಗಳಲ್ಲೊಂದು. ಖಾಸಗಿ ಸಹಭಾಹಗಿತ್ವದಲ್ಲಿ ಕಾರ್ಯಚರಣೆ ನಡೆಸುತ್ತಿರುವ ರಿಯೋ ಟಿಂಟೋ ರೈಲ್ವೆ ಸರ್ವಿಸಸ್ ಪ್ರಮುಖ ನಗರಗಳ ಮಧ್ಯೆ ಸಂಪರ್ಕ ಹೊಂದಿದೆ.

07. ಮಾರಿಟಾನಿಯ ಗೂಡ್ಸ್ ಸರ್ವಿಸಸ್, ಮಾರಿಟಾನಿಯ

ಪಶ್ಚಿಮ ಆಫ್ರಿಕಾದ ಪ್ರಮುಖ ದೇಶಗಳಲ್ಲಿ ಒಂದಾಗಿರುವ ಮಾರಿಟಾನಿಯ ದೇಶದ ಮಾರಿಟಾನಿಯ ಗೂಡ್ಸ್ ಸರ್ವಿಸಸ್ ರೈಲು 2500 ಮೀಟರ್ ಉದ್ದ ಹೊಂದಿದೆ. 210 ವೇಗಾನ್‌ಗಳನ್ನು ಹೊಂದಿರುವ ಮಾರಿಟಾನಿಯ ಗೂಡ್ಸ್ ರೈಲು ಪ್ರಮುಖ ಕಲ್ಲಿದ್ದಲು ಗಣಿಗಳಿಗೆ ಸಂಪರ್ಕ ಹೊಂದಿದೆ.

06. ಡಂಕಿನ್ ಗೂಡ್ಸ್ ರೈಲು, ಚೀನಾ

3200 ಮೀಟರ್ ಉದ್ದ ಹೊಂದಿರುವ ಚೀನಾದ ಡಂಕಿನ್ ರೈಲು, ವಿಶ್ವದ ಪ್ರಮುಖ ಗೂಡ್ಸ್ ರೈಲ್ವೆಗಳ ಪಟ್ಟಿಯಲ್ಲಿ 06 ಸ್ಥಾನ ಪಡೆದಿದೆ. 20 ಸಾವಿರ ಮೆಟ್ರಿಕ್ ಟನ್ ಕಬ್ಬಿಣ ಅದಿರು ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, 1984ರಿಂದಲೇ ತನ್ನ ಕಾರ್ಯಾಚರಣೆ ನಡೆಸುತ್ತಿದೆ.

05. ಕಾಜಾರಸ್ ಸರಕು ರೈಲು, ಬ್ರೆಜಿಲ್

ಬ್ರೆಜಿಲ್ ರಾಜಧಾನಿ ಬ್ರೆಸಿಲಿಯಾದಿಂದ ಕಾರ್ಯಾಚಾರಣೆ ನಡೆಸುವ ಕಾಜಾರಸ್ ಸರಕು ರೈಲು 3300 ಮೀಟರ್ ಉದ್ದ ಹೊಂದಿದೆ. 1982ರಿಂದಲೇ ಕಾರ್ಯಾಚರಣೆ ನಡೆಸಿದ್ದು, 330 ವೇಗಾನ್‌ಗಳನ್ನು ಹೊಂದಿದೆ.

04.ಆರ್ ಸ್ಟ್ಯಾಂಡರ್ಡ್ ಎಸ್-400, ಯುಎಸ್ಎ

ಅಮೆರಿಕಾ ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ್ತಿರುವ ಆರ್ ಸ್ಟ್ಯಾಂಡರ್ಡ್ ಎಸ್-400 ಗೂಡ್ಸ್ ಟ್ರೈನ್, 3659 ಮೀಟರ್ ಉದ್ದ ಹೊಂದಿದೆ. ಪ್ರತಿವರ್ಷ 60 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ತಂದು ಕೊಡುವ ಸಾಮರ್ಥ್ಯ ಹೊಂದಿದ್ದು, ಆತ್ಯಾಧುನಿಕ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಪ್ರತಿಷ್ಠಿತ ಗೂಡ್ಸ್ ರೈಲು ಕೂಡಾ ಹೌದು.

03.ಆರ್‌ಡಿಪಿ ಟ್ರೈನ್, ಸೌಥ್ ಆಫ್ರಿಕಾ

ಕಬ್ಬಿಣ ಅದಿರು ಸಾಗಿಸುವ ಪ್ರಮುಖ ಗೂಡ್ಸ್‌ ರೈಲುಗಳಲ್ಲಿ ಒಂದಾಗಿರುವ ಆರ್‌ಡಿಪಿ ಟ್ರೈನ್, 3780 ಮೀಟರ್ ಉದ್ದ ಹೊಂದಿದೆ. 30 ಸಾವಿರ ಮೆಟ್ರಿಕ್ ಟನ್ ಅದಿರು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದ್ದು, ಪಶ್ಚಿಮ ಕೇಪ್ ಟೌನ್ ಬಂದರು ಮೂಲಕ ಉತ್ತರ ಕೇಪ್ ಟೌನ್ ವರೆಗೂ ಕಾರ್ಯಾಚರಣೆ ಹೊಂದಿದೆ.

02. ಡಬಲ್ ಸ್ಟ್ಯಾಕ್ ಕಂಟೇನರ್ ಟ್ರೈನ್, ಕೆನಡಾ

ಡಬಲ್ ಕಂಟೇನರ್ ಹೊಂದಿರುವ ಕೆನಡಾದ ರಾಷ್ಟ್ರೀಯ ಗೂಡ್ಸ್ ರೈಲು 4200 ಮೀಟರ್ ಉದ್ದ ಹೊಂದಿದೆ. 1990ರಲ್ಲಿ ಆರಂಭಗೊಂಡಿರುವ ಡಬಲ್ ಸ್ಟ್ಯಾಕ್ ಕಂಟೇನರ್ ಟ್ರೈನ್, ಕೆನಡಾದ ಪ್ರಮುಖ ನಗರಗಳಲ್ಲಿ ಸಂಚರಿಸುತ್ತದೆ.

01. ಬಿಎಚ್‌ಪಿ ಬಿಲ್ಲಿಟ್ರಾನ್ ಟ್ರೈನ್, ಆಸ್ಟ್ರೇಲಿಯಾ

ಆಸ್ಟ್ರೇಲಿಯಾದಲ್ಲಿರುವ ಬಿಎಚ್‌ಪಿ ಬಿಲ್ಲಿಟ್ರಾನ್ ಟ್ರೈನ್ ವಿಶ್ವದ ನಂ.1 ಅತಿ ಉದ್ದದ ರೈಲು. ಇದು ಬರೋಬ್ಬರಿ 7300 ಮೀಟರ್ ಉದ್ದವಿದ್ದು, 82 ಸಾವಿರ ಟನ್ ಅದಿರು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ. 682 ವೇಗಾನ್ ಹೊಂದಿದ್ದು, 1969ರಲ್ಲೇ ಬಿಎಚ್‌ಪಿ ಬಿಲ್ಲಿಟ್ರಾನ್ ಗೂಡ್ಸ್ ರೈಲ್ವೆ ಸೇವೆ ಆರಂಭವಾಗಿದೆ. 8 ಲೋಕೋ ಮೇಟಿವ್ ಎಂಜಿನ್ ಸಾಮರ್ಥ್ಯದೊಂದಿಗೆ 426 ಕಿಮಿ ಉದ್ದ ಕಾರ್ಯಾಚರಣೆ ನಡೆಸುತ್ತಿದೆ.

 

ಈ ಮೇಲಿನ ನೀಡಲಾದ ಎಲ್ಲಾ ಮಾಹಿತಿಗಳು ಪ್ರಸ್ತುತ ವರದಿಗಳಿಂದ ಸಿದ್ದಗೊಂಡಿದ್ದು, ಭಾರತದಲ್ಲಿಯೂ ಕೆಲವು ಗೂಡ್ಸ್ ರೈಲು ಇತ್ತೀಚಿನ ದಿನಗಳಲ್ಲಿ ವಿಶ್ವದರ್ಜೆಯ ಸೇವೆ ನೀಡಲು ಸಜ್ಜುಗೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಚಾರ.

ಬೆಂಗಳೂರಿನಲ್ಲಿ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನ ಮಾಡಿರುವ ಹೊಚ್ಚ ಹೊಸ ಫೋರ್ಡ್ ಎಂಡೀವರ್ ಕಾರಿನ ಹೆಚ್ಚಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಟಾಪ್ 10 top 10
Story first published: Tuesday, March 7, 2017, 13:19 [IST]
English summary
Longest Trains in the World. some trains in india also.
Please Wait while comments are loading...

Latest Photos