17 ರಾಷ್ಟ್ರ, 97 ದಿನ, 21,477 ಕೀ.ಮೀ. ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಹೆಣ್ಮಕ್ಕಳಿಂದಲೂ ಕಾರಿನಲ್ಲಿ ದೂರ ಪ್ರಯಾಣ ಸಾಧ್ಯ ಎಂಬುದನ್ನು ಈ ಮೂವರು ಮಹಿಳೆಯರು ಸಾಬೀತುಪಡಿಸಿದ್ದಾರೆ.

By Nagaraja

ನಮ್ಮ ಸಮಾಜದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಇನ್ನೊಂದೆಡೆ ಮಹಿಳೆಯರ ಮೇಲಿನ ದೌರ್ಜನ್ಯ ನಿರಂತರ ನಡೆಯುತ್ತಲೇ ಇದೆ. ಈ ಎಲ್ಲದರ ನಡುವೆ ಪುರುಷಗರಿಗಿಂತಲೂ ತಾವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಮೂವರು ಮಹಿಳೆಯರು ನಮ್ಮ ರಾಷ್ಟ್ರಧಾನಿ ನವದೆಹಲಿಯಿಂದ ಬ್ರಿಟನ್ ನ ಲಂಡನ್ ಗೆ ಕಾರಿನಲ್ಲಿ ಸಂಚರಿಸುವ ಮೂಲಕ ಮಹತ್ತರ ಸಾಧನೆ ಮಾಡಿ ತೋರಿಸಿದ್ದಾರೆ.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಇದು ಸ್ವಲ್ಪ ಸಮಯದ ಹಿಂದೆ ನಡೆದ ಘಟನೆಯಾದರೂ ರಶ್ಮಿ ಗುರುರಾಜ ಕೊಪ್ಪರ್, ಡಾ. ಸೌಮ್ಯ ಗೋಪಿನಾಥ್ ಮತ್ತು ನಿಧಿ ತಿವಾರಿ ಅವರ ಕೆಚ್ಚೆದೆಯ ಕಥೆಯನ್ನು ಮತ್ತೊಮ್ಮೆ ಮೆಲುಕು ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬುದು ನಮ್ಮ ಭಾವನೆಯಾಗಿದೆ.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವುದು ಈ ತ್ರಿವಳಿ ಮಧ್ಯ ವಯಸ್ಕ ಯುವತಿಯರ ಗುರಿಯಾಗಿತ್ತು. ಇದಕ್ಕಾಗಿ 97 ದಿನಗಳಲ್ಲಿ 17 ದೇಶಗಳನ್ನು ದಾಟಿ ಬರೋಬ್ಬರಿ 21,477 ಕೀ.ಮೀ. ದೂರವನ್ನು ಕ್ರಮಿಸಿದ್ದಾರೆ.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಇದಕ್ಕಾಗಿ ಅವರು ಸ್ವೀಕರಿಸಿದ ಮಾರ್ಗ ವಿಮಾನ ಅಥವಾ ರೈಲು ಆಗಿರಲಿಲ್ಲ. ಬದಲಾಗಿ ರಸ್ತೆ ಮಾರ್ಗವಾಗಿ ಮಹೀಂದ್ರ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನದಲ್ಲಿ ಸಂಚರಿಸಿದ್ದರು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಹೊರಾಂಗಣ ಶಿಕ್ಷಣ ತಜ್ಞೆಯಾಗಿರುವ ನಿಧಿ ತಿವಾರಿ ಆಫ್ ರೋಡ್ ಚಾಲನೆಯಲ್ಲೂ ಪರಿಣತಿಯನ್ನು ಪಡೆದಿದ್ದಾರೆ. ಹೀಗೆ ಚಾಲನೆಯಲ್ಲಿ ಸಾಕಷ್ಟು ಅನುಭವ ಸಂಪಾದನೆ ಮಾಡಿರುವ ಈಕೆ ಲಂಡನ್ ವರೆಗೆ ಕಾರು ಚಾಲನೆ ಮಾಡುವ ಬಯಕೆಯನ್ನು ತಮ್ಮ ಗೆಳತಿಯ ಮುಂದಿಟ್ಟಿದ್ದರು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಇದಕ್ಕಾಗಿ ತಮ್ಮ ಬಿಡುವಿಲ್ಲದ ಕೆಲಸದಿಂದ ಬಿಡುವು ಮಾಡಿಕೊಂಡ ಈ ಮೂವರು ಮಹಿಳೆಯರು ಕಳೆದ ವರ್ಷ ಜೂನ್ ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ಪ್ರಯಾಣ ಹಮ್ಮಿಕೊಂಡಿದ್ದರು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಇವರ ಈ ಸಾಹಸ ಯಾತ್ರೆಗೆ ಯುವ ಹಾಗೂ ಕ್ರೀಡಾ ಸಚಿವಾಲಯ, ವಿದೇಶಾಂಗ ಸಚಿವ, ಮಹೀಂದ್ರ ಫಸ್ಟ್ ಚಾಯ್ಸ್ ವೀಲ್ಸ್, ಲಿನೆವೊ ಇಂಡಿಯಾ, ವಯಾ ಡಾಟ್ ಕಾಮ್, @ರೌಂಡ್ ಟೇಬಲ್ ಇಂಡಿಯಾ, ಎಂಎಸ್ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್, ಮಹಿಳಾ ಸಬಲೀಕರಣ ಮತ್ತು ಟಿ ಟ್ರೈಲ್ಸ್ ಪ್ರಾಯೋಜಕತ್ವವನ್ನು ವಹಿಸಿತ್ತು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಮಹಿಳೆಯರ ದೂರ ಪ್ರಯಾಣದ ಚಾಲನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿಧಿ, 2015 ಮಾರ್ಚ್ ತಿಂಗಳಲ್ಲಿ ವುವೆನ್ ಬಿಯಾಂಡ್ ಬೌಂಡರೀಸ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದರು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಚಾಲನೆ ನನ್ನ ಅಭಿಲಾಷೆಯಾಗಿದ್ದು, ಚಕ್ರಗಳ ಹಿಂದುಗಡೆ ಕುಳಿತುಕೊಂಡಾಗ ಸಿಗುವ ಅನುಭವ ವರ್ಣಿಸಲಾಗದು. ಕಳೆದ 10 ವರ್ಷಗಳಲ್ಲಿ ಸಂಪಾದಿಸಿರುವ ಅನುಭವವು ಅತ್ಯಂತ ಕಠಿಣ ರಸ್ತೆ ಪರಿಸ್ಥಿತಿಯಲ್ಲೂ ಚಾಲನೆ ಮಾಡುವ ಕೌಶಲ್ಯವನ್ನು ಕರಗತ ಮಾಡಲು ನೆರವಾಗಿದೆ ಎಂದು ವಿವರಿಸುತ್ತಾರೆ.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ದಿನವೊಂದರಲ್ಲಿ ಸರಾಸರಿ 600 ಕೀ.ಮೀ. ದೂರವನ್ನು ಕ್ರಮಿಸಿದ ಈ ಮೂವರು ಮಹಿಳೆಯರು ಭಾರತದಿಂದ, ಮ್ಯಾನ್ಮಾರ್, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ, ಕಜಾಕಿಸ್ತಾನ, ರಷ್ಯಾ, ಫಿನ್ ಲ್ಯಾಂಡ್, ಜೆಕ್ ಗಣರಾಜ್ಯ, ಜರ್ಮನಿಯಾಗಿ ಕೊನೆಗೆ ಬ್ರಿಟನ್ ತಲುಪಿದ್ದರು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಅರಣ್ಯ ಪ್ರದೇಶ, ಗುಡ್ಡ ಗಾಡು, ಕಡಿದಾಗಿ ಅಡ್ಡದಿಡ್ಡಿಯಾದ ರಸ್ತೆ ಹೀಗೆ ಎಲ್ಲ ಹಂತದ ಚಾಲನಾ ಸವಾಲುಗಳನ್ನು ಈ ಮೂವರು ಮಹಿಳೆಯರು ಗೆದ್ದು ಬಂದಿದ್ದಾರೆ. ಈ ನಡುವೆ ಮ್ಯಾನ್ಮರ್ ನಲ್ಲಿ ಮಣ್ಣು ಜರಿತದಿಂದಾಗಿ ಪ್ರಯಾಣಕ್ಕೆ ತೊಡಕಾಗಿದ್ದರೂ ಸ್ಥಳೀಯರ ನೆರವು ದೊರಕಿದ್ದು.

17 ರಾಷ್ಟ್ರ, 97 ದಿನ, 21,477 ದೂರ ಪ್ರಯಾಣ; ಮೂವರು ಮಹಿಳೆಯರ ಸಾಹಸಗಾಥೆ!

ಒಟ್ಟಿನಲ್ಲಿ ಮಹಿಳೆಯರಿಂದಲೂ ದೂರ ಪ್ರಯಾಣ ಸಾಧ್ಯ ಎಂಬುದನ್ನು ಎಂಬುದನ್ನು ತೋರಿಸಿಕೊಟ್ಟಿರುವ ಈ ಮೂವರು ಮಹಿಳೆಯರು ಭವಿಷ್ಯ ಭಾರತದ ಏಳಿಗೆಯಲ್ಲಿ ಹೆಣ್ಮಕ್ಕಳ ಪಾತ್ರ ನಿರ್ಣಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ.

Most Read Articles

Kannada
Read more on ಭಾರತ india
English summary
3 Indian Women ambitious trip of driving a car from Delhi to London
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X