ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

Written By:

ನಿಮ್ಮ ತಂದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ನೀವು ಯಾವ ಕಾರನ್ನು ಹೊಂದಿರಲು ಇಚ್ಛಿಸುತ್ತೀರಿ ? ಎಂಬ ಪ್ರೆಶ್ನೆ ನಿಮಗೆ ಯಾರಾದರೂ ಕೇಳಿದರೆ, ನೀವು ತಕ್ಷಣ ಅಂಬಾನಿ ಮಕ್ಕಳ ಕಾರಿನ ಕಡೆ ಬೆರಳು ಮಾಡುವುದನ್ನು ಮರೆಯಬೇಡಿ.

ದೇಶದ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮುಖೇಶ್ ಅಂಬಾನಿಯ ಕುಲಪುತ್ರರು ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದಿರುವ ವಿಚಾರ ತಿಳಿದುಬಂದಿದೆ. ಏನ್ ಸ್ವಾಮಿ ಕಾರು ಬದಲಾಯಿಸುವುದು ಅಂಬಾನಿ ಕುಟುಂಬಕ್ಕೆ ಬಟ್ಟೆ ಬದಲಿಸಿದಷ್ಟೇ ಸುಲಭ!! ಅಂತೀರಾ ?

ಹೌದು, ಸಿರಿವಂತ ಕುಟುಂಬದ ಕುಡಿಗಳಾದ ಆಕಾಶ್ ಮತ್ತು ಅನಂತ್ ಅಂಬಾನಿ ಎಂದಿನಂತೆ ಕಾರುಗಳ ಮೇಲಿನ ಪ್ರೇಮವನ್ನು ಮುಂದುವರೆಸಿದ್ದಾರೆ.

ಆಕಾಶ್ ಅಂಬಾನಿ ಜಗತ್ತಿನ ಅತಿ ದುಬಾರಿ ಕಾರುಗಳಲ್ಲಿ ಒಂದಾದ 'ಬೆಂಟ್ಲಿ ಬೆನ್‌ಟೈಗಾ' ವನ್ನು ತಮ್ಮದಾಗಿಸಿಕೊಂಡಿದ್ದು, ಕಳೆದ ವಾರ ಕ್ಯಾಮೆರಾ ಕಣ್ಣಿಗೆ ಆಕಾಶ್ ಅಂಬಾನಿ ಕಾಣಿಸಿಕೊಂಡಿದ್ದಾರೆ.

ಮುಕೇಶ್ ಅಂಬಾನಿಯ ಮತ್ತೊಬ್ಬ ಮಗ ಅನಂತ್ ಅಂಬಾನಿ ಪ್ರತಿಷ್ಠಿತ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ ಹೆಡ್ ಕ್ಯೂಪಿ (ಡಿ.ಎಚ್.ಸಿ) ಕಾರನ್ನು ತಮ್ಮ ತಂದೆ ಇಂದ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.

ಬೆಂಟ್ಲಿ ಬೆನ್‌ಟೈಗಾ

ಭಾರತ ದೇಶದ ಅತಿ ದುಬಾರಿ ಕ್ರೀಡಾ ಬಳಕೆಯ ಕಾರು ಎಂಬ ಖ್ಯಾತಿ ಪಡೆದುಕೊಂಡಿರುವ 'ಬೆಂಟ್ಲಿ ಬೆನ್‌ಟೈಗಾ' ರೂ. 3.85 ಕೋಟಿ (ಎಕ್ಸ್ ಶೋ ರೂಂ ದೆಹಲಿ) ಬೆಲೆ ಹೊಂದಿದೆ. ಅತಿ ಹೆಚ್ಚು ಬೆಲೆಬಾಳುವ ಬಿಡಿಭಾಗಗಳನ್ನು ಹೊಂದಿರುವ ಈ ಕಾರು ಎಂಬ ಶ್ರೇಯಸ್ಸು ಈ ಕಾರಿಗೆ ಲಭಿಸಿದೆ.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಕಾರಿನ ಒಳಗಡೆ ಬ್ರೆಟ್ಲಿಯಿಂಗ್ ಕಂಪನಿಯ ಮುಲಿನೇರ್ ಟೂರ್ಬಿಲ್ಲೋನ್ ಗಡಿಯಾರ ಬೆಲೆ ಕೇವಲ 1.95 ಕೋಟಿ !! ಅಷ್ಟೇ.

ಇನ್ನು ಕಾರಿನ ಯಂತ್ರಾಂಶದ ಬಗ್ಗೆ ಹೇಳುವುದಾದರೆ, ಈ ಕ್ರೀಡಾ ಬಳಕೆಯ ಕಾರು ಅತಿ ಬಲಿಷ್ಠವಾಗಿದ್ದು, 900 ತಿರುಗುಬಲದಲ್ಲಿ 600ರಷ್ಟು ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಶಕ್ತಿಶಾಲಿಯಾಗಿದೆ.

ಈ ಕಾರು ಸದ್ಯ 12 ಬಣ್ಣಗಳಲ್ಲಿ ಲಭ್ಯವಿದ್ದು, ಆಕಾಶ್ ಅಂಬಾನಿ ಎಂದಿನಂತೆ ತಮಗಿಷ್ಟವಾದ 'ಬ್ರಿಟಿಷ್ ರೇಸಿಂಗ್ ಗ್ರೀನ್' ಬಣ್ಣದ ಕಾರನ್ನು ಆಯ್ದುಕೊಂಡಿದ್ದು, ಅದರಲ್ಲಿಯೂ ಕಾರಿನ ಕನ್ನಡಿಗಳಿಗೆ ಕಾರ್ಬನ್ ಫೈಬರ್ ಮೆರುಗು ಹೊಂದಿರುವ ಕಾರನ್ನು ಕೊಂಡುಕೊಂಡಿದ್ದಾರೆ.

ಇಷ್ಟೆಲ್ಲಾ ಶಕ್ತಿ ಹೊಂದಿರುವ ಕಾರಿನ ವೇಗದ ಬಗ್ಗೆ ಕೇಳಬೇಕೆ !? ಈ ಕಾರು 0 ಕಿ.ಮೀ ವೇಗದಿಂದ 100 ಕಿ.ಮೀ ವೇಗ ಪಡೆದುಕೊಳ್ಳಲು ಕೇವಲ 4 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ ಹೆಡ್ ಕ್ಯೂಪಿ (ಡಿ.ಎಚ್.ಸಿ)

ಅಣ್ಣ ಆಕಾಶ್ ಅಂಬಾನಿ ಕ್ರೀಡಾ ಬಳಕೆಯ ಕಾರು ಕೊಂಡರೆ, ತಾವೇನು ಕಮ್ಮಿ ಎಂಬಂತೆ ಅನಂತ್ ಅಂಬಾನಿ ಹಾಗು ಮುಕೇಶ್ ಅಂಬಾನಿಯ ಮತ್ತೊಬ್ಬ ಕುಲಪುತ್ರ ಆಗಿರುವ ಅನಂತ್ ಅಂಬಾನಿ ಕೂಡ ಐಷಾರಾಮಿ ಕಾರು ಕೊಂಡಿದ್ದಾರೆ.

ಅನಂತ್ ಅಂಬಾನಿ ಕೊಂಡಿರುವ ಕಾರು ಮತ್ಯಾವುದು ಅಲ್ಲ, ಪ್ರತಿಷ್ಠಿತ ರೋಲ್ಸ್ ರಾಯ್ಸ್ ಕಂಪನಿಯ ಫ್ಯಾಂಟಮ್ ಡ್ರಾಪ್ ಹೆಡ್ ಕ್ಯೂಪಿ (ಡಿ.ಎಚ್.ಸಿ).

ಈ ಕಾರು ಕ್ರೀಡಾ ಬಳಕೆಯ ಕಾರು ಅಲ್ಲದಿದ್ದರೂ ಸಹ ರೋಲ್ಸ್ ರಾಯ್ಸ್ ಕಂಪನಿ ಹೊಂದಿರುವ ಕಾರುಗಳಲ್ಲಿಯೇ ಅತಿ ದುಬಾರಿ ಈ ಕಾರು ರೋಲ್ಸ್ ರಾಯ್ಸ್ ಕಂಪನಿಯ ಫ್ಯಾಂಟಮ್ ಡ್ರಾಪ್ ಹೆಡ್ ಕ್ಯೂಪಿ (ಡಿ.ಎಚ್.ಸಿ).

ಯಾವುದೇ ಹೆಚ್ಚಿನ ಸವಲತ್ತುಗಳು ಇಲ್ಲದೆಯೇ ಈ ರೋಲ್ಸ್ ರಾಯ್ಸ್ ಕಂಪನಿಯ ಫ್ಯಾಂಟಮ್ ಡ್ರಾಪ್ ಹೆಡ್ ಕ್ಯೂಪಿ (ಡಿ.ಎಚ್.ಸಿ) ಕಾರಿನ ಬೆಲೆ 8.84 ಕೋಟಿ (ಎಕ್ಸ್ ಶೋ ರೂಂ ) ಇದ್ದು, ಸವಲತ್ತುಗಳನ್ನು ಒಳಗೊಂಡ ಕಾರು ಇನ್ನು ಹೆಚ್ಚಿಗೆ ಇರಲಿದೆ.

ಸದ್ಯ ಅನಂತ್ ಕೊಂಡಿರುವ ಈ ಕಾರು ಬಿಳಿ ಬಣ್ಣ ಹೊಂದಿದ್ದು, ಕೆಂಪು ಬಣ್ಣದ ಹೊದಿಕೆ ಹೊಂದಿದೆ. 6.75 ಲೀಟರ್ ವಿ12 ಎಂಜಿನ್ ಹೊಂದಿದ್ದು, 720 ಎನ್ಎಂ ತಿರುಗುಬಲದಲ್ಲಿ 454 ಅಶ್ವಶಕ್ತಿ ಉತ್ಪಾದಿಸಲಿದೆ.

ರೋಡ್ ನಲ್ಲಿ ಇವ್ರು ಇಬ್ರು ಕಂಡ್ರೆ ಖಂಡಿತ ಹತ್ರ ಹೋಗ್ಬೇಡಿ, ಯಾಕ್ ಗೊತ್ತಾ !? ಇವ್ರ್ ಎಲ್ಲಿಗೆ ಹೋದ್ರೂ ಹಿಂದೆ ಮುಂದೆ ಪೊಲೀಸ್ ಕಾರುಗಳು ಹೋಗ್ತವೆ... ಇವರಿಬ್ಬರ ಅಪ್ಪ ಮುಕೇಶ್ ಅಂಬಾನಿ ತಾವೇ ಖರ್ಚು ಮಾಡಿ ಝೆಡ್ ಪ್ಲಸ್ ಸೆಕ್ಯೂರಿಟಿ ತೆಗೆದುಕೊಳ್ಳುತ್ತಿದ್ದಾರೆ.

 

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ...

'ರೋಲ್ಸ್ ರಾಯ್ಸ್' ಬಗ್ಗೆ ಈ 12 ವಿಚಾರಗಳನ್ನು ನೀವ್ ಕೂಡ ತಿಳ್ಕೊಳಿ !!

ಡ್ರೈವ್‌ಸ್ಪಾರ್ಕ್‌ನಲ್ಲಿ ನೋಡಬೇಕಾದ ಫೋಟೋ ಗ್ಯಾಲರಿ

ಟಾಟಾ ಟಿಗೋರ್ ಫೋಟೋ ಗ್ಯಾಲರಿ

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಫೋಟೋ ಗ್ಯಾಲರಿ

Story first published: Saturday, March 18, 2017, 14:09 [IST]
English summary
[Read in kannada] junior Ambanis have just picked up new luxury cars. Akash Ambani buys India’s most EXPENSIVE SUV Bentayga, where as anant ambani gets his new Rolls Royce Phantom Drop Head Coupe (DHC)
Please Wait while comments are loading...

Latest Photos