ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

By Nagaraja

ನೀವು ಈ ಮಾಹಿತಿಯನ್ನು ಕೆಲವು ವರ್ಷಗಳ ಹಿಂದೆಯೇ ಕೇಳಿರಬಹುದು. ಆದರೆ ಆರು ವರ್ಷಗಳ ಟೆಸ್ಟಿಂಗ್ ಬಳಿಕ ನೀರಲ್ಲಿ ಚಲಿಸುವ ಬಸ್ಸನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ.

ನೀರಲ್ಲಿ ಚಲಿಸುವ ಕಾರು ಹೀಗೆಲ್ಲ ಹಲವು ವಿಭಿನ್ನ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ತಂತ್ರಜ್ಞಾನ ಎಷ್ಟು ವೇಗತೆ ಪಡೆದಿದೆ ಅಂದರೆ ವಾಟರ್ ಬೋಟ್‌ಗಳನ್ನು ಮೀರಿಸುವಂತಹ ಬಸ್‌ಗಳನ್ನು ಸಿದ್ಧಪಡಿಸುವಲ್ಲಿ ಎಂಜಿನಿಯರ್‌ಗಳು ಯಶಸ್ವಿಯಾಗಿದ್ದಾರೆ.

ಆಂಪಿಕೋಚ್ ಕಂಪನಿಯು (Amphicoach Company) ಈ ಆಂಪಿಬಿಯನ್ ಬಸ್ಸನ್ನು (amphibian bus) ಅಭಿವೃದ್ಧಿಪಡಿಸಿದ್ದು, 'ಆಂಪಿಕೋಚ್ ಜಿಟಿಎಸ್-1' ಎಂದು ಅರಿಯಲ್ಪಡಲಿದೆ. ಮಾಲ್ಟಾದ ಮೆಡಿಟೇರಿಯನ್ ದ್ವೀಪದಲ್ಲಿ ಬಸ್ ತಯಾರಿಸಲಾಗಿದೆ.

ಅಂದ ಹಾಗೆ ಈ ದುಬಾರಿ ಬಸ್ ದರ ಅಂದಾಜು ಎರಡು ಕೋಟಿ ಅಸುಪಾಸಿನಲ್ಲಿದೆ. ಇದನ್ನು ಹಗುರ ಭಾರದ ಅಲ್ಯೂಮಿನಿಯಂನಿಂದ ತಯಾರಿಸಲಾಗಿದ್ದು, ಸಮುದ್ರದ ಉಪ್ಪು ನೀರಿನಿಂದ ಹಿಡಿದು ಸಾಮಾನ್ಯ ನದಿ ನೀರಿನಲ್ಲಿ ಆರಾಮದಾಯಕವಾಗಿ ಚಲಿಸಲಿದೆ.

ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

ಇನ್ನು ಪ್ರಸ್ತುತ ಬಸ್ ಭೂಪ್ರದೇಶದಲ್ಲಿ ಪ್ರತಿಗಂಟೆಗೆ ಗರಿಷ್ಠ 70 ಮೈಲ್ ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

ಖರೀದಿಗಾರರಿಗೆ 2 ಅಥವಾ 4 ವೀಲ್ ಡ್ರೈವ್ ಆಯ್ಕೆ ಲಭ್ಯವಿದ್ದು, ವಿವಿಧ ವೆರಿಯಂಟ್ ಡೀಸೆಲ್ ಎಂಜಿನ್ ಲಭ್ಯವಿರಲಿದೆ. ಹಾಗೆಯೇ ಡಿವಿಡಿ ಪ್ಲೇಯರ್, ಎಲ್‌ಸಿಡಿ ಸ್ಕ್ರೀನ್‌ಗಳಂತಹ ಐಷಾರಾಮಿ ಫೀಚರ್ಸ್‌ ಆಳವಡಿಸಲಾಗಿದೆ.

ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

ಇನ್ನು ನೀರಿನಲ್ಲಿ ಸಂಚರಿಸುವ ಸಲುವಾಗಿ ಎರಡು ಏರ್ ಜೆಟ್‌ಗಳಿವೆ. ಸ್ಕಾಟ್ಲೆಂಡ್‌ನಲ್ಲಿ ಮೊದಲ ಪ್ರಯಾಣದ ಬಳಿಕ ಚಾಲಕ ಸೇರಿದಂತೆ ಪ್ರಯಾಣಿಕರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

ನೀರಲ್ಲಿ ಸಂಚರಿಸುವ ಸಂದರ್ಭದಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಆಂಫಿಬಸ್ ಎಂದು ಅರಿಯಲ್ಪಡುವ (amfibus) ಲೈಫ್ ಜಾಕೆಟ್ ಕೂಡಾ ಆಳವಡಿಸಲಾಗಿದೆ.

ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

ಇಷ್ಟಕ್ಕೂ ಇದರ ಅಗತ್ಯವಿತ್ತೇ ಎಂಬುದು ಸಾಮಾನ್ಯ ಜನರಲ್ಲಿ ಮೂಡುತ್ತಿರುವ ಪ್ರಶ್ನೆ. ಆದರೆ ಕಂಪನಿಯ ಪ್ರಕಾರ 45 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ವಾಟರ್ ಬಸ್‌ಗೆ ಈಗಾಗಲೇ ಹಲವಾರು ಆರ್ಡರ್‌ಗಳು ಬಂದಿವೆಯಂತೆ. ಅಷ್ಟಕ್ಕೂ ನಿಮ್ಮ ಅಭಿಪ್ರಾಯವೇನು? ನಮ್ಮ ಜತೆ ಹಂಚಿಕೊಳ್ಳಿರಿ...

ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!
ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!
ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!
ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!

Most Read Articles

Kannada
English summary
Amphicoach Company has launched an amphibian bus, called the AmphiCoach GTS-1, entirely constructed on the Mediterranean island of Malta. It can travel both fresh and seawater.
Story first published: Wednesday, March 27, 2013, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X