ಚಂದ್ರನಲ್ಲಿಗೆ ಆಡಿ; ಕನಸು ನನಸಾದಿತೇ?

By Nagaraja

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿಗೆ ತಲುಪಿ ಅಲ್ಲಿ ಜೀವಚರ ಹಾಗೂ ವಾಸಿಸಲು ಯೋಗ್ಯವಾದ ಪರಿಸ್ಥಿತಿಯನ್ನು ಕಂಡುಹುಡುಕುವ ಪ್ರಯತ್ನ ನಿರಂತರ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸೌರಮಂಡಲಕ್ಕೆ ಅನೇಕ ಗಗನನೌಕೆಗಳನ್ನು ಕಳುಹಿಸಿಕೊಡಲಾಗಿದೆ.

ಚಂದ್ರನ ಮೇಲ್ಮೆಗೆ ನಿರಂತರ ಅಪ್ಪಳಿಸುತ್ತಿರುವ ಧೂಮಕೇತು ಹಾಗೂ ಉಲ್ಕಾಪಿಂಡಗಳಿಂದಾಗಿ ಭಾರಿ ಗಾತ್ರದ ಗುಳಿಗಳು ಸೃಷ್ಟಿಯಾಗುತ್ತಿದೆ. ಈಗ 'ಮಿಷನ್ ಟು ಮೂನ್' ಪರಿಕಲ್ಪನೆಗೆ ಮರು ಜೀವ ತುಂಬಿರುವ ಜರ್ಮನಿಯ ಐಷಾರಾಮಿ ಆಡಿ ಸಂಸ್ಥೆಯು ಚಂದ್ರನ ಮೇಲ್ಮೆಗೆ ವಾಹನವೊಂದನ್ನು ತಲುಪಿಸಲಿದೆ.

ಚಂದ್ರನಲ್ಲಿಗೆ ಆಡಿ ಲುನಾರ್ ಕ್ಟಾಟ್ರೊ

ಇಡೀ ಸೌರಮಂಡಲದಲ್ಲಿ ಅಸಾಧ್ಯವಾದುದ್ದನ್ನು ನನಸಾಗಿಸುವ ಪರಿಕಲ್ಪನೆಯೊಂದಿಗೆ ಆಡಿ ಹೊರಟಿದೆ. ಇಂತಹದೊಂದು ಸಾಹಸ ಪ್ರಯತ್ನದಲ್ಲಿರುವ ಅರೆಕಾಲಿಕ ವಿಜ್ಞಾನಿಗಳಿಗೆ ಆಡಿ ಸಹಾಯ ಹಸ್ತ ಚಾಚಲಿದೆ.

ಚಂದ್ರನಲ್ಲಿಗೆ ಆಡಿ ಲುನಾರ್ ಕ್ಟಾಟ್ರೊ

ಇದಕ್ಕಾಗಿ 'ಆಡಿ ಲುನಾರ್ ಕ್ವಾಟ್ರೊ' ವಾಹನವನ್ನು ಸಿದ್ಧಪಡಿಸಲಾಗುತ್ತಿದೆ. ಇದು ಗೂಗಲ್ ಲುನಾರ್ ಎಕ್ಸ್ ಪ್ರೈಸ್ (Google Lunar XPRIZE ) ಸ್ಪರ್ಧೆಯ ಭಾಗವಾಗಿದ್ದು ವಿಜೇತರು 30 ಮಿಲಿಯನ್ ಅಮೆರಿಕನ್ ಡಾಲರು ಬಹುಮಾನ ಪಡೆಯಲಿದ್ದಾರೆ.

ಚಂದ್ರನಲ್ಲಿಗೆ ಆಡಿ ಲುನಾರ್ ಕ್ಟಾಟ್ರೊ

ಇಡೀ ವಾಹನ ಜಗತ್ತಿನಲ್ಲೇ ಆಡಿ ಇಂತಹದೊಂದು ಮಹತ್ತರ ಕಾರ್ಯಕ್ಕೆ ಕೈ ಹಾಕಿರುವುದು ಹೊಸ ಮೈಲುಗಲ್ಲನ್ನೇ ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 2017ರಲ್ಲಿ ಆಡಿ ಕನಸು ನನಸಾಗಲಿದೆ. ಇದಕ್ಕಾಗಿ ಸಂಪೂರ್ಣ ವಾಹನ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಚಂದ್ರನಲ್ಲಿಗೆ ಆಡಿ ಲುನಾರ್ ಕ್ಟಾಟ್ರೊ

3,80,000 ಕೀ.ಮೀ. ದೂರದಲ್ಲಿರುವ ಚಂದ್ರನಲ್ಲಿಗೆ ಕಾಲಿಡುವುದು ಅಷ್ಟು ಸುಲಭದ ಮಾತಲ್ಲ. ಮಿಷನ್ ಟು ಮೂನ್ ನನಸಾಗಿಸಲು ಆಡಿ ತನ್ನಲ್ಲಿರುವ ಎಲ್ಲ ತಂತ್ರಗಾರಿಕೆಗಳನ್ನು ಬಳಕೆ ಮಾಡಲಿದೆ. ಇದರಲ್ಲಿ ಕ್ವಾಟ್ರೊ, ಇ-ಟ್ರಾನ್, ಲೈಟ್ ವೇಟ್, ಅಲ್ಟ್ರಾ ತಂತ್ರಜ್ಞಾನಗಳು ಪ್ರಮುಖವಾಗಿದೆ.

ಚಂದ್ರನಲ್ಲಿಗೆ ಆಡಿ ಲುನಾರ್ ಕ್ಟಾಟ್ರೊ

ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಚಂದ್ರನ ಮೇಲ್ಮೆಯಲ್ಲಿ ವಾಹನಗಳನ್ನು ಇಳಿಸುತ್ತಿರುವುದು. ಇದಕ್ಕೂ ಮೊದಲು 1970ರಲ್ಲಿ ಅಮೆರಿಕದ ನಾಸಾದ ಐತಿಹಾಸಿಕ ಅಪೊಲೊ ಪ್ರೋಗ್ರಾಂ ಮುಖಾಂತರ 1972ರಲ್ಲಿ 300ಡಿಗ್ರಿಗಳಷ್ಟು ತಾಪಮಾನದ ನಡುವೆಯೂ ಅಪೊಲೊ 17 ಚಂದ್ರನನ್ನು ತಲುಪಿತ್ತು. ಈಗ 45 ವರ್ಷಗಳ ಬಳಿಕ ಹೊಸ ಗುರಿಯೊಂದಿಗೆ ಆಡಿ ಸಿದ್ಧವಾಗುತ್ತಿದೆ.

ಚಂದ್ರನಲ್ಲಿಗೆ ಆಡಿ ಲುನಾರ್ ಕ್ಟಾಟ್ರೊ

ಅರೆಕಾಲಿಕ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿರುವ ಲುನಾರ್ ವಾಹನವು, ಅನೇಕ ಪ್ರಾಯೋಗಿಕ ಪರೀಕ್ಷಾ ಹಂತಗಳನ್ನು ದಾಟಿ ಬರಬೇಕಾಗಿದೆ. ಆಡಿ ಸಂಸ್ಥೆಯ ಈ ಯೋಜನೆಯು ಯಶ ಸಾಧಿಸಲಿ ಎಂದು ನಾವು ಹಾರೈಸೋಣವೇ...

ಆಡಿ ಮಿಷನ್ ಮೂನ್ - ರೋಚಕ ವೀಡಿಯೋ ವೀಕ್ಷಿಸಿ

ಚಂದ್ರನಲ್ಲಿಗೆ ಆಡಿ - ರೋವರ್ ವಿನ್ಯಾಸ ಹೇಗೆ? ವೀಕ್ಷಿಸಿ ರೋಚಕ ವಿಡಿಯೋ


Most Read Articles

Kannada
Read more on ಆಡಿ audi
English summary
Is it a robot, is it a car? No, it's the Audi lunar quattro. Landing on the moon in 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X