ಚಕ್ರಗಳಿಗೆ ಸಂಬಂಧಿಸಿದ 10 ಕಟ್ಟುಕತೆ ಹಾಗೂ ಸತ್ಯಾಂಶಗಳು!

By Nagaraja

ಕವಿ ತನ್ನ ಮಾತಿನಲ್ಲಿ ವರ್ಣಿಸುವಂತೆ 'ಭೂಮಿ ಬಿಟ್ಟು ನಿಂತ ನೀರಲ್ಲಿ ಚಕ್ರ ಸಾಗದು, ವೇಗ ಆವೇಗ ಎರಡೂ ಇದರದ್ದೇ'. ಹೌದು, ವಾಹನವೊಂದು ಮುಂದಕ್ಕೆ ಚಲಿಸುವುದರಲ್ಲಿ ಚಕ್ರಗಳು ಮುಖ್ಯ ಪಾತ್ರ ವಹಿಸುತ್ತವೆ. ನಾವು ಹೇಗೆ ನಮ್ಮ ವಾಹನಗಳನ್ನು ತೊಳೆದು ಶುಚಿಯಾಗಿ ಇಡುತ್ತೇವೋ ಅದೇ ರೀತಿ ಚಕ್ರಗಳ ಸರಿಯಾದ ನಿರ್ವಹಣೆ ಕೂಡಾ ಅಷ್ಟೇ ಮುಖ್ಯ.

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತಲುಪಲು ಇಂತಹ ಚಕ್ರಗಳು ಸಾವಿರಾರು ಬಾರಿ ತಿರುಗಬೇಕಾಗುತ್ತದೆ. ಹಾಗಿರುವಾಗ ಇಂತಹ ಚಕ್ರಗಳಿಗೆ ಸಂಬಂಧಿಸಿದಂತೆ ಜನ ಸಾಮಾನ್ಯರಲ್ಲಿ ಮಿಥ್ಯಾ ಕಲ್ಪನೆಗಳಿರುತ್ತದೆ. ಇಂತಹ ಕಟ್ಟುಕತೆಗಳ ಪಟ್ಟಿಯನ್ನು ಮಾಡಿ ಇಲ್ಲಿ ಕೊಡಲಾಗಿದ್ದು, ಹಾಗೆಯೇ ಅದರಲ್ಲಿ ಅಡಗಿರುವ ಸತ್ಯಾಂಶಗಳ ಬಗ್ಗೆ ವಿವರಿಸಲಾಗಿದೆ. ಖಂಡಿತವಾಗಿಯೂ ಇದು ನಿಮ್ಮ ನೆರವಿಗೆ ಬರುವ ನಂಬಿಕೆ ನಮ್ಮದ್ದು. ಹ್ಯಾಪಿ ಡ್ರೈವಿಂಗ್..!

ಕಟ್ಟುಕತೆ

ಕಟ್ಟುಕತೆ

ಚಕ್ರಗಳ ಬದಿಗಳಲ್ಲಿ ಉಲ್ಲೇಖಿಸಿರುವ ಪಿಎಸ್‌ಐ (ಟೈರ್ ಮಾಪನ) ಮೌಲ್ಯದ ಆಧಾರದಲ್ಲಿ ಚಕ್ರಗಳಿಗೆ ಗಾಳಿ ತುಂಬಿಸಬೇಕಾಗಿದೆ.

ಸತ್ಯಾಂಶ

ಸತ್ಯಾಂಶ

ಚಕ್ರಗಳ ಬದಿಗಳಲ್ಲಿ ಉಲ್ಲೇಖಿಸಲಾಗಿರುವ ಅಂಶವು ಗರಿಷ್ಠ ಒತ್ತಡ ಮೌಲ್ಯವನ್ನು ಸೂಚಿಸುತ್ತದೆ. ಅಲ್ಲದೆ ಕಾರಿನೊಳಗೆ ಬಾಗಿಲುಗಳ ಬದಿಗಳಲ್ಲಿ ಚಕ್ರದ ಒತ್ತಡ ಮೌಲ್ಯವನ್ನು ಕೊಡಲಾಗಿರುತ್ತದೆ.

ಕಟ್ಟುಕತೆ

ಕಟ್ಟುಕತೆ

ಚಕ್ರದಲ್ಲಿರುವ ವಾಲ್ವ್ ಕ್ಯಾಪ್ಸ್ (ಕವಾಟ) ಗಾಳಿ ಹೊರಹೋಗುವುದನ್ನು ತಡೆಗಟ್ಟುತ್ತದೆ.

ಸತ್ಯಾಂಶ

ಸತ್ಯಾಂಶ

ವಾಲ್ವ್ ಕ್ಯಾಪ್‌ಗಳು ಯಾವತ್ತೂ ಚಕ್ರಗಳಿಂದ ಗಾಳಿ ಹೊರಹೋಗುವುದನ್ನು ತಡೆಗಟ್ಟುವುದಿಲ್ಲ. ಬದಲಾಗಿ ಇದು ಧೂಳಿನ ಕಣ, ನೀರು, ಮಣ್ಣುಗಳು ಕವಾಟದೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ಕಟ್ಟುಕತೆ

ಕಟ್ಟುಕತೆ

ಕಡಿಮೆ ಟೈರ್ ಪ್ರೆಷರ್ ಇದ್ದಲ್ಲಿ ಒದ್ದೆಯಾಗಿರುವ ಮೇಲ್ಮೈಯಲ್ಲಿ ಹೆಚ್ಚಿನ ಗ್ರಿಪ್ ದೊರಕಲಿದ್ದು, ಟೈರ್ ಸ್ಕಿಡ್ ಆಗುವುದಿಲ್ಲ.

ಸತ್ಯಾಂಶ

ಸತ್ಯಾಂಶ

ಇಲ್ಲಿ ನಿಜಾಂಶ ಏನೆಂದರೆ ಕಡಿಮೆ ಟೈರ್ ಪ್ರೆಷರ್ ಸಂದರ್ಭದಲ್ಲಿ, ತುಳಿ (ಥ್ರೆಡ್) ಮುಚ್ಚಲ್ಪಡಲಿದ್ದು ಇದರಿಂದ ನಡುವಣ ಅಂತರ ಕಡಿಮೆಯಾಗಲಿದೆ. ಇದು ಚಕ್ರಗಳು ಇನ್ನು ಹೆಚ್ಚು ಸ್ಕಿಡ್ ಆಗುವಂತೆ ಮಾಡಲಿದೆ.

ಕಟ್ಟುಕತೆ

ಕಟ್ಟುಕತೆ

ಬೇಸಿಗೆ ಕಾಲಘಟ್ಟದಲ್ಲಿ ಅತ್ಯಧಿಕ ತಾಪಮಾನದಿಂದಾಗಿ ಚಕ್ರದಲ್ಲಿನ ಗಾಳಿಯು ಸಹಜವಾಗಿಯೇ ಹೆಚ್ಚುತ್ತದೆ. ಹಾಗಾಗಿ ಟೈರ್ ಪ್ರೆಷರ್ ಕಡಿಮೆ ಮಾಡಬೇಕು.

ಸತ್ಯಾಂಶ

ಸತ್ಯಾಂಶ

ಕಡಿಮೆ ಪಿಎಸ್ಐನಿಂದಾಗಿ (ಟೈರ್ ಮಾಪನ) ಚಕ್ರ ಬಿಸಿಯಾಗಲಿದ್ದು, ಇದರಿಂದಾಗಿ ಚಕ್ರದ ಹೊರಮೈ ವಕ್ರವಾಗಿ ಬಾಗುವ ಸಾಧ್ಯತೆಯಿದೆ. ಹಾಗಾಗಿ ಬೇಸಿಗೆ ಕಾಲಘಟ್ಟದಲ್ಲೂ ಉಲ್ಲೇಖಿಸಲಾಗಿರುವ ಪಿಎಸ್‌ಐ ಅನುಸರಿಸುವುದು ಒಳಿತು.

ಕಟ್ಟುಕತೆ

ಕಟ್ಟುಕತೆ

ಚಳಿಗಾಲದ ಸಮಯದಲ್ಲಿ ಉತ್ತಮ ಹ್ಯಾಂಡ್ಲಿಂಗ್‌ಗಾಗಿ ಟೈರ್ ಪ್ರೆಷರ್ ಕೆಲವು ಪಿಎಸ್‌ಐಗಳಷ್ಟು ಕಡಿಮೆ ಮಾಡಬೇಕಾಗಿದೆ.

ಸತ್ಯಾಂಶ

ಸತ್ಯಾಂಶ

ಚಳಿಗಾಲದಲ್ಲಿ ನೀವು ಚಕ್ರಗಳ ಒತ್ತಡವನ್ನು ಎರಡು ಪಿಎಸ್‌ಐಗಳಷ್ಟು ಹೆಚ್ಚಿಸಲು ಗಮನ ವಹಿಸಬೇಕು. ಯಾಕೆಂದರೆ ತಾಪಮಾನದಲ್ಲಿ ಉಂಟಾಗುವ ಪ್ರತಿ 3ರಿಂದ 4 ಡಿಗ್ರಿಗಳಷ್ಟು ಇಳಿಕೆಯಿಂದಾಗಿ ಚಕ್ರಗಳ ಒತ್ತಡವು ಸಹ 1 ಪಿಎಸ್‌ಐಗಳಷ್ಟು ಕಡಿಮೆಯಾಗುತ್ತದೆ. ಇದು ಚಕ್ರದ ಬಾಳ್ವಿಕೆಗೆ ಮಾರಕವಾಗಿದ್ದು ಅಪಾಯಗಳನ್ನು ತಂದೊಡ್ಡುವ ಸಾಧ್ಯತೆಯಿದೆ.

ಕಟ್ಟುಕತೆ

ಕಟ್ಟುಕತೆ

ಒಣ ಮೇಲ್ಮೈಯಲ್ಲಿ ಉತ್ತಮ ಹ್ಯಾಂಡ್ಲಿಂಗ್‌ಗಾಗಿ ರಬ್ಬರ್ ಚಕ್ರದ ಸುತ್ತಲೂ ಕೊರೆಯಲಾಗುತ್ತದೆ (ಥ್ರೆಡ್).

ಸತ್ಯಾಂಶ

ಸತ್ಯಾಂಶ

ಚಕ್ರದ ಉತ್ತಮ ಲುಕ್ ಹಾಗೂ ಹ್ಯಾಂಡ್ಲಿಂಗ್‌ಗಾಗಿ ಹೀಗೆ ಮಾಡುವುದಷ್ಟೇ ಅಲ್ಲದೆ ಇದರ ಪ್ರಮುಖ ಉದ್ದೇಶ ಏನೆಂದರೆ ತೇವಯುಕ್ತ ಮೇಲ್ಮೈಯಲ್ಲಿ ನೀರಿನ ಅಂಶವನ್ನು ಬಿಡುಗಡೆ ಮಾಡುವುದಾಗಿದೆ.

ಕಟ್ಟುಕತೆ

ಕಟ್ಟುಕತೆ

ಕೈಯಿಂದ ಮುಟ್ಟಿದ ಮಾತ್ರಕ್ಕೆ ಚಕ್ರಗಳು ಮೃದು ಅಥವಾ ಗಟ್ಟಿ ರಚನೆಯನ್ನು ಹೊಂದಿದೆ ಎಂಬುದನ್ನು ಪರಿಶೀಲಿಸಿ ಹೇಳಬಹುದು.

ಸತ್ಯಾಂಶ

ಸತ್ಯಾಂಶ

ಕೆಲವು ಪರಿಧಿಗೆ ಮಾತ್ರ ಹೊರಂಗಣ ವಿನ್ಯಾಸ ಹಾಗೂ ಥ್ರೆಡ್‌ಗಳು ಚಕ್ರಗಳ ರಚನೆ ಬಗ್ಗೆ ಮಾಹಿತಿ ನೀಡಬಲ್ಲದು. ಆದರೆ ಬಾಹ್ಯ ಮೇಲ್ಮೈಯ ಒಳಗಡೆಯಿರುವ ಪದರುಗಳು ಚಕ್ರಗಳಿಗೆ ಸರಿಯಾದ ರಚನೆಯನ್ನು ಪ್ರದಾನ ಮಾಡುತ್ತದೆ.

ಕಟ್ಟುಕತೆ

ಕಟ್ಟುಕತೆ

ಚಳಿಗಾಲದಲ್ಲಿ ಹಿಮಪಾತವಿಲ್ಲದ ಸಂದರ್ಭದಲ್ಲಿ ವಿಂಟರ್ ಚಕ್ರಗಳ ಅಗತ್ಯವಿರುವುದಿಲ್ಲ.

ಸತ್ಯಾಂಶ

ಸತ್ಯಾಂಶ

ವಿಂಟರ್ ಟೈರ್‌ಗಳು ಕೇವಲ ಹಿಮ ಅಥವಾ ಹಿಮಾವೃತ ರಸ್ತೆಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿಲ್ಲ. ಬದಲಾಗಿ 10 ಡಿಗ್ರಿ ಕೆಳಗಡೆಯ ತಾಪಾಮಾನ ಪ್ರದೇಶದಲ್ಲೂ ಇದನ್ನು ಬಳಕೆ ಮಾಡಬೇಕಾಗಿದೆ. ಯಾಕೆಂದರೆ ಇಂತಹ ಚಕ್ರಗಳು ವಿಭಿನ್ನ ಥ್ರೆಡ್‌ಗಳನ್ನು ಹೊಂದಿದ್ದು, ಹಿಮಾವೃತ ಪ್ರದೇಶದಲ್ಲಿ ಹೆಚ್ಚು ಗ್ರಿಪ್ ಒದಗಿಸಲಿದೆ. ಇದನ್ನು ಪ್ರತ್ಯೇಕ ರಬ್ಬರ್‌ಗಳಿಂದ ತಯಾರಿಸಲಾಗುತ್ತದೆ.

ಕಟ್ಟುಕತೆ

ಕಟ್ಟುಕತೆ

ರೇಸಿಂಗ್ ಚಕ್ರಗಳಿಗೆ ಥ್ರೆಡ್‌ಗಳಿರುವುದಿಲ್ಲ. ಇದರಿಂದಾಗಿ ವೇಗ ಹೆಚ್ಚಿಸಲು ನೆರವಾಗುತ್ತದೆ.

ಸತ್ಯಾಂಶ

ಸತ್ಯಾಂಶ

ಒಣಗಿದ ಮೇಲ್ಮೈಯ ವಿಚಾರಕ್ಕೆ ಬಂದಾಗ ರಬ್ಬರ್ ಮೇಲ್ಮೈಗೆ ತಾಗಿದಷ್ಟು ಪ್ರಮಾಣ ಉತ್ತಮ ಹ್ಯಾಂಡ್ಲಿಂಗ್ ಲಭಿಸಲಿದೆ. ಇದೇ ಕಾರಣಕ್ಕಾಗಿ ಫಾರ್ಮುಲಾ ಒನ್ ಅಥವಾ ಮೊಟೊ ಜಿಪಿ ರೇಸಿಂಗ್ ವಾಹನಗಳ ಚಕ್ರಗಳಿಗೆ ಯಾವುದೇ ಥ್ರೆಡ್‌ಗಳಿರುವುದಿಲ್ಲ.

ಕಟ್ಟುಕತೆ

ಕಟ್ಟುಕತೆ

ನಿಮ್ಮ ವಾಹನವನ್ನು ಸರ್ವೀಸ್‌ಗೆ ನೀಡಿದಾಗ ಮಾತ್ರ ಚಕ್ರದ ಒತ್ತಡವನ್ನು ಪರಿಶೀಲಿಸಬೇಕು.

ಸತ್ಯಾಂಶ

ಸತ್ಯಾಂಶ

ಚಕ್ರದಿಂದ ಸಹಜವಾಗಿಯೇ ಗಾಳಿ ಬಿಡುಗಡೆಯಾಗುವುದರಿಂದ ಕನಿಷ್ಠ ಪಕ್ಷ ವಾರಕ್ಕೊಂದು ಬಾರಿಯಾದರೂ ನಿಮ್ಮ ವಾಹನಗಳ ಏರ್ ಪ್ರೆಷರ್ ಪರಿಶೀಲಿಸತಕ್ಕದ್ದು.

ಮಿಸ್ ಮಾಡದಿರಿ: ಇಂದಿನ ಫೇಸ್‌ಬುಕ್ ವೀಡಿಯೋ

Most Read Articles

Kannada
English summary
Over the years we have a heard a few tyre myths which has got ourselves into a few arguments. We suggest you read these tyre myths and facts carefully and pass it on. You never know it might just help prevent a tyre failure or a serious accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X