'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಡಿ ಬೈಕ್‌ಗಳ ಸವಾರಿ

By Nagaraja

ವಿಂಟೇಜ್ ಬೈಕ್‌ಗಳೆಂದರೆ ವಾಹನ ಪ್ರೇಮಿಗಳಿಗೆ ತುಂಬಾನೇ ಪ್ರೀತಿ. ಅದು ಬೈಕೇ ಆಗಿರಬಹುದು ಅಥವಾ ಕಾರು. ಹಳೆಯ ವೈಭವವನ್ನು ನೆನಪಿಸಿಕೊಳ್ಳುತ್ತಾ ತಮ್ಮ ಹೆರಿಟೇಜ್ ವಾಹನಗಳನ್ನು ಮಗದೊಮ್ಮೆ ರಸ್ತೆಯ ಮೇಲೆ ಇಳಿಸಲು ಅತೀವ ಉತ್ಸುಕರಾಗಿರುತ್ತಾರೆ.

ಇದರಿಂದ ಜಾವಾ ಮತ್ತು ಯೆಜ್ಢಿ ಬೈಕ್‌ ಪ್ರೇಮಿಗಳು ಕಮ್ಮಿಯೇನಲ್ಲ. ಬೆಂಗಳೂರಿನಲ್ಲಿ ಪ್ರತಿ ವರ್ಷ ಜುಲೈ ತಿಂಗಳ ಎರಡನೇ ಭಾನುವಾರವನ್ನು ಅಂತರಾಷ್ಟ್ರೀಯ ಜಾವಾ ಯೆಜ್ಢಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಐಕಾನಿಕ್ ಬೈಕ್‌ಗಳ rally ಆಯೋಜನೆಯಾಗುತ್ತಿದೆ.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ಪ್ರತಿ ವರ್ಷದಂತೆ ಈ ಬಾರಿಯೂ ಜುಲೈ 13ರಂದು ಅಂತರಾಷ್ಟ್ರೀಯ ಜಾವಾ ಯೆಜ್ಡಿ ದಿನಾಚರಣೆ ಆಚರಿಸಿಕೊಳ್ಳಲು ಬೆಂಗಳೂರು ಸಜ್ಜಾಗುತ್ತಿದೆ. 1960ನೇ ಇಸವಿಯಿಂದ 1996ರ ವರೆಗಿನ ಉತ್ಪಾದನೆಯಾದ ಜಾವಾ ಯೆಜ್ಡಿ ಮಾದರಿಗಳು ಇದರಲ್ಲಿ ಪ್ರದರ್ಶನ ಕಾಣಲಿದೆ.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ನಿಮಗೆ ಜಾವಾ ಬೈಕ್‌ಗಳು ಅಪರಿಚಿತವಾದ್ದಲ್ಲಿ ನಾವಿಲ್ಲಿ ಪುಟ್ಟ ಮುನ್ನುಡಿ ಬರೆಯಲಿದ್ದೇವೆ. 1960ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದ ಮೈಸೂರು ತಲಹದಿಯ ಐಡಿಯಲ್ ಜಾವಾ (ಇಂಡಿಯಾ) ಲಿಮಿಟೆಡ್ ವಾಹನ ತಯಾರಕ ಸಂಸ್ಥೆಯು ಪ್ರಖ್ಯಾತ ಜೆಕ್ ಗಣರಾಜ್ಯದ ಜಾವಾ ಹಾಗೂ ಯೆಜ್ಡಿ ಬೈಕ್‌ಗಳನ್ನು ಮಾರಾಟ ಮಾಡಲು ಪರವಾನಗಿ ಗಿಟ್ಟಿಸಿಕೊಂಡಿತ್ತು.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

'ಫಾರವೆರ್ ಬೈಕ್ ಫಾರವೆರ್ ವ್ಯಾಲೂ' ಎಂಬ ಟ್ಯಾಗ್ ಲೈನ್‌ನಲ್ಲಿ ಗರಿಷ್ಠ ಸಾಮರ್ಥ್ಯದ ಜಾವಾ ಯೆಜ್ಡಿ ಬೈಕ್‌ಗಳು ಕೆಲವೇ ವರ್ಷಗಳಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ಈ ಬಾರಿಯೂ ಬೆಂಗಳೂರು ಜಾವಾ ಯೆಜ್ಡಿ ಮೋಟಾರುಸೈಕಲ್ ಕ್ಲಬ್ (ಬಿಜೆವೈಎಂಸಿ), ನಗರದ ವಿಲ್ಸನ್ ಗಾರ್ಡನ್‌ನ 10ನೇ ಕ್ರಾಸ್‌ನಲ್ಲಿರುವ ಹೊಂಬೇಗೌಡ ಶಾಲಾ ಕ್ರೀಡಾಂಗಣದಲ್ಲಿ ಭೇಟಿಯಾಗಲಿದ್ದು, ತದಾ ಬಳಿಕ 10.30ಕ್ಕೆ ಸರಿಯಾಗಿ ಮೈಸೂರು ರಸ್ತೆ ಕಡೆ 40 ಕೀ.ಮೀ. ದೂರದ ವರೆಗೆ ರಾಲಿ ನಡೆಯಲಿದೆ.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

2007ರಲ್ಲಿ ಸ್ಥಾಪಿತವಾಗಿದ್ದ ಬೆಂಗಳೂರು ಜಾವಾ ಯೆಜ್ಡಿ ಮೋಟಾರುಸೈಕಲ್ ಕ್ಲಬ್, ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವ ಮತ್ತೆ ಐಕಾನಿಕ್ ಬೈಕ್‌ಗಳನ್ನು ರಸ್ತೆಗಿಳಿಸಲಿದೆ. ಇಂದಿಗೂ ಬೆಂಗಳೂರು ನಗರದಲ್ಲಿ 600ಕ್ಕೂ ಹೆಚ್ಚು ಜಾವಾ ಯೆಜ್ಡಿ ಬೈಕ್‌ಗಳಿದ್ದು, ವಾಹನ ಪ್ರೇಮಿಗಳು ಅತ್ಯಂತ ಭದ್ರವಾಗಿರಿಸಿಕೊಂಡಿದ್ದಾರೆ. ಇದರಲ್ಲಿ ಅತ್ಯಂತ ಬೆಲೆ ಬಾಳುವ ಜಾವಾ ಪೆರಾಕ್ಸ್, ಜೇಟಸ್ ಮತ್ತು 350 ಜಾವಾ ಟ್ವಿನ್‌ ಮಾದರಿಗಳು ಸೇರಿವೆ.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ಅಂದ ಹಾಗೆ ನೀವು ಸಹ ಜಾವಾ ಯೆಜ್ಡಿ rally ಯಲ್ಲಿ ಭಾಗವಹಿಸಲು ಇಚ್ಛಿಸುವುದಾದ್ದಲ್ಲಿ ಕೆಳಗಡೆ ಕೊಟ್ಟಿರುವ ನಂಬರ್‌ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಜಾವಾ ಯೆಜ್ಡಿ ಮೋಟಾರುಸೈಕಲ್ ಕ್ಲಬ್ ಫೇಸ್‌ಬುಕ್ ಪುಟವನ್ನು ಸಂಪರ್ಕಿಸಬಹುದು.

ಲೋಕೆಶ್ ಜೆಎಂ - 9880033994

ಅಥವಾ

ಅಮೃತ್ ಅಪ್ಪಯ್ಯ - 9880105455

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ಕಡಿಮೆ ನಿರ್ವಹಣಾ ವೆಚ್ಚ ಹಾಗೂ ಹೆಚ್ಚು ಬಾಳ್ವಿಕೆಯಿಂದ ದೇಶದ ಐಕಾನಿಕ್ ಬೈಕ್‌ಗಳ ಸಾಲಿಗೆ ಸೇರಿರುವ ಜಾವಾ ಯೆಜ್ಡಿ ಬೈಕ್‌ಗಳನ್ನು ಮೈಸೂರಿನ ಐಡಿಯಲ್ ಜಾವಾ ಘಟಕದಲ್ಲಿ ನಿರ್ಮಿಸಲಾಗಿತ್ತು. ಆದರೆ 1996ನೇ ಇಸವಿಯಲ್ಲಿ ಸಂಸ್ಥೆ ದಿವಾಳಿಯಾಗಿದ್ದರಿಂದ ಮುಚ್ಚಲಾಗಿತ್ತು.

ಹೆಸರಾಂತ ಜಾವಾ ಯೆಜ್ಡಿ ಮಾದರಿಗಳು ಇಂತಿದೆ:

ಹೆಸರಾಂತ ಜಾವಾ ಯೆಜ್ಡಿ ಮಾದರಿಗಳು ಇಂತಿದೆ:

ಜಾವಾ 250 ಟೈಪ್

ಜಾವಾ 50 ಜೆಟನ್ ಎ ಸಿರೀಸ್

ಯೆಜ್ಡಿ 250 ಬಿ ಟೈಪ್

ಯೆಜ್ಡಿ 250 ಆಯಿಲ್‌ಕಿಂಗ್ ಸಿ ಟೈಪ್

ಯೆಜ್ಡಿ 250 ರೋಡ್ ಕಿಂಗ್ ಸಿ ಟೈಪ್

ಯೆಜ್ಡಿ 60 ಜೆಟ್ ಸಿ ಸಿರೀಸ್

ಯೆಜ್ಡಿ ಡಿ250 ಕ್ಲಾಸಿಕ್ ಡಿ ಟೈಪ್

ಯೆಜ್ಡಿ 250 ಸಿಎಲ್ II ಡಿ ಟೈಪ್

ಯೆಜ್ಡಿ ಬಿ250 ಡಿಲಕ್ಸ್ ಡಿ ಟೈಪ್

ಹೆಸರಾಂತ ಜಾವಾ ಯೆಜ್ಡಿ ಮಾದರಿಗಳು ಇಂತಿದೆ:

ಹೆಸರಾಂತ ಜಾವಾ ಯೆಜ್ಡಿ ಮಾದರಿಗಳು ಇಂತಿದೆ:

ಯೆಜ್ಡಿ 250 ಡಿಲಕ್ಸ್ ಡಿ ಟೈಪ್

ಯೆಜ್ಡಿ 250 ರೋಡ್ ಕಿಂಗ್ ಸಿ ಟೈಪ್

ಯೆಜ್ಡಿ 60 ಕೋಲ್ಟ್

ಯೆಜ್ಡಿ 60 ಕೋಲ್ಟ್ ಡಿಲಕ್ಸ್

ಯೆಜ್ಡಿ 175

ಯೆಜ್ಡಿ 175 ಡಿಲಕ್ಸ್ (ಸಿಡಿಐ)

ಜಾವಾ/ಯೆಜ್ಡಿ 350 ಟ್ವಿನ್

ಯೆಜ್ಡಿ 250 ಮೋನಾರ್ಕ್ ಸಿ ಟೈಪ್

ಯೆಜ್ಡಿ 250 ಸೂಪರ್‌ಸ್ಪ್ರಿಂಟ್ (ಬಿಡುಗಡೆಯಾಗಿಲ್ಲ)

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ಇಲ್ಲಿ ಎ,ಬಿ,ಸಿ,ಡಿ ಎಂಬುದು ಎಂಜಿನ್ ಮಾದರಿಯ ವಿಧಗಳಾಗಿದೆ. ಅಷ್ಟೇ ಅಲ್ಲದೆ ಟರ್ಕಿ, ನೈಜಿರಿಯಾ, ಶ್ರೀಲಂಕಾ, ಈಜಿಪ್ಟ್ ಸೇರಿದಂತೆ 61ರಷ್ಟು ರಾಷ್ಟ್ರಗಳಿಗೆ ರಫ್ತು ಕೂಡಾ ಮಾಡಿವೆ. ಈ ಪೈಕಿ ಗ್ವಾಂಟಿಮಾಲಾ ಪೊಲೀಸ್ ಭದ್ರತಾ ಪಡೆಯು ಯೆಜ್ಢಿ ರೋಡ್ ಕಿಂಗ್ ಬೈಕ್‌ಗಳನ್ನು ಬಳಸಿರುವುದು ಇದರ ಜನಪ್ರಿಯತೆಯನ್ನು ಸಾರುತ್ತಿದೆ.

'ರೋಡ್ ಕಿಂಗ್' ಹೆರಿಟೇಜ್ ಜಾವಾ, ಯೆಜ್ಢಿ ಬೈಕ್‌ಗಳ ಸವಾರಿ

ಇಲ್ಲಿ ಕೊಟ್ಟಿರುವ ಎಲ್ಲ ಚಿತ್ರಗಳು ಕಳೆದ ವರ್ಷ ನಡೆದ ಜಾವಾ, ಯೆಜ್ಡಿ ಬೈಕ್‌ಗಳ ಚಿತ್ರ ಸಂಗ್ರಹವಾಗಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳರಿ.

ಚಿತ್ರ ಕೃಪೆ: ಜೊಬೊ ಕುರುವಿಲ್ಲ, ಪ್ರಧಾನ ಸಂಪಾದಕರು, ಡ್ರೈವ್‌ಸ್ಪಾರ್ಕ್

Most Read Articles

Kannada
English summary
Jawa & Yezdi bike fans gear up to celebrate the 12th International Jawa Yezdi Day on 13th July 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X