'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

By Nagaraja

ನೀವು ಭಾರತ ವಾಹನೋದ್ಯಮವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರಖ್ಯಾತ ವಾಹನ ತಯಾರಿಕ ಸಂಸ್ಧೆಗಳು ಲಾಂಛನ ಪರಸ್ಪರ ಹಂಚಿಕೊಳ್ಳುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ಪ್ರವೃತ್ತಿಯಾಗಿದೆ. ಎರಡು ಸಂಸ್ಥೆಗಳ ಪರಸ್ಪರ ಹೊಂದಾಣಿಕೆಯಿಂದ ಲಾಂಛನವನ್ನು ಅದಲು ಬದಲು ಮಾಡಲಾಗುತ್ತದೆ. ಇದರಿಂದ ಒಂದೇ ಮಾಡೆಲ್ ಕೆಲವೊಂದು ಮಾರ್ಪಾಡುಗಳೊಂದಿಗೆ ಎರಡೆರಡು ಬಾರಿ ಮಾರಾಟಕ್ಕೆ ಬಿಡಲಾಗುತ್ತದೆ.

ಉದಾಹರಣೆಗೆ ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ. ಅಷ್ಟಕ್ಕೂ ಲಾಂಛನವನ್ನು ಹಂಚಿಕೊಳ್ಳುವದರಿಂದ ಸಂಸ್ಥೆಗೆ ಆಗುವ ಲಾಭವೇನು ನಷ್ಟಗಳೇನು ಬಲ್ಲೀರಾ? ಈ ಬಗ್ಗೆ ಗಂಭೀರವಾದ ಚಿಂತನೆಯೊಂದಿಗೆ ನಿಮ್ಮ ಡ್ರೈವ್ ಸ್ಪಾರ್ಕ್ ವಿಸೃತ ಲೇಖನದೊಂದಿಗೆ ಮುಂದೆ ಬಂದಿದೆ.

ಲಾಂಛನ ಹಂಚಿಕೆ - ಲಾಭವೇನು?

ಲಾಂಛನ ಹಂಚಿಕೆ - ಲಾಭವೇನು?

  • ಇದರಿಂದ ಹೊಸ ಮಾದರಿ ಅಭಿವೃದ್ಧಿ ಮಾಡಬೇಕಾದ ಅಗತ್ಯ ಜೊತೆಗೆ ಕಾಲವಕಾಶವನ್ನು ತಪ್ಪಿಸುತ್ತದೆ. ಇದರಿಂದ ವೆಚ್ಚ ಕಡಿತವು ಆಗುತ್ತದೆ. ಕೆಲವೊಂದು ಕಾಸ್ಮೆಟಿಕ್ (ಅಂದತೆ) ಬದಲಾವಣೆ ಮಾಡಿದರೆ ಮಾತ್ರ ಸಾಕು. ಅಲ್ಲದೆ ನೂತನ ಮಾಡೆಲ್ ಗಾಗಿ ಕೋಟಿ ಗಟ್ಟಲೆ ಹೂಡಿಕೆ ಮಾಡುವ ಅಗತ್ಯವೇ ಇರುವುದಿಲ್ಲ.
  • ಬಲ್ಲ ಮೂಲಗಳ ಪ್ರಕಾರ ನೂತನ ಮಾದರಿಯ ಅಭಿವೃದ್ಧಿಗೆ 500ರಿಂದ 800 ಕೋಟಿ ರು.ಗಳಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಇನ್ನೊಂದೆಡೆ ಲಾಂಛನ ಅದಲು ಬದಲು ಮಾಡುವುದರಿಂದ ಈ ಹೂಡಿಕೆ ವೆಚ್ಚವನ್ನು 20 ಕೋಟಿ ರು.ಗಳಿಗೆ ತಗ್ಗಿಸಬಹುದಾಗಿದೆ.
  • ಹಣಕಾಸು ದೃಷ್ಟಿಯಿಂದಲೂ ಇದು ಯೋಗ್ಯವೆನಿಸಿದ್ದು, ಸಮಾನ ತಳಹದಿಯಲ್ಲಿ ವಾಹನ ಅಭಿವೃದ್ಧಿಪಡಿಸಬಹುದಾಗಿದೆ. ಇದರಿಂದ ಬಿಡಿಭಾಗಗಳ ತೊಂದರೆ ಕಾಡದು.
  •  ಲಾಂಛನ ಹಂಚಿಕೆ - ನಷ್ಟಗಳೇನು?

    ಲಾಂಛನ ಹಂಚಿಕೆ - ನಷ್ಟಗಳೇನು?

    • ಲಾಂಛನ ಹಂಚಿಕೊಳ್ಳುವದರಿಂದ ವಿಭಿನ್ನ ಡೀಲರ್ ಶಿಪ್ ಗಳ ಅಗತ್ಯ ಬೀಳುವುದರಿಂದ ಮಾರಾಟ ವೆಚ್ಚ ಹೆಚ್ಚಾಗಲಿದೆ.
    • ಖರೀದಿಗಾರರು ಮೊದಲೇ ಇದಕ್ಕೆ ಸಮಾನವಾದ ಮಾದರಿಯನ್ನು ಪಡೆದಿರುವುದರಿಂದ ಜನಪ್ರಿಯತೆಗೆ ಧಕ್ಕೆಯುಂಟಾಗಲಿದೆ. ಇದು ಮಾರಾಟದ ಮೇಲೂ ಅಡ್ಡ ಪರಿಣಾಮ ಬೀರಲಿದೆ.
    • ಈಗ ದೇಶದಲ್ಲಿರುವ ಕೆಲವು ರಿಬ್ಯಾಡ್ಜ್ ವಾಹನಗಳ ಬಗ್ಗೆ ಮಾಹಿತಿಯನ್ನು ಪಡೆಯೋಣವೇ...

      01. ರೆನೊ ಡಸ್ಟರ್ vs ನಿಸ್ಸಾನ್ ಟೆರನೊ

      01. ರೆನೊ ಡಸ್ಟರ್ vs ನಿಸ್ಸಾನ್ ಟೆರನೊ

      ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊ ಲಾಂಛನ ಹಂಚಿಕೆಗೆ ಅತ್ಯಂತ ಹೊಸ ಸೇರ್ಪಡೆಯಾಗಿದ್ದು, ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಫ್ರಾನ್ಸ್ ಮೂಲದ ರೆನೊ ಹಾಗೂ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಗಳು ಜತೆಗಾರಿಕೆಯ ಮೂಲಕ ಈ ವಾಹನಗಳನ್ನು ಹೊರತಂದಿದೆ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ರೆನೊ ಡಸ್ಟರ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಇದೇ ಮಾದರಿಯ ಲಾಂಛನವನ್ನು ನಿಸ್ಸಾನ್ ಜೊತೆ ಹಂಚಿಕೊಳ್ಳಲಾಗಿತ್ತು. ಬಳಿಕ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ನಿಸ್ಸಾನ್ ಸಂಸ್ಥೆಯು ಟೆರನೊ ಮಾದರಿಯನ್ನು ದೇಶಕ್ಕೆ ಪರಿಚಯಿಸಿತ್ತು. ಇವೆರಡು ತನ್ನದೇ ಆದ ರೀತಿಯಲ್ಲಿ ದೇಶದಲ್ಲಿ ಗುರುತಿಸಿಕೊಂಡಿದೆ.

      02. ಟಾಟಾ ಇಂಡಿಕಾ vs ಸಿಟಿ ರೋವರ್

      02. ಟಾಟಾ ಇಂಡಿಕಾ vs ಸಿಟಿ ರೋವರ್

      ನಿಮಗಿದರ ಬಗ್ಗೆ ಮಾಹಿತಿಯಿದೆಯೇ? ಒಂದು ಕಾಲಘಟ್ಟದಲ್ಲಿ (2003-2005) ಟಾಟಾ ಇಂಡಿಕಾವು ಬ್ರಿಟನ್ ನಲ್ಲಿ ರೋವರ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ್ದವು. ಬ್ರಿಟನ್ ನ ರೋವರ್ ಬ್ರಾಂಡ್ ಟಾಟಾದಿಂದ ರಿಬ್ಯಾಡ್ಜ್ ಹಕ್ಕನ್ನು ಪಡೆಯುವ ಮೂಲಕ ತವರೂರಿನಲ್ಲಿ ಮಾರಾಟವನ್ನು ಹಮ್ಮಿಕೊಂಡಿತ್ತು.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ಆದರೆ ದುರದೃಷ್ಟವಶಾತ್ ಸಿಟಿ ರೋವರ್ ಬ್ರಿಟನ್ ನ ಹೆಸರಾಂತ ಆಟೋ ಎಕ್ಸ್ ಪ್ರೆಸ್ ನಿಯತಕಾಲಿಕದಲ್ಲಿ ಕಳೆದ 25 ವರ್ಷಗಳಲ್ಲೇ ಅತಿ ಕೆಟ್ಟ ಕಾರುಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ಅಪಕೀರ್ತಿಗೆ ಪಾತ್ರವಾಗಿತ್ತು. ಪ್ರಮುಖವಾಗಿಯೂ ನಿರ್ಮಾಣ ಗುಣಮಟ್ಟದ ಬಗ್ಗೆ ಟೀಕೆ ಮಾಡಲಾಗಿತ್ತು. ಹಾಗಿದ್ದರೂ ಅಚ್ಚರಿಯೆಂಬಂತೆ ಇದೇ ಕಾರು ವಿಶ್ವಾಸಾರ್ಹ ಸೂಚ್ಯಂಕ ಪಟ್ಟಿಯ 100 ಅತ್ಯಂತ ವಿಶ್ವಾಸಾರ್ಹ ಕಾರುಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು.

      ನಿಸ್ಸಾನ್ ಮೈಕ್ರಾ vs ರೆನೊ ಪಲ್ಸ್

      ನಿಸ್ಸಾನ್ ಮೈಕ್ರಾ vs ರೆನೊ ಪಲ್ಸ್

      ಇದು ದೇಶದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಮಾದರಿಗಳಾಗಿವೆ. ಮಾರಾಟದ ವಿಚಾರದಲ್ಲಿ ನಿಸ್ಸಾನ್ ಮೈಕ್ರಾಗಿಂತಲೂ ಕೆಳದರ್ಜೆಯಲ್ಲಿ ರೆನೊ ಪಲ್ಸ್ ಗುರುತಿಸಿಕೊಂಡಿದೆ. ಇಲ್ಲೂ ನಿಸ್ಸಾನ್ ಹಾಗೂ ರೆನೊ ಹೊಂದಾಣಿಕೆಯನ್ನು ಕಾಣಬಹುದಾಗಿದೆ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ರೆನೊ ಪಲ್ಸ್ ಹೆಚ್ಚು ಆಕ್ರಮಣಕಾರಿ ಹಾಗೂ ಕ್ರೀಡಾ ವಿನ್ಯಾಸವನ್ನು ಪಡೆದುಕೊಂಡಿದ್ದು ಆರ್ ಎಕ್ಸ್ ಝಡ್ ವೆರಿಯಂಟ್ ದೆಹಲಿ ಆನ್ ರೋಡ್ ಬೆಲೆ 7.73 ಲಕ್ಷ ರು.ಗಳಷ್ಟಿದೆ. ಇನ್ನು ಹೆಚ್ಚು ಪ್ರೀಮಿಯಂ ಆಗಿರುವ ಮೈಕ್ರಾ ಎಕ್ಸ್ ವಿ ವೆರಿಯಂಟ್ ಬೆಲೆ 8.07 ಲಕ್ಷ ರು.ಗಳಷ್ಟಿದೆ (ದೆಹಲಿ ಆನ್ ರೋಡ್). ಒಟ್ಟಿನಲ್ಲಿ ರೆನೊ ಹಾಗೂ ನಿಸ್ಸಾನ್ ಸಾಹಸವನ್ನು ಮೆಚ್ಚಲೇಬೇಕು.

      ದೇವೂ ಮ್ಯಾಟಿಜ್ vs ಷೆವರ್ಲೆ ಸ್ಪಾರ್ಕ್

      ದೇವೂ ಮ್ಯಾಟಿಜ್ vs ಷೆವರ್ಲೆ ಸ್ಪಾರ್ಕ್

      ಲಾಂಛನ ಹಂಚಿಕೆಗೆ ನಮ್ಮ ಮುಂದೆ ಸಿಗುವ ಇನ್ನೊಂದು ಉದಾಹರಣೆ ದೇವೂ ಮ್ಯಾಟಿಜ್ ಹಾಗೂ ಷೆವರ್ಲೆ ಸ್ಪಾರ್ಕ್ ಆಗಿವೆ. ಪ್ರಸ್ತುತ ಕಾರು ದೇಶದಲ್ಲಿ ಮೊದಲ ಬಾರಿಗೆ ದೇವೂ ಬ್ರಾಂಡ್ ನಿಂದ ಕಾಣಸಿಗುತ್ತಿತ್ತು. ಬಳಿಕ 2002ರಲ್ಲಿ ಈ ಕೊರಿಯಾ ಸಂಸ್ಥೆಯನ್ನು ಜನರಲ್ ಮೋಟಾರ್ಸ್ ಖರೀದಿಸಿತ್ತು.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ವಿಶೇಷವೆಂದರೆ ಈಗಲೂ ಷೆವರ್ಲೆ ಸ್ಪಾರ್ಕ್ ಮಾರಾಟದಲ್ಲಿದೆ. ಇನ್ನೊಂದೆಡೆ ದೇವೂ ಮಾರಾಟ ನಿಂತು ಹೋಗಿದೆ. ಹಲವಾರು ಬದಲಾವಣೆಗಳನ್ನು ಕಂಡಿರುವ ಸ್ಪಾರ್ಕ್ ಈಗ ಆಧುನಿಕತೆಗೆ ತಕ್ಕಂತೆ ವಿನ್ಯಾಸವನ್ನು ಪಡೆದುಕೊಂಡಿದೆ.

      ಡೇಸಿಯಾ/ರೆನೊ ಲೋಗನ್ vs ಮಹೀಂದ್ರ ವೆರೆಟೊ

      ಡೇಸಿಯಾ/ರೆನೊ ಲೋಗನ್ vs ಮಹೀಂದ್ರ ವೆರೆಟೊ

      ಸಾಮಾನ್ಯವಾಗಿ ಎರಡು ಸಂಸ್ಥೆಗಳ ಪಾಲುದಾರಿಕೆಯಲ್ಲಿ ಲಾಂಛನ ಹಂಚುವ ಪ್ರಕ್ರಿಯೆ ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ಮಾಹಿತಿಗಾಗಿ 2005ರಲ್ಲಿ ರೆನೊ ಜೊತೆ ದೇಶದ ಎಸ್ ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಹೊಂದಾಣಿಕೆ ಮಾಡಿಕೊಂಡಿತ್ತು. ಇದಾದ ಬಳಿಕ 2007ರಲ್ಲಿ ರೆನೊ ಲೋಗನ್ ಬಿಡುಗಡೆಯಾಗಿತ್ತು. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿದಷ್ಟು ಮಟ್ಟದಲ್ಲಿ ಯಶ ಸಾಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ಆದರೆ 2010ರಲ್ಲಿ ರೆನೊ ಜೊತೆಗಿನ ಪಾಲುದಾರಿಕೆಯನ್ನು ಮಹೀಂದ್ರ ಕಡಿತುಕೊಂಡಿತ್ತು. ಆದರೆ ಮಾರಾಟ ಹಕ್ಕನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. ಅಲ್ಲದೆ ಮಹೀಂದ್ರ ಕೆಲವೊಂದು ಬದಲವಾವಣೆಯೊಂದಿಗೆ ಮಹೀಂದ್ರ ವೆರಿಟೊ ಎಂಬ ಆಕರ್ಷಕ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಸ್ವಲ್ಪ ವರ್ಷಗಳ ಬಳಿಕ ಇದು ಹೊಸ ರೂಪ ಪಡೆದುಕೊಂಡು ವೆರಿಟೊ ವೈಬ್ ರೂಪದಲ್ಲೂ ಮಾರುಕಟ್ಟೆ ತಲುಪಿತ್ತು.

      ಸ್ಕೋಡಾ ರಾಪಿಡ್ vs ಫೋಕ್ಸ್ ವ್ಯಾಗನ್ ವೆಂಟೊ

      ಸ್ಕೋಡಾ ರಾಪಿಡ್ vs ಫೋಕ್ಸ್ ವ್ಯಾಗನ್ ವೆಂಟೊ

      ಲಾಂಛನ ಅದಲು ಬದಲು ಮಾಡುವ ಪ್ರಕ್ರಿಯೆ ಪ್ರೀಮಿಯಂ ವಾಹನ ವಿಭಾಗವನ್ನು ಬಿಟ್ಟಿಲ್ಲ ಎಂಬುದು ಇಲ್ಲಿ ಮಹತ್ವವೆನಿಸುತ್ತದೆ. ಮೂಲತ: ಫೋಕ್ಸ್ ವ್ಯಾಗನ್ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಸ್ಕೋಡಾ ಮಾರಾಟದ ದೃಷ್ಟಿಕೋನದಲ್ಲಿ ತನ್ನ ಬ್ಯಾಡ್ಸ್ ಅನ್ನು ಹಂಚಿಕೊಂಡಿದೆ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ಸ್ಕೋಡಾ ರಾಪಿಡ್ ಗೆ ಹೋಲಿಸಿದರೆ ದೇಶದಲ್ಲಿ ಫೋಕ್ಸ್ ವ್ಯಾಗನ್ ವೆಂಟೊ ಮಾರಾಟ ಅತ್ಯಂತ ಕಳಪೆ ಮಟ್ಟದಲ್ಲಿದೆ. ಬಹುಶ: ಲಾಂಛನ ಮರು ಹಂಚಿಕೆ ಇಲ್ಲಿ ಅಡ್ಡ ಪರಿಣಾಮ ಬೀರಿತೇ? ಎಂಬುದು ಚರ್ಚೆಯ ವಿಷಯವಾಗಿದೆ.

      ಸುಬರು ಫೋರೆಸ್ಟರ್ vs ಷೆವರ್ಲೆ ಫೋರೆಸ್ಟರ್

      ಸುಬರು ಫೋರೆಸ್ಟರ್ vs ಷೆವರ್ಲೆ ಫೋರೆಸ್ಟರ್

      2004ರಿಂದ 2007ನೇ ಅವಧಿಯಲ್ಲಿ ಈ ವಾಹನಗಳು ದೇಶದಲ್ಲಿ ಮಾರಾಟವಾಗುತ್ತಿದ್ದವು. ಭಾರತೀಯ ರಸ್ತೆಗೆ ಅತಿ ಹೆಚ್ಚು ಹೊಂದಿಕೆಯಾಗುವ ಈ ಮಾದರಿಗಳು ಸದ್ಯ ಮಾರಾಟದಲ್ಲಿಲ್ಲ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ಆದರೆ ಅತ್ಯುತ್ತಮ ಗ್ರೌಂಡ್ ಕ್ಲಿಯರನ್ಸ್ ಹೊಂದಿರುವ ಹೊರತಾಗಿಯೂ ಬೆಲೆ ಸ್ವಲ್ಪ ದುಬಾರಿಯಾಗಿರುವುದು ಎರಡು ಮಾದರಿಗಳ ಹಿನ್ನೆಡೆಗೆ ಕಾರಣವಾಗಿತ್ತು.

      ಫಿಯೆಟ್ 1100 ಡಿ vs ಪ್ರೀಮಿಯರ್ ಪದ್ಮಿನಿ

      ಫಿಯೆಟ್ 1100 ಡಿ vs ಪ್ರೀಮಿಯರ್ ಪದ್ಮಿನಿ

      ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಪ್ರೀಮಿಯರ್ ಪದ್ಮನಿ ಮೂಲ ಕೂಡಾ ಫಿಯೆಟ್ ನಿಂದಾಗಿದ್ದು, ರಿ ಬ್ಯಾಡ್ಜ್ ಎಂಜಿನಿಯರಿಂಗ್ ತಂತ್ರಗಾರಿಕೆಗೆ ಉತ್ತಮ ಉದಾಹರಣೆಯಾಗಿದೆ. ಇದು 1964ರಿಂದ 2000ರ ವರೆಗಿನ ಅವಧಿಯಲ್ಲಿ ನಿರ್ಮಾಣವಾಗಿತ್ತು.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ಆರಂಭದಲ್ಲಿ ಅತ್ಯುತ್ತಮ ಮಾರಾಟ ಕಂಡಿರುವ ಈ ಪದ್ಮನಿ ಕಾರು ಬಳಿಕ ಮಾರುತಿ ಸುಜುಕಿಗಳಂತಹ ಹೆಚ್ಚಿನ ಇಂಧನ ಕ್ಷಮತೆಯ ಆಧುನಿಕ ಕಾರುಗಳ ಆಗಮನದೊಂದಿಗೆ ಯುಗಾಂತ್ಯವಾಗಿತ್ತು.

      ಮೋರಿಸ್ ಆಕ್ಸ್ ಫಾರ್ಡ್ vs ಹಿಂದೂಸ್ತಾನ್ ಅಂಬಾಸಿಡರ್

      ಮೋರಿಸ್ ಆಕ್ಸ್ ಫಾರ್ಡ್ vs ಹಿಂದೂಸ್ತಾನ್ ಅಂಬಾಸಿಡರ್

      ಅಷ್ಟಕ್ಕೂ ದೇಶದ ರಸ್ತೆಗಳ ರಾಜ ಅಂಬಾಸಿಡರ್ ಮೂಲ ವಿನ್ಯಾಸ ಎಲ್ಲಿಂದ ಬಂತು? ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮಾದರಿಯನ್ನು ಹೋಲುವ ಅಂಬಾಸಿಡರ್ 1958ರ ಇಸವಿಯಿಂದಲೇ ಮಾರಾಟದಲ್ಲಿದೆ. ಅಂದರೆ ನಮ್ಮ ದೇಶದಲ್ಲಿ ಲಾಂಛನ ಹಂಚಿಕೆ ಬಹಳ ಹಿಂದಿನಿಂದಲೇ ಜಾರಿಯಲ್ಲಿತ್ತು ಎಂಬುದಕ್ಕೆ ಇಂದೊಂದು ಉತ್ತಮ ನಿದರ್ಶನವಾಗಿದೆ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ತದಾ ಬಳಿಕ ಅಂಬಾಸಿಡರ್ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ತರಲಾಯಿತು. ಹಾಗಿದ್ದರೂ ತನ್ನ ಜೀವಮಾನ ಪರ್ಯಂತ ಮೋರಿಸ್ ಎಕ್ಸ್ ಫರ್ಡ್ ಮೂಲ ವಿನ್ಯಾಸವನ್ನು ಕಾಯ್ದುಕೊಂಡಿರುವುದು ಇಂದಿಗೂ ವಿಶೇಷ.

      'ಲಾಂಛನ ಹಂಚಿಕೆ' ಲಾಭವೇನು ನಷ್ಟಗಳೇನು?

      ಈಗ ವಾಹನ ಸಂಸ್ಥೆಗಳ ಲಾಂಛನ ಹಂಚಿಕೆ ಮಾರಾಟ ತಂತ್ರಗಾರಿಕೆಯ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
Read more on ಕಾರು car talk
English summary
Ever wondered why the Renault Duster and the Nissan Terrano look so similar? Well, that's because they're exactly the same vehicle, but sold under two different brand names. So what's the deal?
Story first published: Wednesday, May 20, 2015, 9:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X