ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಮಡಚಬಹುದಾದ ವಿದ್ಯುತ್ ಕಾರು

By Nagaraja

ಮಡಚುವ ಕಾರು, ಮಡಚುವ ಸೈಕಲ್ ಹೀಗೆ ಹಲವು ವಿಧಧ ಕಾನ್ಸಪ್ಟ್ ಹಾಗೂ ಉತ್ಪಾದಕ ಸ್ವರೂಪ ಪಡೆದ ಹಲವು ವಾಹನಗಳ ಬಗ್ಗೆ ನಾವು ಕೇಳಿರುತ್ತೇವೆ. ಸಾಮಾನ್ಯವಾಗಿ ಇಂತಹ ಮಡಚುವ ವಾಹನಗಳು ನಗರ ಪ್ರದೇಶದ ವಾಹನ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಹಾಗೂ ಕಡಿಮೆ ಪ್ರದೇಶದಲ್ಲಿ ಪಾರ್ಕಿಂಗ್ ಮಾಡುವ ವ್ಯವಸ್ಥೆಯನ್ನು ಹೊಂದಿರುತ್ತದೆ.

ಈ ಪಟ್ಟಿಗೊಂದು ನೂತು ಸೇರ್ಪಡೆಯೆಂಬಂತೆ ಅತಿ ನೂತನ ಮಡಚಬಹುದಾದ ವಿದ್ಯುತ್ ಚಾಲಿತ ಕಾರೊಂದನ್ನು ಕೊರಿಯಾ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗವು ಸಿದ್ಧಪಡಿಸಿದೆ. ಕೊರಿಯಾ ಅಡ್ವನ್ಸ್‌ಡ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿಯ (ಕೆಎಐಎಸ್‌ಟಿ) ಸಂಶೋಧನಾ ವಿಭಾಗವು ನೂತನ ವಿದ್ಯುತ್ ಚಾಲಿತ ಆರ್ಮಡಿಲೊ-ಟಿ (Armadillo-T) ಮಡಚುವ ಕಾರನ್ನು ಅಭಿವೃದ್ಧಿಪಡಿಸಿದೆ.

ಈ ಎರಡು ಸೀಟಿನ ವಿದ್ಯುತ್ ಚಾಲಿತ ಮಡಚುವ ಕಾರು ಸ್ಮಾರ್ಟ್ ಫೋನ್‌ನಿಂದಲೂ ನಿಯಂತ್ರಿಸಬಹುದಾಗಿದ್ದು, ಭವಿಷ್ಯದಲ್ಲಿ ನಗರ ಪ್ರದೇಶ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದೆ ಎಂದು ಕೆಎಐಎಸ್‌ಟಿ ಅಭಿಪ್ರಾಯಪಟ್ಟಿದೆ.

ಮಡಚುವ ತಂತ್ರಜ್ಞಾನ

ಮಡಚುವ ತಂತ್ರಜ್ಞಾನ

ಒಟ್ಟು 2.8 ಮೀಟರುಗಳಷ್ಟು ಉದ್ದವಿರುವ Armadillo-T ವಿದ್ಯುತ್ ಚಾಲಿತ ಕಾರು ಮಡಚಿದ ಬಳಿಕ 1.65 ಮೀಟರುಗಳಿಗೆ ಕುಗ್ಗುತ್ತದೆ.

ಎರಡು ಸೀಟು

ಎರಡು ಸೀಟು

ಈ ಮೈಕ್ರೊ ಎಲೆಕ್ಟ್ರಿಕ್ ಕಾರಿನಲ್ಲಿ ಚಾಲಕ ಸೇರಿದಂತೆ ಎರಡು ಜನರಿಗೆ ಸಂಚರಿಸುವ ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ. ವಿಪರೀತ ವಾಹನ ದಟ್ಟಣೆಯಿರುವ ನಗರ ಪ್ರದೇಶಗಳಲ್ಲಿ ಇದು ಸಂಚಾರ ತೊಂದರೆಯನ್ನು ನಿವಾರಿಸಲಿದೆ.

ಸ್ಮಾರ್ಟ್ ಫೋನ್ ಕಂಟ್ರೋಲ್

ಸ್ಮಾರ್ಟ್ ಫೋನ್ ಕಂಟ್ರೋಲ್

ಸದ್ಯ ಬರುತ್ತಿರುವ ಆಧುನಿಕ ಕಾರುಗಳಲ್ಲಿ ಸ್ಮಾರ್ಟ್ ಫೋನ್ ನಿಯಂತ್ರಿತ ತಂತ್ರಗಾರಿಕೆ ಆಳವಡಿಸಲಾಗುತ್ತಿದೆ. ಕಾರಿನಿಂದ ಹೊರಗಿಳಿದ ಬಳಿಕ ಚಾಲಕ ತಮ್ಮ ಸ್ಮಾರ್ಟ್ ಫೋನ್ ಮುಖಾಂತರ ದೂರದಲ್ಲೇ ನಿಂತುಕೊಂಡ ಕಾರನ್ನು ಮಡಚಬಹುದಾಗಿದೆ.

ಮೈಕ್ರೊ ಎಲೆಕ್ಟ್ರಿಕ್ ಕಾರು

ಮೈಕ್ರೊ ಎಲೆಕ್ಟ್ರಿಕ್ ಕಾರು

ನಾಲ್ಕು ಎಲೆಕ್ಟ್ರಿಕ್ ಮೋಟಾರುನಿಂದ ಶಕ್ತಿಯನ್ನು ರವಾನಿಸುವ 13.6 kWh ಬ್ಯಾಟರಿ ಪ್ಯಾಕ್‌ನಿಂದ ನಿಯಂತ್ರಿಸಲ್ಪಡುವ ಮೈಕ್ರೊ ಎಲೆಕ್ಟ್ರಿಕ್ ಕಾರು ಒಟ್ಟು 450 ಕೆ.ಜಿ ತೂಕವನ್ನು ಹೊಂದಿದೆ.

ಸೂಪರ್ ಫಾಸ್ಟ್ ಚಾರ್ಜಿಂಗ್

ಸೂಪರ್ ಫಾಸ್ಟ್ ಚಾರ್ಜಿಂಗ್

ಪ್ರಸ್ತುತ ಕಾರು ಗಂಟೆಗೆ 60 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಕೇವಲ 10 ನಿಮಿಷದೊಳಗೆ ರಿ ಚಾರ್ಜ್ ಮಾಡುವ ಸಂವಿಧಾನ ಹೊಂದಿದ್ದು, 100 ಕೀ.ಮೀ. ತನಕ ಆರಾಮದಾಯಕವಾಗಿ ಚಲಿಸಬಹುದಾಗಿದೆ.

ಆರ್ಮಡಿಲೊ-ಟಿ

ಆರ್ಮಡಿಲೊ-ಟಿ ವಿದ್ಯುತ್ ಚಾಲಿತ ಮಡಚುವ ಕಾರಿನ ವೀಡಿಯೊ ವೀಕ್ಷಿಸಿ

Most Read Articles

Kannada
English summary
Cars that fold up, to reduce the space they occupy when parked, are not new. The latest attempt comes from a research group from the Korea Advanced Institute of Science and Technology (KAIST). Its called Armadillo-T, an electric car design inspired by armadillo
Story first published: Tuesday, August 27, 2013, 9:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X