ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

By Nagaraja

ನಾವು ಈ ಹಿಂದೆಯೇ ಮಾಹಿತಿ ಕೊಟ್ಟಿರುವಂತೆಯೇ ಜಗತ್ತಿನ ಎರಡು ಅತಿ ದೊಡ್ಡ ವಿಹಾರ ನೌಕೆಗಳ ಪೈಕಿ 'ಎಂಎಸ್ ಅಲ್ಯೂರ್ ಆಫ್ ದಿ ಸೀಸ್' ಒಂದಾಗಿದೆ. ಇದು ಕೂಡಾ ಬಹಮಾಸ್‌ನ ರಾಯಲ್ ಕೆರೆಬಿಯನ್ ಇಂಟರ್‌ನ್ಯಾಷನಲ್ ಒಡೆತನದಲ್ಲಿದೆ.

ಇವನ್ನೂ ಓದಿ: ಜಗತ್ತಿನ 25 ಅತಿದೊಡ್ಡ ವಿಹಾರ ನೌಕೆಗಳು

ಕೆಲವು ದಿನಗಳ ಹಿಂದೆಯಷ್ಟೇ 'ಎಂಎಸ್ ಓಯಸೀಸ್ ಆಫ್ ದಿ ಸೀಸ್' ಬಗ್ಗೆ ಮಾಹಿತಿ ಕೊಟ್ಟಿದ್ದೆವು (ಇಲ್ಲಿದೆ ಓದಿ). ಇಂದಿನ ಈ ಲೇಖನದಲ್ಲಿ ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು ಅಲ್ಯೂರ್ ಆಫ್ ದಿ ಸೀಸ್ ಬಗ್ಗೆ ಸಮಗ್ರ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ತನ್ನ ಸೋದರಿ, ಓಯಸೀಸ್ ಆಫ್ ದಿ ಸೀಸ್‌ ಹಡಗಿಗಿಂತಲೂ 5 ಸೆಂಟಿಮೀಟರ್‌ಗಳಷ್ಟು ಹೆಚ್ಚು ಉದ್ದವನ್ನು ಹೊಂದಿರುವ ಅಲ್ಯೂರ್ ಆಫ್ ದಿ ಸೀಸ್ ಹಡಗು, ಸಮಾನ ವೈಶಿಷ್ಟ್ಯಗಳೊಂದಿಗೆ ನಿರ್ಮಾಣ ಮಾಡಲಾಗಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ಜಗತ್ತಿನ ಅತ್ಯಂತ ದೊಡ್ಡ ಪ್ರಯಾಣಿಕ ಹಡಗು ಸಹ ಪ್ರೊಜೆಕ್ಟ್ ಜೆನಿಸಿಸ್ ಹೆಸರಲ್ಲೇ ವಿನ್ಯಾಸಗೊಳಿಸಲಾಗಿದ್ದು, 2009ನೇ ಇಸವಿಯಿಂದ ತೊಡಗಿ ಈಗಲೂ ಸೇವೆಯಲ್ಲಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

6,390 ಪ್ರಯಾಣಿಕರನ್ನು ಹೊತ್ತೊಯ್ಯಲು ಸಾಮರ್ಥ್ಯವುಳ್ಳ ಉಲ್ಯೂರ್ ಆಫ್ ದಿ ಸೀಸ್ 2,25,282 ಟನ್ ಭಾರವನ್ನು ಹೊಂದಿದೆ. ಹಾಗೆಯೇ ಗರಿಷ್ಠ 41.9 ಕೀ.ಮೀ. (22.6 ನಾಟ್) ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ಇದರ ಆಂತರಿಕ ಭಾಗಗಳನ್ನು ಅತ್ಯಂತ ಗುಣಮಟ್ಟದ ಮರದ ಕೆತ್ತನೆಯಿಂದ ಆಲಂಕರಿಸಲಾಗಿದೆ. ಇಲ್ಲದೆ ಇದೇ ಮೊದಲ ಬಾರಿಗೆ ಸ್ಟಾರ್‌ಬಕ್ಸ್ ಈ ಹಡಗಿನಲ್ಲಿ ಆಳವಡಿಸಲಾಗಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ಅಲ್ಯೂರ್ ಆಫ್ ದಿ ಸೀಸ್ ಸಾಧನೆಗೆ ಕೈಗನ್ನಡಿಯೆಂಬಂತೆ ಟ್ರಾವೆಲ್ ವೀಕ್‌ನಿಂದ 2013ನೇ ಸಾಲಿನ 'ಅತಿಶ್ರೇಷ್ಠ ಒಟ್ಟಾರೆ ವೈಯಕ್ತಿಕ ಕ್ರೂಸ್ ಹಡಗು' ಎಂಬ ಪ್ರಶಸ್ತಿಗೂ ಭಾಜನವಾಗಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ನೀವೊಮ್ಮೆ ಈ ಹಡಗಿಗೆ ಪ್ರವೇಶಿಸಿದರೆ ಅನೇಕ ವಿನೋದ ಚಟುವಟಿಕೆಗಳು ನಿಮ್ಮನ್ನು ಹರಸಿಕೊಂಡು ಬರಲಿದೆ. ಇದರಲ್ಲಿ ಸ್ಕೇಟಿಂಗ್, ನೈಟ್ ಕ್ಲಬ್, ಡ್ಯಾನ್ಸ್ ಕ್ಲಾಸ್, ವೈನ್ ಪ್ಯಾಲೇಸ್ ಮುಂತಾದ ಸೌಲಭ್ಯಗಳು ಲಭಿಸಲಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ಇವೆಲ್ಲದರ ಹೊರತಾಗಿ ರೋಕ್ ಕ್ಲೈಬಿಂಗ್ ವಾಲ್ ಕ್ರೀಡೆಯು ಸಾಹಸಿಗರನ್ನು ಕೈಬೀಸಿ ಕರೆಯುತ್ತದೆ. ಇದು ಈ ಹಡಗನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ಹಡಗನ್ನು ಸಂಪೂರ್ಣ ಹಚ್ಚ ಹಸಿರಾಗಿಡುವ ಪ್ರಯತ್ನ ಕೂಡಾ ಮಾಡಲಾಗಿದ್ದು, ಸೆಂಟ್ರಲ್ ಪಾರ್ಕ್ ಗಿಡ ಮರಗಳಿಂದ ಶೋಭಿಸುತ್ತಿದೆ. ಇಲ್ಲಿ ರೆಸ್ಟೋರೆಂಟ್, ಶಾಪ್‌ಗಳ ಸುತ್ತಲೂ 12,000 ಸಸಿ ಹಾಗೂ 60 ಮರಗಳನ್ನು ನೆಡಲಾಗಿದೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ನೇಬರ್‌ವುಡ್ ಎಂದು ಅರಿಯಲ್ಪಡುವ ಏಳು ಥೀಮ್ ಪ್ರದೇಶಗಳಲ್ಲಿ ಅಥ್ಲೆಟಿಕ್ ಮತ್ತು ಮನರಂಜನಾ ಚಟುವಟಿಕೆಗಳು ನಡೆಯುತ್ತದೆ. ಅಲ್ಲದೆ 25 ವಿಶಿಷ್ಟ ಭೋಜನಾ ಆಯ್ಕೆಗಳಿದ್ದು, 2,384 ಮಂದಿ ನಿಮಗಾಗಿ ಸೇವಾ ನಿರತರಾಗಿರಲಿದ್ದಾರೆ.

ಜಗತ್ತಿನ ಅತಿ ದೊಡ್ಡ ಪ್ರಯಾಣಿಕ ಹಡಗು - 'ಅಲ್ಯೂರ್ ಆಫ್ ದಿ ಸೀಸ್'

ಅಂತಿಮವಾಗಿ 72 ಮೀಟರ್ ಎತ್ತರ, 362 ಮೀಟರ್ ಅಗಲವನ್ನು ಹೊಂದಿರುವ ಅಲ್ಯೂರ್ ಆಫ್ ದಿ ಸೀಸ್ ಹಡಗು, ನ್ಯೂಯಾರ್ಕ್‌ನಲ್ಲಿರುವ ಪ್ರಖ್ಯಾತ ಕ್ಲೈಸ್ಲರ್ ಬಿಲ್ಡಿಂಗ್‌ಗಿಂತಲೂ ದೊಡ್ಡದಾಗಿದೆ.

Most Read Articles

Kannada
English summary
Seven distinct neighbourhoods, 25 dining options and 2,384 people to look after your needs. All this in the middle of the ocean. This is possible on board the world's largest cruise ship - Allure Of The Seas.
Story first published: Thursday, July 10, 2014, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X