ಹಾಗಾದ್ರೆ ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಕಾರಿಗೆ ನಂಬರ್ ಪ್ಲೇಟ್ ಇರ್ಲಿಲ್ವಾ...!?

ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ತಾವು ಬದುಕಿದ್ದ ಸಂದರ್ಭದಲ್ಲಿ ತಮ್ಮ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

Written By:

ಆಪಲ್ ಕಂಪನಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಮೊಟ್ಟ ಮೊದಲ ಹೆಸರು ಸ್ಟೀವ್ ಜಾಬ್ಸ್. ಜಗತ್ತಿನ ಶ್ರೇಷ್ಠ ಉದ್ಯಮಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಜಾಬ್ಸ್ ತಮ್ಮ ನೆಚ್ಚಿನ ಕಾರಿಗೆ ನಂಬರ್ ಪ್ಲೇಟ್ ಹಾಕಿಸಿರಲೇ ಇಲ್ಲ ಎಂಬುದು ನಂಬಲಾರದ ಸತ್ಯ.

ಸಾವಿನ ತೂಗುಕತ್ತಿಯ ಕೆಳಗೇ ಬದುಕು ದೂಡುತ್ತಾ ಜಗತ್ತಿನ ಮಾಹಿತಿ ರಂಗಕ್ಕೆ ಐಪ್ಯಾಡ್, ಐಪಾಡ್, ಐಪೊನ್ ಗಳನ್ನು ನೀಡಿದ ಅಪ್ರತಿಮ ಸಾಹಸಿ, ಸ್ಟೀವ್. ತಂತ್ರಜ್ಙಾನ ರಂಗದಲ್ಲಿ ದಂತ ಕಥೆಯಂತೆ ಬದುಕಿ 2011 ರಲ್ಲಿ ತೀರಿಹೋದ ಸ್ಟೀವ್ ಜಾಬ್ಸ್‌ದು ಹೊಸ ಅವಿಷ್ಕಾರಗಳ ಮೂಲಕ ಇಂದಿನ ತಲೆಮಾರಿನ ಹೃದಯಗಳಲ್ಲಿ ಶಾಶ್ವತ ನಿಲ್ಲುವಂತಹ ವ್ಯಕ್ತಿತ್ವ.

ಈ ವಿಚಾರಗಳು ನಮಗೆಲ್ಲರಿಗೂ ತಿಳಿದಿರುವಂತದ್ದೇ, ಆದರೆ ಈಗ ಬಂದಿರುವ ಹೊಚ್ಚ ಹೊಸ ಮಾಹಿತಿ ನಿಮ್ಮನ್ನು ಅಚ್ಚರಿಗೊಳಿಸುವುದು ಖಂಡಿತ, ಹೌದು ಸ್ಟೀವ್ ಜಾಬ್ಸ್ ತಮ್ಮ ಮರ್ಸಿಡಿಸ್ ಎಸ್ಎಲ್55 ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿರಲಿಲ್ಲ ಎಂಬುದು.

ಕ್ಯಾಲಿಫೋರ್ನಿಯಾ ಟ್ರಾಫಿಕ್ ನಿಯಮಗಳನ್ನು ದಿಕ್ಕರಿಸಿ ಈ ರೀತಿಯ ಸಾಹಸಕ್ಕೆ ಕೈ ಹಾಕಿದ್ದು ಏಕೆ ಎಂಬುದು ಇಲ್ಲಿಯವರೆಗೂ ಅರ್ಥವಾಗದ ಪ್ರೆಶ್ನೆಯಾಗಿಯೇ ಉಳಿದಿದೆ.

ಅದರಲ್ಲಿಯೂ ಕ್ಯಾಲಿಫೋರ್ನಿಯಾ ಟ್ರಾಫಿಕ್ ಪೋಲೀಸರ ಕಣ್ಣು ತಪ್ಪಿಸಿ ಸ್ಟೀವ್ ಜಾಬ್ಸ್ ಓಡಾಡಿರುವುದು, ಪೊಲೀಸ್ ಇಲಾಖೆಯ ನಿರ್ಲಕ್ಷ ಎಷ್ಟಿತ್ತೆಂಬುದು ಈ ಮೂಲಕ ಜಗತ್ತಿಗೇ ಗೊತ್ತಾಗತೊಡಗಿದೆ.

ಎಲ್ಲಿಗೇ ಹೋದರು ಸಹ ಸಾಮಾನ್ಯವಾಗಿ ಸ್ಟೀವ್ ಜಾಬ್ಸ್ ಇಷ್ಟ ಪಡುತ್ತಿದ್ದ ಕಪ್ಪು ಬಣ್ಣದ ತುಂಬು ತೋಳಿನ ಟಿ-ಶರ್ಟಿನ ಜೊತೆ ನೀಲಿ ಬಣ್ಣದ ಜೀನ್ಸ್ ಪ್ಯಾಂಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು ಜೊತೆಗೆ ತಮಗಿಷ್ಟವಾದ ಮರ್ಸಿಡಿಸ್ ಎಸ್ಎಲ್55 ಕಾರಿನಲ್ಲಿಯೇ ಹೋಗುತ್ತಿದ್ದರು.

ಆದರೆ ಹೇಗೆ ಪೋಲೀಸರ ಕಣ್ಣು ತಪ್ಪಿಸಿ ತಾವೇ ಸ್ವತಃ ನಂಬರ್ ಇಲ್ಲದ ಮರ್ಸಿಡಿಸ್ ಎಸ್ಎಲ್55 ಕಾರಿನ ಚಾಲನೆ ಮಾಡುತ್ತಿದ್ದರು ಎಂಬುದು ಎಂಬುದು ತಿಳಿದಿಲ್ಲ. ಸ್ಟೀವ್ ಜಾಬ್ಸ್ ತನ್ನ ಕಂಪನಿಯ ಅಡಿ ಬರಹ 'ಥಿಂಕ್ ಡಿಫರೆಂಟ್' ಎಂಬ ಘೋಷಣೆಯನ್ನು ಈ ವಿಚಾರದಲ್ಲೂ ಪಾಲಿಸಿರಬೇಕೇನೋ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ನಂಬರ್ ಇಲ್ಲದ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ ಬಹಳಷ್ಟು ಸಾರಿ ಕ್ಯಾಮೆರಾ ಕಣ್ಣಲಿ ಸೆರೆಯಾಗಿದ್ದು, ಈ ಬಗ್ಗೆ ಕ್ಯಾಲಿಫೋರ್ನಿಯಾ ಟ್ರಾಫಿಕ್ ಇಲಾಖೆ ಸ್ಪಷ್ಟನೆ ನೀಡಬೇಕಿದೆ.

ಎಲ್ಲರೂ ಹೇಳುವಂತೆ ಸುಪ್ರಸಿದ್ದ ವ್ಯಕ್ತಿಯಾದ ಸ್ಟೀವ್ ಜಾಬ್ಸ್ ಈ ವಿಚಾರವಾಗಿ ಅನುಮತಿ ಪಡೆದಿದ್ದರು ಎಂಬುದು, ಮತ್ತೂ ಹಲವರು ಹೇಳುವಂತೆ ಕ್ಯಾಲಿಫೋರ್ನಿಯಾ ಟ್ರಾಫಿಕ್ ಸಂಸ್ಥೆಯ ಹುಳುಕುಗಳನ್ನು ಸ್ಟೀವ್ ಜಾಬ್ಸ್ ಕಂಡುಕೊಂಡಿದ್ದರು ಈ ಕಾರಣದಿಂದ ಇಷ್ಟೆಲ್ಲಾ ಸ್ವತಂತ್ರ ಸಿಕ್ಕಿರಬಹುದು ಎನ್ನಲಾಗಿದೆ, ಆದರೆ ಇದೆಲ್ಲ ಉಹಾ ಪೋಹಾ ಎಂಬುದರಲ್ಲಿ ಎರಡು ಮಾತಿಲ್ಲ ಬಿಡಿ.

ಆದರೆ ನಿಜ ಸಂಗತಿ ಏನೆಂದರೆ, ಸ್ಟೀವ್ ಜಾಬ್ಸ್ ತಮಗೆ ಕಾರು ಬಾಡಿಗೆ ನೀಡುವ ಕಂಪೆನಿಯೊಂದಿಗಿನ ಒಪ್ಪಂದದಂತೆ ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಕಾರನ್ನು ಬದಲಾವಣೆ ಮಾಡುತ್ತಿದ್ದರು ಎನ್ನಲಾಗಿದೆ, 6 ತಿಂಗಳ ಅವಧಿ ಮುಗಿದ ನಂತರ ಅದೇ ರೀತಿಯ ಮತ್ತೊಂದು ಕಾರು ಪಡೆಯುತ್ತಿದ್ದರು ಎನ್ನಲಾಗಿದೆ.

ಅದೇನೇ ಇರಲಿ ನಿಯಮ ನಮ್ಮ ಸುರಕ್ಷತೆಗೆ ಮಾಡಿರುವಂತದ್ದು, ನಿಯಮ ಎಲ್ಲರಿಗೂ ಒಂದೇ ಎಂಬುದು ನಾವೆಲ್ಲರೂ ಅರಿತುಕೊಳ್ಳಬೇಕು.

ಹೊಚ್ಚ ಹೊಸ 2017 ಹೋಂಡಾ ಸಿವಿಕ್ ಸೆಡಾನ್ ಫೋಟೋಗಳನ್ನು ಈಗಲೇ ವೀಕ್ಷಿಸಿ.

Click to compare, buy, and renew Car Insurance online

Buy InsuranceBuy Now

Story first published: Tuesday, February 28, 2017, 17:08 [IST]
English summary
In the late Apple founder Steve Jobs car driving without a number plate information of interest to be found here.
Please Wait while comments are loading...

Latest Photos