ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

By Nagaraja

ಅಮೆರಿಕ ನಿರ್ಮಿತ ಕೆನಡಾ ಒಡೆತನದ ಗ್ರೇಟ್ ಲೇಕ್ ನಲ್ಲಿ ಮುಳುಗಿ ಹೋಗಿರುವ ಎರಡನೇ ಅತಿ ಹಳೆಯದಾದ ಒಡೆದ ನೌಕೆಯನ್ನು ಬಹಳ ನಿಗೂಢ ಪರಿಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಸರಿ ಸುಮಾರು 200 ವರ್ಷಗಳಷ್ಟು ಹಿಂದೆ ಉತ್ತರ ಅಮೆರಿಕದಲ್ಲಿರುವ ಐದು ಗ್ರೇಟ್ ಸರೋವರಗಳಲ್ಲಿ ಒಂದಾಗಿರುವ ಲೇಕ್ ಒಂಟಾರಿಯೊದಲ್ಲಿ ಸ್ಲೂಪ್ ವಾಷಿಂಗ್ಟನ್ ಎಂಬ ಹಡಗು ಮುಳುಗಡೆಯಾಗಿತ್ತು.

ಕೇಂದ್ರ ನ್ಯೂಯಾರ್ಕ್ ಓಸ್ವೆಗೊ ನೀರಿನಡಿಯಿಂದ ಶಿಪ್ ವ್ರೆಕ್ ವಲ್ಡ್ ಗೆ ಸೇರಿದ ಮೂವರು ಸಾಗರ ಪರಿಶೋಧಕರ ತಂಡವು, ಚೂರು ಚೂರಾಗಿರುವ ಹಡಗಿನ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಅಂದಾಜು 1803ನೇ ಇಸವಿಯಲ್ಲಿ ವಾಷಿಂಗ್ಟನ್ ಗೆ ಅಪ್ಪಳಿಸಿದ ಚಂಡ ಮಾರುತಕ್ಕೆ ವ್ಯಾಪಾರಿ ಹಡಗು ಸಿಕ್ಕಿಹಾಕಿಕೊಂಡಿತ್ತಲ್ಲದೆ ಸಂಪೂರ್ಣವಾಗಿ ಮುಳುಗಡೆಯಾಗಿತ್ತು.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಈಗಾಗಲೇ ಹಲವಾರು ನೌಕಾಘಾತಕ್ಕೆ ಹಡಗುಗಳನ್ನು ವಿವಿಧ ಸಾಗರಗಳಿಂದಾಗಿ ಪತ್ತೆ ಹಚ್ಚಿರುವ ಶಿಪ್ ವ್ರೆಕ್ ವಲ್ಡ್ ತಂಡದ ಸದಸ್ಯ ಜಿಮ್ ಕೆನ್ನಾರ್ಡ್ ತಿಳಿಸುವಂತೆಯೇ ಇದು ನಮಗೆ ದೊರಕಿರುವ ನಿಧಿಗಳಲ್ಲಿ ಅತ್ಯಂತ ವಿಶಿಷ್ಟವೆನಿಸಿದೆ ಎಂದಿದ್ದಾರೆ.

ಹಿನ್ನಲೆ...

ಹಿನ್ನಲೆ...

1798ನೇ ಇಸವಿಯಲ್ಲಿ ಪೆನ್ಸಿಲ್ವೇನಿಯಾದ ಲೇಕ್ ಎರಿನಲ್ಲಿ ಸ್ಲೂಪ್ ವಾಷಿಂಗ್ಟನ್ ಹಡಗನ್ನು ನಿರ್ಮಿಸಲಾಗಿತ್ತು. ಅಲ್ಲದೆ ಪ್ರಮುಖವಾಗಿಯೂ ನ್ಯೂಯಾರ್ಕ್, ಪೆನ್ಸಿಲ್ವೇನಿಯಾ ಹಾಗೂ ಒಂಟಾರಿಯೊ ಪ್ರದೇಶಗಳಿಗೆ ಸರಕು ಹಾಗೂ ಜನರನ್ನು ಸಾಗಿಸಲು ಬಳಕೆ ಮಾಡಲಾಗಿತ್ತು.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಬಳಿಕ 1802ನೇ ಇಸವಿಯಲ್ಲಿ ಕೆನಡಾ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗಿತ್ತು. ಸ್ಲೂಪ್ ವಾಷಿಂಗ್ಟನ್ ಹಡಗು ಲೇಡಿ ವಾಷಿಂಗ್ಟನ್ ಎಂಬುದಾಗಿಯೂ ಅರಿಯಲ್ಪಟ್ಟಿತ್ತು.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

53 ಅಡಿ ಉದ್ದದ ಹಡಗು ಕನಿಷ್ಠ ಐದು ಮಂದಿ ಹಾಗೂ ಭಾರತದಿಂದ ವಾಣಿಜ್ಯ ಸರಕುಗಳ ಜೊತೆಗೆ ಕಿಂಗಸ್ಟನ್, ಒಂಟಾರಿಯೊ ಹಾಗೂ ತವರು ಬಂದರಾದ ನಿಯಾಗ್ರಾಕ್ಕೆ ಪ್ರಯಾಣ ಬೆಳೆಸಿತ್ತು. ಈ ವೇಳೆಯಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಸಿಕ್ಕಿ ಹಾಕಿಕೊಂಡಿತ್ತು.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಈಗ ಕೆನ್ನಾರ್ಡ್ ಮತ್ತವರ ತಂಡ ನಡೆಸಿರುವ ಸಂಶೋಧನೆಯಲ್ಲಿ ಹಡಗಿನ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಇತಿಹಾಸ ತಜ್ಞರ ಅಧ್ಯಯನಕ್ಕೆ ನೆರವಾಗಲಿದೆ.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಇದರಿಂದ ಇತಿಹಾಸ ತಜ್ಞರಿಗೆ ಅಮೆರಿಕ ಕ್ರಾಂತಿ ಹಾಗೂ 1812ರ ಕಾಲಘಟ್ಟದಲ್ಲಿ ನಡೆದ ಯುದ್ಧದಲ್ಲಿ ಅಂದು ಬಳಕೆ ಮಾಡಲಾಗುತ್ತಿದ್ದ ಹಡಗು, ಅದರ ವಿನ್ಯಾಸ ಹಾಗೂ ನಿರ್ಮಾಣದ ಬಗ್ಗೆ ಗಾಢವಾಗಿ ಅಧ್ಯಯನ ಮಾಡಲು ಸಾಧ್ಯವಾಗಲಿದೆ.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

1780ರಲ್ಲಿ ಗ್ರೇಟ್ ಲೇಕ್ ನಲ್ಲಿ ಮುಳುಗಿ ಹೋಗಿರುವ ಬ್ರಿಟನ್ ಯುದ್ಧ ಹಡಗು ಎಚ್ ಎಂಎಸ್ ಒಂಟಾರಿಯೊ, ಗ್ರೇಟ್ ಲೇಕ್ ನಲ್ಲಿ ಮುಳುಗಿ ಹೋಗಿರುವ ಅತಿ ಪುರಾತನ ಹಡಗು ಎಂದೆನಿಸಿಕೊಂಡಿದೆ. ಇದನ್ನು 2008ರಲ್ಲಿ ಪತ್ತೆ ಹಚ್ಚಲಾಗಿತ್ತು.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಶಿಪ್ ವ್ರೆಕ್ ವರ್ಲ್ಡ್ ಗೆ ಸೇರಿದ ಜಿಮ್ ಕೆನ್ನಾರ್ಡ್, ರೋಜರ್ ಪಾವ್ಲಲೊಸ್ಕಿ, ರೋಜರ್ ಸ್ಟೀವನ್ಸ್ ಎಂಬ ಮೂವರ ತಂಡವೇ ಚೂರು ಚೂರಾದ ಹಡಗನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಅಂದ ಹಾಗೆ ಲೇಕ್ ಒಂಟಾರಿಯೊದಲ್ಲಿ ಈ ಐತಿಹಾಸಿಕ ಒಡೆದ ಹಡಗಿನ ಹುಡುಕಾಟಕ್ಕಾಗಿ ಓಹಿಯೊದಲ್ಲಿ ಸ್ಥಿತಗೊಂಡಿರುವ ದಿ ನ್ಯಾಷನಲ್ ಮ್ಯೂಸಿಯಂ ಆಫ್ ದಿ ಗ್ರೇಟ್ ಲೇಕ್ಸ್ ಆಫ್ ಟೊಲೆಡೊ ಪ್ರಾಯೋಜಕತ್ವವನ್ನು ವಹಿಸುತ್ತಿದೆ.

ಗ್ರೇಟ್ ಲೇಕ್ ನಲ್ಲಿ 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!

ಬಲ್ಲ ಮೂಲಗಳ ಪ್ರಕಾರ ಗ್ರೇಟ್ ಲೇಕ್ಸ್ ನಲ್ಲಿ 6000ದಿಂದ 8000ದಷ್ಟು ಹಡಗುಗಳು ನೌಕಾಘಾತಕ್ಕೊಳಗಾಗಿದೆ. ಈ ಪೈಕಿ ಲೇಕ್ ಒಂಟಾರಿಯೊದಲ್ಲಿ ಮಾತ್ರವಾಗಿ 600ರಷ್ಟು ಹಡಗುಗಳು ಮುಳುಗಿ ಹೋಗಿವೆ. ಈಗಲೂ 200ರಷ್ಟು ಹಡಗುಗಳು ಸರೋವರದಲ್ಲಿದೆ ಎಂಬುದನ್ನು ಅಂದಾಜಿಸಲಾಗಿದೆ.

Most Read Articles

Kannada
English summary
18th century built sloop Washington shipwreck has been discovered in the Great Lakes
Story first published: Wednesday, August 24, 2016, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X