'ಬಾಹುಬಲಿ' ಸೂಪರ್ ಹಿಟ್; ಪ್ರಭಾಸ್ ಅದೃಷ್ಟ ಖುಲಾಯಿಸಿತೇ?

By Nagaraja

'ಬಾಹುಬಲಿ' ಎಂಬ ಸೂಪರ್ ಡ್ಯೂಪರ್ ಹಿಟ್ ಚಿತ್ರದ ಮುಖಾಂತರ ಭಾರತೀಯ ಸಿನೆಮಾ ರಂಗವನ್ನು ದೇಶೀಯ ಸೇರಿದಂತೆ ಅಂತರಾಷ್ಟ್ರೀಯ ಚಲನಚಿತ್ರ ರಂಗದಲ್ಲೇ ಮತ್ತಷ್ಟು ಉತ್ತುಂಗಕ್ಕೇರಿಸುವಂತೆ ಮಾಡಿರುವ ಚಿತ್ರದ ನಿರ್ಣಾಯಕ ಪಾತ್ರಧಾರಿ ಕಾಲಿವುಡ್ ನಟ ಸೂಪರ್ ಸ್ಟಾರ್ ಪ್ರಭಾಸ್ ಅವರಿಗೀಗ ಎಲ್ಲ ವಿಭಾಗದಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Also Read : ಸೆಲೆಬ್ರಿಟಿ ಕಾರು ಕಲೆಕ್ಷನ್

ಪೌರಾಣಿಕ ಹಾಗೂ ಕಾಲ್ಪಿನಿಕ ಚಿತ್ರಗಳನ್ನು ನಿರ್ಮಿಸುವಲ್ಲಿ ಹೆಸರು ಮಾಡಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಹೈ ಬಜೆಟ್ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಅವರ ಸಂಪೂರ್ಣ ಅಭಿನಯ ಕೌಶಲ್ಯ ಪ್ರದರ್ಶನಕ್ಕಿಡಲಾಗಿತ್ತು. ಇದರಂತೆ ಒಂದರ ಮೇಲೆ ಒಂದರಂತೆ ದಾಖಲೆಗಳನ್ನು ಮುರಿದು ಬಂದಿರುವ ಬಾಹುಬಲಿ ಚಿತ್ರದ ಹೀರೊ ಪ್ರಭಾಸ್ ಅತಿ ದುಬಾರಿ ಕಾರೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಒಂದೇ ವಾರದಲ್ಲಿ ಪಿಕೆಗಳಂತಹ ಬಾಲಿವುಡ್ ಚಿತ್ರದ ಗಳಿಕೆಯನ್ನು ಹಿಂದಿಕ್ಕಿರುವ ಬಾಹುಬಲಿ ಈಗಾಗಲೇ 200 ಕೋಟಿಗಿಂತಲೂ ಹೆಚ್ಚು ಗಳಿಕೆಯನ್ನು ಸಂಪಾದಿಸಿದೆ. ಅಂದ ಹಾಗೆ ತೆಲುಗು ನಟ ಪ್ರಭಾಸ್ ಅವರು ಜಾಗ್ವಾರ್ ಎಕ್ಸ್ ಜೆ ಐಷಾರಾಮಿ ಕಾರನ್ನು ಹೊಂದಿದ್ದಾರೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಇದುವರೆಗೆ ಭಾರತದ ಅತ್ಯಂತ ಹೆಚ್ಚು ಬಜೆಟ್ ಚಿತ್ರವಾದ (250 ಕೋಟಿ ರು. ) ಬಾಹುಬಲಿ ಚಿತ್ರದ ಯಶಸ್ಸಿನ ಬಳಿಕವೂ ತಮ್ಮ ಮೃದು ಸ್ವಭಾವವನ್ನೇ ತಮ್ಮದಾಗಿಸಿಕೊಂಡಿರುವ ಪ್ರಭಾಸ್, ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಜಾಗ್ವಾರ್ ಕಾರನ್ನು ಹೆಚ್ಚು ಇಷ್ಟಪಡುತ್ತಾರೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಕೋಟಿ ದುಬಾರಿಯ ಜಾಗ್ವಾರ್ ಎಕ್ಸ್‌ಜೆ ಕಾರಿನಲ್ಲಿ ಅತ್ಯುನ್ನತ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ. ಇದರ ಮೆತ್ತನೆಯ ಲೆಥರ್ ಸೀಟುಗಳು ಆರಾಮದಾಯಕ ಪಯಣವನ್ನು ಖಾತ್ರಿಪಡಿಸುತ್ತದೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್, ಇಬಿಡಿ, ಕ್ರೂಸ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್, ಅಡ್ವಾನ್ಡ್ ಬ್ರೇಕಿಂಗ್ ಸಿಸ್ಟಂ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಮುಂತಾದ ವ್ಯವಸ್ಥೆಗಳಿರಲಿದೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಭಾರತದಲ್ಲಿ ಜಾಗ್ವಾರ್ ಎಕ್ಸ್‌ಜೆ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ಮಾರಾಟವಾಗುತ್ತಿದೆ. ಇವೆರಡು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಇದರಲ್ಲಿ ಆಳವಡಿಸಲಾಗಿರುವ 2993 ಸಿಸಿ ಎಂಜಿನ್ ಡೀಸೆಲ್ ಎಂಜಿನ್ 275 ಅಶ್ವಶಕ್ತಿ (600 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 5000 ಸಿಸಿ ಪೆಟ್ರೋಲ್ ಎಂಜಿನ್ 385 ಅಶ್ವಶಕ್ತಿ (515 ಎನ್ಎಂ ತಿರುಗುಬಲ) ಉತ್ಪಾದಿಸಲಿದೆ.

ಪ್ರಭಾಸ್ ಅದೃಷ್ಟದ ಕಾರು - ಜಾಗ್ವಾರ್ ಎಕ್ಸ್‌ಜೆ

ಒಟ್ಟಾರೆಯಾಗಿ ಬಾಹುಬಲಿ ಯಶಸ್ಸಿನ ಬಳಿಕ ಪ್ರಭಾಸ್ ಅದೃಷ್ಟವೂ ಖುಲಾಯಿಸಿದೆ. ಅಂತೆಯೇ ಸದ್ಯದಲ್ಲೇ ಪ್ರಭಾಸ್ ಕಾರು ಸಂಗ್ರಹಾಲಯಕ್ಕೆ ಮತ್ತಷ್ಟು ದುಬಾರಿ ಕಾರುಗಳು ಬಂದು ಸೇರುವ ಸಾಧ್ಯತೆಯಿದೆ.

ಇವನ್ನೂ ಓದಿ

ಪರಿಸರ ಸ್ನೇಹಕ್ಕೆ ಅಜಿತ್ ಶರಣು

Most Read Articles

Kannada
English summary
Bahubali Hero Prabhas Car Jaguar XJ
Story first published: Friday, July 17, 2015, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X