ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

By Nagaraja

'ಪ್ರೀಮಿಯರ್ ಪದ್ಮಿನಿ' ಹೆಸರನ್ನು ಯಾರು ತಾನೇ ಕೇಳಿಲ್ಲ. ಬಹುಶ: ಇಂದಿನ ಪೀಳಿಗೆಗೆ ಈ ಹೆಸರು ಅಪರಿಚಿತವಾಗಿರಬಹುದು. ಆದರೆ 1970ರಿಂದ 1990ರ ದಶಕದ ವರೆಗಿನ ಕಾಲಘಟ್ಟದಲ್ಲಿ ಜೀವಿಸಿದವರಿಗೆ ಮರೆಯಲಾಗದ ನೆನಪುಗಳನ್ನು ಹಂಚಿಕೊಂಡಿದೆ. ಇನ್ನು ಹಳೆಯ ಕನ್ನಡ, ಹಿಂದಿ ಚಿತ್ರಗಳಲ್ಲಂತೂ ನಾಯಕನಿಂದ ಹಿಡಿದು ವಿಲನ್ ಪಾತ್ರಧಾರಿಗಳಿಗೂ ಪದ್ಮಿನಿ ಅಚ್ಚುಮೆಚ್ಚಿನ ಕಾರು. ಕಥೆಯ ಕ್ಲೈಮಾಕ್ಸ್‌ನಲ್ಲಿ ವಿಲನ್‌ರನ್ನು ಅಟ್ಟಾಡಿಸಿಕೊಂಡು ಹೋಗುವ ದೃಶ್ಯ ಇನ್ನು ಹಚ್ಚ ಹಸಿರಾಗಿಯೇ ಉಳಿದಿದೆ.

ಹೀಗೆ ಅಪಾರ ಹೆಸರು ಮಾಡಿಕೊಂಡು ಕಳೆದ ಅರ್ಧ ಶತಮಾನಗಳಷ್ಟು ಕಾಲ ದೇಶದ ರಸ್ತೆಗಳಲ್ಲಿ ಸಂಚರಿಸಿರುವ ಪ್ರೀಮಿಯರ್ ಪದ್ಮಿನಿ ಹೆಸರು ಇಂದಿಗೂ ಚಿರಸ್ಥಾಯಿಯಾಗಿದೆ. ಅಂದ ಹಾಗೆ ಪ್ರೀಮಿಯರ್ ಪದ್ಮಿನಿ ಕಾರುಗಳನ್ನು ಫಿಯೆಟ್ ಪರವಾನಗಿಯಲ್ಲಿ ದೇಶಕ್ಕೆ ಪ್ರೀಮಿಯರ್ ಆಟೋಮೊಬೈಲ್ಸ್ ಲಿಮಿಟೆಡ್ (PAL) ಪರಿಚಯಿಸಿತ್ತು. ಇಟಲಿಯ ಐಕಾನಿಕ್ ಫಿಯೆಟ್ ಕಂಪನಿಯ ಕಾರುಗಳನ್ನು 1964ನೇ ಇಸವಿಯಿಂದ 2000ನೇ ಇಸವಿಯ ವರೆಗೆ ಭಾರತದಲ್ಲಿ ಮಾರಾಟ ಮಾಡುತ್ತಿದ್ದ ಸಂಸ್ಥೆಯಿದು. ಇದರಂತೆ ಫಿಯೆಟ್ ಮೂಲ ವಿನ್ಯಾಸ ಪಡೆದುಕೊಂಡಿರುವ ಮೊದಲ ಕಾರು ಫಿಯೆಟ್ 110 ಡಿಲೈಟ್ ಎಂದು ಹೆಸರಿಸಿತ್ತು. ಬಳಿಕ 1973ರಲ್ಲಿ ಪ್ರೀಮಿಯರ್ ಪದ್ಮಿನಿ ಎಂದು ನಾಮಕರಣಗೊಂಡಿತ್ತು.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ಸಹಜವಾಗಿಯೇ ಅಂದಿನ ಕಾಲದಲ್ಲಿ ಭಾರತದ ರಸ್ತೆ ಆಳುತ್ತಿದ್ದ ಹಿಂದೂಸ್ತಾನ್ ಮೋಟಾರ್ಸ್‌ ಸಂಸ್ಥೆಯ ಜನಪ್ರಿಯ ಅಂಬಾಸಿಡರ್ ಮಾದರಿಯು ಪದ್ಮಿನಿಯ ಪ್ರಮುಖ ಸ್ಪರ್ಧಾಳುವಾಗಿತ್ತು. ಆದರೆ ಅಂಬಾಸಿಡರ್‌ಗಿಂತಲೂ ವಿಭಿನ್ನವಾಗಿ ಗುರುತಿಸಿಕೊಂಡಿದ್ದ ಪ್ರೀಮಿಯರ್ ಪದ್ಮಿನಿ, ತಾಜಾ ಶೈಲಿ, ಹೆಚ್ಚಿನ ಆಯಾಮ ಹಾಗೂ ಅತ್ಯುತ್ತಮ ಇಂಧನ ಕ್ಷಮತೆಯಿಂದಾಗಿ ಬೇಗನೇ ಗಮನ ಸೆಳೆಯಿತು.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

14ನೇ ಶತಮಾನದ ರಜಪೂತ ರಾಜಕುಮಾರಿಯಾಗಿ ಪದ್ಮಿನಿ ಹೆಸರಿಸಲಾಗಿದೆ. ಇದು ಲಕ್ಷ್ಮೀ ದೇವತೆಯ ಸಂಕೇತವಾಗಿದೆ. 1964ನೇ ಇಸವಿಯಲ್ಲಿ ದೇಶಕ್ಕೆ ಮೊದಲ ಬಾರಿ ಪರಿಚಯವಾಗಿದ್ದ ಫಿಯೆಟ್ 1100ಡಿ, ಫಿಯೆಟ್‌ನ 1200 ಗ್ರ್ಯಾನ್‌ಲ್ಯೂಸ್ ಬರ್ಲಿನಾ ಮೂಲ ವಿನ್ಯಾಸವನ್ನು ಪಡೆದುಕೊಂಡಿದೆ. ಇದು 1089 ಸಿಸಿ ಫೋರ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿತ್ತು. ಇದು 42 ಅಶ್ವಶಕ್ತಿ (71 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ವೇಗವರ್ಧನೆಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದ ಈ ಫಿಯೆಟ್ ಕಾರು ಗಂಟೆಗೆ ಗರಿಷ್ಠ 125 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿತ್ತು. ಅಷ್ಟೇ ಅಲ್ಲದೆ ಅಂದಿನ ಕಾಲದಲ್ಲಿ ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ನಡೆದ ಶೋಲಾವರಂ ಮತ್ತು ಸಿಎಂಎಸ್‌ಸಿ ರೇಸ್ ಟ್ರ್ಯಾಕ್‌ಗಲ್ಲಿ ಸಿಫಾನಿ ಡಾಲ್ಫಿನ್, ಹಿಂದೂಸ್ತಾನ್ ಅಂಬಾಸಿಡರ್ ಮತ್ತು ಸ್ಟಾಡಂರ್ಡ್ ಹೇರಾಲ್ಡ್‌ಗಳಂತಹ ಕಾರುಗಳೊಂದಿಗೆ ಪೈಪೋಟಿ ನಡೆಸಿತ್ತು. ನಿಮಗೆ ಗೊತ್ತಿರುವಂತೆಯೇ ಅಂದಿನ ಕಾಲದಲ್ಲಿ ಫೋರ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ ಕಾಲಂ ಮೌಂಟೆಡ್ ಶಿಫ್ಟರ್ ಹಿಡಿದುಕೊಂಡು ಕಾರು ಓಡಿಸುವುದು ಎಷ್ಟು ಕಷ್ಟಕರವಾಗಿರಬಹುದು. ಆದರೆ ಇಂತಹ ಪರಿಸ್ಥಿತಿಯನ್ನು ಪದ್ಮಿನಿ ನಿಭಾಯಿಸಿದ್ದರು.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ಮುಂಬೈನ ಕುರ್ಲಾ ಘಟಕದಲ್ಲಿ ನಿರ್ಮಾಣವಾಗಿದ್ದ ಪ್ರೀಮಿಯರ್ ಪದ್ಮನಿ 1970ರಿಂದ 1980ರ ದಶಕದಲ್ಲಿ ತನ್ನ ಅತ್ಯುನ್ನತ ಶಿಖರವನ್ನೇರಿತ್ತು. ಅಂದು ಯುವ ಜನಾಂಗ ಹಾಗೂ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಕಾರಾಗಿತ್ತು. ಅಂದಿನ ಕಾಲದಲ್ಲಿ ಐಷಾರಾಮಿ ಕಾರೆಂಬ ಪಟ್ಟ ಗಿಟ್ಟಿಸಿಕೊಂಡ ಪ್ರೀಮಿಯರ್‌ನಲ್ಲಿ ಎಸಿ ಸಿಸ್ಟಂ, ಬಣ್ಣದ ಗ್ಲಾಸ್‌ಗಳನ್ನು ಆಳವಡಿಸಲಾಗಿತ್ತು.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

1996ನೇ ಇಸವಿಯ ವರೆಗೆ ಪೆಟ್ರೋಲ್ ವೆರಿಯಂಟ್‌ನಲ್ಲಿ ಲಭ್ಯವಾಗಿದ್ದ ಪದ್ಮಿನಿ, ಮೊದಲ ಬಾರಿಗೆ ಡೀಸೆಲ್ ವೆರಿಯಂಟ್‌ಗೂ ಕಾಲಿರಿಸಿತ್ತು. ಆದರೆ 1980ನೇ ದಶಕದಲ್ಲಿ ಹೆಚ್ಚು ಆಧುನಿಕ, ಅಗ್ಗದ ಹಾಗೂ ಗರಿಷ್ಠ ಇಂಧನ ಕ್ಷಮತೆಯ ಮಾರುತಿ 800 ಕಾರುಗಳ ಆಗಮನದೊಂದಿಗೆ ಪದ್ಮಿನಿ ನಿಧಾನವಾಗಿ ಕಳೆಗುಂದಿತ್ತು. 1991ನೇ ಇಸವಿಯಲ್ಲಿ ಭಾರತೀಯ ಆರ್ಥಿಕತೆ ಉದಾರೀಕರಣದೊಂದಿಗೆ ವಿದೇಶಿ ಕಾರು ತಯಾರಕ ಸಂಸ್ಥೆಗಳು ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದೊಡನೆ ಪ್ರೀಮಿಯರ್ ಯುಗಾಂತ್ಯವಾಗತೊಡಗಿತ್ತು.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ಪರಿಣಾಮವೆಂಬಂತೆ ಫೋರ್ಡ್, ಜನರಲ್ ಮೋಟಾರ್ಸ್, ದೇವೂ, ಹೋಂಡಾ ಹಾಗೂ ಹ್ಯುಂಡೈಗಳಂತಹ ಆಧುನಿಕ ಕಾರುಗಳ ಮುಂದೆ ಪ್ರೀಮಿಯರ್ ಸೋಲೊಪ್ಪಿಕೊಳ್ಳಲೇಬೇಕಾಯಿತು. ಆದರೆ ಇಂದಿನ ವರೆಗೂ ಕಡಿಮೆ ನಿರ್ವಹಣಾ ವೆಚ್ಚ, ಸ್ಥಿರತೆ ಹಾಗೂ ಚಾಲನಾ ಆರಾಮದಾಯಕತೆಯಲ್ಲಿ ಆಧುನಿಕ ಕಾರುಗಳನ್ನು ಮೀರಿಸಿದೆ.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ಇದಕ್ಕೊಂದು ಉತ್ತಮ ಉದಾಹರಣೆಯೆಂಬಂತೆ ಪದ್ಮಿನಿ ಕಾರುಗಳು ಇಂದಿಗೂ ಮುಂಬೈ ಟ್ಯಾಕ್ಸಿ ಕ್ಯಾಬ್‌ಗಳಾಗಿ ಓಡಾಡುತ್ತಿದೆ. ಈ ನಾಲ್ಕು ಡೋರ್‌ ಸೆಡಾನ್ ಕಾರಿನೊಳಗೆ ಸರಳ ವಿನ್ಯಾಸ ಪಡೆದುಕೊಂಡಿದೆ. ಮುಂಬೈ ವಾಣಿಜ್ಯ ನಗರಿಯ ಅವಿಭಾಜ್ಯ ಅಂಗವಾಗಿರುವ ಈ ಹಳದಿ-ಕಪ್ಪು ಬಣ್ಣದ ಪ್ರೀಮಿಯರ್ ಪದ್ಮಿನಿ, ಸರಿ ಸುಮಾರು 50 ವರ್ಷಗಳಿಂದ ಓಡಾಡುತ್ತಿದೆ.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ತಮ್ಮ ಕೊನೆಯ ಪ್ರಯತ್ನವೆಬಂತೆ ಪದ್ಮಿನಿಯಲ್ಲಿ ಬಕೆಟ್ ಸೀಟು, ಫ್ಲೋರ್ ಮೌಂಟೆಡ್ ಗೇರ್ ಶಿಫ್ಟ್ ಹಾಗೂ ಎರಡು ನಿಸ್ಸಾನ್ ಎಂಜಿನ್‌ಗಳನ್ನು (ಪೆಟ್ರೋಲ್ ಹಾಗೂ ಡೀಸೆಲ್) ಪರಿಚಯಿಸಿದರೂ ಯಾವುದೇ ಫಲವುಂಟಾಗಲಿಲ್ಲ. ಕೊನೆಗೆ 2000ನೇ ಇಸವಿಯಲ್ಲಿ ಪ್ರೀಮಿಯರ್ ಪದ್ಮಿನಿ ಕಾರುಗಳು ಕಣ್ಮರೆಯಾದವು.

ನೆನಪು ಕನಸುಗಳ ನಡುವೆ ಹಳೆಯ ರಾಜಕುಮಾರಿ 'ಪ್ರೀಮಿಯರ್ ಪದ್ಮಿನಿ'

ಇದೀಗ ಪ್ರೀಮಿಯರ್ ಪದ್ಮಿನಿ ಬಗ್ಗೆ ನಿಮ್ಮ ನೆನಪುಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
If you were born during the latter half of the last century, chances are you would have owned, driven, or at least ridden in a Premier Padmini. The Italian-designed car was based on the Fiat 1100 D, and was introduced in the Indian market by Premier Automobiles Limited (PAL) in 1964.
Story first published: Wednesday, July 9, 2014, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X