ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

By Nagaraja

'ಘೋಸ್ಟ್ ಕಾರು' ಎಂಬ ಪ್ರೀತಿಯ ಹೆಸರಿನಿಂದಲೇ ಕರೆಯಲ್ಪಡುವ ಪಾಂಟಿಯಾಕ್ ಡಿಲಕ್ಸ್ ಸಿಕ್ಸ್ ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದು ವಿಶೇಷ. ಅಲ್ಲದೆ ಅಸ್ತಿತ್ವದಲ್ಲಿರುವ ಏಕೈಕ ಘೋಸ್ಟ್ ಕಾರು ಎಂಬ ಬಿರುದಿಗೂ ಪಾತ್ರವಾಗಿದೆ.

ಇದರಲ್ಲಿರುವ ಅತಿ ವಿಶಿಷ್ಟವಾದ ಪಾರದರ್ಶಕ ಗಾಜುಗಳು (Plexiglas) ಘೋಸ್ಟ್ ಕಾರಿನ ವೈಶಿಷ್ಟ್ಯವನ್ನು ಸಾರುತ್ತದೆ. ಅಲ್ಲದೆ ಆಧುನಿಕ ಕಾಲಘಟ್ಟದಲ್ಲಿ ಅನೇಕ ಹರಾಜು ಪ್ರಕ್ರಿಯೆಗಳಲ್ಲಿ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

1939ನೇ ಇಸವಿಯಲ್ಲಿ ಅಮೆರಿಕದ ಪ್ರಖ್ಯಾತ ಜನರಲ್ ಮೋಟಾರ್ಸ್ ಮತ್ತು ಕೆಮಿಕಲ್ ಕಂಪನಿ ರೋಹ್ಮ್ ಮತ್ತು ಹಾಸ್ ಜಂಟಿಯಾಗಿ 25,000 ಅಮೆರಿಕನ್ ಡಾಲರ್ ಬೆಲೆ ಬಾಳುವ ಘೋಸ್ಟ್ ಕಾರನ್ನು ನಿರ್ಮಿಸಿತ್ತು.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

1930-40ರ ದಶಕದಲ್ಲಿ ಭವಿಷ್ಯದ ಕಾರೆಂಬ ಹೆಗ್ಗಳಿಕೆಯೊಂದಿಗೆ ಎಂಟ್ರಿ ಕೊಟ್ಟಿರುವ ಘೋಸ್ಟ್ ಕಾರು ಮೊದಲ ಪಾರದರ್ಶಕ ಕಾರೆಂಬ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

ಘೋಸ್ಟ್ ಕಾರಿನ ಎರಡು ಮಾದರಿಗಳನ್ನಷ್ಟೇ ನಿರ್ಮಿಸಲಾಗಿತ್ತು. ಈ ಪೈಕಿ ಪಾಂಟಿಯಾಕ್ ಡಿಲಕ್ಸ್ ಸಿಕ್ಸ್ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

ಮೂರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡುವ ಘೋಸ್ಟ್ ಕಾರಿನಲ್ಲಿ ಆರು ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

75 ವರ್ಷಗಳ ಬಳಿಕವೂ ಕಾರು ಅತ್ಯುತ್ತಮ ನಿರ್ವಹಣಾ ಮಟ್ಟವನ್ನು ಕಾಪಾಡಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

ಎರಡನೇ ಮಹಾಯುದ್ಧದಲ್ಲಿ ಮಿಲಿಟರಿ ವಿಮಾನಗಳಲ್ಲಿ ಬಳಕೆ ಮಾಡಲಾಗುತ್ತಿದ್ದ ಪ್ಲೆಕ್ಸಿಗ್ಲಾಸ್ ಗಳನ್ನು ಘೋಸ್ಟ್ ಕಾರಿನಲ್ಲಿ ಜೋಡಣೆ ಮಾಡಲಾಗಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

1939-40ರ ನ್ಯೂಯಾರ್ಕ್ ವರ್ಲ್ಡ್ ಫೇರ್‌ಗಾಗಿ ಘೋಸ್ಟ್ ಕಾರನ್ನು ನಿರ್ಮಿಸಲಾಗಿತ್ತು. ಆಗಿನಿಂದಲೇ ವಾಹನ ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿತ್ತು.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

ಕಾಯಿಲ್ ಸ್ಪ್ರಿಂಗ್ ಇಂಡಿಪೆಂಡೆಂಟ್ ಫ್ರಂಟ್ ಸಸ್ಪೆನ್ಷನ್, ಲೈವ್ ರಿಯರ್ ಆಕ್ಸಿಲ್ ಜೊತೆ ಸೆಮಿ ಎಳಿಪ್ಟಿಕ್ ಲೀಫ್ ಸ್ಪ್ರಿಂಗ್ ಮತ್ತು ಫೋರ್ ವೀಲ್ ಹೈಡ್ರಾಲಿಕ್ ಡ್ರಮ್ ಬ್ರೇಕ್ ಆಳವಡಿಸಲಾಗಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

75 ವರ್ಷಗಳೇ ಕಳೆದರೂ ಕಾಲಚಕ್ರವನ್ನು ಸೂಚಿಸುವ ಗಡಿಯಾರವು ಈಗಲೂ ಘೋಸ್ಟ್ ಕಾರಿಗೆ ಮೆರಗು ತುಂಬುತ್ತಿದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

ಅಂದಿನ ಕಾಲದಲ್ಲೇ ಕ್ರೋಮ್ ಸ್ಪರ್ಶಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿತ್ತು ಎಂಬುದಕ್ಕೆ ಘೋಸ್ಟ್ ಕಾರಿನ ಒಳಮೈಯಲ್ಲಿರುವ ಸ್ಟೀರಿಂಗ್ ವೀಲ್ ಅಥವಾ ಇತರ ಘಟಕಗಳನ್ನು ಪರೀಶೀಲಿಸಿದಾಗ ತಿಳಿದು ಬರುತ್ತದೆ.

ಈಗಲೂ ಅಸ್ತಿತ್ವವನ್ನು ಉಳಿಸಿಕೊಂಡಿರುವ ವಿಶ್ವದ ಏಕೈಕ 'ಘೋಸ್ಟ್ ಕಾರು'

ಒಟ್ಟಾರೆಯಾಗಿ ವಾಹನ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿರುವ ಘೋಸ್ಟ್ ಕಾರು ತನ್ನ ಜೀವಿತಾವಧಿಯಲ್ಲಿ ಕೇವಲ 86 ಮೈಲುಗಳಷ್ಟು ದೂರ ಮಾತ್ರ ಸಂಚರಿಸಿದೆ.

Most Read Articles

Kannada
English summary
1939 Pontiac Deluxe Six Plexiglas Ghost Car
Story first published: Wednesday, June 22, 2016, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X