ಸ್ಪೀಡ್ ಲಿಮಿಟ್ ರಹಿತ ಜಗತ್ತಿನ ಹೈಸ್ಪೀಡ್ ಹೆದ್ದಾರಿ 'ಆಟೋಬಾನ್'

By Nagaraja

ಆಟೋಬಾನ್ ಸಾರ್ವಜನಿಕ ಹೈವೇ ಜರ್ಮನಿಯಲ್ಲಿ ಸ್ಥಿತಗೊಂಡಿದೆ. ಇದು ವಿಶ್ವದಲ್ಲೇ ಅತ್ಯಂತ ವೇಗದ ಸಾರ್ವಜನಿಕ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಯಾವುದೇ ಕಡ್ಡಾಯ ಸ್ಪೀಡ್ ನಿಯಂತ್ರಣವಿರುವುದಿಲ್ಲ. ಚಾಲಕರು ತಮ್ಮ ಮನಬಂದಂತೆ ಸಂಚರಿಸಬಹುದಾಗಿದೆ. ಆದರೆ ಇತ್ತೀಚೆಗಿನ ಕಾಲಘಟ್ಟದಲ್ಲಿ ಎಚ್ಚೆತ್ತುಕೊಂಡಿರುವ ಅಲ್ಲಿನ ಆಡಳಿತ ಮಂಡಳಿಯು ನಿರ್ದಿಷ್ಠ ಪ್ರದೇಶಗಳಲ್ಲಿ ಮಾತ್ರ ಸ್ಪೀಡ್ ಲಿಮಿಟ್ ವ್ಯವಸ್ಥೆ ಏರ್ಪಡಿಸಿದೆ.

ಆಪ್ತಮಿತ್ರರ ಹೈವೇ ಪಯಣ ಈ ಬಗ್ಗೆ ಎಚ್ಚರ ವಹಿಸಿ

ಜರ್ಮನಿಯ ಆಟೋಬಾನ್ ಹೆದ್ದಾರಿಯ ಇತಿಹಾಸ ಪುಟ ತೆರೆದು ನೋಡಿದರೆ, ಅಂದಿನ ನಾಜಿ ಪಕ್ಷದ ನೇತಾರ ಅಡಾಲ್ಫ್ ಹಿಟ್ಲರ್ ಆಟೋಬಾನ್ ಹೆದ್ದಾರಿಯ ಸೂತ್ರಧಾರಿ ಎನಿಸಿಕೊಂಡಿದ್ದರು. ಎರಡನೇ ಮಹಾಯುದ್ಧ ಸಂದರ್ಭದಲ್ಲಿ ತಮ್ಮ ಸೈನ್ಯದ ಸಂಚಾರ ಅಗತ್ಯಗಳನ್ನು ಅರಿತುಕೊಂಡಿದ್ದ ಹಿಟ್ಲರ್ ಆಟೋಬಾನ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಟೋಬಾನ್

ಆಟೋಬಾನ್

ಬರ್ಲಿನ್‌ನಿಂದ ಫ್ರಂಕ್‌ಫರ್ಟ್ ವರೆಗಿನ ಎಲ್ಲ ಪ್ರಮುಖ ನಗರಗಳನ್ನು ಸುತ್ತುವರಿದಿರುವ ಈ 12,845 ಕೀ.ಮೀ. ಉದ್ದದ ಆಟೋಬಾನ್ ಹೆದ್ದಾರಿಯು ಸಂಪೂರ್ಣ ವಿದ್ಯುನ್ಮಾನ ವ್ಯವಸ್ಥೆಯಿಂದ ನಿಯಂತ್ರಿತವಾಗಿದೆ.

ಸ್ಪೀಡ್ ಲಿಮಿಟ್ ಇಲ್ಲ

ಸ್ಪೀಡ್ ಲಿಮಿಟ್ ಇಲ್ಲ

ಯಾವುದೇ ರೀತಿಯ ಸ್ಪೀಡ್ ಲಿಮಿಟ್ ಇಲ್ಲದಿರುವುದು ಆಟೋಬಾನ್ ಹೈವೇಯ ವಿಶೇಷತೆಯಾಗಿದೆ. ಆದರೆ ಕೆಲವೊಂದು ನಿರ್ದಿಷ್ಟ ಅತಿ ವಾಹನ ದಟ್ಟಣೆ, ಅಪಘಾತ ಸಂಭವನೀಯ ಪ್ರದೇಶ ಹಾಗೂ ಮಾಹಾನಗರಗಳ ಸಮೀಪದಲ್ಲಿ ಮಾತ್ರ ಸ್ಪೀಡ್ ಲಿಮಿಟ್ ಆಳವಡಿಸಲಾಗಿದೆ.

ಗರಿಷ್ಠ ವೇಗ

ಗರಿಷ್ಠ ವೇಗ

ಸ್ಪೀಡ್ ಲಿಮಿಟ್ ಕಡ್ಡಾಯವಲ್ಲದಿದ್ದರೂ ಸಹ ಇಲ್ಲಿ ಗಂಟೆಗೆ ಗರಿಷ್ಠ 130 ಕೀ.ಮೀ. ವೇಗದಲ್ಲಿ ಸಂಚರಿಸಲು ಸಲಹೆ ಮಾಡಲಾಗುತ್ತದೆ. ಈ ಮೂಲಕ ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ.

ಹೈ ಸ್ಪೀಡ್ ಕಾರು

ಹೈ ಸ್ಪೀಡ್ ಕಾರು

ಸಹಜವಾಗಿಯೇ ಐಷಾರಾಮಿ ಕಾರುಗಳ ಉತ್ಪಾದಕಾ ರಾಷ್ಟ್ರವಾಗಿರುವ ಜರ್ಮನಿಯು ವೇಗದ ಹೆಸರಿಗೆ ಹೆಸರುವಾಸಿಯಾಗಿದೆ. ಇದು ಅಮೆರಿಕಗಿಂತಲೂ ಹೆಚ್ಚು ಸುರಕ್ಷಿತ ಪಯಣ ಒದಗಿಸುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸುತ್ತವೆ.

ಗುಣಮಟ್ಟತೆ

ಗುಣಮಟ್ಟತೆ

ರಸ್ತೆಗಳ ಗುಣಮಟ್ಟತೆ ಹಾಗೂ ಅಲ್ಲಿ ಸಂಚರಿಸುವ ವಾಹನಗಳ ಗುಣಮಟ್ಟತೆಯು ಇತರ ಹೆದ್ದಾರಿಗಿಂತ ಆಟೋಬಾನ್ ಅಂತರಾಜ್ಯ ಹೆದ್ದಾರಿಯನ್ನು ವಿಭಿನ್ನವಾಗಿಸಿದೆ.

ಸೇಫ್ ಡ್ರೈವ್

ಸೇಫ್ ಡ್ರೈವ್

ಅಂದ ಹಾಗೆ ಜರ್ಮನ್ ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಅಲ್ಲಿನ ಚಾಲಕರು ಚಾಲನೆ ವೇಳೆ ತಿಂಡಿ, ಪಾನೀಯ ಸೇವಿಸುವುದಾಗಲೀ ಅಥವಾ ಫೋನ್ ಎತ್ತುವುದಾಗಲೀ ಕಾಣಸಿಗುವುದಿಲ್ಲ. ಇದು ಅಲ್ಲಿನ ಚಾಲಕರ ಏಕಾಗ್ರತೆಯನ್ನು ಸಾರುತ್ತದೆ.

ಸ್ಪೀಡ್ ಲಿಮಿಟ್ ಮುಕ್ತಾಯ

ಸ್ಪೀಡ್ ಲಿಮಿಟ್ ಮುಕ್ತಾಯ

ಜರ್ಮನಿಯ ಆಟೋಬಾನ್ ಹೈವೇಯಲ್ಲಿ ಇಂತಹದೊಂದು ಸೂಚನಾ ಫಲಕವನ್ನು ನೋಡಲು ಸಾಧ್ಯವಾದರೆ ನೀವು ಇನ್ನು ಮುಂದೆ ಮುಕ್ತವಾಗಿ ಸಂಚರಿಸಬಹುದು. ಅಂದರೆ ಇನ್ನು ಮುಂದೆ ಸ್ಪೇಡ್ ಲಿಮಿಟ್ ಇರುವುದಿಲ್ಲ. ಚಾಲಕರು ತಮ್ಮ ಲೇನ್ ತಪ್ಪದೇ ಕಾರಿನ ವೇಗವನ್ನು ಹೆಚ್ಚಿಸಬಹುದಾಗಿದೆ.

ತುರ್ತು ದೂರಾವಾಣಿ ಸಂಪರ್ಕ

ತುರ್ತು ದೂರಾವಾಣಿ ಸಂಪರ್ಕ

ಆಟೋಬಾನ್ ಹೆದ್ದಾರಿಯ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿನ ಹೈವೇ ಜಾಲದಲ್ಲಿ 16,000ದಷ್ಟು ತುರ್ತು ದೂರಾವಾಣಿ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಸೂಚನಾ ಫಲಕಗಳು ಇರಲಿದೆ.

ಪಾರ್ಕಿಂಗ್, ವಿಶ್ರಾಂತಿ, ಟ್ರಕ್ ನಿಲುಗಡೆ ವ್ಯವಸ್ಥೆ

ಪಾರ್ಕಿಂಗ್, ವಿಶ್ರಾಂತಿ, ಟ್ರಕ್ ನಿಲುಗಡೆ ವ್ಯವಸ್ಥೆ

ಇನ್ನು ದೀರ್ಘ ದೂರದ ಪಯಣದ ವೇಳೆ ಸುಸ್ತಾಗುವುದನ್ನು ತಡೆಯಲು ವಿಶ್ರಾಂತಿ ಪ್ರದೇಶ, ಪಾರ್ಕಿಂಗ್ ಹಾಗೂ ಟ್ರಕ್ ನಿಲ್ದಾಣಗಳನ್ನು ಈ ಜಾಲದಲ್ಲಿ ಏರ್ಪಡಿಸಲಾಗಿದೆ.

ಸ್ಪೀಟ್ ಲಿಮಿಟ್ ರಹಿತ ಜಗತ್ತಿನ ಹೈಸ್ಪೀಡ್ ಹೆದ್ದಾರಿ 'ಆಟೋಬಾನ್'

ಒಟ್ಟಿನಲ್ಲಿ ನೀವು ವೇಗ ಸ್ನೇಹಿಯಾಗಿದ್ದಲ್ಲಿ ಜೀವನದಲ್ಲಿ ಎಂದಾದರೂ ಒಂದು ದಿನ ಜರ್ಮನಿಯ ಆಟೋಬಾನ್ ಹೆದ್ದಾರಿಯಲ್ಲಿ ಸಂಚರಿಸಲು ಮಿಸ್ ಮಾಡದಿರಿ.

Most Read Articles

Kannada
English summary
The Autobahn! The fastest public road on planet Earth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X