ಅಮೀರ್ ಖಾನ್ 'ದೇಶಭಕ್ತ' ಅಂದ್ರೆ ತಪ್ಪೇ? ಸಂಶಯವಿದ್ದಲ್ಲಿ ಇದನ್ನು ಓದಿ

By Nagaraja

ಭಾರತದಲ್ಲಿ ಅಸಹಿಷ್ಣುತೆ ಕಾಡುತ್ತಿದೆ ಎಂಬ ವಿವಾದತ್ಮಾಕ ಹೇಳಿಕೆ ಕೊಟ್ಟು ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿರುವ ಅಮೀರ್ ಖಾನ್, ಕಳೆದ ಕೆಲವು ಸಮಯಗಳಿಂದ ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸುವ ತವಕದಲ್ಲಿದ್ದಾರೆ. ಈ ಸಂಬಂಧ ಹಲವಾರು ಸಾರ್ವಜನಿಕ ಹೇಳಿಕೆಗಳನ್ನು ಕೊಟ್ಟಿರುವ 'ಮಿಸ್ಟರ್ ಫರ್ಫೆಕ್ಷನಿಸ್ಟ್' ಮಗದೊಮ್ಮೆ ಸುದ್ದಿಯಾಗಿದ್ದಾರೆ.

ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಬಜಾಜ್ ವಿ ಬೆಲೆ ಎಷ್ಟು ಗೊತ್ತಾ ?

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಭಾರತೀಯ ನೌಕಾಸೇನೆಯ ವಿಮಾನವಾಹಕ ನೌಕೆ 'ವಿಕ್ರಾಂತ್' ಯುದ್ಧ ಹಡಗಿನ ಉಕ್ಕಿನ ಲೋಹದಿಂದ ತಯಾರಿಸಿರುವ ಅತ್ಯಾಧುನಿಕ 'ಬಜಾಜ್ ವಿ' ಖರೀದಿಸುವ ಮೂಲಕ ಅಮೀರ್ ಖಾನ್ ದೇಶಪ್ರೇಮವನ್ನು ತೋರ್ಪಡಿಸಿದ್ದಾರೆ.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಈ ಸಂಬಂಧ ಹೇಳಿಕೆ ಕೊಟ್ಟಿರುವ ಅಮೀರ್ ಖಾನ್, "ವಿಕ್ರಾಂತ್ ಹಡಗಿನ ಲೋಹದಿಂದ ನಿರ್ಮಿಸಿದ ವಿ ಬೈಕ್ ನೊಂದಿಗೆ ಬಜಾಜ್ ಬರುತ್ತಿದೆ ಎಂಬುದನ್ನು ಮೊದಲ ಬಾರಿಗೆ ಕೇಳಿಸಿಕೊಂಡಾಗ ಅತೀವ ಸಂತಸಗೊಂಡಿದ್ದೆ" ಎಂದಿದ್ದಾರೆ.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಮಾತು ಮುಂದುವರಿಸಿದ ಅವರು, ಬಜಾಜ್ ವಿಕ್ರಾಂತ್ ಬಗ್ಗೆ ಕೇಳಿದಾಕ್ಷಣ ತಮ್ಮ ತಂಡದಲ್ಲಿ ಈ ಐಕಾನಿಕ್ ಬೈಕ್ ಬುಕ್ ಮಾಡಿಸಿಕೊಳ್ಳುವಂತೆ ತಿಳಿಸಿರುವುದಾಗಿ ವಿವರಿಸುತ್ತಾರೆ.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಬಜಾಜ್ ವಿ ಬೈಕ್ ಖರೀದಿಸಿರುವುದರ ಬಗ್ಗೆ ಹೇಳಿಕೆ ಕೊಟ್ಟಿರುವ ಅಮೀರ್, ತಾವು ಕೂಡಾ ಇತಿಹಾಸದ ಭಾಗವಾಗಲು ಬಯಸುವುದಾಗಿ ತಿಳಿಸಿದ್ದಾರೆ.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಇದರಂತೆ ಬಜಾಜ್ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬಜಾಜ್ ಅವರು ಮೊದಲ ಬೈಕನ್ನು ಅಮೀರ್ ಖಾನ್ ಅವರಿಗೆ ಹಸ್ತಾಂತರಿಸಿದ್ದಾರೆ. ಹೇಳಿ ಕೇಳಿ ಇವರಿಬ್ಬರು ಆಪ್ತ ಸ್ನೇಹಿತರಾಗಿದ್ದು, ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಅಮೀರ್ ಖಾನ್ ಬಯಕೆಯಂತೆ ವಿಶೇಷ ಮಾರ್ಪಾಡುಗಳನ್ನು ಬಜಾಜ್ ವಿ ಬೈಕ್ ಗೆ ತರಲಾಗಿದೆ. ಮುಂದುಗಡೆ ಟ್ಯಾಂಕ್ ಮೇಲ್ಗಡೆಯಾಗಿ ಅಮೀರ್ ಹೆಸರಿನ ಪ್ರಾರಂಭಿಕ ಅಕ್ಷರ 'ಎ' ಮತ್ತು ಹಿಂಭಾಗದಲ್ಲಿ 'ಚೋಟೆ ಲಾಲ್' ಸಹಿಯನ್ನು ಲಗತ್ತಿಸಲಾಗಿದೆ.

ಹಿನ್ನೆಲೆ...

ಹಿನ್ನೆಲೆ...

1961ನೇ ಇಸವಿಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿರುವ ಮೊದಲ ಯುದ್ಧ ವಿಮಾನ ವಾಹಕ ಹಡಗು ಐಎನ್‌ಎಸ್ ವಿಕ್ರಾಂತ್, 1971ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

36 ವರ್ಷಗಳಷ್ಟು ಕಾಲ ಭಾರತೀಯ ನೌಕಾ ಸೇನೆಯ ಸೇವೆಯಲ್ಲಿದ್ದ ಐಎನ್‌ಎಸ್ ವಿಕ್ರಾಂತ್ 1997ನೇ ಇಸವಿಯಲ್ಲಿ ನಿವೃತ್ತಿ ಹೊಂದಿತ್ತು. ಬಳಿಕ 2012ರ ವರೆಗೂ ಮುಂಬೈನ ವಸ್ತು ಸಂಗ್ರಹಣಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಆದರೆ ದುರದೃಷ್ಟವಶಾತ್ 2014 ಐಎನ್‌ಎಸ್ ವಿಕ್ರಾಂತ್ ಹಡಗನ್ನು ನೆಲಸಮಗೊಳಿಸಿ ಅದರ ಬಿಡಿಭಾಗಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಇಲ್ಲಿಗೆ ಈ ವೀರ ಪರಂಪರೆಯು ಕೊನೆಯಾಗಲಿದೆ ಎಂದೇ ಎಲ್ಲರು ನಂಬಿದ್ದರು.

ಬಜಾಜ್ ವಿ ಬೈಕ್ ಖರೀದಿಸಿ ದೇಶ ಪ್ರೇಮ ತೋರಿಸಿದ ಅಮೀರ್

ಏತನ್ಮಧ್ಯೆ ಐಎನ್‌ಎಸ್ ವಿಕ್ರಾಂತ್ ಇತಿಹಾಸ ಅಳಿಸಿ ಹೋಗದಂತೆ ನೋಡಿಕೊಂಡಿರುವ ಬಜಾಜ್ ಆಟೋ, ಬಜಾಜ್ ವಿ ಮುಖಾಂತರ ಮರು ಜೀವ ತುಂಬಿದೆ.

ಇವನ್ನು ಓದಿ

ಅಸಹಿಷ್ಣುತೆ ನಾಡಲ್ಲಿ ಅಮೀರ್‌ಗೆ ಭದ್ರತೆಯನ್ನು ಕೊಟ್ಟಿತೇ ಇನ್ ಕ್ರೆಡಿಬಲ್ ಕಾರುಗಳು?

ಇವನ್ನೂ ಓದಿ

ಐತಿಹಾಸಿಕ 'ವಿಕ್ರಾಂತ್' ಹಡಗಿನ ಲೋಹದಿಂದ ನೂತನ ಬಜಾಜ್ ಬೈಕ್ ತಯಾರಿ

Most Read Articles

Kannada
English summary
Aamir Khan Takes Delivery Of Special Bajaj V Motorcycle
Story first published: Wednesday, May 4, 2016, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X