ದೈನಂದಿನ ಬೈಕ್ ಸವಾರರಿಗೆ 5 ಸೂತ್ರ ವಾಕ್ಯಗಳು!

By Nagaraja

ಭಾರತದಲ್ಲಿ ಬೈಕ್ ಸವಾರಿ ಕೇವಲ ಪ್ರಯಾಣಿಕರಿಗೆ ಮಾತ್ರ ಸೀಮಿತವಲ್ಲ. ಯುವ ಜನರಿಗೆ ಇದು ಮೋಜಿನ ಪಯಣವಾದರೆ ವ್ಯಾಪಾರ ಹರಸಿಕೊಂಡು ಜೀವಿಸುವವರಿಗಿದು ವಾಣಿಜ್ಯ ಪಯಣವಾಗಿದೆ.

ಇವನ್ನೂ ಓದಿ: ಕಾರು ವಿಮೆ - ತಪ್ಪದೇ ಓದಿರಿ

ಇನ್ನು ಸಣ್ಣ ಸಣ್ಣ ಕುಟುಂಬಗಳು ಮದುವೆ ಅಥವಾ ನೆಂಟರ ಮನೆಗೆ ತೆರಳುವಾಗ ದ್ವಿಚಕ್ರ ವಾಹನಗಳನ್ನೇ ಹೆಚ್ಚಾಗಿ ಹರಸುತ್ತಾರೆ. ಅಂದ ಹಾಗೆ ನಮ್ಮ ದೈನಂದಿನ ಬೈಕ್ ಸವಾರರು ವೇಳೆ ನೀವು ನೆನಪಿಲ್ಲಿಟ್ಟುಕೊಳ್ಳಬೇಕಾದ ಐದು ಸೂತ್ರ ವಾಕ್ಯಗಳನ್ನು ನಾವಿಲ್ಲಿ ಪಟ್ಟಿ ಮಾಡಿ ಕೊಡಲಿದ್ದೇವೆ. ಸುರಕ್ಷತೆಯ ದೃಷ್ಟಿಕೋನದಲ್ಲಿ ನೀವಿದನ್ನು ಪಾಲಿಸಲೇಬೇಕಾಗುತ್ತದೆ.

ದೈನಂದಿನ ಬೈಕ್ ಸವಾರರಿಗೆ 5 ಸೂತ್ರ ವಾಕ್ಯಗಳು!

ದ್ವಿಚಕ್ರ ಪಯಣವು ವಿದೇಶಗಳಲ್ಲಿ ಫ್ಯಾಶನ್ ಆಗಿದ್ದರೆ ಭಾರತದಲ್ಲಿ ಇದನ್ನು ತಮ್ಮ ದಿನಚರಿಯಲ್ಲಿ ಅನುಸರಿಸಿದ್ದಾರೆ. ಇನ್ನು ಅಧ್ಯಯನ ವರದಿಯೊಂದರ ಪ್ರಕಾರ ದೇಶದ ಜನತೆ ಅತಿ ಹೆಚ್ಚು ಆಶ್ರಯಿಸಿಕೊಂಡಿರುವ ದ್ವಿಚಕ್ರ ವಾಹನವು ಅತಿ ಹೆಚ್ಚು ಅವಘಾತಕ್ಕೀಡಾಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು. ಆದರೆ ಮೂಲಭೂತ ಸುರಕ್ಷಾ ಪಾಠಗಳನ್ನು ಅನುಸರಿಸಿದ್ದಲ್ಲಿ ಸಾಧ್ಯವಾದಷ್ಟು ಇಂತಹ ಅವಘಡ ಪ್ರಸಂಗಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಈ ಲೇಖನ ನಿಮ್ಮ ನೆರವಿಗೆ ಬರಲಿದೆ ಎಂಬುದು ನಮ್ಮ ನಂಬಿಕೆಯಾಗಿದೆ.

1. ಹೆಲ್ಮೆಟ್

1. ಹೆಲ್ಮೆಟ್

ಬೈಕ್ ಸವಾರಿಯ ವಿಚಾರಕ್ಕೆ ಬಂದಾಗ ಹೆಲ್ಮೆಟ್ ಅಥವಾ ಶಿರಸ್ತ್ರಾಣ ಅತಿ ಮುಖ್ಯ ಘಟಕವೆನಿಸುತ್ತದೆ. ನಿಮ್ಮ ತಲೆಯ ಗಾತ್ರಕ್ಕೆ ಅನುಸರವಾಗಿ ಅನುಕೂಲಕರ ಹೆಲ್ಮೆಟ್ ಆಯ್ಕೆ ಮಾಡುವುದು ಅತಿ ಮುಖ್ಯವೆನಿಸುತ್ತದೆ.

ಯಾವತ್ತೂ ಫುಲ್ ಫೇಸ್ ಹೆಲ್ಮೆಟ್ ಧರಿಸುವುದರತ್ತ ಗಮನ ವಹಿಸಿ. ಅಷ್ಟಕ್ಕೂ ಹೆಲ್ಮೆಟ್‌ನಲ್ಲಿ ಎಷ್ಟು ವಿಧಗಳಿವೆ ಗೊತ್ತಿದೆಯೇ? ಇಲ್ಲಿದೆ ನೋಡಿ ನಮ್ಮ ಸಲಹೆ. ವರದಿಯೊಂದರ ಪ್ರಕಾರ ಬೈಕ್ ಅಪಘಾತ ವೇಳೆ ತಲೆಗೆ ಪೆಟ್ಟಾಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಹಾಗಾಗಿ ದುಡ್ಡಿನ ಬಗ್ಗೆ ಚಿಂತೆ ಮಾಡದೆ ಗರಿಷ್ಠ ಸುರಕ್ಷತೆಯ ಹೆಲ್ಮೆಟ್ ಧರಿಸಿ ನಿಮ್ಮ ಸುರಕ್ಷತೆಯನ್ನು ಖಾತ್ರಿಪಡಿಸಿ.

ಎಚ್ಚರ: ಹೆಲ್ಮೆಟ್ ಧರಿಸುವುದು ಓಕೆ. ಆದರೆ ಯಾವುದೇ ಕಾರಣಕ್ಕೂ ಹೆಲ್ಮೆಟ್ ಲಾಕ್ ಮಾಡಲು ಮರೆಯದಿರಿ.

2. ಸನ್ ಗ್ಲಾಸ್

2. ಸನ್ ಗ್ಲಾಸ್

ಮೊದಲ ನೋಟದಲ್ಲಿ ಇದು ಸ್ಟೈಲಿಷ್ ಅಥವಾ ನಿಮ್ಮ ಘನತೆಯನ್ನು ಎತ್ತಿ ಹಿಡಿಯುತ್ತದೆ ಅಂದುಕೊಂಡರೆ ತಪ್ಪಾದಿತು. ಉಪಯುಕ್ತ ಸನ್ ಗ್ಲಾಸ್ ಬಳಕೆಯಿಂದ ಸವಾರಿ ವೇಳೆ ನಿಮ್ಮ ಕಣ್ಣಿಗೆ ರಕ್ಷಣೆ ನೀಡುವುದಲ್ಲದೆ ಧೂಳಿನ ಕಣಗಳು ಕಣ್ಣಿಗೆ ಬಂದಪ್ಪಳಿಸದಂತೆ ತಡೆಯುತ್ತದೆ. ಅಷ್ಟೇ ಅಲ್ಲದೆ ಉರಿ ಬಿಸಿಲಿನಲ್ಲೂ ನಿಮ್ಮ ಚಾಲನೆಯನ್ನು ಸುಲಭಗೊಳಿಸುತ್ತದೆ.

ಇದು ಒಂದು ರೀತಿಯಲ್ಲಿ ಹೆಲ್ಮೆಟ್‌ಗೆ ಸಂಬಂಧಪಟ್ಟಿರುತ್ತದೆ. ಆಧುನಿಕ ಹೆಲ್ಮೆಟ್‌ಗಳು ಸನ್ ಗ್ಲಾಸ್ ಕೊರತೆಯನ್ನು ನೀಗಿಸುತ್ತದೆ.

3. ಕೈಗವಸು

3. ಕೈಗವಸು

ನೀವೇನು ರೇಸ್ ಮಾಡಲು ಹೊರಟಿರುವೀರಾ? ಖಂಡಿತ ಇಲ್ಲ. ಮೊದಲು ನಿಮ್ಮ ಸುರಕ್ಷತೆಯತ್ತ ಗಮನ ಕೊಡಿ. ನೀವು ದೈನಂದಿನ ಅರ್ಧ ಗಂಟೆಗಿಂತಲೂ ಮೇಲೆ ಬೈಕ್ ಸವಾರಿ ಮಾಡುತ್ತಿದ್ದಲ್ಲಿ ಖಂಡಿತವಾಗಿಯೂ ಕೈಗವಸು ತಪ್ಪದೇ ಧರಿಸಿ. ಇದು ಬೈಕ್ ಸವಾರಿಯ ವೇಳೆ ಉಂಟಾಗುವ ವೈಬ್ರೇಷನ್ ಜೊತೆಗೆ ಸಣ್ಣ ಪುಟ್ಟ ಅಪಘಾತಗಳಲ್ಲಿ ನಿಮ್ಮ ಹಸ್ತಗಳಿಗೆ ರಕ್ಷಣೆ ನೀಡುತ್ತದೆ. ಅಷ್ಟೇ ಅಲ್ಲದೆ ಇದನ್ನು ಕೊಂಡೊಯ್ಯುವುದು ತುಂಬಾನೇ ಸುಲಭ.

4. ಜಾಕೆಟ್

4. ಜಾಕೆಟ್

ನಾನೇನು ಹಿಮಾಲಯ ಪಯಣ ಹೊರಟಿಲ್ಲವಲ್ಲ? ಮತ್ಯಾಕೆ ಜಾಕೆಟ್ ಧರಿಸಬೇಕು? ಅಥವಾ ಮೇಲೆ ತಿಳಿಸಿದ ಜಾಕೆಟ್, ಕೈಗವಸು ಧರಿಸಿದರೆ ಉಳಿದವರು ಏನಾಂತಾರೆ? ನನ್ನ ಗೇಲಿ ಮಾಡುವರೇ ? ಇಲ್ಲ, ಖಂಡಿತವಾಗ್ಲೂ ಇಲ್ಲಿ ಅಂಜಿಕೆಗಳಿಗೆ ಸ್ಥಾನವಿಲ್ಲ. ಮೊದಲು ನಿಮ್ಮ ಸುರಕ್ಷತೆಯತ್ತ ಗಮನ ಕೊಡಿ. ಜಾಕೆಟ್ ಧರಿಸುವುದರಿಂದ ನಿಮ್ಮ ಘನತೆ ಏನಾದರೂ ಕುಗ್ಗುವುದೇ ಇಲ್ಲ ತಾನೇ?

ನೀವು ಆರ್ಮರ್ಡ್ ರೈಡಿಂಗ್ ಜಾಕೆಟ್ ಧರಿಸಿ ಎಂಬುದೇ ನಮ್ಮ ಆಶಯ. ಅದು ಸಾಧ್ಯವಾಗದಿದ್ದಲ್ಲಿ ಕನಿಷ್ಠ ಹಗುರ ಭಾರದ ಜಾಕೆಟ್ ಆದರೂ ತಪ್ಪದೇ ಧರಿಸಬೇಕು. ಇದು ಬೈಕ್ ಸವಾರಿಯ ವೇಳೆ ಎಲ್ಲ ರೀತಿಯ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಿಂದಲೂ ರಕ್ಷಣೆ ನೀಡುವುದಷ್ಟೇ ಅಲ್ಲದೆ ನಿಮ್ಮ ದೇಹಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ.

5. ಶೂ

5. ಶೂ

ನಾನೇನು ದಿನಕ್ಕೆ ನಾಲ್ಕೈದು ಕೀಲೋಮೀಟರ್ ಮಾತ್ರ ಸಂಚರಿಸುತ್ತೇನೆ. ನಾನು ಶೂ ಧರಿಸುವ ಅಗತ್ಯವಿಲ್ಲ. ಸಾಮಾನ್ಯ ಚಪ್ಪಲಿಯಲ್ಲೇ ಬೈಕ್‌ನಲ್ಲಿ ಓಡಾಡಭಲ್ಲೆ ಎಂದು ಅಂದುಕೊಂಡಿದ್ದರೆ ನಿಮ್ಮದ್ದು ಖಂಡಿತ ತಪ್ಪು ಭಾವನೆ.

ಹಾಗೆಯೇ ಸಾಮಾನ್ಯದ ಬದಲು ಸ್ವಲ್ಪ ಗುಣಮಟ್ಟದ ಶೂ ಖರೀದಿಗೆ ಗಮನ ಕೊಡಿ. ಕೆಲವು ಸಂಸ್ಥೆಗಳು ಬೈಕ್ ಸ್ಟ್ರೀಟ್ ರೈಡಿಂಗ್ ಶೂಗಳನ್ನು ಮಾರಾಟ ಮಾಡುತ್ತಿದೆ. ಅಂಕು ಡೊಂಕು ಶೂಗಳು ಅಪಘಾತ ವೇಳೆ ವೇಳೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದೆ. ಹಾಗಾಗಿ ಉತ್ತಮ ವಿನ್ಯಾಸಿತ ಶೂಗಳನ್ನೇ ಆರಿಸಿ. ಹ್ಯಾಪಿ ರೈಡಿಂಗ್!

ದೈನಂದಿನ ಬೈಕ್ ಸವಾರರಿಗೆ 5 ಸೂತ್ರ ವಾಕ್ಯಗಳು!

ಈಗ ನಿಮ್ಮ ಅಮೂಲ್ಯ ಸಲಹೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

Most Read Articles

Kannada
English summary
Two-wheelers in India have for a long time been just a mode of transport and not a subject of passion unlike other countries.
Story first published: Wednesday, December 3, 2014, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X