ಬಿಎಂಡಬ್ಲ್ಯು ಮತ್ತು ಐಕಾನಿಕ್ ಸಂಸ್ಥೆಯ 13 ಸತ್ಯಗಳು!

By Nagaraja

ಜರ್ಮನಿಯ ಮೂರು ಐಷಾರಾಮಿ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಪೂರ್ಣ ರೂಪ ಏನೆಂಬುದು ಇನ್ನು ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ ಎಂಬುದು ಬೇಸರದ ಸಂಗತಿ. ಇದೇ ಕಾರಣಕ್ಕಾಗಿ ಬಿಎಂಡಬ್ಲ್ಯು ಐಷಾರಾಮಿ ಸಂಸ್ಥೆಗೆ ಸಂಬಂಧಪಟ್ಟ 13 ರೋಚಕ ಸತ್ಯಗಳನ್ನು ನಾವು ನಿಮ್ಮ ಮುಂದಿಡಲಿದ್ದೇವೆ.

Also Read : ಹರ್ಲಿ ಡೇವಿಡ್ಸನ್: ಕನಸಿನ ಬೈಕ್ ಗೊತ್ತಿರದ ಸತ್ಯಗಳು

ಬಿಎಂಡಬ್ಲ್ಯು ಪೂರ್ಣ ರೂಪ 'ಬವರಿಯನ್ ಮೋಟಾರ್ ವರ್ಕ್ಸ್' (Bavarian Motor Works or Bayerische Motoren Werke AG) ಎಂಬುದಾಗಿದೆ. ಫ್ರಾನ್ಜ್ ಜೋಸೆಫ್ ಪಾಪ್, ಕಾರ್ಲ್ ರಾಪ್ ಮತ್ತು ಕ್ಯಾಮಿಲೊ ಕಾಸ್ಟಿಗ್ಲಿಯೊನಿ ರೂವಾರಿಯೆನಿಸಿರುವ ಬಿಎಂಡಬ್ಲ್ಯು ಸಂಸ್ಥೆಯೀಗ ಎಲೆಕ್ಟ್ರಿಕ್, ಹೈಬ್ರಿಡ್ ಕಾರುಗಳನ್ನು ಉತ್ಪಾದಿಸುವ ವರೆಗೂ ಹೆಸರು ಮಾಡಿದೆ.

13. ಬಿಎಂಡಬ್ಲ್ಯು ಉಗಮ

13. ಬಿಎಂಡಬ್ಲ್ಯು ಉಗಮ

ಜರ್ಮನ್ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಮೂಲತ: 1917ರಲ್ಲಿ ವಿಮಾನ ಎಂಜಿನ್ ನಿರ್ಮಾಣವನ್ನು ಆರಂಭಿಸಿತ್ತು. ಆದರೆ 1918ರಲ್ಲಿ ಒಂದನೇ ಮಹಾಯುದ್ಧದ ಬಳಿಕ ವರ್ಸೇಲ್ಸ್ ಕದನವಿರಾಮ ಒಪ್ಪಂದದ ಪ್ರಕಾರ ವಿಮಾನ ಎಂಜಿನ್ ಉತ್ಪಾದನೆ ನಿಲ್ಲಿಸಲು ಬಿಎಂಡಬ್ಲ್ಯು ನಿರ್ಬಂಧಿತವಾಗಿತ್ತು. ತರುವಾಯ ಸಂಸ್ಥೆಯು ಮೋಟಾರ್ ಸೈಕಲ್ ಹಾಗೂ ಕಾರು ಉತ್ಪಾದನೆಯನ್ನು ಆರಂಭಿಸಿತ್ತು. ಇಂದಿಗೂ ಶ್ರೀಮಂತ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಈಗ ಇತಿಹಾಸ.

12. ಮೊದಲ ಕಾರು

12. ಮೊದಲ ಕಾರು

ಬಿಎಂಡಬ್ಲ್ಯು ಬಿಡುಗಡೆ ಮಾಡಿರುವ ಮೊದಲ ಕಾರು 'Dixi' ಆಗಿದೆ. ಆಸ್ಟಿನ್ ಮೋಟಾರು ಕಂಪನಿಯಿಂದ ಪರವಾನಗಿ ಪಡೆದ ಆಸ್ಟಿನ್ 7 ಕಾರಿನ ತಳಹದಿಯಲ್ಲಿ ಇದನ್ನು ನಿರ್ಮಿಸಲಾಗಿತ್ತು.

11. ಮಿನಿ, ರೋಲ್ಸ್ ರಾಯ್ಸ್

11. ಮಿನಿ, ರೋಲ್ಸ್ ರಾಯ್ಸ್

ನಿಮಗಿದು ಗೊತ್ತೇ? ಬಿಎಂಡಬ್ಲ್ಯು ಕಾರುಗಳು 'ಬಿಮ್ಮರ್ಸ್' ಎಂದೇ ಪ್ರಸಿದ್ಧಿಯನ್ನು ಪಡೆದಿದ್ದು, ಜಗತ್ತಿನ ಐಕಾನಿಕ್ ಮಿನಿ ಹಾಗೂ ರೋಲ್ಸ್ ರಾಯ್ಸ್ ಐಷಾರಾಮಿ ಕಾರು ಬ್ರಾಂಡ್ ಗಳ ಒಡೆತನವನ್ನು ಹೊಂದಿದೆ.

10. ಬಿಎಂಡಬ್ಲ್ಯು ಲಾಂಛನ ಸತ್ಯಾಸತ್ಯತೆ

10. ಬಿಎಂಡಬ್ಲ್ಯು ಲಾಂಛನ ಸತ್ಯಾಸತ್ಯತೆ

ಬಿಎಂಡಬ್ಲ್ಯು ಲಾಂಛನವು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ನಿಜಾಂಶ ಏನೆಂದರೆ ಬಿಎಂಡಬ್ಲ್ಯು ಲಾಂಛನವು ಸ್ವತಂತ್ರ ಬವರಿಯ ಪ್ರಾಂತ್ಯದ ರಾಷ್ಟ್ರೀಯ ಬಣ್ಣವನ್ನು ಪ್ರತಿನಿಧಿಸುತ್ತದೆ. ರಾಪ್ ಮೋಟಾರ್ ವರ್ಕ್ಸ್ (Rapp Motorenwerke) ವಿಮಾನ ಎಂಜಿನ್ ನಿರ್ಮಾಣ ಸಂಸ್ಥೆಯ ಮರು ಸ್ಥಾಪನೆಯ ವೇಳೆ ಹುಟ್ಟಿಕೊಂಡಿದ್ದ ಬಿಎಂಡಬ್ಲ್ಯು, ರಾಪ್ ಮೋಟಾರ್ ವರ್ಕ್ಸ್ ನ ಅದೇ ವೃತ್ತಾಕಾರದ ಲಾಂಛನವನ್ನು ಉಳಿಸಿಕೊಂಡು ಬಂದಿದೆ.

09. ಬಿಎಂಡಬ್ಲ್ಯು ಲಾಂಛನ ಸತ್ಯಾಸತ್ಯತೆ

09. ಬಿಎಂಡಬ್ಲ್ಯು ಲಾಂಛನ ಸತ್ಯಾಸತ್ಯತೆ

ಬಿಎಂಡಬ್ಲ್ಯು ವೃತ್ತಾಕಾರದ ಲಾಂಛನವು ವಿಮಾನದ ಮುಂದಿರುವ ಫ್ಯಾನ್ ಅನ್ನು ಪ್ರತಿನಿಧಿಸುತ್ತದೆ. ವೃತ್ತಾಕಾರದ ಮಧ್ಯದಲ್ಲಿ ಬಿಳಿ ಹಾಗೂ ನೀಲಿ ಬಣ್ಣಗಳನ್ನು ಹೊಂದಿರುವ ಬಿಎಂಡಬ್ಲ್ಯು ಲೊಗೊ ನೀಲಿ ಆಕಾಶವನ್ನು ಬಳಿ ರೆಕ್ಕೆಯು ಕತ್ತರಿಸುವ ವಿಮಾನ ಫ್ಯಾನ್‌ನ ಚಳುವಳಿಯನ್ನು ಬಿಂಬಿಸುತ್ತದೆ. 1929ರಲ್ಲಿ ಮೊದಲ ಬಾರಿಗೆ ಬಿಎಂಡಬ್ಲ್ಯು ಜಾಹೀರಾತಿನಲ್ಲಿ ಇದನ್ನು ಬಳಸಿಕೊಂಡಿತ್ತು.

08. ಏನಿದು ಕಿಡ್ನಿ ಗ್ರಿಲ್?

08. ಏನಿದು ಕಿಡ್ನಿ ಗ್ರಿಲ್?

ಪ್ರತಿಯೊಂದು ಕಾರು ಬ್ರಾಂಡ್ ಗಳು ತನ್ನದೇ ಆದ ವಿಶಿಷ್ಟ ಸೌಂದರ್ಯದಿಂದ ಎದ್ದು ಕಾಣಿಸುತ್ತದೆ. ಇಲ್ಲಿ ಬಿಎಂಡಬ್ಲ್ಯು ಸಿಗ್ನೇಚರ್ ಗ್ರಿಲ್ ಆಗಿರುವ 'ಕಿಡ್ನಿ ಗ್ರಿಲ್' ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಗಿಟ್ಟಿಸಿಕೊಂಡಿದೆ. ಇದು ಜಗತ್ತಿನ ಅತ್ಯಂತ ನಾವೀನ್ಯ ಹಾಗೂ ಶ್ರೇಷ್ಠ ವಿನ್ಯಾಸದ ಸಾಲಿನಲ್ಲಿ ಗುರುತಿಸಿಕೊಂಡಿದ್ದು, ಬಿಎಂಡಬ್ಲ್ಯು ಹಾದು ಬಂದ ಹಾದಿಯನ್ನು ಬಿಂಬಿಸುತ್ತದೆ. 1938 ಬಿಎಂಡಬ್ಲ್ಯು ಕಾರಿನ ಕಿಡ್ನಿ ಗ್ರಿಲ್ ಹೇಗೆತ್ತೆಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

07. ಬಿಎಂಡಬ್ಲ್ಯು ಕೇಂದ್ರ ಕಚೇರಿ

07. ಬಿಎಂಡಬ್ಲ್ಯು ಕೇಂದ್ರ ಕಚೇರಿ

ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಆಟೋಮೊಬೈಲ್ ಚಟುವಟಿಕೆಗಳ ಪ್ರಧಾನ ಕೇಂದ್ರ ಜರ್ಮನಿಯ ಮ್ಯೂನಿಚ್ ನಲ್ಲಿ ಬಿಎಂಡಬ್ಲ್ಯು ಕೇಂದ್ರ ಕಚೇರಿ ಸ್ಥಿತಗೊಂಡಿದೆ. ಬಿಎಂಡಬ್ಲ್ಯು ದೈನಂದಿನ ಚಟುವಟಿಕೆ ನಡೆಯುವ ಈ ಕೇಂದ್ರವೂ ಒಂದು ವಿಶಿಷ್ಟತೆಗೆ ಪಾತ್ರವಾಗಿದೆ. ಇಲ್ಲಿನ ಬಿಎಂಡಬ್ಲ್ಯು ಕಚೇರಿಯನ್ನು ನಾಲ್ಕು ಸಿಲಿಂಡರ್ ಎಂಜಿನ್ ರೂಪದಲ್ಲಿ ನಿರ್ಮಿಸಲಾಗಿದೆ.

06. ಬಿಎಂಡಬ್ಲ್ಯು 'ಎಂ' ವಿಭಾಗ

06. ಬಿಎಂಡಬ್ಲ್ಯು 'ಎಂ' ವಿಭಾಗ

ಬಿಎಂಡಬ್ಲ್ಯು ಗರಿಷ್ಠ ನಿರ್ವಹಣೆ ಕಾರುಗಳನ್ನು ಎಂ ಅಥವಾ ಮೋಟಾರ್ ಸ್ಪೋರ್ಟ್ಸ್ ವಿಭಾಗವು ನಿರ್ಮಿಸುತ್ತದೆ. 1960 ಹಾಗೂ 1970ರ ದಶಕದಲ್ಲಿ ಬಿಎಂಡಬ್ಲ್ಯು ರೇಸಿಂಗ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಉದ್ದೇಶದೊಂದಿಗೆ ಇದನ್ನು ರಚಿಸಲಾಗಿತ್ತು. ಕ್ರಮೇಣ ವಿಶಿಷ್ಟ ಕಸ್ಟಮೈಸ್ಡ್ ಕಾರುಗಳನ್ನು ನಿರ್ಮಿಸುವುದರಲ್ಲಿ ನಿಸ್ಸೀಮವೆನಿಸಿಕೊಂಡಿತ್ತು. ಈ ವಿಭಾಗದಿಂದ ನಿರ್ಮಾಣವಾದ ಮೊದಲ ಕಾರು ಎಂ1 ಆಗಿದೆ. ಇದನ್ನು 1978ರಿಂದ 1981ರ ಅವಧಿಯಲ್ಲಿ ನಿರ್ಮಿಸಲಾಗಿತ್ತು.

05. ಬಿಎಂಡಬ್ಲ್ಯು ಮೊಟೊರಾಡ್

05. ಬಿಎಂಡಬ್ಲ್ಯು ಮೊಟೊರಾಡ್

ಕೇವಲ ಕಾರು ಮಾತ್ರವಲ್ಲದೆ ಸೂಪರ್ ಬೈಕ್ ನಿರ್ಮಾಣದಲ್ಲೂ ಬಿಎಂಡಬ್ಲ್ಯು ಎತ್ತಿದ ಕೈ ಎನಿಸಿಕೊಂಡಿದೆ. ವಿಶ್ವ ಸೂಪರ್ ಬೈಕ್ ಚಾಂಪಿಯನ್ ಶಿಪ್ ಗಳಲ್ಲೂ ಗಮನಾರ್ಹ ಸಾಧನೆ ಮಾಡಿರುವ ಬಿಎಂಡಬ್ಲ್ಯು ಮೋಟಾರ್ ಸೈಕಲ್ ವಿಭಾಗವಾಗಿರುವ ಬಿಎಂಡಬ್ಲ್ಯು ಮೊಟೊರಾಡ್ 1923ನೇ ಇಸವಿಯಿಂದಲೇ ನಿರ್ಮಾಣದಲ್ಲಿದೆ. ಬಿಎಂಡಬ್ಲ್ಯು ಮೊಟೊರಾಡ್ ನಿಂದ ಹೊರಬಂದಿರುವ ಮೊದಲ ಮೋಟಾರ್ ಸೈಕಲ್ 'ಆರ್32' ಆಗಿದೆ.

04. ಇದು ಕೂಡಾ ಬಿಎಂಡಬ್ಲ್ಯ ಅಂದರೆ ನಂಬಬಹುದೇ?

04. ಇದು ಕೂಡಾ ಬಿಎಂಡಬ್ಲ್ಯ ಅಂದರೆ ನಂಬಬಹುದೇ?

ಹೌದು, ಚಿತ್ರದಲ್ಲಿ ತೋರಿಸಿರುವ ವಾಹನ ಕೂಡಾ ಬಿಎಂಡಬ್ಲ್ಯು ಅಂದರೆ ನಂಬಬಹುದೇ? 1950ರ ದಶಕದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ಬಿಎಂಡಬ್ಲ್ಯು ಇಟಲಿಯ ಇಸೆಟ್ಟಾ (Isetta) ಪರವಾನಗಿಯಲ್ಲಿ ಈ ಸಣ್ಣ ಕಾರನ್ನು ನಿರ್ಮಿಸಿತ್ತು. ಅಲ್ಲದೆ 1,61,728 ಯುನಿಟ್ ಗಳಷ್ಟು ಮಾರಾಟ ಕಾಣುವ ಮೂಲಕ ಆಗಿನ ಗರಿಷ್ಠ ಮಾರಾಟದ ಸಿಂಗಲ್ ಸಿಲಿಂಡರ್ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

03. ಮರ್ಸಿಡಿಸ್ ಗೆ ಶರಣು?

03. ಮರ್ಸಿಡಿಸ್ ಗೆ ಶರಣು?

1959ರಲ್ಲಿ ಬಹುತೇಕ ದಿವಾಳಿಯತ್ತ ಸಾಗಿದ್ದ ಬಿಎಂಡಬ್ಲ್ಯು ಸಂಸ್ಥೆಯನ್ನು ಡೈಮ್ಲರ್ ಬೆಂಝ್ ಸ್ವಾಧೀನಪಡಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಬವರಿಯ ಸಂಸ್ಥೆಯ ನಿಪುಣ ತಂತ್ರಗಾರಿಕೆ ಹಾಗೂ ಖಾಸಗಿ ಹೂಡಿಕೆದಾರರ ಸಹಾಯದಿಂದ ಇಂದಿಗೂ ಜಗತ್ತಿನ ಶ್ರೇಷ್ಠ ಆಟೋಮೊಬೈಲ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವಲ್ಲಿ ನೆರವಾಗಿದೆ.

02. ಬಿಎಂಡಬ್ಲ್ಯು ಎಫ್1 ಸಾಧನೆ

02. ಬಿಎಂಡಬ್ಲ್ಯು ಎಫ್1 ಸಾಧನೆ

ಬಿಎಂಡಬ್ಲ್ಯು ಇದುವರೆಗೆ 20ರಷ್ಟು ಫಾರ್ಮುಲಾ ಒನ್ ರೇಸ್ ಗಳಲ್ಲಿ ಗೆದ್ದ ಸಾಧನೆಯನ್ನು ಮಾಡಿದೆ. 1983ರಲ್ಲಿ ವಿಶ್ವ ಚಾಲಕರ ಚಾಂಪಿಯನ್ ಶಿಪ್ ನಲ್ಲಿ ಬೇಸಿಕ್ ಎಂಜಿನ್ ಡಿಸೈನ್ ನಲ್ಲಿ ನೆಲ್ಸನ್ ಪಿಕ್ಯೂಟ್ ಪಾಲ್ಗೊಂಡಿದ್ದರು.

01. ಬಾಬ್ ಮಾರ್ಲಿ ಮತ್ತು ಬಿಎಂಡಬ್ಲ್ಯು

01. ಬಾಬ್ ಮಾರ್ಲಿ ಮತ್ತು ಬಿಎಂಡಬ್ಲ್ಯು

ಜಮೈಕಾದ ಖ್ಯಾತ ಗಾಯಕ, ಪದ್ಯರಚನೆಕಾರ ಮತ್ತು ಸಂಗೀತಗಾರ ಬಾಬ್ ಮಾರ್ಲಿ ಕೂಡಾ ಬಿಎಂಡಬ್ಲ್ಯು ಕಾರನ್ನು ಹೊಂದಿದ್ದರು. ಹಿಂದೊಮ್ಮೆ ತಮ್ಮ ಈ ಪ್ರೀತಿಯ ಕಾರಿನ ಬಗ್ಗೆ ಮನದಾಳವನ್ನು ಬಿಚ್ಚಿಟ್ಟಿದ್ದ ಈ ರಾಕ್ ಸ್ಟಡಿ ಹಾಗೂ ರೆಗಿ ಬ್ಯಾಂಡ್ ಗಳ ಗಾಯಕ, "ಬಾಬ್ ಮಾರ್ಲಿ ಹಾಗೂ ದಿ ವೈಲರ್ಸ್ ಪರ ಬಿಎಂಡಬ್ಲ್ಯು ನಿಂತಿದೆ" ಎಂದಿದ್ದರು.

ಇವನ್ನೂ ಓದಿ

ಚಪ್ಪಟೆ ಸುಂದರಿ ಲಂಬೋರ್ಗಿನಿ ಫುಲ್ ಬಾಡಿ ಸ್ಕ್ಯಾನಿಂಗ್

Most Read Articles

Kannada
English summary
So what makes BMW tick? Why is it such an iconic automobile and motorcycle brand? Here are ten cool things to know about BMW.
Story first published: Tuesday, July 21, 2015, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X