ಈ ಹೆಲಿಕಾಪ್ಟರ್ ಹತ್ತುವುದಕ್ಕೆ ಖಂಡಿತ ಎರಡು ಗುಂಡಿಗೆ ಇರಬೇಕು ಬಿಡಿ !!

Written By:

ಕೃತಕ ಬುದ್ಧಿಶಕ್ತಿ ಹೊಂದಿರುವ ಕಾರುಗಳ ಮೇಲೆ ಈಗಾಗಲೇ ಕಂಪನಿಗಳು ಕಾರು ತಯಾರಿಸಿ ಹಲವು ರೀತಿಯ ಪರೀಕ್ಷೆ ನೆಡೆಸುತ್ತಿರುವ ಹೊತ್ತಿನಲ್ಲೇ ಈಗೊಂದು ಸಿಹಿ ಸುದ್ದಿ ಹೊರಬಿದ್ದಿದೆ.

ತಂತ್ರಜ್ಞಾನ ಎಷ್ಟೇ ಬೆಳೆದರೂ ಅದನ್ನು ನಿಯಂತ್ರಿಸಲು ಮನುಷ್ಯ ಅತ್ಯವಶ್ಯಕ ಎನ್ನುವವರಿಗೆ ಈ ವಿಷ್ಯ ಖಂಡಿತ ಉತ್ತರ ನೀಡುವುದರಲ್ಲಿ ಸಂಶಯವಿಲ್ಲ. ಈ ತಂತ್ರಜ್ಞಾನ ಎಂಬುದು ಎಷ್ಟರ ಮಟ್ಟಿಗೆ ಮನುಷ್ಯನ ಕೆಲಸಕ್ಕೆ ಕುತ್ತು ತರುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

ಇನ್ಮೇಲೆ ಚಾಲಕನಿಲ್ಲದ ವಿಮಾನದಲ್ಲಿ ನೀವ್ ಹೋಗುವ ಕಾಲ ಸನ್ನಿಹಿತವಾಗಿದೆ. ಹೌದು, ನಾವು ಹೇಳುವ ವಿಚಾರ ನಿಮಗೆ ಆಶ್ಚರ್ಯ ಆಗಬಹುದು ಆದರೆ ಖಂಡಿತ ಮನಸ್ಸಿನ ಮೂಲೆಯಲ್ಲಿ ಭಯ ಶುರುವಾಗುವುದಂತೂ ಖಂಡಿತ.

ಈ ವಿಚಾರ ಹೆಚ್ಚಿನ ಜನಕ್ಕೆ ಖುಷಿಯ ಜೊತೆ ಪ್ರಾಣ ಭೀತಿ ಹುಟ್ಟಿಸಿರುವುದಂತೂ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಜಗತ್ತಿನ ಶ್ರೇಷ್ಠ ವಿಮಾನ ತಯಾರಕ ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿ, ಕೃತಕ ಬುದ್ಧಿಶಕ್ತಿ ಹೊಂದಿರುವ ಹೆಲಿಕಾಪ್ಟರ್ ತಯಾರಿಸಿದೆ.

ಕೃತಕ ಬುದ್ಧಿಶಕ್ತಿ ಹೊಂದಿರುವ ಹೆಲಿಕಾಪ್ಟರ್ ಉತ್ಪಾದನೆಯಲ್ಲಿ ಬೆಲ್ ಕಂಪನಿಯ ಮೊದಲ ಪ್ರಯತ್ನ ಇದಾಗಿದ್ದು, ಈ ಮೊದಲ ಪ್ರಯತ್ನಕ್ಕೆ ಎಫ್.ಸಿ.ಎಕ್ಸ್-001 ಎಂದು ಹೆಸರಿಡಲಾಗಿದೆ.

ಇತ್ತೀಚೆಗೆ, ಟೆಕ್ಸಾಸ್ ನಲ್ಲಿ ನೆಡೆದ ಹೆಲಿ-ಎಕ್ಸ್ ಪೋದಲ್ಲಿ ಈ ಕೃತಕ ಬುದ್ಧಿಶಕ್ತಿಯೊಂದಿಗೆ ಕಾರ್ಯಾಚರಣೆ ನೆಡೆಸುವ ಹೆಲಿಕಾಪ್ಟರ್ ಪ್ರದರ್ಶನ ಮಾಡಲಾಗಿತ್ತು. ಆರು ತಿಂಗಳ ಹಿಂದೆ ಈ ವಿಚಾರವಾಗಿ ಒಂದು ಸುಭದ್ರ ತಂಡವೊಂದನ್ನು ಕಟ್ಟಿದ ಬೆಲ್ ಕಂಪನಿ, ಕೃತಕ ಬುದ್ಧಿಶಕ್ತಿ ಬಗ್ಗೆ ಅಧ್ಯಯನ ನೆಡೆಸಲು ಶುರು ಮಾಡಿತ್ತು.

ಕೊನೆಗೂ ಈ ವಿಚಾರವಾಗಿ ಸಿಹಿ ಸುದ್ದಿ ಕೊಟ್ಟ ಕಂಪನಿ, ಈ ಮೂಲಕ ತಾವು ಎಲ್ಲಾ ವರ್ಗಕ್ಕೂ ಸಲ್ಲುತ್ತೇವೆ ಎಂಬುದನ್ನು ಸಾರಿ ಹೇಳಿದೆ.

ಈ ಹೆಲಿಕಾಪ್ಟರ್ ಹೈಬ್ರಿಡ್ ಪವರ್ ಸಿಸ್ಟಮ್ ಹೊಂದಿದ್ದು, ಅತ್ಯುತ್ತಮ ಸಹ ಪೈಲಟ್ ಆಗಿ ಕಾರ್ಯನಿರ್ವಹಿಸುವಷ್ಟು ಬುದ್ದಿ ಶಕ್ತಿ ಹೊಂದಿದೆ.

ಈ ಹೆಲಿಕಾಪ್ಟರ್ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ತಂತ್ರಜ್ಞಾನ ಹೊಂದಿರುವ ವಾಹನ ಎನ್ನಿಸಿಕೊಳ್ಳಲು ಕಂಪನಿ ಹೆಚ್ಚು ಶ್ರಮ ವಹಿಸಿದ್ದು, ವಿರುದ್ಧವಾಗಿ ಹೊರಹೊಮ್ಮುವ ತಿರುಗುಬಲ ವ್ಯವಸ್ಥೆ ಹೊಂದಿದೆ. ಇದರಿಂದಾಗಿ ಹೆಚ್ಚಿನ ಮಟ್ಟದ ಸುರಕ್ಷತೆ ಪಡೆಯಲಿದ್ದು ಜೊತೆಗೆ ಸಾಮರ್ಥ್ಯ ವೃದ್ಧಿಯಾಗಲಿದೆ.

ಅದೇನೇ ಇರಲಿ, ಮೊದ್ಲೇ ವಿಮಾನ, ರಾಕೆಟ್, ಹೆಲಿಕ್ಯಾಪ್ಟರ್ ಅಂದ್ರೆ ಕೆಲವೊಮ್ಮೆ ಖಂಡಿತ ಭಯ ಆಗುವುದುಂಟು, ಅದರಲ್ಲಿಯೂ ಈ ರೀತಿಯ ಪೈಲಟ್ ಇಲ್ಲದ ಹೆಲಿಕ್ಯಾಪ್ಟರ್ ಹತ್ತುವುದಕ್ಕೆ ಖಂಡಿತ ಎರಡು ಗುಂಡಿಗೆ ಇರಬೇಕು ಬಿಡಿ !!

Story first published: Wednesday, March 15, 2017, 17:22 [IST]
English summary
Bell concept Helicopter Unveiled at Heli-Expo 2017 in Dallas, Texas, the rotorcraft concept features an airframe crafted from sustainable materials, a hybrid power system, an artificial intelligence co-pilot, and morphing rotor blades that change to suit different flight conditions.
Please Wait while comments are loading...

Latest Photos