ಮಸ್ಟಾಂಗ್ ಭಾರತಕ್ಕೆ; ರೋಡ್ ಎಲ್ಲ ನೆಟ್ಟಗಿದೆ ತಾನೇ?

By Nagaraja

ಅಮೆರಿಕದ ಐಕಾನಿಕ್ ಫೋರ್ಡ್ ಮಸ್ಟಾಂಗ್ ಕಾರು ಕೊನೆಗೂ ಭಾರತಕ್ಕೆ ಆಗಮನಿಸಲು ಸಜ್ಜಾಗುತ್ತಿದೆ. ಹಾಗಿರುವ ಸಾಮಾನ್ಯ ವಾಹನ ಪ್ರೇಮಿಯೊಬ್ಬರಲ್ಲಿ ಮೂಡುವ ಜಿಜ್ಞಾಸೆಯೆಂದರೆ ರೋಡ್ ಎಲ್ಲ ನೆಟ್ಟಗಿದೆ ತಾನೇ?

ಫೋರ್ಡ್ ಮಸ್ಟಾಂಗ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಂತೆಯೇ ನಮ್ಮ ನಿಮ್ಮಲ್ಲಿ ಕಾಡುತ್ತಿರುವ ಪ್ರಶ್ನೆ ಅದರಲ್ಲೇನಿದೆ ಅಲ್ಲವೇ? ಹೌದು, ಇಂದಿನ ಈ ಲೇಖನದಲ್ಲಿ ಫೋರ್ಡ್ ಮಸ್ಟಾಂಗ್ ಕಾರಿಗೆ ಸಂಬಂಧಪಟ್ಟ 11 ಕುತೂಹಲಕಾರಿ ಅಂಶಗಳನ್ನು ಬಯಲು ಮಾಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

11. 1964ರಲ್ಲಿ ನಿರ್ಮಾಣ ಆರಂಭ

11. 1964ರಲ್ಲಿ ನಿರ್ಮಾಣ ಆರಂಭ

ಅಮೆರಿಕ ಮೂಲದ ಫೋರ್ಡ್ ಮೋಟಾರು ಸಂಸ್ಥೆಯ ಅತಿ ಪುರಾತನ ಹಾಗೂ ಪ್ರತಿಷ್ಠಿತ ಮಾದರಿಗಳಲ್ಲಿ ಒಂದಾಗಿರುವ ಫೋರ್ಡ್ ಮಸ್ಟಾಂಗ್ ನಿರ್ಮಾಣವು 1964ನೇ ಇಸವಿಯಲ್ಲಿ ಆರಂಭವಾಗಿತ್ತು. ಇವುಗಳಲ್ಲಿ ಮಸ್ಟಾಂಗ್ ಕನ್ವರ್ಟಿಬಲ್, ಮಸ್ಟಾಂಗ್ ಫಾಸ್ಟ್ ಬ್ಯಾಕ್, ಮಸ್ಟಾಂಗ್ ಬಾಸ್ 302, ಮಸ್ಟಾಂಗ್ ಸ್ಪೋರ್ಟ್ಸ್ ರೂಫ್, ಮಸ್ಟಾಂಗ್ II ಮತ್ತು ಮಸ್ಟಾಂಗ್ ಜಿಟಿ ಪ್ರಮುಖವಾಗಿದೆ.

10. ತಲೆಮಾರಿಂದ ತಲೆಮಾರಿಗೆ

10. ತಲೆಮಾರಿಂದ ತಲೆಮಾರಿಗೆ

ಫೋರ್ಡ್ ಮಸ್ಟಾಂಗ್ ಮಾದರಿಯು ಇದುವರೆಗೆ ಆರು ತಲೆಮಾರಿನ ಮಾದರಿಗಳನ್ನು ಕಂಡಿದೆ. ಮೊದಲ ಜನರೇಷನ್ (1964-1973), ಎರಡನೇ ಜನಾಂಗ (1974-1978), ಮೂರನೇ ಜನಾಂಗ (1979-1993), ನಾಲ್ಕನೇ ಜನಾಂಗ (1994-2004), ಐದನೇ ಜನಾಂಗದಿಂದ (2005-2014) ಈಗ ಆರನೇ ಜನಾಂಗದ (2015ರಿಂದ) ವರೆಗೆ...

09. ರೇಸಿಂಗ್

09. ರೇಸಿಂಗ್

1964ರ ಇಂಡಿಯನ್ ಪೊಲಿಸ್ 500 ರೇಸ್ ಗೆ ಕಾಲಿಡುವ ಮೂಲಕ ಫೋರ್ಡ್ ಮಸ್ಟಾಂಗ್ ಸಂಸ್ಥೆಯು ಮೊದಲ ಬಾರಿಗೆ ಸಾರ್ವಜನಿಕವಾಗಿ ರೇಸ್ ಟ್ರ್ಯಾಕ್ ಗೆ ಕಾಲಿಟ್ಟಿತ್ತು.

08. ಪ್ರಶಸ್ತಿ

08. ಪ್ರಶಸ್ತಿ

1965 ಮಸ್ಟಾಂಗ್ ಕಾರು ಅತ್ಯುತ್ತಮ ಅಮೆರಿಕ ವಿನ್ಯಾಸಗಾಗಿ ಟಿಫನಿ ಗೋಲ್ಡ್ ಮೆಡಲ್ ಗೆ ಭಾಜನವಾಗಿತ್ತು. ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ಆಟೋಮೊಬೈಲ್ ಸಂಸ್ಥೆ ಎನಿಸಿಕೊಂಡಿತ್ತು. ಅಲ್ಲದೆ 1983, 1987, 1988, 2005 ಹಾಗೂ 2011ರಲ್ಲಿ ಕಾರ್ ಆ್ಯಂಡ್ ಡ್ರೈವ್ ಟೆನ್ ಬೆಸ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

07. ಎಂಜಿನ್

07. ಎಂಜಿನ್

ಫೋರ್ಡ್ ಮಸ್ತಾಂಗ್ ಕಾರಿನಲ್ಲಿ 3.7 ಲೀಟರ್ ವಿ6, 5 ಲೀಟರ್ ವಿ8 ಹಾಗೂ 2.3 ಲೀಟರ್ ಇಕೊಬೂಸ್ಟ್ ಎಂಜಿನ್ ಬಳಕೆಯಾಗುತ್ತಿದೆ. ಈ ಪೈಕಿ ಭಾರತಕ್ಕೆ 2.3 ಲೀಟರ್ ಇಕೊಬೂಸ್ಟ್ ಎಂಜಿನ್ ಆಳವಡಿಸುವ ನಿರೀಕ್ಷೆಯಿದೆ.

06. ವಿನ್ಯಾಸಗಾರರು

06. ವಿನ್ಯಾಸಗಾರರು

ಫೋರ್ಡ್ ಮಸ್ಟಾಂಗ್ ವಿನ್ಯಾಸವನ್ನು ಜಾನ್ ನಜ್ಜಾರ್ ಫೆರ್ಜೆಲಿ, ಪಿಲಿಪ್ ಟಿ ಕ್ಲಾರ್ಕ್ ಮತ್ತು ಜೋ ಓರೊಸ್ ಎಂಬವರು ಸೇರಿ ಅಭಿವೃದ್ಧಿಪಡಿಸಿದ್ದಾರೆ.

05. ದೇಹ ಶೈಲಿ

05. ದೇಹ ಶೈಲಿ

2 ಡೋರ್ 2+2 ಸೀಟ್ ಕೂಪೆ,

2 ಡೋರ್ ಹ್ಯಾಚ್ ಬ್ಯಾಕ್,

2 ಡೋರ್ ಫಾಸ್ಟ್ ಬ್ಯಾಕ್,

2 ಡೋರ್ ಕನ್ವರ್ಟಿಬಲ್

04. ಮೊದಲ ದಿನದಲ್ಲೇ 22,000 ಮಾರಾಟ

04. ಮೊದಲ ದಿನದಲ್ಲೇ 22,000 ಮಾರಾಟ

ಬಲ್ಲ ಮೂಲಗಳ ಪ್ರಕಾರ ಫೋರ್ಡ್ ಮಸ್ಟಾಂಗ್ ಬಿಡುಗಡೆಯಾದ ಮೊದಲ ದಿನದಲ್ಲೇ 22,000 ಹಾಗೂ ಎರಡು ವರ್ಷದಲ್ಲೇ 10 ಲಕ್ಷಗಳಷ್ಟು ಮಸ್ಟಾಂಗ್ ಕಾರುಗಳು ಮಾರಾಟವಾಗಿದ್ದವು.

03. ಫೈಟರ್ ಜೆಟ್ ಸ್ಪೂರ್ತಿ

03. ಫೈಟರ್ ಜೆಟ್ ಸ್ಪೂರ್ತಿ

ಮಸ್ಟಾಂಗ್ ಯುದ್ಧ ವಿಮಾನದಿಂದ ಸ್ಪೂರ್ತಿ ಪಡೆದುಕೊಂಡು ಈ ಕಾರಿಗೆ ಮಸ್ಟಾಂಗ್ ಎಂಬ ಹೆಸರನ್ನು ಇಡಲಾಗಿದೆ.

02. ಮಾದಕತೆ, ಪವರ್ ಫುಲ್ ಕಾರು

02. ಮಾದಕತೆ, ಪವರ್ ಫುಲ್ ಕಾರು

ನೋಡಲು ಮಾದಕ ಕನ್ಯೆಯಂತಿರುವ ಫೋರ್ಡ್ ಕಾರು ಅತ್ಯಂತ ಶಕ್ತಿಶಾಲಿ ಹಾಗೂ ಅಂದಿನ ಕಾಲದಲ್ಲಿ ಅತ್ಯಧಿಕ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳಲ್ಲಿ ಅಗ್ರಗಣ್ಯವೆನಿಸಿತ್ತು.

01. ಜೇಮ್ಸ್ ಬಾಂಡ್

01. ಜೇಮ್ಸ್ ಬಾಂಡ್

ಜೇಮ್ಸ್ ಬಾಂಡ್ ನ ಗೋಲ್ಡ್ ಫಿಂಗರ್ ಚಿತ್ರದಿಂದ ಆರಂಭಿಸಿ 3,000ಕ್ಕೂ ಹೆಚ್ಚು ಚಲನಚಿತ್ರ ಹಾಗೂ ಟಿ.ವಿ ಶೋಗಳಲ್ಲಿ ಐಕಾನಿಕ್ ಮಸ್ಟಾಂಗ್ ಕಾರುಗಳನ್ನು ಬಳಕೆ ಮಾಡಲಾಗಿದೆ.

ಕೊನೆಗೂ ಭಾರತಕ್ಕೆ

ಕೊನೆಗೂ ಭಾರತಕ್ಕೆ

ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಪೋರ್ಡ್ ಮಸ್ಟಾಂಗ್ ಭಾರತಕ್ಕೆ ಆಗಮಿಸಲು ರೆಡಿಯಾಗುತ್ತಿದೆ. ಪ್ರಸಕ್ತ ಸಾಲಿನ ಅಂತ್ಯದಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅಧಿಕೃತವಾಗಿ ಭಾರತ ಪ್ರವೇಶವಾಗುವ ಸಾಧ್ಯತೆಯಿದೆ.


Most Read Articles

Kannada
English summary
11 Interesting Facts About Ford Mustang
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X