ತಂಗಿಗೆ ಬರ್ಗರ್ ಕೊಡಿಸಲು 8 ವರ್ಷದ ಬಾಲಕ ಏನ್ ಸಾಹಸ ಮಾಡಿದ ನೀವೇ ನೋಡಿ !!

8 ವರ್ಷದ ಬಾಲಕನೊಬ್ಬ ಯುಟ್ಯೂಬ್‌ನಲ್ಲಿ ಡ್ರೈವಿಂಗ್ ಕಲಿತು, ತನ್ನ ತಂಗಿಯನ್ನು ಬರ್ಗರ್ ತಿನ್ನಲು ಕಾರಿನಲ್ಲಿ ಮೆಕ್‌ಡೊನಾಲ್ಡ್‌ಗೆ ಕರೆದುಕೊಂಡು ಹೋಗಿದ್ದಾನೆ.

Written By:

8 ವರ್ಷದ ಪೋರನೊಬ್ಬ ಕಾರು ಚಲಾಯಿಸುವ ಹುಚ್ಚಿನಿಂದ ತನ್ನ 4 ವರ್ಷದ ತಂಗಿಯನ್ನು ಬರ್ಗರ್ ಕೆಡಿಸುತ್ತೇನೆ ಎಂಬ ಅಸೆ ತೋರಿಸಿ ಕರೆದುಕೊಂಡು ಹೋದ ಘಟನೆ ಅಮೇರಿಕಾದಲ್ಲಿ ನೆಡೆದಿದೆ.

ನೀವು ಎಂಟು ವರ್ಷದ ಪುಟ್ಟ ಪೋರನಾಗಿದ್ದಾಗ ಏನೆಲ್ಲ ಕಿತಾಪತಿ ಮಾಡಿ ಪಜೀತಿ ತಂದಿರ್ತೀರ ಎನ್ನುವುದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ, ಅದೆಲ್ಲವನ್ನೂ ಮೀರಿಸುವಂಥ ಕೆಲಸವನ್ನು ಈ ಹುಡುಗ ಮಾಡಿದ್ದಾನೆ!

ಹೌದು, ಆತನಿಗೆ ಇನ್ನೂ ಎಂಟೇ ವರ್ಷ ವಯಸ್ಸು. ಊರು ಅಮೆರಿಕದ ಓಹಿಯೋ. ಭಾನುವಾರ ರಾತ್ರಿ ರಾತ್ರಿ ಸುಮಾರು ಎಂಟು ಗಂಟೆಗೆ ಯಾರ ಅಪ್ಪಣೆ ಇಲ್ಲದೆ ಈ ತುಂಟ ಕಾರನ್ನು ಮನೆ ಇಂದ ತೆಗೆದುಕೊಂಡು ಹೊಂದಿದ್ದಾನೆ.

ಯುಟ್ಯೂಬ್‌ ನೋಡಿಕೊಂಡು ಕಾರು ಚಲಾಯಿಸುವುದನ್ನು ಕಲಿತ 8 ವರ್ಷದ ಬಾಲಕನೊಬ್ಬ, ತನ್ನ ತಂಗಿಯ ಮುಂದೆ ಡ್ರೈವಿಂಗ್ ಕೌಶಲ್ಯ ಪ್ರದರ್ಶನ ಮಾಡಿದ್ದಾನೆ.

ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅಪ್ಪ ಅಮ್ಮ ಊಟ ಮಾಡಿ ಮಲಗುವುದನ್ನೇ ಕಾಯುತ್ತ ಕುಳಿತಿದ್ದ ಹುಡುಗ ಮಲಗಿರುವುದು ಖಾತ್ರಿಯಾದ ನಂತರ ಪೋಷಕರ ಕಾರು ತೆಗೆದುಕೊಂಡು ಈ ರೀತಿಯ ಕೆಲಸಕ್ಕೆ ಮುಂದಾಗಿದ್ದಾನೆ.

ತನ್ನ ತಂಗಿ ಬರ್ಗರ್ ತಿನ್ನಲು ಅಸೆ ಪಟ್ಟಳು ಎಂಬ ಒಂದೇ ಒಂದು ಕಾರಣಕ್ಕೆ ಈ ಹುಡುಗ ಹಿಂದೆ ಮುಂದೆ ಯೋಚಿಸದೆ ತನ್ನ ಪೋಷಕರು ತಂದು ನಿಲ್ಲಿಸಿದ್ದ ಕಾರು ತೆಗೆದುಕೊಂಡು, ನಾಲ್ಕು ವರ್ಷದ ತಂಗಿಯ ಜೊತೆ ಬರ್ಗರ್ ತಿನ್ನಲು ಮೆಕ್‌ಡೊನಾಲ್ಡ್‌ಗೆ ಹೊರಟೆ ಬಿಟ್ಟ!

ಈತ ಏಕಾಏಕಿ ಹೇಗೆ ಕಾರು ಚಾಲಾವಣೆ ಮಾಡಿದ ಎಂಬ ಕುತೂಹಲಕ್ಕೆ ಆತನೇ ಉತ್ತರಿಸಿದ್ದು, ಇತ್ತೀಚಿನ ಮಕ್ಕಳ ಎಷ್ಟರ ಮಟ್ಟಿಗೆ ಅಡ್ವಾನ್ಸ್ ಆಗಿರ್ತಾರೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಆತನೇ ಹೇಳಿರೋ ಪ್ರಕಾರ, ಮಲಗಿದ್ದ ಅಪ್ಪನನ್ನು ಎಬ್ಬಿಸುವುದಕ್ಕೆ ಇಷ್ಟವಿಲ್ಲದ ಕಾರಣ ತಾನೇ ಕಾರು ಚಲಾವಣೆ ಮಾಡಲು ನಿರ್ಧರಿಸಿದ್ದು, ಡ್ರೈವಿಂಗ್ ಕುರಿತು ಯೂಟ್ಯೂಬ್'ನಲ್ಲಿ ವಿಡಿಯೋ ನೋಡಿ ಕಾರು ಚಲಾವಣೆ ಮಾಡಿದ ಎನ್ನಲಾಗಿದೆ.

ಮನೆಯಿಂದ ಸುಮಾರು 3 ಕಿಮೀ ದೂರ ಇರುವ ಮೆಕ್ಡೊನಾಲ್ಡ್ ಅಂಗಡಿಗೆ ಕಾರು ತಿರುಗಿಸಿದ ಹುಡುಗ, ಧೈರ್ಯ ಮಾಡಿ ಕಾರು ಓಡಿಸಿ ತಾನು ತಲುಪಬೇಕಿತ್ತ ಸ್ಥಳಕ್ಕೆ ತನ್ನ ತಂಗಿಯೊಂದಿಗೆ ತಲುಪಿದ.

ಮೆಕ್ಡೊನಾಲ್ಡ್‌ನಲ್ಲಿ ಕೆಲಸ ಮಾಡುತಿದ್ದ ನೌಕರರಿಗೆ ಪರಮಾಶ್ಚರ್ಯ ಕಾದಿತ್ತು, ತಡ ಮಾಡದೆ ಪೊಲೀಸರಿಗೆ ವಿಷಯ ಮುಟ್ಟಿಸಿದ ನೌಕರರು ಹುಡುಗನನ್ನು ಅಲ್ಲಿಯೇ ಕೂರಿಸಿಕೊಂಡಿದ್ದರು.

ಅಬ್ಬಾ !! 8ನೇ ವಯಸ್ಸಿನಲ್ಲಿ ನಮಗೆ ಪ್ರಪಂಚದ ಜ್ಞಾನವೇ ಗೊತ್ತಿರದಿದ್ದ ಸಮಯ ಒಂದಿತ್ತು, ಆದರೆ ಈಗಿನ ಮಕ್ಕಳು ಬಹಳಷ್ಟು ಚೂಟಿಯಾಗಿದ್ದು, ಎಲ್ಲವನ್ನೂ ಅರಗಿಸಿಕೊಳ್ಳುವ ಮನಸ್ಥಿತಿ ಹೊಂದಿರುತ್ತಾರೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Story first published: Monday, April 17, 2017, 13:13 [IST]
English summary
Read in Kannada about 8-year old learns to drive on Youtube takes sister to mcdonalds. Get more details about this incident, information and more
Please Wait while comments are loading...

Latest Photos