ಮಲ್ಯಗೆ ಪಾಠ; ಭಾರತದ ಘನತೆ ಹೆಚ್ಚಿಸಿದ ಅಜೀಂ ಪ್ರೇಮ್ ಜೀ

By Nagaraja

ಭಾರತದ ಪ್ರಖ್ಯಾತ ವಾಣಿಜ್ಯೋದ್ಯಮಿ ಪ್ರತಿಷ್ಠಿತ ವಿಪ್ರೊ ಸಂಸ್ಥೆಯ ಸಂಸ್ಥಾಪಕರಾಗಿರುವ ಅಜೀಂ ಪ್ರೇಮ್ ಜೀ ದೇಶಕ್ಕೆ ನೀಡಿರುವ ಕೊಡುಗೆ ಅಷ್ಟಿಷ್ಟಲ್ಲ. 70ರ ಹರೆಯದಲ್ಲೂ ಅಜೀಂ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

Also Read: ದೇಶದ ಪ್ರಖ್ಯಾತ ಉದ್ಯಮಿಗಳ ಜನಪ್ರಿಯ ಕಾರುಗಳು

ಭಾರತೀಯ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿರುವ ಅಜೀಂ ಪ್ರೇಮ್ ಜೀ ಫೌಂಡೇಶನ್ ನೇತೃತ್ವದಲ್ಲಿ ಕರ್ನಾಟಕದಲ್ಲೂ ವಿಶ್ವವಿದ್ಯಾಲಯವನ್ನು ತೆರೆದುಕೊಂಡಿದೆ. ಕೋಟಿಗಟ್ಟಲೆ ರುಪಾಯಿಗಳ ಆಸ್ತಿ ಹೊಂದಿದ್ದರೂ, ಎಷ್ಟೇ ಎತ್ತರದಲ್ಲಿದ್ದರೂ ಸರಳ ಸಜ್ಜನಿಕೆಯ ವ್ಯಕ್ತಿತ್ವ ಮೈಗೂಡಿಸಿ ಬಂದಿರುವ ಅಜೀಂ ದೇಶದ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ.

ಭಾರತದ ಘನತೆ ಹೆಚ್ಚಿಸಿದ ಅಜೀಂ ಪ್ರೇಮ್ ಜೀ

ದೇಶದ ಇತರೆ ಕೋಟ್ಯಧಿಪತಿಗಳಿಗೆ ಮಾದರಿಯಾಗಿರುವ ಅಜೀಂ ಪ್ರೇಮ್ ಜೀ, ಎಂದು ಕೋಟಿ ಕೋಟಿ ರುಪಾಯಿಗಳ ಕಾರು ಇಷ್ಟಪಟ್ಟ ವ್ಯಕ್ತಿಯಲ್ಲ. ಅವರ ಸರಳ ಜೀವನ ಶೈಲಿಯೇ ಇದಕ್ಕೆ ಸಾಕ್ಷಿಯಾಗಿದೆ.

ಭಾರತದ ಘನತೆ ಹೆಚ್ಚಿಸಿದ ಅಜೀಂ ಪ್ರೇಮ್ ಜೀ

'ಪದ್ಮ ವಿಭೂಷಣ' ಸೇರಿದಂತೆ ಹಲವು ಡಾಕ್ಟರೇಟ್ ಮತ್ತು ವಿಶ್ವ ಗೌರವಗಳನ್ನು ಪಡೆದಿರುವ 70ರ ಹರೆಯದ ಅಜೀಂ ಪ್ರೇಮ್ ಜಿ ಎಕಾನಮಿ ವಿಮಾನ ಪ್ರಯಾಣವನ್ನೇ ಇಷ್ಟಪಡುತ್ತಾರೆ.

ಫೋರ್ಡ್ ಎಸ್ಕಾರ್ಟ್

ಫೋರ್ಡ್ ಎಸ್ಕಾರ್ಟ್

ಸಂಪಾದನೆಯ ಶೇಕಡಾ 25ರಷ್ಟನ್ನು ತಮ್ಮ ಸಹಾಯಾರ್ಥ ಸಂಸ್ಥೆಗಾಗಿ ಮೀಸಲಿಟ್ಟಿರುವ ಅಜೀಂ, ಬಳಕೆ ಮಾಡಿರುವ ಆರಂಭಿಕ ಕಾರುಗಳಲ್ಲಿ ಫೋರ್ಡ್ ಎಸ್ಕಾರ್ಟ್ ಒಂದಾಗಿದೆ.

ಟೊಯೊಟಾ ಕರೊಲ್ಲಾ

ಟೊಯೊಟಾ ಕರೊಲ್ಲಾ

ಬಳಿಕ ವಿಶ್ವದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿರುವ ಟೊಯೊಟಾ ಕರೊಲ್ಲಾ ಕಾರನ್ನು ಅಜೀಂ ಪ್ರೇಮ್ ಜೀ ನೆಚ್ಚಿಕೊಂಡಿದ್ದರು. ಇಲ್ಲೂ ಐಷಾರಾಮಿ ಕಾರುಗಳಿಂದ ಅಂತರ ಕಾಪಾಡಿಕೊಳ್ಳಲಾಗಿತ್ತು.

ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಬೆಂಝ್

ಸೆಕೆಂಡ್ ಹ್ಯಾಂಡ್ ಮರ್ಸಿಡಿಸ್ ಬೆಂಝ್

2014ರಲ್ಲಿ ಹೋಂಡಾ ಕರೊಲ್ಲಾ ಹಳೆಯದಾದ ಹಿನ್ನೆಲೆಯಲ್ಲಿ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಹಿತೈಷಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ಮರ್ಸಿಡಿಸ್ ಬೆಂಝ್ ಸೆಕೆಂಡ್ ಹ್ಯಾಂಡ್ ಇ ಕ್ಲಾಸ್ ಖರೀದಿಸಲು ಅಜೀಂ ನಿರ್ಧರಿಸಿದ್ದರು. ಹಳೆಯ ಕಾರು ಮಾರಾಟ ಮಾಡಲು ಇಚ್ಛಿಸುತ್ತಿದ್ದ ತಮ್ಮ ಸಂಸ್ಥೆಯ ಉದ್ಯೋಗಿಯಿಂದಲೇ ಅಜೀಂ ಈ ಕಾರನ್ನು ಖರೀದಿರಿಸಿರುವುದು ಗಮನಾರ್ಹ.

ಎಕಾನಮಿ ಕ್ಲಾಸ್

ಎಕಾನಮಿ ಕ್ಲಾಸ್

ಭಾರತದಷ್ಟೇ ಅಲ್ಲದೆ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವರಾಗಿರುವ ಅಜೀಂ ಪ್ರೇಮ್ ಜೀ 1.09 ಟ್ರಿಲಿಯನ್ ಆಸ್ತಿಗಳ ಒಡೆಯರಾಗಿರುವ ಹೊರತಾಗಿಯೂ ವಿಮಾನಗಳಲ್ಲಿ ಸಾಧಾರಣ ಎಕಾನಮಿ ಪ್ರಯಾಣವನ್ನೇ (Cattle Class) ಆಶ್ರಯಿಸಿಕೊಂಡಿದ್ದಾರೆ.

ಸಾರ್ವಜನಿಕ ಸಾರಿಗೆ

ಸಾರ್ವಜನಿಕ ಸಾರಿಗೆ

ಐಟಿ ನಗರ ಬೆಂಗಳೂರು ನಿವಾಸಿಯಾಗಿರುವ ಅಜೀಂ, ಅನೇಕ ಬಾರಿ ದೈನಂದಿನ ಪ್ರಯಾಣಕ್ಕಾಗಿ ಬಿಎಂಟಿಸಿ ಸಾರ್ವಜನಿಕ ಸಾರಿಗೆ ಮತ್ತು ಆಟೋ ರಿಕ್ಷಾಗಳನ್ನೇ ಬಳಕೆ ಮಾಡಿದ್ದರು.

ಅತಿಯಾಸೆ ಗತಿಗೇಡು

ಅತಿಯಾಸೆ ಗತಿಗೇಡು

ಇನ್ನೊಂದೆಡೆ ದುಡ್ಡನ್ನು ಮನಬಂದಂತೆ ಖರ್ಚು ಮಾಡುವ ಕೆಲವು ಉದ್ಯಮಿಗಳು ಮೂಲಕ ಸಾಲದ ಸುಳಿಗೆ ಸಿಲುಕಿ ದೇಶದಿಂದಲೇ ಪಾಲಾಯನ ಮಾಡಿರುವಂತಹ ಘಟನೆ ಎದುರಾಗಿದೆ. ಸದ್ಯ ವಿಜಯ್ ಮಲ್ಯ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿರುವಂತೆಯೇ ಭಾರತೀಯ ಬಿಲಿಯನೇರ್ ಗಳ ಎರಡು ಮುಖಗಳು ಇಲ್ಲಿ ಬಯಲಾಗುತ್ತದೆ.

ಖಾಸಗಿ ವಿಮಾನ

ಖಾಸಗಿ ವಿಮಾನ

ತಮ್ಮ ಪ್ರವಾಸಕ್ಕಾಗಿ ಐಷಾರಾಮಿ ಸೌಲಭ್ಯದ ಖಾಸಗಿ ವಿಮಾನವನ್ನೇ ಮಲ್ಯ ನೆಚ್ಚಿಕೊಂಡಿದ್ದರು. ಈಗ ಸಾಲವನ್ನು ತೀರಿಸಲು ಏರ್ ಬಸ್ ಎ319 ಖಾಸಗಿ ವಿಮಾನವನ್ನು ಅಡವಿಗಿರಿಸಬೇಕಾದ ಪರಿಸ್ಥಿತಿ ಬಂದಿದೆ.

ವಿಲಾಸಿ ನೌಕೆ

ವಿಲಾಸಿ ನೌಕೆ

95 ಮೀಟರ್ ಉದ್ದದಷ್ಟು ವಿಲಾಸಿ ನೌಕೆ ಮಲ್ಯ ಆಡಂಬರ ಜೀವನದ ಮಗದೊಂದು ಮುಖ ಛಾಯೆಯನ್ನು ಬಹಿರಂಗಪಡಿಸಿತ್ತು. ಇದರಲ್ಲಿ 10,000 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತಿಶಾಲಿ ಎಂಜಿನ್ ಬಳಕೆ ಮಾಡಲಾಗಿತ್ತು. 76 ಆತಿಥಿಗಳಿಗೆ ಪಯಣಿಸಬಹುದಾದ ಈ ಐಷಾರಾಮಿ ಯಾಚ್ಟ್ಚ್ ನಲ್ಲಿ ನಿರ್ವಹಣೆಗಾಗಿ 30 ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿತ್ತು.

ಬೆಂಟ್ಲಿ

ಬೆಂಟ್ಲಿ

ಬೆಂಗಳೂರಿನಲ್ಲಿರುವಾಗ ಆರ್ ಸಿಬಿ ತಂಡವನ್ನು ಹುರಿದುಂಬಿಸಲು ಮಲ್ಯ ಅವರು 3.1 ಕೋಟಿ ರು.ಗಳಷ್ಟು ಬೆಲೆ ಬಾಳುವ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರಲ್ಲಿ ತೆರಳುತ್ತಿದ್ದರು. ಇದರಲ್ಲಿರುವ 6.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ಡಬ್ಲ್ಯು12 ಎಂಜಿನ್ 810 ಎನ್ ಎಂ ತಿರುಗುಬಲದಲ್ಲಿ 314 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದೆ.

ಜಾಗ್ವಾರ್

ಜಾಗ್ವಾರ್

ಒಂದು ಕಾಲದಲ್ಲಿ ಜಾಗ್ವಾರ್ ಇ ಟೈಪ್ ಸಿರೀಸ್ 3 ಕನ್ವರ್ಟಿಬಲ್ ಸೇರಿದಂತೆ 260ಕ್ಕೂ ಹೆಚ್ಚು ಕಾರುಗಳಿದ್ದವು. ಇವುಗಳಲ್ಲಿ ದುಬಾರಿ ವಿಂಟೇಜ್ ಕಾರುಗಳು ಸೇರಿದ್ದವು.

ಮಲ್ಯಗೆ ಪಾಠ; ಭಾರತದ ಘನತೆ ಹೆಚ್ಚಿಸಿದ ಅಜೀಂ ಪ್ರೇಮ್ ಜೀ

ಒಟ್ಟಿನಲ್ಲಿ ಮಲ್ಯ ಪತನವು ದೇಶದ ಕೋಟ್ಯಧಿಪತಿಗಳಿಗೊಂದು ಪಾಠವಾಗಿದೆ. ಇನ್ನೊಂದೆಡೆ ಅಜೀಂ ಪ್ರೇಮ್ ಜೀ ಅವರ ಸರಳ ಜೀವನ ಶೈಲಿಯು ದೇಶದ ಜನತೆಗೆ ಮಾದರಿಯಾಗಿದೆ.

ಇವನ್ನೂ ಓದಿ...

ಸಾಲದ ಸುಳಿಯಲ್ಲಿ ಮೋಜು, ಮಸ್ತಿ; ಬ್ಯಾಡ್ ಟೈಮ್ ಫಾರ್ ಮಲ್ಯ

ಇವನ್ನೂ ಓದಿ...

ಬೀರು-ಬಾರು-ಕಾರು; ಇದು ಮಲ್ಯ ಲೈಫ್ ಸ್ಟೈಲ್

Most Read Articles

Kannada
English summary
The Car Collection Of Azim Premji - India's Under The Radar Billionaire
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X