ಛೆ! ನನ್ನ ಕಾರಿನಲ್ಲೂ ಆ 10 ಸಂಗತಿಗಳು ಇರಬೇಕಿತ್ತಲ್ಲವೇ?

By Nagaraja

ಎಲ್ಲರೂ ಹೊಸ ಕಾರಿನ ಹುಡುಕಾಟದಲ್ಲಿದ್ದಾರೆ. ಮಾರುಕಟ್ಟೆಗೆ ಎಂಟ್ರಿ ಕೊಟ್ಟ ತಾಜಾ ಮಾದರಿ ಯಾವುದು? ಅದರಲ್ಲಿರುವ ವೈಶಿಷ್ಟ್ಯಗಳೇನು? ಎಂಬಿತ್ಯಾದಿ ವಿಚಾರಗಳ ಬಗ್ಗೆ ತುಲನೆ ಮಾಡಲು ಹೊರಟಿದ್ದಾರೆ. ಹೀಗೆ ವಾಹನ ತಯಾರಿಕ ಸಂಸ್ಥೆಗಳ ನಡುವೆ ಪೈಪೋಟಿ ಏರ್ಪಟ್ಟಂತೆ ಕಾರಿನ ಗುಣಮಟ್ಟತೆಯಲ್ಲೂ ಇದು ಪ್ರತಿಬಿಂಬಿಸುತ್ತದೆ.

ಆದರೆ ಒಂದು ಪ್ರಾತ:ಕಾಲದಲ್ಲಿ ಯೋಚನೆಗೆ ಕುಳಿತ ನೀವು ಛೆ! ನನ್ನ ಕಾರಿನಲ್ಲೂ ಆ 10 ಸಂಗತಿಗಳು ಇರಬೇಕಿತ್ತಲ್ಲವೇ? ನಮ್ಮ ಮನೆಯಲ್ಲಿರುವ ಹಳೆಯ ಕಾರಿನಲ್ಲಿ ಆ ವೈಶಿಷ್ಟ್ಯ ತುಂಬಾನೇ ಚೆನ್ನಾಗಿದೆ. ಇದ್ಯಾಕೆ ಹೊಸ ಕಾರಿನಲ್ಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ಮನದಲ್ಲಿ ಹೊಳೆಯಬಹುದು.

ಹಳೆಯ ಕಾರಿನಿಂದ ಮಿಸ್ ಮಾಡಿಕೊಳ್ಳುವ 10 ಸಂಗತಿಗಳು

ಹಾಗಿದ್ದರೆ ಹಳೆಯ ಕಾರಿನಲ್ಲಿ ಕಂಡುಬರುವ ಆ 10 ಸಂಗತಿಗಳು ಯಾವುವು? ವಿವರಗಳಿಗಾಗಿ ಫೋಟೊ ಸ್ಲೈಡ್ ಅನ್ನು ಒಂದೊಂದಾಗಿ ಮುಂದಕ್ಕೆ ಕ್ಲಿಕ್ಕಿಸುತ್ತಾ ಸಾಗಿರಿ...

1. ಬಲಿಷ್ಠ ಕಾರು

1. ಬಲಿಷ್ಠ ಕಾರು

ಹಾಗೆ ಹಳೆಯ ಕಾರುಗಳ ಬಗ್ಗೆ ಯೋಚಿಸುವಾಗ ನಮ್ಮ ಮನದಲ್ಲಿ ಮೊದಲಿಗೆ ಹೊಳೆಯುವುದು ಕಾರುಗಳ ರಾಜ 'ಅಂಬಾಸಿಡರ್'. ಎಂತಹ ದಷ್ಟಪುಷ್ಠವಾದ ದೇಹವನ್ನು ಹೊಂದಿದೆಯಲ್ಲಲ್ಲೇ? ತಮಾಷೆಗೆಯಾದರೂ ನಮ್ಮ ಮನದಲ್ಲೇ ಅದು ಸೇವಿಸುತ್ತಿರುವ ಆಹಾರವಾದರೂ ಏನು? ಎಂಬ ಪ್ರಶ್ನೆ ಕಾಡಬಹುದು. ಹೌದು, ಅಪಘಾತ ಸಂದರ್ಭದಲ್ಲಿ ಅಂಬಾಸಿಡರ್ ಪ್ರಯಾಣಿಕರಿಗೆ ಅತಿ ಹೆಚ್ಚು ರಕ್ಷಣೆವನ್ನು ಒದಗಿಸುತ್ತದೆ. ಈ ಮೂಲಕ ಗರಿಷ್ಠ ಪ್ರಮಾಣದ ನಿರ್ಮಾಣ ಗುಣಮಟ್ಟತೆಯನ್ನು ಕಾಯ್ದುಕೊಂಡಿದೆ. ಇನ್ನು ಭಾರತೀಯ ರಸ್ತೆ ಪರಿಸ್ಥಿತಿಗೆ ಹೆಚ್ಚು ಯೋಗ್ಯವೆನಿಸಿರುವ ಅಂಬಾಸಿಡರ್ ಕಾರಿಗೆ ಯಾವುದೇ ರೀತಿಯ ತೊಂದರೆ ಉಂಟಾದರೂ ಅದನ್ನು ಸರಿಪಡಿಸಲು ಖರ್ಚು ಸಹ ಕಡಿಮೆಯಾಗಿದೆ.

2. ಹಿಂಬದಿ ಸೀಟಿನ ಆರಾಮದಾಯಕತೆ

2. ಹಿಂಬದಿ ಸೀಟಿನ ಆರಾಮದಾಯಕತೆ

ಮಗದೊಮ್ಮೆ ಈ ಪಟ್ಟಿನಲ್ಲಿ ನಾವು ಅಂಬಾಸಿಡರ್ ಕಾರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ನೀವು ಎಂದಾದರೂ ಅಂಬಾಸಿಡರ್ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಿದ್ದೀರಾ? ಆಹಾ, ಏನು ಮಜಾ ಅಲ್ಲವೇ? ಇಲ್ಲಿ ಅಂಬಾಸಿಡರ್ ಜೊತೆ ಜೊತೆಗೆ ಕಾಂಟೆಸ್ಸಾ ಕಾರನ್ನು ನಾವು ಗುರುತಿಸಬೇಕಾಗುತ್ತದೆ.

3. ಪೂರ್ಣ ಪ್ರಮಾಣದ ಹೆಚ್ಚುವರಿ ಚಕ್ರಗಳು

3. ಪೂರ್ಣ ಪ್ರಮಾಣದ ಹೆಚ್ಚುವರಿ ಚಕ್ರಗಳು

ಬಹುತೇಕ ಎಲ್ಲ ಹಳೆ ಕಾರುಗಳಲ್ಲೂ ಪೂರ್ಣ ಪ್ರಮಾಣದ ಹೆಚ್ಚುವರಿ ಚಕ್ರಗಳು (Spare Wheel)ಲಭ್ಯವಾಗುತ್ತದೆ. ಇನ್ನು ಪಂಚರ್ ಸಮಯದಲ್ಲಿ ಇದನ್ನು ಬದಲಾಯಿಸುವುದು ತುಂಬಾನೇ ಸುಲಭವಾಗಿದೆ.

4. ಸಾಂಪ್ರಾದಾಯಿಕ ಡ್ಯಾಶ್ ಬೋರ್ಡ್

4. ಸಾಂಪ್ರಾದಾಯಿಕ ಡ್ಯಾಶ್ ಬೋರ್ಡ್

ಕಾರಿನ ಡ್ಯಾಶ್ ಬೋರ್ಡ್ ಗಳಲ್ಲಿರುವ ಅನಾಲಾಗ್ ಮೀಟರ್ ಗಳು ಎಲೆಕ್ಟ್ರಾನಿಕ್ ಸ್ಪರ್ಶವನ್ನು ಪಡೆದಂತೆ ಮಾಹಿತಿ ಗಿಟ್ಟಿಸುವುದು ಬಹಳ ಸುಲಭವೆನಿಸಿದೆ. ವಿವಿಧ ವರ್ಣಗಳ ಮಿಶ್ರಣವನ್ನು ನೀವಿಲ್ಲಿ ನೋಡಬಹುದು. ಆದರೆ ಇಲ್ಲಿ ಕನಿಷ್ಠ ದೇಶದ ಹಿರಿಯ ನಾಗರಿಕರಾದರೂ ಸಾಂಪ್ರದಾಯಿಕ ಡ್ಯಾಶ್ ಬೋರ್ಡ್ ಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

5. ಹಗುರ ಭಾರ

5. ಹಗುರ ಭಾರ

ಆಧುನಿಕ ಕಾರುಗಳಿಗೆ ಹೋಲಿಸಿದರೆ ಹಳೆಯ ಕಾರುಗಳು ಹಗುರ ಭಾರವನ್ನು ಹೊಂದಿರುತ್ತದೆ. ಸಣ್ಣ ಎಂಜಿನ್ ಆಗಿದ್ದರಿಂದ ಇಂಧನ ಬಳಕೆಯು ಕಡಿಮೆಯಾಗಿರುತ್ತದೆ.

6. ದುರಸ್ತಿ ಕಿರಿಕಿರಿಯಿಲ್ಲ

6. ದುರಸ್ತಿ ಕಿರಿಕಿರಿಯಿಲ್ಲ

ಪಯಣದ ವೇಳೆ ದಾರಿ ಮಧ್ಯೆ ನಿಮ್ಮ ಕಾರು ಕೆಟ್ಟು ಹೋಯಿತೇ? ಚಿಂತೆ ಬೇಡ, ಬಹಳ ಸಲೀಸಾಗಿ ಹಳೆಯ ಕಾರುಗಳನ್ನು ರಿಪೇರಿ ಮಾಡಿಕೊಳ್ಳಬಹುದು. ಇಲ್ಲಿ ಕಾರಿನ ಎಂಜಿನ್ ಗಳು ಸಂಕೀರ್ಣತೆಯನ್ನು ಹೊಂದಿರುವುದಿಲ್ಲ. ಇದರಿಂದಾಗಿ ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡರೆ ಚಾಲಕರೇ ಮೆಕ್ಯಾನಿಕ್ ಆಗುತ್ತಾರೆ. ಇದಕ್ಕೆ ಬೇಕಾಗಿರುವುದು ಕೇವಲ ಸ್ಪಾನರ್ ಮತ್ತು ಸ್ಕ್ರೂಡ್ರೈವರ್ ಮಾತ್ರ!

7. ನೈಜ ಕೀಲಿ

7. ನೈಜ ಕೀಲಿ

ಆಧುನಿಕ ಕಾರುಗಳು ಎಷ್ಟು ಮುಂದುವರಿದ ತಂತ್ರಗಾರಿಕೆ ಪಡೆದುಕೊಂಡಿದೆಯೆಂದರೆ ಮುಂದಿನ ದಿನಗಳಲ್ಲಿ ಕಾರು ಸ್ಟ್ಯಾಟ್ ಮಾಡಲು ಕೀಲಿಯ ಅಗತ್ಯವೇ ಇರುವುದಿಲ್ಲ. ಆದರೆ ಹಳೆಯ ಕಾರುಗಳ ಇಗ್ನಿಷನ್ ಗೆ ಕೀ ಲಗತ್ತಿಸಿ ಅದನ್ನು ಸ್ಟ್ಯಾಟ್ ಮಾಡುವ ಖುಷಿನೇ ಬೇರೆ. ಏನಾಂತೀರಾ?

8. ಸರಳ, ಶುಭ್ರ ಒಳಮೈ

8. ಸರಳ, ಶುಭ್ರ ಒಳಮೈ

ಆಧುನಿಕ ಕಾರುಗಳಲ್ಲಿ ಅನೇಕ ಸ್ವಿಚ್ ಗಳಿದ್ದು, ನಿಜವಾಗ್ಲೂ ಇದರ ಉಪಯೋಗವೇನು? ಯಾವ ಬಟನ್ ಯಾವ ಕ್ರಿಯೆಯನ್ನು ಮಾಡುತ್ತಿದೆ ಎಂಬುದು ಚಾಲಕರಿಗೆ ಗೊತ್ತಿರುವುದೇ ಇಲ್ಲ. ಆದರೆ ಹಳೆಯ ಕಾರುಗಳು ಸರಳ, ಸುಲಭ ಒಳಮೈಯನ್ನು ಪಡೆದುಕೊಂಡಿರುತ್ತದೆ. ಇಲ್ಲಿ ಸ್ಟೀರಿಂಗ್ ವೀಲ್ ಸಹ ನಾವು ನೆನಪಿಸಿಕೊಳ್ಳಲು ಬಯಸುತ್ತೇವೆ.

9. ಗೇರ್ ಬಾಕ್ಸ್

9. ಗೇರ್ ಬಾಕ್ಸ್

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಗಮನದೊಂದಿಗೆ ಚಾಲನೆ ತುಂಬಾನೇ ಸರಳವಾಗಿದೆ ಎಂದು ನೀವು ಅಂದುಕೊಂಡಿರಬಹುದು. ಆದರೆ ಎಂದಾದರೂ ಮ್ಯಾನುವಲ್ ಗೇರ್ ಬಾಕ್ಸ್ ಕಾರನ್ನು ಚಾಲನೆ ಮಾಡಿರುವೀರಾ? ಚಾಲನೆಯ ನೈಜ ರಸವತ್ತಾದ ಅನುಭವ ಪಡೆಯಬೇಕಾದ್ದಲ್ಲಿ ನೀವು ಮ್ಯಾನುವಲ್ ಗೇರ್ ಬಾಕ್ಸ್ ಕಾರನ್ನು ಓಡಿಸಲೇ ಬೇಕಾಗುತ್ತದೆ.

10. ತೆಳುವಾದ ಎ ಪಿಲ್ಲರ್

10. ತೆಳುವಾದ ಎ ಪಿಲ್ಲರ್

ಇದು ಸ್ವಲ್ಪ ಟೆಕ್ನಿಕಲ್ ವಿಚಾರ. ಕಾರಿನ ಚಾಲಕನ ಮುಂಭಾಗದಲ್ಲಿರುವ ಎ ಪಿಲ್ಲರ್ ತೆಳುವಾಗಿದ್ದಲ್ಲಿ ಮಾತ್ರ ತಿರುವುಗಳಲ್ಲಿ ಉತ್ತಮ ಗೋಚರತೆ ಕಾಯ್ದುಕೊಳ್ಳಲು ಸಾಧ್ಯ. ಹಳೆಯ ಕಾರುಗಳಲ್ಲಿ ಇಂತಹದೊಂದು ವೈಶಿಷ್ಟ್ಯವನ್ನು ನೀವು ನೋಡಬಹುದು. ಆದರೆ ಆಧುನಿಕ ಕಾರುಗಳಲ್ಲಿ ದಪ್ಪವಾದ ಎ ಪಿಲ್ಲರ್ ಇರುವುದರಿಂದ ಗೋಚರತೆಯ ಹೊರತಾಗಿ ಸುರಕ್ಷತೆಗೂ ಭೀತಿ ಒಡ್ಡುತ್ತದೆ. ಇದು ಯಾವ ಪ್ರಕಾರದಲ್ಲಿ ನೆರವಾಗುತ್ತದೆ ಎಂಬುದಕ್ಕೆ ಆಧುನಿಕ ಆಟೋಮೊಬೈಲ್ ಎಂಜಿನಿಯರ್ ಗಳೇ ಉತ್ತರಿಸಬೇಕಾಗುತ್ತದೆ.

ಹಳೆಯ ಕಾರಿನಿಂದ ಮಿಸ್ ಮಾಡಿಕೊಳ್ಳುವ 10 ಸಂಗತಿಗಳು

ಪ್ರಸ್ತುತ ಪಟ್ಟಿಯಲ್ಲಿ ಯಾವುದಾದರೂ ಅಂಶಗಳನ್ನು ಗುರುತಿಸಿಕೊಳ್ಳಲು ನಾವು ವಿಫಲರಾಗಿದ್ದೇವೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಹಳೆಯ ಕಾರಿನಲ್ಲಿ ಇಷ್ಟಪಡುವ ಸಂಗತಿಗಳೇನು? ಈ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯಿಸಲು ಮರೆಯದಿರಿ. ಹ್ಯಾಪಿ ರೈಡಿಂಗ್!

Most Read Articles

Kannada
English summary
Well, here is a list of 10 things that we really miss about old Indian cars.
Story first published: Monday, March 23, 2015, 10:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X