ಅಲಾಯ್ ವೀಲ್ ಮೋಡಿ; ಪ್ರಯೋಜನ ಹಾಗೂ ಹಿನ್ನಡೆ

By Nagaraja

ಕೆಲವು ವರ್ಷಗಳ ಹಿಂದಿನ ವರೆಗೂ ರಿಮ್ ಜೋಡಣೆಯ ಚಕ್ರಗಳು ರಸ್ತೆಗಳಲ್ಲಿ ಹೆಚ್ಚೆಚ್ಚು ಕಾಣಸಿಗುತ್ತಿದ್ದವು. ನಿಧಾನವಾಗಿ ಈ ಸ್ಥಾನವನ್ನು ಅಲಾಯ್ ವೀಲ್‌ಗಳೆಂಬ ಮಿಶ್ರ ಲೋಹದ ಚಕ್ರಗಳು ತುಂಬಿಕೊಂಡಿದೆ.

ಇವನ್ನೂ ಓದಿ: ಚಕ್ರಗಳಿಗೆ ಸಂಬಂಧಿಸಿದ 10 ಕಟ್ಟುಕತೆ ಹಾಗೂ ಸತ್ಯಗಳು!

ಆಧುನಿಕ ವಾಹನ ಜಗತ್ತಿನಲ್ಲಿ ಅಲಾಯ್ ವೀಲ್ ನಿಜಕ್ಕೂ ಮೋಡಿ ಮಾಡಿದೆ ಅಂದರೆ ತಪ್ಪಾಗಲಾರದು. ನಿಮ್ಮ ಪಕ್ಕದ ಮನೆಯವರ ಕಾರನ್ನು ನೋಡಿದಾಗ ಅದರಲ್ಲೇನೋ ವಿಭಿನ್ನತೆ ಕಾಣಸಿಗಬಹುದು ಅಲ್ಲವೆ? ಯಾಕೆ ಹೀಗೆ ಎಂಬುದನ್ನು ಗಾಢವಾಗಿ ಚಿಂತನೆ ಮಾಡಿದಾಗ ಆತನ ಕಾರಿನ ಅಲಾಯ್ ವೀಲ್ ನಿಮ್ಮ ಗಮನಕ್ಕೆ ಬರಬಹುದು.

ಅಲಾಯ್ ವೀಲ್ ಮೋಡಿ; ಪ್ರಯೋಜನ ಹಾಗೂ ಹಿನ್ನಡೆ

ಅಷ್ಟಕ್ಕೂ ಏನಿದು ಅಲಾಯ್ ವೀಲ್‌? ಇದಕ್ಕೆ ದುಡ್ಡು ವ್ಯಯ ಮಾಡುವುದು ಲಾಭವೇ? ಕಾರಿನ ಸಮತೋಲನ ಹಾಗೂ ಆಕರ್ಷಣೆ ಕಾಪಾಡುವ ನಿಟ್ಟಿನಲ್ಲಿ ಇದೆಷ್ಟು ಪರಿಣಾಮಕಾರಿ? ಇದರ ಹಿನ್ನಡೆಗಳೇನು? ಹೀಗೆ ಅಗತ್ಯ ವಿಚಾರಗಳ ಬಗ್ಗೆ ಒಂದು ಹದ್ದು ನೋಟ ಹಾಯಿಸೋಣವೇ...

ಅಲಾಯ್ ವೀಲ್ - ಒಂದು ಅವಲೋಕನ

ಅಲಾಯ್ ವೀಲ್ - ಒಂದು ಅವಲೋಕನ

'ಅಲಾಯ್ ವೀಲ್' ಅಂದರೆ ಬೇರೆ ಏನು ನೀವು ಸಾಮಾನ್ಯವಾಗಿ ಬಳಕೆ ಮಾಡುವ ಪದ 'ಮ್ಯಾಗ್ ವೀಲ್' ಆಗಿದೆ. ಇದನ್ನು ಕನ್ನಡಕ್ಕೆ ತರ್ಜುಮೆ ಮಾಡಿದಾಗ ಮಿಶ್ರಲೋಹ ಎಂಬುದು ಯಾವುದೇ ಪದಕೋಶ ಹುಡುಕಿ ನೋಡಿದರೂ ಸಿಗುತ್ತದೆ. ಇದನ್ನು ಅಲ್ಯೂಮಿನಿಯಂ ಅಥವಾ ಮ್ಯಾಗ್ನೇಶಿಯಂ ಕೆಲವು ಬಾರಿ ಇವೆರಡರಿಂದಲೂ ತಯಾರಿಸಲಾಗುತ್ತದೆ.

ಹಿಂದೆಲ್ಲ ಅಲಾಯ್ ವೀಲ್‌ಗಳು ಐಷಾರಾಮಿ ಕಾರುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದವು. ಬರ ಬರುತ್ತಾ ಸಣ್ಣ ಸಣ್ಣ ಬಜೆಟ್ ಕಾರುಗಳಲ್ಲೂ ಇದರ ಬಳಕೆ ಗಮನಾರ್ಹವಾಗಿ ಕಂಡುಬರುತ್ತಿದೆ.

ಅಲಾಯ್ ವೀಲ್ - ಒಂದು ಅವಲೋಕನ

ಅಲಾಯ್ ವೀಲ್ - ಒಂದು ಅವಲೋಕನ

ಈ ಮೊದಲೇ ತಿಳಿಸಿರುವಂತೆಯೇ ಕಾರಿನ ಬಲ ಹಾಗೂ ಸಾನಿಧ್ಯ ಹೆಚ್ಚಿಸುವುದರಲ್ಲಿ ಅಲಾಯ್ ವೀಲ್ ಪಾತ್ರ ದೊಡ್ಡದು. ಅತ್ಯುತ್ತಮ ಚಕ್ರ ಇಲ್ಲದಿದ್ದಲ್ಲಿ ಸಮತೋಲನ ಕಾಪಾಡುವುದಾದರೂ ಹೇಗೆ? ಹೌದು, ಇದು ಕಾರಿನ ನಯವಾದ ಚಾಲನೆಯ ಜೊತೆಗೆ ನೈಜತೆ ಕಾಪಾಡುತ್ತದೆ. ಆರಂಭಿಕ ಕಾಲಘಟ್ಟದಲ್ಲಿ ಕಾರಿನ ಚಕ್ರಗಳಿಗೆ ಸ್ಟೀಲು ಬಳಕೆ ಮಾಡಲಾಗುತ್ತಿತ್ತು. ಬಲ, ಬಾಳ್ವಿಕೆ ಹಾಗೂ ರಸ್ತೆ ಸಾನಿಧ್ಯ ವಿಚಾರದಲ್ಲಿ ಇದು ಹೆಚ್ಚು ಸೂಕ್ತವೆನಿಸಿತ್ತು. ಆದರೆ ಇದನ್ನೆಲ್ಲ ಸರಿದೂಗಿಸುವ ಅಲ್ಯೂಮಿನಿಯಂ ಅಲಾಯ್ ವೀಲ್‌ ಹಗುರ ಭಾರ ಅಷ್ಟೇ ಅಲ್ಲದೆ ಹೆಚ್ಚು ರಸ್ತೆ ಸಾನಿಧ್ಯವನ್ನು ಹೊಂದಿದೆ.

ಪ್ರಯೋಜನಗಳು - ಸೊಗಸಾದ ನೋಟ

ಪ್ರಯೋಜನಗಳು - ಸೊಗಸಾದ ನೋಟ

ಸ್ಟೀಲು ವೀಲ್ ಹೋಲಿಸಿದಾಗ ಅಲಾಯ್ ವೀಲ್‌ಗಳು ಹೆಚ್ಚಿನ ರಸ್ತೆ ಸಾನಿಧ್ಯವನ್ನು ಹೊಂದಿರುತ್ತದೆ. ಇದು ಕಾರಿನ ಅಂದತೆಯನ್ನು ಹೆಚ್ಚಿಸುತ್ತದೆ. ಈ ಚಿತ್ರದಲ್ಲಿ ಕೊಡಲಾಗಿರುವ ಪೋರ್ಷೆ ಕೆಮಾನ್ ಗಮನಿಸಿದಾಗಲೇ ಬಹುತೇಕ ಮಾಲಿಕರು ಅಲಾಯ್ ವೀಲ್ ಏಕೆ ಇಷ್ಟಪಡುತ್ತಾರೆ ಎಂಬುದನ್ನು ನೀವು ಅರಿತುಕೊಳ್ಳಬಹುದು.

ಪ್ರಯೋಜನಗಳು - ಶಾಖ ಹೀರಿಕೊಳ್ಳುವಿಕೆ

ಪ್ರಯೋಜನಗಳು - ಶಾಖ ಹೀರಿಕೊಳ್ಳುವಿಕೆ

ಸ್ಟೀಲ್ ವೀಲ್ ಹೋಲಿಸಿದರೆ ಅಲಾಯ್ ವೀಲ್ ಉತ್ತಮವಾಗಿ ಶಾಖ ಹೀರಿಕೊಳ್ಳುತ್ತಿದ್ದು, ಉತ್ತಮ ಬ್ರೇಕಿಂಗ್ ನಿರ್ವಹಣೆ ಕಾಯ್ದುಕೊಳ್ಳುತ್ತದೆ. ಇದರಿಂದ ನಿಮ್ಮ ವಾಹನ ಬ್ರೇಕ್ ಫೇಲ್ ಆಗುವ ಸಾಧ್ಯತೆ ಅತಿ ಕಡಿಮೆಯಾಗಿರುತ್ತದೆ.

ಪ್ರಯೋಜನಗಳು - ಉತ್ತಮ ನಿರ್ವಹಣೆ

ಪ್ರಯೋಜನಗಳು - ಉತ್ತಮ ನಿರ್ವಹಣೆ

ಭಾರ ಕಡಿಮೆಯಾಗಿರುವುದರಿಂದ ಭೂತಲದ ಮೇಲೆ ಉತ್ತಮ ನಿರ್ವಹಣೆ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಿಂದ ವಾಹನಕ್ಕೆ ಹೆಚ್ಚಿನ ಗ್ರಿಪ್ ಲಭಿಸುತ್ತದೆ. ಇವೆಲ್ಲದರ ಜೊತೆಗೆ ಹ್ಯಾಂಡ್ಲಿಂಗ್, ಸ್ಟೀರಿಂಗ್ ಹಾಗೂ ತಿರುವಿನಲ್ಲೂ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ.

ಪ್ರಯೋಜನಗಳು - ಹೆಚ್ಚು ಇಂಧನ ಕ್ಷಮತೆ

ಪ್ರಯೋಜನಗಳು - ಹೆಚ್ಚು ಇಂಧನ ಕ್ಷಮತೆ

ಸ್ಟೀಲ್ ಚಕ್ರಗಿಂತಲೂ ಹಗುರವಾಗಿರುವುದರಿಂದ ಹೆಚ್ಚಿನ ಇಂಧನ ಕ್ಷಮತೆ ನೀಡುವಲ್ಲಿಯೂ ಅಲಾಯ್ ವೀಲ್ ಯಶಸ್ವಿಯಾಗಿದೆ.

ಪ್ರಯೋಜನಗಳು - ನಿಖರ ಬ್ರೇಕ್

ಪ್ರಯೋಜನಗಳು - ನಿಖರ ಬ್ರೇಕ್

ವಾಹನ ಸಂಚಾರದಲ್ಲಿ ಬ್ರೇಕ್ ಕಂಡೀಷನ್ ಮುಖ್ಯವಾಗಿದೆ. ಅದೇ ರೀತಿ ಉತ್ತಮ ಹಿಡಿತ ಕಾಪಾಡಿಕೊಳ್ಳುವಲ್ಲಿ ಮಿಶ್ರಲೋಹದ ಚಕ್ರಗಳಿಗೆ ಸಾಧ್ಯವಾಗುತ್ತದೆ.

ಪ್ರಯೋಜನಗಳು - ತುಕ್ಕು ಹಿಡಿಯುದಿಲ್ಲ

ಪ್ರಯೋಜನಗಳು - ತುಕ್ಕು ಹಿಡಿಯುದಿಲ್ಲ

ನೀವು ಗಮನಿಸಿರಬಹುದು ಹಳೆಯ ಕಾರಿನ ಚಕ್ರಗಳು ಬೇಗನೇ ತುಕ್ಕು ಹಿಡಿದಿರುತ್ತದೆ. ಆದರೆ ಅಲಾಯ್ ವೀಲ್ ಚಕ್ರಗಳ ಬಳಕೆಯಿಂದ ತುಕ್ಕು ಹಿಡಿಯುವ ಸಾಧ್ಯತೆ ತುಂಬಾನೇ ಕಡಿಮೆಯಾಗಿರುತ್ತದೆ. ಹಾಗೆಯೇ ಧೂಳಿನ ಕಣಗಳಿಂದಲೂ ರಕ್ಷಣೆ ನೀಡುತ್ತದೆ.

ಪ್ರಯೋಜನಗಳು - ದೀರ್ಘ ಬಾಳ್ವಿಕೆ

ಪ್ರಯೋಜನಗಳು - ದೀರ್ಘ ಬಾಳ್ವಿಕೆ

ಅಲಾಯ್ ವೀಲ್ ಬಳಕೆಯಿಂದ ಚಕ್ರಗಳ ಬಾಳ್ವಿಕೆಯು ಹೆಚ್ಚುತ್ತದೆ. ಇದು ಚಕ್ರಗಳ ಉರುಳಿವಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಪ್ರಯೋಜನಗಳು - ಟ್ಯೂಬ್ ಲೆಸ್ ಚಕ್ರಗಳಿಗೆ ಸೂಕ್ತ

ಪ್ರಯೋಜನಗಳು - ಟ್ಯೂಬ್ ಲೆಸ್ ಚಕ್ರಗಳಿಗೆ ಸೂಕ್ತ

ಸಾಂಪ್ರಾದಾಯಕ ಚಕ್ರಗಳಿಗೆ ಹೋಲಿಸಿದಾಗ ಅಲಾಯ್ ವೀಲ್‌ಗಳು ಟ್ಯೂಬ್‌ಲೆಸ್ ಚಕ್ರಗಳಿಗೆ ಹೆಚ್ಚು ಸೂಕ್ತವೆನಿಸುತ್ತದೆ.

ಹಿನ್ನಡೆ - ಸ್ಟೀಲ್ ವೀಲ್‌ನಷ್ಟು ಬಲವಿಲ್ಲ

ಹಿನ್ನಡೆ - ಸ್ಟೀಲ್ ವೀಲ್‌ನಷ್ಟು ಬಲವಿಲ್ಲ

ಅಲಾಯ್ ವೀಲ್‌ಗಿಂತಲೂ ಸ್ಟೀಲ್ ಚಕ್ರಗಳು ಹೆಚ್ಚು ಬಲವನ್ನು ಹೊಂದಿರುತ್ತದೆ. ಇದು ಬಾಗುವುದು ಅಥವಾ ಬಿರುಕು ಬಿಡುವ ಸಾಧ್ಯತೆ ಕಡಿಮೆಯಾಗಿದೆ. ಹಾಗಾಗಿ ಭಾರತದಂತಹ ರಸ್ತೆ ಪರಿಸ್ಥಿತಿಯಲ್ಲಿ ಅಲಾಯ್ ವೀಲ್ ಆಯ್ಕೆ ವೇಳೆ ಹೆಚ್ಚು ಜಾಗರೂಕರಾಗಿರಬೇಕು.

ಹಿನ್ನಡೆ - ನಿರ್ಮಾಣ, ಖರೀದಿ, ರಿಪೇರಿ ವೆಚ್ಚ ಹೆಚ್ಚು

ಹಿನ್ನಡೆ - ನಿರ್ಮಾಣ, ಖರೀದಿ, ರಿಪೇರಿ ವೆಚ್ಚ ಹೆಚ್ಚು

ಅಲಾಯ್ ವೀಲ್ ನಿರ್ಮಾಣ ಹೆಚ್ಚು ಸಂಕೀರ್ಣತೆಯನ್ನು ಹೊಂದಿರುವುದರಿಂದ ಸಹಜವಾಗಿಯೇ ಸ್ಟೀಲು ವೀಲ್‌ಗಿಂತಲೂ ಶೇ. 75ರಿಂದ 80ರಷ್ಟು ಹೆಚ್ಚು ನಿರ್ಮಾಣ ವೆಚ್ಚ ಹೊಂದಿರುತ್ತದೆ. ಭಾರತದಲ್ಲಿ ಅಲಾಯ್ ವೀಲ್ ದರ ವ್ಯಾಪ್ತಿಯು 2,500 ರು.ಗಳಿಂದ 50,000 ರು.ಗಳ ವರೆಗಿದೆ. ರಿಪೇರಿ ವಿಚಾರದಲ್ಲೂ ಹೆಚ್ಚು ದುಡ್ಡು ಖರ್ಚು ಮಾಡಬೇಕಾಗುತ್ತದೆ.

ಹಿನ್ನಡೆ - ಕಳ್ಳರ ನೆಚ್ಚಿನ ಆಯ್ಕೆ

ಹಿನ್ನಡೆ - ಕಳ್ಳರ ನೆಚ್ಚಿನ ಆಯ್ಕೆ

ಮನ ಸೊರೆಗೊಯ್ಯುವ ವಿನ್ಯಾಸವನ್ನು ಹೊಂದಿರುವ ಅಲಾಯ್ ಚಕ್ರಗಳು ಬಹುಬೇಗನೇ ಕಳ್ಳರ ಪ್ರೀತಿ ಪಾತ್ರವಾಗುತ್ತದೆ. ಹಾಗಾಗಿ ಲಾಕಿಂಗ್ ನೆಟ್‌ಗಳಂತಹ ಮುಂಜಾಗ್ರತಾ ಕ್ರಮವನ್ನು ಅನುಸರಿಸಬೇಕಾಗುತ್ತದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ನಿಮ್ಮ ಕಾರಿನ ನೋಟ, ರಸ್ತೆ ಸಾನಿಧ್ಯ ಹಾಗೂ ನಿರ್ವಹಣೆಯಲ್ಲಿ ಅಲಾಯ್ ವೀಲ್‌ಗಳ ಪಾತ್ರ ನಿರ್ಣಾಯಕವೆನಿಸುತ್ತದೆ. ಹಾಗಿದ್ದರೂ ಇದು ಸ್ಟೀಲ್‌ಗಿಂತಲೂ ಕಡಿಮೆ ಬಾಳ್ವಿಕೆ ಹೊಂದಿರುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಭಾರತದಂತಹ ಒರಟಾದ ರಸ್ತೆ ಪರಿಸ್ಥಿತಿಯಲ್ಲಿ ಇದರ ಬಳಕೆಯ ಮುನ್ನ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಒಳಿತು. ಆದರೆ ಖಂಡಿತವಾಗಿಯೂ ಅತ್ಯುತ್ತಮ ಚಾಲನೆಯೊಂದಿಗೆ ರಸ್ತೆ ಸಾನಿಧ್ಯವನ್ನು ಹೆಚ್ಚಿಸಲಿದೆ.

Most Read Articles

Kannada
English summary
The Rim Reality: Advantages And Disadvantages Of Alloy Wheels
Story first published: Tuesday, December 16, 2014, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X