ಬೆಂಝ್ ಕಾರಿನ ಹೊಡೆತಕ್ಕೆ ಅಪ್ಪಚ್ಚಿ ಆಯ್ತು ಆಕ್ಟಿವಾ: 17 ವರ್ಷದ ಯುವಕ ಸಾವು

ಬೆಳಗಿನ ಜಾವ ನೆಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನ ಮೇಲೆ ಕಾರು ಹರಿದು ಯುವಕ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನೆಡೆದಿದೆ.

Written By:

ಮರ್ಸಿಡಿಸ್ ಬೆಂಝ್ ವಾಹನ ದೆಹಲಿಯ 17 ವರ್ಷದ ಯುವಕನ ಮೇಲೆ ಹರಿದು ಯುವಕನೋರ್ವ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಬೆಳಗಿನ ಜಾವ ನೆಡೆದಿದ್ದು, ಯುವಕನ ಹೆಸರನ್ನು ಅತುಲ್ ಅರೋರಾ ಎಂದು ಗುರುತಿಸಲಾಗಿದೆ.

ನಿಯಂತ್ರಣ ತಪ್ಪಿ ವೇಗವಾಗಿ ಬಂದ ಕಾರು ಹೋಂಡಾ ಆಕ್ಟಿವಾದಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಹರಿದಿದ್ದು, ಆಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿರುವ ವೇಳೆಯಲ್ಲಿ ಯುವಕ ಪ್ರಾಣ ಬಿಟ್ಟಿದ್ದಾನೆ. ಘಟನೆಯ ನಂತರ ಕಾರಿನ ಚಾಲಕ ತಪ್ಪಿಸಿಕೊಂಡಿದ್ದಾನೆ.

ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಒಬ್ಬ ಅಮಾಯಕ ಜೀವ ಬಲಿ ತೆಗೆದುಕೊಂಡ ಚಾಲಕನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದು, ಸದ್ಯ ಯಾರನ್ನು ಬಂಧಿಸಿಲ್ಲ ಎನ್ನಲಾಗಿದೆ.

ಈಗಾಗಲೇ ಆರೋಪಿಯ ಕುರುಹು ದೊರಕಿದ್ದು, ಸದ್ಯದರಲ್ಲಿಯೇ ಈ ಅಪಘಾತಕ್ಕೆ ಕಾರಣವಾದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.