ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

By Nagaraja

ಸಿರಿಯಾ ಗಡಿ ಪ್ರದೇಶದಲ್ಲಿ ರಷ್ಯಾ ಯುದ್ಧ ವಿಮಾನವನ್ನು ಟರ್ಕಿ ಹೊಡೆದುರುಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಮಗದೊಂದು ಶೀತಲ ಸಮರ ಪ್ರಾರಂಭವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಸಿರಿಯಾ ಉಗ್ರರ ವಿರುದ್ಧ ಸಮರದಲ್ಲಿರುವ ರಷ್ಯಾ ಯುದ್ಧ ವಿಮಾನ ನೆರೆಯ ಟರ್ಕಿಯ ವಾಯು ಗಡಿ ಪ್ರದೇಶವನ್ನು ಉಲ್ಲಂಘಿಸಿರುವುದೇ ವಿಮಾನ ಹೊಡೆದುರುಳಿಸಲು ಕಾರಣವಾಗಿದೆ ಎಂಬುದನ್ನು ಟರ್ಕಿ ಸಮರ್ಥಿಸಿಕೊಂಡಿದೆ.

Also Read: ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಇದರೊಂದಿಗೆ ಉಭಯ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ವಿಶ್ವಸಂಸ್ಥೆ ಮುಂದಾಳತ್ವದಲ್ಲಿ ನ್ಯಾಟೋ ಶಾಂತಿ ಕಾಪಾಡಿಕೊಳ್ಳಲು ಆಹ್ವಾನ ನೀಡಿದೆ. ಇನ್ನೊಂದೆಡೆ ಇದನ್ನು ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿರುವ ರಷ್ಯಾ, ಟರ್ಕಿ ವಿರುದ್ಧ ಕೆಂಡ ಕಾರಿದ್ದು, ಇದರ ಭವಿಷ್ಯತ್ ಪರಿಣಾಮ ನೆಟ್ಟಗಿರಲಿಲ್ಲ ಎಂಬುದಾಗಿ ಎಚ್ಚರಿಸಿದೆ [ಕೊನೆಯಲ್ಲಿ ಕೊಟ್ಟಿರುವ ರೋಚಕ ವಿಡಿಯೋ ನೋಡಲು ಮರೆಯದಿರಿ].

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

2015 ನವೆಂಬರ್ 24ರಂದು ರಷ್ಯಾ ಭದ್ರತಾ ಪಡೆಯ ಸುಖೋಯ್ ಎಸ್‌ಯುವಿ-24 ಜೆಟ್ ವಿಮಾನವನ್ನು ಸಿರಿಯಾ ವಾಯುಸೇನೆಯ ಎಫ್-16 ಫೈಟರ್ ಜೆಟ್ ಸಿರಿಯಾ-ಟರ್ಕಿ ಗಡಿ ಪ್ರದೇಶದಲ್ಲಿ ಹೊಡೆದುರುಳಿಸಿತ್ತು.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ವಾಯುಗಡಿಯನ್ನು ಪ್ರವೇಶಿಸಿದ್ದ ರಷ್ಯಾ ಯುದ್ಧ ವಿಮಾನಗಳಿಗೆ 10 ಬಾರಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಪೈಲಟ್ ಗಳು ಪದೇ ಪದೇ ಎಚ್ಚರಿಕೆಯನ್ನು ಕಡೆಗಣಿಸಿದ್ದರಿಂದ ಗಡಿ ರಕ್ಷಣೆಗಾಗಿ ವಿಮಾನ ಹೊಡೆದುರುಳಿಸಲಾಗಿದೆ ಎಂದು ಟರ್ಕಿ ಹೇಳಿದೆ. ಈ ಸಂಬಂಧ ನಕ್ಷೆಯನ್ನು ಬಿಡುಗಡೆ ಮಾಡಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಅತ್ತ ಟರ್ಕಿ ಹೇಳಿಕೆಯನ್ನು ತಿರಸ್ಕರಿಸಿರುವ ರಷ್ಯಾ, ಯಾವುದೇ ಹಂತದಲ್ಲೂ ರಷ್ಯಾ ಯುದ್ಧ ವಿಮಾನ ಟರ್ಕಿ ಗಡಿ ಪ್ರದೇಶವನ್ನು ದಾಟಿಲ್ಲ ಎಂಬುದನ್ನು ಒತ್ತಿ ಹೇಳಿದ್ದು, ಟರ್ಕಿಯ ಗಡಿ ಪ್ರದೇಶದಿಂದ ಸುಮಾರು ನಾಲ್ಕು ಕೀ.ಮೀ. ದೂರದಲ್ಲಿ ಯುದ್ದ ವಿಮಾನ ಪತನವಾಗಿದೆ. ಹಾಗಾಗಿ ಟರ್ಗಿಗೆ ಅಪಾಯವಿರವಿಲ್ಲ. ಇದೊಂದು ಉದ್ದೇಶಪೂರ್ವಕ ಕೃತ್ಯ ಎಂದು ತಮ್ಮ ಹೇಳಿಕೆಯನ್ನು ಪುಷ್ಠಿ ನೀಡುವ ನಕ್ಷೆಯನ್ನು ಬಿಡುಗಡೆ ಮಾಡಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಇಲ್ಲಿ ಗಮನಾರ್ಹ ಅಂಶವೆಂದರೆ ಕಳೆದ ಅರ್ಧ ಶತಮಾನದಲ್ಲಿ ಇದೇ ಮೊದಲ ಬಾರಿಗೆ ನ್ಯಾಟೋ ಸದಸ್ಯ ರಾಷ್ಟ್ರವೊಂದು ಮತ್ತೊಂದು ಸದಸ್ಯ ರಾಷ್ಟ್ರದ ಯುದ್ಧ ವಿಮಾನ ಹೊಡೆದುರುಳಿಸಿದ ಪ್ರಕರಣ ನಡೆದಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯತಿರಿಕ್ತ ಪರಿಣಾಮವನ್ನುಂಟುಮಾಡುವ ಭೀತಿಯಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಘಟನೆಗೆ ಸಂಬಂಧಪಟ್ಟಂತೆ ಜಾಗತಿಕ ರಾಷ್ಟ್ರಗಳು ಪರ-ವಿರೋಧ ಹೇಳಿಕೆ ಹೊರಡಿಸುವುದರೊಂದಿಗೆ ಮಗೆದೂಮ್ಮೆ ಶೀತಲ ಸಮರ ಶುರುವಾಗುವ ಭಯವುಂಟಾಗಿದೆ. ಇಲ್ಲಿ ಟರ್ಕಿ ಬೆಂಬಲಿಸಿ ಅಮೆರಿಕಾ ಹೇಳಿಕೆ ನೀಡಿರುವುದು ಹೆಚ್ಚು ಮಹತ್ವ ಗಿಟ್ಟಿಸಿಕೊಳ್ಳುತ್ತದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

2011ರಲ್ಲಿ ಸಿರಿಯಾದಲ್ಲಿ ಆರಂಭವಾದ ನಾಗರಿಕ ಯುದ್ಧಕ್ಕೆ ಇತ್ತೀಚೆಗಷ್ಟೇ ಬೆಂಬಲ ಸೂಚಿಸಿದ್ದ ರಷ್ಯಾ ಐ.ಎಸ್ ಉಗ್ರರು ಹಾಗೂ ಬಂಡುಕೋರರ ವಿರುದ್ಧ ಪ್ರತಿ ದಾಳಿಯನ್ನು ಆರಂಭಿಸಿತ್ತು. ಆದರೆ ರಷ್ಯಾ ಇದನ್ನು ಮಾಡುವುದನ್ನು ಬಿಟ್ಟು ಸಿರಿಯಾದಲ್ಲಿರು ಟರ್ಕಿಶ್ ಬುಡಕಟ್ಟು ಜನಾಂಗದ ಮೇಲೆ ದಾಳಿಯನ್ನು ನಡೆಸುತ್ತಿದೆ ಎಂದು ಟರ್ಕಿ ಆರೋಪಿಸಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಸುಖೋಯ್ ಎಸ್‌ಯು-24 ಸೋವಿಯತ್ ಯೂನಿಯನ್ ನಿರ್ಮಿಸಿದ ಒಂದು ಸೂಪರ್ ಸೋನಿಕ್ ಬಾಂಬರ್ ಯುದ್ಧ ವಿಮಾನವಾಗಿದ್ದು, ಯಾವುದೇ ವಾತಾವರಣದಲ್ಲೂ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಸಿರಿಯಾ ನಾಗರಿಕ ಯುದ್ಧದಲ್ಲಿ ಉಗ್ರರನ್ನು ಮಟ್ಟ ಹಾಕಲು ರಷ್ಯಾ ಸುಖೋಯ್ ಯುದ್ಧ ವಿಮಾನದ ನೆರವನ್ನು ಪಡೆಯುತ್ತಿದೆ. ಟ್ವಿನ್ ಎಂಜಿನ್ ನಿಯಂತ್ರಿತ ಸುಖೋಯ್ ಯುದ್ಧ ವಿಮಾನವು ಅತಿ ದೂರದ ವರೆಗೂ ಗುರಿಯಿಡಬಹುದಾಗಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಇನ್ನೊಂದೆಡೆ ಸುಖೋಯ್ ಹೊಡೆದುರುಳಿಸಿರುವ ಟರ್ಕಿಯ ಜನರಲ್ ಡೈನಾಮಿಕ್ಸ್ ಎಫ್-16 ಫೈಟಿಂಗ್ ಫಾಲ್ಕನ್ ಒಂದು ಸಿಂಗಲ್ ಎಂಜಿನ್ ನಿಯಂತ್ರಿತ ಬಹು ಪಾತ್ರಧಾರಿ ಯುದ್ಧ ವಿಮಾನವಾಗಿದೆ.

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ನೈಜವಾಗಿಯೂ ಇದನ್ನು ಅಮೆರಿಕ ವಾಯುಸೇನೆಗಾಗಿ ಜನರಲ್ ಡೈನಾಮಿಕ್ಸ್ ನಿರ್ಮಿಸಿತ್ತು. ಇದು ಕೂಡಾ ಎಲ್ಲ ತರಹದ ತಾಪಮಾನ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.

ರೋಚಕ ವಿಡಿಯೋ ವೀಕ್ಷಿಸಿ

Most Read Articles

Kannada
Read more on ವಿಮಾನ plane
English summary
2015 Russian Sukhoi Su-24 shootdown
Story first published: Thursday, November 26, 2015, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X