ಫೇಸ್‌ಬುಕ್‌ನ ಹಿರಿಯ ಮಹಿಳೆಗೆ ಹೋಂಡಾ ಕಾರು ಉಡುಗೊರೆ

By Nagaraja

ಫೇಸ್‌ಬುಕ್‌ ಖಾತೆ ಹೊಂದಿರುವ ಅತ್ಯಂತ ಹಿರಿಯ ಬಳಕೆದಾರನೆಂಬ ಖ್ಯಾತಿಗೆ ಪಾತ್ರವಾಗಿರುವ 105ರ ಹರೆಯದ ಸಾಮಾಜಿಕ ಕಾರ್ಯಕರ್ತೆ Edythe Kirchmaier ಎಂಬವರಿಗೆ ಅಪರಿಚರೊಬ್ಬರು ಅತಿ ನೂತನ 2013 ಹೋಂಡಾ ಸಿವಿಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಜೀವಮಾನ ಪರ್ಯಂತ ತಮ್ಮನ್ನು ತಾವೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಈ ಮಹಿಳೆ 86 ವರ್ಷಗಳ ಸುದೀರ್ಘ ಡ್ರೈವಿಂಗ್ ಅನುಭವ ಹೊಂದಿದ್ದಾರೆ.


ಸಾಮಾನ್ಯವಾಗಿ ಬಹುತೇಕ ಎಲ್ಲ ಮಂದಿ ಮುದುಕಿಯಾದಾಗ ಡ್ರೈವಿಂಗ್‌ನಿಂದ ದೂರವುಳಿಯುತ್ತಾರೆ. ಆದರೆ ತಮ್ಮ 19ರ ಹರೆಯದಲ್ಲೇ ಡ್ರೈವಿಂಗ್ ಕರಗತ ಮಾಡಿಕೊಂಡಿರುವ ಈ ಮಹಿಳೆ ಮತ್ತೆ ಡ್ರೈವಿಂಗ್ ಲೈಸನ್ಸ್ ರಿನ್ಯೂ ಮಾಡುವ ಮೂಖಾಂತರ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ಸುದೀಘ 86 ವರ್ಷಗಳ ಡ್ರೈವಿಂಗ್ ಜೀವನದಲ್ಲಿ ಒಮ್ಮೆಯೂ ಟ್ರಾಫಿಕ್ ನಿಯಮ ಉಲ್ಲಂಘಿಸಿಲ್ಲ ಎಂಬುದು ಈ ಮಹಿಳೆಯ ಸಾಧನೆಯಾಗಿದೆ. ಅಲ್ಲದೆ ಅತಿ ಪುರಾತನ ಕಾರುಗಳಲ್ಲಿ ಒಂದೆನಿಸಿರುವ ಫೋರ್ಡ್ ಮಾಡೆಲ್ ಟಿ ಕಾರಲ್ಲಿ ಚಾಲನೆ ಕರಗತ ಮಾಡಿಕೊಂಡಿದ್ದರು.


ಅಮೆರಿಕ ಮೂಲದ ಲಾಭರಹಿತ ಆರೋಗ್ಯ ಪೂರೈಕೆ ಸಹಾಯಾರ್ಥ ಸಂಸ್ಥೆ ಡೈರಕ್ಟ್ ರಿಲೀಫ್‌ಗಾಗಿ ದುಡಿಯುತ್ತಿರುವ ಈಕೆ ಈಗಾಗಲೇ ಹಲವಾರು ಬಡ ಕುಟುಂಬಗಳಿಗೆ ನೆರವಾಗುವ ಮೂಲಕ ಮನ್ನಣೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕ ಸೇರಿದಂತೆ ಹಲವಾರು ಜನಪ್ರಿಯ ಟಿ.ವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಏತನ್ಮಧ್ಯೆ ಈಕೆಯ 1997ರ ಮಿನಿಮ್ಯಾನ್ ಕಾರು ಬ್ರೇಕ್ ಡೌನ್ ತೊಂದರೆಗೊಳಗಾಗಿತ್ತು. ಇದನ್ನು ಅರಿತುಕೊಂಡ ಅಪರಿಚತರೊಬ್ಬರು ಅತಿ ನೂತನ 2013 ಹೋಂಡಾ ಸಿವಿಕ್ ಕಾರು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Most Read Articles

Kannada
English summary
At 105 years Edythe Kirchmaier is Santa Barbara, California's senior most resident. But you'll be astounded to know that while many people might stop driving after, say 70 years, Kirchmaier recently renewed her driving license.
Story first published: Wednesday, August 28, 2013, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X