ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

By Nagaraja

ಸ್ವಯಂಚಾಲಿತ ಕಾರುಗಳನ್ನು ಭವಿಷ್ಯದ ಪರ್ಯಾಯ ಸಂಚಾರ ವ್ಯವಸ್ಥೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಾಗಿರುವಾಗ ಇನ್ನು ಒಂದು ಹೆಜ್ಜೆ ಮುಂದಿಟ್ಟಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಿಮಾನಯಾನ ಸಂಸ್ಥೆ ಏರ್ ಬಸ್, ಹಾರುವ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

2030ರ ವೇಳೆಯಾಗುವಾಗ ಜಾಗತಿಕ ಜನಸಂಖ್ಯೆಯ ಶೇಕಡಾ 60ರಷ್ಟು ಮಂದಿ ನಗರ ಪ್ರದೇಶಗಳಲ್ಲಿ ವಾಸಿಸಲಿದ್ದಾರೆ. ಇದು ಈಗಿರುವ ಶೇಕಡಾ 50ಕ್ಕಿಂತಲೂ 10ಹೆಚ್ಚಾಗಿದೆ. ಇನ್ನೊಂದೆಡೆ ದೈನಂದಿನ ವರ್ಧಿಸುವತ್ತಿರುವ ವಾಹನ ದಟ್ಟಣೆಯು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

ಹಾರುವ ಸ್ವಯಂಚಾಲಿತ ಕಾರುಗಳ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿರುವ ಫ್ರಾನ್ಸ್ ಮೂಲದ ಏರ್ ಬಸ್ ಸಂಸ್ಥೆಯು ಮುಂದಿನ ಸಾಲಿನಲ್ಲೇ ಮೊದಲ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಿರಿಸಿಕೊಂಡಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

ಹಾರುವ ಸ್ವಯಂಚಾಲಿತ ಕಾರುಗಳ ಫ್ಲ್ಯಾಟ್ ಫಾರ್ಮ್ ಗೆ 'ವಾಹನ' ಎಂಬ ಹೆಸರನ್ನಿಡಲಾಗಿದ್ದು, ಎ3 ತಂಡವು ಅಭಿವೃದ್ಧಿಪಡಿಸಲಿದೆ. ಇದು ವೈಯಕ್ತಿಕ ಹಾಗೂ ಸರಕುಗಳ ಸಾಗಣೆಯನ್ನು ಗುರಿಯಿರಿಸಿಕೊಂಡಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

ನೂತನ ಸ್ವಯಂಚಾಲಿತ ಹಾರುವ ಕಾರುಗಳ ಅಭಿವೃದ್ಧಿಗೆ ಹೊಸ ತಂತ್ರಗಾರಿಕೆ, ಬ್ಯಾಟರಿ, ಮೋಟಾರು, ಪತ್ತೆ ಹಚ್ಚುವಿಕೆ ಹಾಗೂ ತಪ್ಪಿಸಿಕೊಳ್ಳುವ ವ್ಯವಸ್ಥೆಯ ಅಗತ್ಯವೂ ಇರುತ್ತದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

ಆದರೆ ಇವೆಲ್ಲವೂ ನನಸಾಗಲು ನಿಯಮಗಳಲ್ಲೂ ಬದಲಾವಣೆಯಾಗಬೇಕಿದೆ. ಯಾಕೆಂದರೆ ವಿಶ್ವದ ಯಾವುದೇ ದೇಶದಲ್ಲಾಗಲಿ ಪೈಲಟ್ ಇಲ್ಲದೆ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

ಅತ್ತ ಏರ್ ಬಸ್ ಹೆಲಿಕಾಪ್ಟರ್ಸ್ ಭಾಗವಾಗಿರುವ ಬ್ರೂನೊ ಟ್ರಾಬೆಲ್, ಸಿಂಗಾಪುರದ ನಾಗರಿಕ ವಿಮಾನಯಾನ ಪ್ರಾಧಿಕಾರದ ಜೊತೆ ಸೇರಿಕೊಂಡು ಅಲ್ಲಿನ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಸರಕುಗಳ ಸಾಗಣೆಗಾಗಿ ಸ್ವಯಂಚಾಲಿತ ಡ್ರೋನ್ ವಿಮಾನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಭವಿಷ್ಯದ ಸಂಚಾರ ವ್ಯವಸ್ಥೆ; ಹಾರುವ ಸ್ವಯಂಚಾಲಿತ ಕಾರುಗಳು

ಏನೇ ಆದರೂ ಸ್ವಯಂಚಾಲಿತ ಹಾರುವ ಕಾರುಗಳ ಅಭಿವೃದ್ಧಿಯು ಅಂತಿಮ ಗುರಿಯಾಗಿದೆ. ಈ ಮಹತ್ತರ ಕನಸು ಮುಂದಿನ 10 ವರ್ಷದೊಳಗೆ ನನಸಾಗುವ ನಂಬಿಕೆ ಸಂಸ್ಥೆಯದ್ದು.


Most Read Articles

Kannada
English summary
After Driverless Cars, It's Time For A Ride In The Sky
Story first published: Wednesday, August 24, 2016, 13:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X