ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

By Nagaraja

ವಿಶ್ವದ ದೊಡ್ಡಣ್ಣ ಅಮೆರಿಕದ ಪಾಲಿಗೆ ಯುದ್ಧ ಎಂಬುದು ಕೇವಲ ಪ್ರಯೋಗ ಮಾತ್ರ. ನಾವು ಹೀಗೆ ಹೇಳಲು ಕಾರಣವೊಂದಿದೆ. ಮಧ್ಯ ಪೂರ್ವ ಸಿರಿಯಾ ಹಾಗೂ ಇರಾಕ್ ನಲ್ಲಿ ಐಸಿಎಸ್ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ಅಮೆರಿಕ ಕಳೆದ ವರ್ಷ ನಡೆಸಿರುವ ಕಾರ್ಯಾಚರಣೆಯಲ್ಲಿ ಪ್ರಾಚೀನ ಯುದ್ಧ ವಿಮಾನಗಳನ್ನು ಬಳಕೆ ಮಾಡಿವೆ.

Also Read: ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ?

ಇವುಗಳಲ್ಲಿ 1960ರ ದಶಕದ ವಿಯೆಟ್ನಾ ಯುದ್ಧದಲ್ಲಿ ಬಳಕೆ ಮಾಡಿರುವ ಒವಿ-10 ಬ್ರೋಂಕಸ್ ಪ್ರಮುಖವೆನಿಸಿದೆ. ಈ ಎಲ್ಲ ಅಂಶಗಳು ಈಗಷ್ಟೇ ಹೊರತಂದಿರುವುದು ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಯಾವುದೇ ಖಚಿತ ಯುದ್ಧ ತಂತ್ರವಿಲ್ಲದೆ ಅಮೆರಿಕ ಇಂತಹದೊಂದು ನೀತಿಗೆ ಮುಂದಾಗುವ ಸಾಧ್ಯತೆಯಿಲ್ಲ ಎಂಬುದಂತೂ ಸ್ಪಷ್ಟ. ಹಗುರ ಭಾರ ಹಾಗೂ ಕಡಿಮೆ ಬೆಲೆಯ ಇಂತಹ ಯುದ್ಧ ವಿಮಾನಗಳನ್ನು ಭಾರಿ ಪ್ರಮಾಣದಲ್ಲಿ ನಿರ್ಮಿಸುವ ಮೊದಲು ಸಂಭವನೀಯ ಯುದ್ಧ ಕಾಲ ಪರಿಸ್ಥಿತಿಯಲ್ಲಿ ಅದರ ಶಕ್ತಿ ಪರೀಕ್ಷೆ ನಡೆಸುವುದು ಅಮೆರಿಕದ ಉದ್ದೇಶವಾಗಿತ್ತು.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಬ್ರೋಕಂಸ್ ಯುದ್ಧ ವಿಮಾನದ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ಹಗುರ ದಾಳಿಯನ್ನಿಡುವ ಹಾಗೂ ವೀಕ್ಷಣಾ ಸಾಮರ್ಥ್ಯದ ಯುದ್ಧ ವಿಮಾನವಾಗಿದೆ. 1960ರ ದಶಕದಲ್ಲಿ ಇದನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿತ್ತು.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಇಲ್ಲಿ ಆಸಕ್ತಿದಾಯಕ ಅಂಶವೆಂದರೆ 1995ನೇ ಇಸವಿಯಲ್ಲೇ ಬ್ರೋಂಕಸ್ ಸೇವೆಯಿಂದ ನಿವೃತ್ತಿ ಪಡೆದಿತ್ತು. ಈ ಎಲ್ಲದರ ನಡುವೆ ಬ್ರೋಂಕಸ್ ಸರಣಿಯ ಆಧುನಿಕ ಯುದ್ಧ ವಿಮಾನ ಒವಿ-10 ಬ್ರೋಂಕಸ್ ಕಾರ್ಯಾಚರಣೆಗಿಳಿಸಲಾಗಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ವಾಯು ವಲಯವನ್ನು ಮುನ್ನುಗ್ಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಬ್ರೋಂಕಸ್ ಯುದ್ಧ ವಿಮಾನದ ಪ್ರಾಥಮಿಕ ಕರ್ತವ್ಯವಾಗಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಸರಿ ಸುಮಾರು ಮೂರು ಟನ್ ಗಳಷ್ಟು ಶಕ್ತಿಶಾಲಿ ಯುದ್ಧ ಸಾಮಾಗ್ರಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ಯುದ್ದ ವಿಮಾನ ಹೊಂದಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಟ್ವಿನ್ ಎಂಜಿನ್ ನಿಯಂತ್ರಿತ ಬ್ರೋಂಕಸ್, ಯುದ್ಧ ವಾಹಕ ವಿಮಾನದಿಂದಲೂ ಕಾರ್ಯಾಚರಣೆ ನಡೆಸುವಷ್ಟು ಸಮರ್ಥವಾಗಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಗಂಟೆಗೆ 560 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ಯುದ್ಧ ವಿಮಾನವನ್ನು ವಿಯೆಟ್ನಾ ಸೇರಿದಂತೆ ಹಲವು ಪ್ರಮುಖ ಯುದ್ಧಗಳಲ್ಲಿ ಅಮೆರಿಕ ಬಳಕೆ ಮಾಡಿವೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಕಳೆದ ವರ್ಷ 82 ದಿನಗಳಷ್ಟು ದೀರ್ಘ ಕಾರ್ಯಾಚರಣೆಯಲ್ಲಿ ಒವಿ-10 ಯುದ್ಧ ವಿಮಾನವು 120 ಮಿಷನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಅಮೆರಿಕ ವಿಶೇಷ ಪಡೆಗಳಿಗೆ ಸಹಾಯಿಯಾಗಿ ಕೆಳ ಮಟ್ಟದ ವಾಯು ವಲಯದಲ್ಲೂ ಹಾರಾಟ ನಡೆಸುವ ಸಾಮರ್ಥ್ಯದ ಬ್ರೋಕಂಸ್ ಯುದ್ಧ ವಿಮಾನಗಳನ್ನು ಬಳಕೆ ಮಾಡಲಾಗಿದೆ.

ಪ್ರಾಚೀನ ಯುದ್ಧ ವಿಮಾನಗಳಿಗೆ ಮೊರೆ ಹೋದ ಅಮೆರಿಕ

ಸಿರಿಯಾ ಹಾಗೂ ಇರಾಕ್ ನಲ್ಲಿ ಐಸಿಎಸ್ ಉಗ್ರರ ವಿರುದ್ಧ ಅಮೆರಿಕ ಎಫ್-15ಎಸ್ ಮತ್ತು ಎಫ್/ಎ-18ಎಸ್ ವಿಮಾನಗಳ ನೆರವನ್ನು ಪಡೆದಿತ್ತು. ಆದರೆ ಇವುಗಳ ನಿರ್ವಹಣೆ ಹೆಚ್ಚು ದುಬಾರಿಯಾಗಿರುವ ಇವುಗಳ ಬದಲಿದೆ ಬ್ರೋಂಕಸ್ ಯುದ್ಧ ವಿಮಾನ ಬಳಕೆ ಮಾಡಬಹುದೇ ಎಂಬುದನ್ನು ಅಮೆರಿಕ ಪರಿಶೀಲಿಸುತ್ತಿದೆ.

ಇವನ್ನೂ ಓದಿ...

ರಷ್ಯಾ ಯುದ್ಧ ವಿಮಾನ ಹೊಡೆದುರುಳಿಸಿದ ಟರ್ಕಿ

ಭಾರತ ಪಾಕ್ ಯುದ್ಧಕಾಲ ಪರಿಸ್ಥಿತಿ ಎದುರಾದರೆ..?

ವಿಶ್ವದ ದೊಡ್ಡಣ್ಣ ಅಮೆರಿಕ; ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ?

Most Read Articles

Kannada
Read more on ವಿಮಾನ plane
English summary
America Using Vintage Planes to Fight against ISIS?
Story first published: Friday, March 11, 2016, 9:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X