ವಿಶ್ವದ 10 ಅತ್ಯಂತ ದುಬಾರಿ ವಿಹಾರ ನೌಕೆಗಳು

By Nagaraja

ಕೆಲವು ದಿನಗಳ ಹಿಂದೆಯಷ್ಟೇ ಜಗತ್ತಿನ 25 ಅತಿದೊಡ್ಡ ಹಡಗುಗಳ ಬಗ್ಗೆ ಮಾತನಾಡಿದ್ದೆವು. ಇದರ ಮುಂದುವರಿದ ಭಾಗವೆಂಬಂತೆ ಇಂದಿನ ಲೇಖನದಲ್ಲಿ ವಿಶ್ವದ 10 ಅತ್ಯಂತ ದುಬಾರಿ ವಿಹಾರ ನೌಕೆಗಳ ಬಗ್ಗೆ ಚರ್ಚಿಸಲಿದ್ದೇವೆ.

ಜಗತ್ತಿನ 25 ಅತಿದೊಡ್ಡ ಹಡಗುಗಳು

ಸಾಮಾನ್ಯವಾಗಿ ವಿಹಾರ ನೌಕೆಗಳು ಶ್ರೀಮಂತರ ವಿಹಾರ ದೋಣಿ ಎಂದೇ ಪರಿಗಣಿಸಲ್ಪಟ್ಟಿದೆ. ಶ್ರೀಮಂತರಿಗೆ ಮಾತ್ರ ಮೀಸಲಾದ ಇಂತಹ ಯಾಚ್‌ಗಳನ್ನು (yacht) ಶ್ರೀಮಂತರಲ್ಲಿ ಅತಿ ಶ್ರೀಮಂತರು ಮಾತ್ರ ಖರೀದಿಸಬಲ್ಲರು. ಹಾಗಿದ್ದರೆ ಬನ್ನಿ ಜಗತ್ತಿನ 10 ಅತ್ಯಂತ ದುಬಾರಿ ವಿಹಾರ ನೌಕೆಗಳ ಬಗ್ಗೆ ಚರ್ಚಿಸೋಣವೇ...

10. ದಿ ರೈಸಿಂಗ್ ಸನ್

10. ದಿ ರೈಸಿಂಗ್ ಸನ್

ಮೂಲತ: ಒರಕಲ್ ಸಿಇಒ ಲ್ಯಾರಿ ಎಲಿಸನ್ ದಿ ರೈಸಿಂಗ್ ಸನ್‌ಗೆ ಒಡೆಯರಾಗಿದ್ದರು. ಸದ್ಯ ಸಂಗೀತ ಹಾಗೂ ಸಿನೆಮಾ ಕ್ಷೇತ್ರದ ಡೇವಿಡ್ ಗೆಫೆನ್ ಮಾಲಿಕತ್ವದಲ್ಲಿದೆ. ಬಾಸ್ಕೆಟ್‌ಬಾಲ್, ಹೆಲಿಕಾಪ್ಟರ್ ಮುಂತಾದ ಸೌಕರ್ಯಗಳನ್ನು ಹೊಂದಿರುವ ಈ ವಿಹಾರ ಹಡಗು 82 ರೂಂಗಳನ್ನು ಹೊಂದಿದ್ದು, 200 ಮಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯೆನಿಸಿದೆ. ಇದು ಗಂಟೆಗೆ 33 ಮೈಲೇ ವೇಗದಲ್ಲಿ ಚಲಿಸಬಲ್ಲದು.

ಬೆಲೆ - 200 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,200 ಕೋಟಿ ರುಪಾಯಿ)

9. ಸೆವೆನ್ ಸೀಸ್

9. ಸೆವೆನ್ ಸೀಸ್

ಸ್ಟೀವನ್ ಸ್ಪೀಲ್‌ಬರ್ಗ್ ಅವರ ವಿಹಾರ ನೌಕೆಯನ್ನು ಡಚ್ಚರಿಗೆ ಸೇರಿದ ಓಸಿಯಾನೋ ನೌಕಾಂಗಣ ನಿರ್ಮಿಸಿದೆ. ಇದು ಸ್ಟೀವನ್ ಬೇಡಿಕೆಗಳಿಗಾನುಸಾರವಾಗಿ ರಚಿಸಲಾಗಿದೆ. ಇದು ಕೂಡಾ 200 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ದುಬಾರಿಯೆನಿಸಿದೆ.

ಬೆಲೆ - 200 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,200 ಕೋಟಿ ರುಪಾಯಿ)

8. ಲೇಡಿ ಮೌರಾ

8. ಲೇಡಿ ಮೌರಾ

ಸೌದಿ ಅರೇಬಿಯಾದ ಕೋಟ್ಯಧಿಪತಿ ನಾಸ್ಸೆರ್ ಅಲ್ ರಶೀದ್ ಎಂಬವನ್ನು ಇದರ ಮಾಲಿಕರಾಗಿದ್ದರೆ. ಹಡಗಿನಲ್ಲಿ 24 ಕ್ಯಾರೆಟ್ ಚಿನ್ನದಲ್ಲಿ ಇದರ ಹೆಸರನ್ನು ಬಳಿಯಲಾಗಿದೆ. ಇದರ ಬೆಲೆ 210 ಮಿಲಿಯನ್ ಅಮೆರಿಕನ್ ಡಾಲರ್.

ಬೆಲೆ - 210 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,300 ಕೋಟಿ ರುಪಾಯಿ)

7. ಅಲ್ ಮಿರ್ಕಾಬ್

7. ಅಲ್ ಮಿರ್ಕಾಬ್

ಖತಾರ್ ಪ್ರಧಾನ ಮಂತ್ರಿ ಹಮದ್ ಬಿನ್ ಜಸ್ಸೀಮ್ ಬಿನ್ ಜಬೇರ್ ಅಲ್ ಥಾನಿ ಎಂಬವರು ಇದನ್ನು ಹೊಂದಿದ್ದಾರೆ. ಇದರ ವಿನ್ಯಾಸವನ್ನು ಟಿಮ್ ಹೇವುಡ್ ರಚಿಸಿದ್ದಾರೆ. ಸಿನೆಮಾ ಮಂದಿರ, ಈಜುಕೊಳ, ಹೆಲಿಪ್ಯಾಡ್, ವಿಐಪಿ ಡೆಸ್ಟ್ ಮುಂತಾದ ಸೌಕರ್ಯಗಳನ್ನು ಇದು ಒಳಗೊಂಡಿದೆ.

ದರ - 250 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,500 ಕೋಟಿ ರುಪಾಯಿ)

6. ದಿಲ್‌ಬಾರ್

6. ದಿಲ್‌ಬಾರ್

2008ನೇ ಇಸವಿಯಲ್ಲಿ ನಿರ್ಮಿಸಿದ ದಿಲ್‌ಬಾರ್ ವಿಹಾರ ನೌಕೆಯನ್ನು ರಷ್ಯಾದ ಉದ್ಯಮಿ ಅಲಿಶೇರ್ ಉಸ್ಮನೋವ್ ಹೊಂದಿದ್ದಾರೆ.

ಬೆಲೆ - 263 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,600 ಕೋಟಿ ರುಪಾಯಿ)

5. ಅಲ್ ಸೈದ್

5. ಅಲ್ ಸೈದ್

ಅಲ್ಯೂಮಿನಿಯ ರಚನೆ ಹೊಂದಿರುವ ಅಲ್ ಸೈದ್, ಓಮಾನ್‌ ಮಾಲಿಕ ಸುಲ್ತಾನ್ ಖಾಬೂಸ್ ಬಿನ್ ಸೈದ್ ಅಲ್ ಸೈದ್ ಹೆಸರಲ್ಲಿದೆ. ಜಗತ್ತಿನ ಎರಡನೇ ಅತಿದೊಡ್ಡ ಯಾಚ್ ಆಗಿರುವ ಇದನ್ನು 2007 ಹಾಗೂ 2008ರಲ್ಲಿ ನಿರ್ಮಿಸಲಾಗಿತ್ತು.

ಬೆಲೆ - 300 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,800 ಕೋಟಿ ರುಪಾಯಿ)

4. ಸೂಪರ್ ಯಾಚ್ ಎ

4. ಸೂಪರ್ ಯಾಚ್ ಎ

ತನ್ನದೇ ಆದ ಯೂನಿಕ್ ವಿನ್ಯಾಸ ಹೊಂದಿರುವ ಸೂಪರ್ ಯಾಚ್ ಎ ಹಡಗಿನ ಮಾಲಿಕತ್ವವನ್ನು ರಷ್ಯಾ ಉದ್ಯಮಿ ಆಂಡ್ರೆ ಮೆಲ್ಚಿಂಕೊ ಹೊಂದಿದ್ದಾರೆ.

ಬೆಲೆ - 323 ಮಿಲಿಯೆನ್ ಅಮೆರಿಕನ್ ಡಾಲರ್ (ಬರೋಬ್ಬರಿ 1,950 ಕೋಟಿ ರುಪಾಯಿ)

3. ದುಬೈ

3. ದುಬೈ

ಇದರ ಹಿಂದೆ ಸ್ವಲ್ಪ ಕಥೆಯಿದು. 1996ರಲ್ಲಿ ಬ್ರೂನಿಯ ರಾಜ ಜೆಫ್ರಿ ಬುಲ್ಕೈ ಹಡಗಿನ ನಿರ್ಮಾಣ ಆರಂಭಿಸಿದ್ದರೂ ಹಣಕಾಸಿನ ಕೊರತೆಯಿಂದಾಗಿ ಹಿಂಜರಿದಿದ್ದರು. ಬಳಿಕ 2001ರಲ್ಲಿ ಯುಎಇ ಪ್ರಧಾನ ಮಂತ್ರಿ ಶೇಕ್ ಮೊಹಮ್ಮದ್ ಬಿನ್ ರಾಶೀದ್ ಅಲ್ ಮಕ್ತೌಮ್ ಯೋಜನೆ ಕೈಗೆತ್ತಿಕೊಂಡರು. ಇದರಲ್ಲಿ ಹೆಲಿಪ್ಯಾಡ್, ಈಜುಕೊಳ, ಸ್ಪಾ ಸೇರಿದಂತೆ ಹಲವಾರು ಸೌಕರ್ಯಗಳಿವೆ.

ಬೆಲೆ - 350 ಮಿಲಿಯನ್ ಅಮೆರಿಕನ್ ಡಾಲರ್ (ಬರೋಬ್ಬರಿ 2,100 ಕೋಟಿ ರುಪಾಯಿ)

2. ಎಕ್ಲಿಪ್ಸ್ (Eclipse)

2. ಎಕ್ಲಿಪ್ಸ್ (Eclipse)

ಈ ದುಬಾರಿ ವಿಹಾರ ಹಡಗಿನಲ್ಲಿ 70,24 ಆತಿಥಿ ಕೊಠಡಿ ಹಾಗೂ ಎರಡು ಹೆಲಿಪ್ಯಾಡ್‌ಗಳಿವೆ. ಇದು ರಷ್ಯಾ ಬಿಲಿಯೇನರ್ ರೋಮನ್ ಅಬ್ರೊಮೊವಿಚ್‌ಗೆ ಸೇರಿದ್ದಾಗಿದೆ. ಅತ್ಯುತ್ತಮವಾಗಿ ವಿನ್ಯಾಸಿತಗೊಳಿಸದ ರಕ್ಷಣಾ ತಂತ್ರಗಾರಿಕೆಯು ಇದರ ಪರಮೋಚ್ಛ ವೈಶಿಷ್ಟ್ಯವಾಗಿದೆ. ಹಾಗೆಯೇ ಅನಾಹುತ ಪತ್ತೆ ವ್ಯವಸ್ಥೆಯನ್ನು ಹೊಂದಿರುವ ಈ ಹಡಗನ್ನು ಜರ್ಮನಿಯಲ್ಲಿ ತಯಾರಿಸಲಾಗಿದೆ.

ಬೆಲೆ - 800 ಮಿಲಿಯನ್ ಅಮೆರಿಕನ್ ಡಾಲರ್ - (ಬರೋಬ್ಬರಿ 4800 ಕೋಟಿ ರುಪಾಯಿ)

1. ಹಿಸ್ಟರಿ ಸುಪ್ರೀಂ

1. ಹಿಸ್ಟರಿ ಸುಪ್ರೀಂ

ಜಗತ್ತಿನ ಅತ್ಯಂತ ದುಬಾರಿ ವಿಹಾರ ನೌಕೆಯಲ್ಲಿ ಮೊದಲನೆ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಹಿಸ್ಟರಿ ಸುಪ್ರೀಂ 4.8 ಮಿಲಿಯನ್ ಅಮೆರಿಕನ್ ಡಾಲರುಗಳಷ್ಟು ಬೆಲೆಬಾಳುತ್ತಿದೆ. ಹೆಸರು ಹೇಳಲಿಚ್ಛಿಸದ ಮಲೇಷ್ಯಾದ ಉದ್ಯಮಿಯೊಬ್ಬರು ಇದರ ಮಾಲಿಕರಾಗಿದ್ದಾರೆ. ಇದರ ನಿರ್ಮಾಣದಲ್ಲಿ ಒಂದು ಲಕ್ಷ ಕೆ.ಜಿ ಚಿನ್ನ, ಪ್ಲಾಟಿನಂ ಜತೆಗೆ ಇನ್ನಿತರ ಬೆಲೆಬಾಳುವ ರತ್ನ ಕಲ್ಲುಗಳ ಬಳಕೆ ಮಾಡಲಾಗಿದೆ. ಅಂದ ಹಾಗೆ ಬ್ರಿಟನ್ ತಲಹದಿಯ ಸ್ಟಾರ್ಟ್ ಹ್ಯೂಜ್ಸ್ ಹಾಗೂ ಅವರ ಸಂಸ್ಥೆಯು ಮೂರು ವರ್ಷಗಳ ಕಠಿಣ ಪ್ರಯತ್ನದಲ್ಲಿ ಇದನ್ನು ನಿರ್ಮಿಸಿದೆ.

ಬೆಲೆ- 4.8 ಬಿಲಿಯನ್ ಅಮೆರಿಕನ್ ಡಾಲರ್ (ಇದನ್ನು ಗೂಗಲ್‌ನಲ್ಲಿ ರುಪಾಯಿಗೆ ಪರಿವರ್ತಿಸಿದಾಗ ಸಿಕ್ಕಿದ ಫಲಿತಾಂಶವಿದು ನೀವೇ ಓದಿ ನೋಡಿ 289872000000.00)

Most Read Articles

Kannada
Story first published: Thursday, April 17, 2014, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X