ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಯಾವುದೇ ನೈಸರ್ಗಿಕ ವಿಕೋಪವಿಲ್ಲದೆ ಬರ್ಮುಡಾ ತ್ರಿಕೋನದಲ್ಲಿ ಹಾದು ವಿಮಾನ ಮತ್ತು ಹಡಗುಗಳು ನಿಗೂಢ ರೀತಿಯಿಲ್ಲ ಕಣ್ಮರೆಯಾಗುತ್ತಿರುವುದು ವಿಜ್ಞಾನ ಲೋಕಕ್ಕೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.

By Nagaraja

ಉತ್ತರ ಅಟ್ಲಾಂಟಿಕ್ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ ಬರ್ಮುಡಾ ತ್ರಿಕೋನ ಹಲವಾರು ವೈಜ್ಞಾನಿಕತೆಗಳಿಗೆ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕಾಗಿ ಹಲವಾರು ನಿಗೂಢತೆಗೆ ಸಾಕ್ಷಿಯಾಗಿರುವ ಬರ್ಮುಡಾ ತ್ರಿಕೋನ 'ಸೈತಾನನ ತ್ರಿಕೋನ' ಎಂಬುದಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ಹಾದು ಹೋಗುವ ವಿಮಾನಗಳು, ಹಡಗುಗಳು ಯಾವುದೇ ನೈಸರ್ಗಿಕ ವಿಕೋಪವಿಲ್ಲದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಯಾವುದೇ ಕ್ಲಿಷ್ಟಕರ ಪ್ರಶ್ನೆಗಳಿಗೂ ವೈಜ್ಞಾನಿಕವಾಗಿ ಉತ್ತರ ನೀಡುವ ಅದೆಷ್ಟೊ ವಿಜ್ಞಾನಿಗಳು ಬರ್ಮುಡಾ ತ್ರಿಕೋನದ ಹಿಂದಿನ ರಹಸ್ಯವನ್ನು ಭೇಧಿಸುವಲ್ಲಿ ವಿಫಲರಾಗುತ್ತಿದ್ದಾರೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಪರಿಣಿತಿ ಪಡೆದ ಪೈಲಟ್ ಹಾಗೂ ಚಾಲಕರಿದ್ದರೂ ವಿಮಾನ ಮತ್ತು ಹಡಗುಗಳು ನಿಗೂಢ ನಿಗೂಢ ರೀತಿಯಲ್ಲಿ ಹೇಗೆ ಕಣ್ಮರೆಯಾಗುತ್ತದೆ ಎಂಬುದು ವಿಜ್ಞಾನ ಲೋಕಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಕಳೆದೊಂದು ಶತಮಾನದಲ್ಲಿ ಬರ್ಮುಡಾ ಟ್ರಯಾಂಗಲ್ ನಲ್ಲಿರುವ ತ್ರಿಕೋನಾಕಾರದ ಕುಳಿಯಲ್ಲಿ 75ಕ್ಕೂ ಹೆಚ್ಚು ವಿಮಾನ ಹಾಗೂ ನೂರಾರು ಹಡಗುಗಳನ್ನು ನಿಗೂಢ ರೀತಿಯಿಲ್ಲಿ ನಾಪತ್ತೆಯಾಗಿದ್ದು, ಸಾವಿರಾರು ಜನರ ಪ್ರಾಣವನ್ನು ನುಂಗಿವೆ.

ಗಾಳಿ ಬಾಂಬ್

ಗಾಳಿ ಬಾಂಬ್

ನೂತನ ಅಧ್ಯಯನ ವರದಿಯಲ್ಲಿ ತಿಳಿದು ಬಂದಿರುವ ವಿಚಾರವೆಂದರೆ ತ್ರಿಕೋನಾಕೃತ್ತಿಯಲ್ಲಿ ರೂಪುಗೊಳ್ಳುವ ಷಡ್ಭುಜೀಯ ಮೋಡಗಳು ಗಂಟೆಗೆ 170 ಕೀ.ಮೀ. ವೇಗದಲ್ಲಿ ಬೀಸುವ 'ಗಾಳಿ ಬಾಂಬ್' ಗಳನ್ನು ನಿರ್ಮಿಸುತ್ತಿದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಇದಾದ ಬೆನ್ನಲ್ಲೇ ಅತೀವ ಒತ್ತಡದಿಂದಾಗಿ ಉಂಟಾಗುವ ಅತ್ಯಂತ ಪ್ರಭಾವಶಾಲಿ ಸ್ಫೋಟದಿಂದಾಗಿ ಹಡಗುಗಳು ನೂಚ್ಚು ನೂರಾಗುತ್ತದೆ. ಅಷ್ಟೇ ಯಾಕೆ ಇದರ ದೈತ್ಯಕಾರಾದ ಅಲೆಗಳು ಮೋಡಗಳೆಡೆಯಲ್ಲಿ ಸಂಚರಿಸುವ ವಿಮಾನಗಳನ್ನು ತನ್ನತ್ತ ಸೆಳೆದು ಕೊಳ್ಳುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಬರ್ಮುಡಾದ ಪಶ್ಚಿಮ ತುದಿಯಿಂದ ಈ ಬ್ರಹ್ಮಾಂಂಡ ರೂಪದ ಮೋಡಗಳು ಬರುತ್ತಿದ್ದು, 20ರಿಂದ 55 ಮೈಲು ದೂರದ ವರೆಗೂ ವ್ಯಾಪಿಸಿಕೊಳ್ಳುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ವಿಜ್ಞಾನಿಗಳ ಪ್ರಕಾರ, ಮೋಡಗಳನ್ನು ನೇರ ಅಂಚಿನಲ್ಲಿ ಗುರುತಿಸಲು ಸಾಧ್ಯವಿಲ್ಲ. ಇದು ಯಾದೃಚ್ಛಿಕವಾಗಿರುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಮೋಡಗಳ ಅಡಿಗಳಲ್ಲಿ ಸಂಭವಿಸುವುದನ್ನು ಪತ್ತೆ ಹಚ್ಚಲು ರಾಡಾರ್ ಸ್ಯಾಟಲೈಟ್ ಗಳನ್ನು ಬಳಕೆ ಮಾಡಲಾಗಿತ್ತು. ಇದರಂತೆ ಸಮುದ್ರ ಮಟ್ಟದಲ್ಲಿ ಬೀಸುವ 170 ಕೀ.ಮೀ. ವೇಗದ ಗಾಳಿಯು ಗಾಳಿ ಬಾಂಬ್ ಗಳನ್ನುಂಟು ಮಾಡುತ್ತಿದೆ ಎಂಬುದು ತಿಳಿದು ಬಂದಿದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಅತ್ಯಂತ ಶಕ್ತಿಯುತವಾಗಿ ಬೀಸುವ ಇಂತಹ ಗಾಳಿಗಳು 45 ಅಡಿ ಎತ್ತರದ ವರೆಗೂ ಆಕ್ರಮಿಸಿಕೊಳ್ಳುತ್ತದೆ. ಈ ವೇಳೆ ಕುಳಿಗಳು ತೆರೆದುಕೊಂಡು ಸಮುದ್ರಾಳಕ್ಕೆ ಸೆಳೆದುಕೊಳ್ಳುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಬಹಮಾಸ್ ಮತ್ತು ಬರ್ಮುಡಾ ದ್ವೀಪಗಳ ನಡುವೆ ನಿರ್ಮಾಣವಾಗುತ್ತಿರುವ ಬರ್ಮುಡಾ ಟ್ರಯಾಂಗಲ್ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇದೆ. ಸಾಗರೊಳಗೆ ಉತ್ಪತ್ತಿಯಾಗುವ ನೈಸರ್ಗಿಕ ಅನಿಲಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಇದಕ್ಕೂ ಮೊದಲು ಬರ್ಮುಡಾ ತ್ರಿಕೋನ ರಹಸ್ಯ ಬಯಲು ಮಾಡಲು ಸತತ ಪ್ರಯತ್ನದಲ್ಲಿರುವ ವಿಜ್ಞಾನಿಗಳು, ಬಾರೆಂಟ್ಸ್ ಸಮುದ್ರದಡಿಯಲ್ಲಿ ದೈತ್ಯಕಾರಾದ ಕುಳಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಮಗದೊಂದು ವಿಜ್ಞಾನಿಗಳ ತಂಡದ ಅಭಿಪ್ರಾಯದ ಪ್ರಕಾರ ಸಮುದ್ರ ಭೂ ಪದರಗಳ ಅಡಿಯಲ್ಲಿರುವ ನೈಸರ್ಗಿಕ ಅನಿಲ ನಿಕ್ಷೇಪದಿಂದ ಸೋರಿಕೆಯಾದ ಮಿಥೇನ್ ಅನಿಲವು ಕೊನೆಗೆ ಸ್ಪೋಟ ಸಂಭವಿಸಿ ದೊಡ್ಡ ಕುಳಿಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ವಿವರಿಸುತ್ತಾರೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಈ ಜಾಗದಲ್ಲಿ ಹಡಗು ತೇಲುವಷ್ಟು ಸಾಂದ್ರತೆ ನೀರಿಗೆ ಇರುವುದಿಲ್ಲ. ಇದು ಕೂಡಾ ಅಪಾಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಯಾವುದೇ ಮುನ್ಸೂಚನೆಯಿಲ್ಲದೆ ಹಡಗು ಮುಳುಗುವ ಸಾಧ್ಯತೆಯಿರುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ನಾರ್ವೆಯ ಆರ್ಕಟಿಕ್ ಯುನಿವರ್ನಿಸಿಟಿಯ ವಿಜ್ಞಾನಿಗಳ ಪ್ರಕಾರ, ಸಾಗರದಾಳದಲ್ಲಿ ದೊಡ್ಡದಾದ ಕುಳಿಗಳು ಉಂಟದಾಗ ಸಾವಿನ ಕೂಪ ತೆರೆಯುತ್ತದೆ. ಇದರಿಂದಾಗಿ ಇತ್ತ ಸಂಚರಿಸುವ ಹಡಗು, ವಿಮಾನಗಳು ನಿಗೂಢವಾಗಿ ಕಣ್ಮರೆಯಾಗುತ್ತಿದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಸಾಗರದಾಳದಲ್ಲಿ ಅಂತರ್ ಪ್ರವಾಹ ನಡೆಯುತ್ತಲೇ ಇರುತ್ತದೆ. ಇಲ್ಲಿ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ನೈಸರ್ಗಿಕವಾಗಿ ಎದುರಾಗುವ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಇದು ಎಷ್ಟರ ಮಟ್ಟಿಗೆ ಪ್ರಬಲವಾಗಿದೆಯೆಂದರೆ ಭಾರಿ ಪ್ರಮಾಣದ ಬಿರುಗಾಳಿ, ಚಂಡ ಮಾರುತಗಳನ್ನೇ ಸೃಷ್ಟಿ ಮಾಡುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಇದನ್ನು ನಿಸರ್ಗಾತೀತ ಶಕ್ತಿ ಎಂದು ವ್ಯಾಖ್ಯಾನಿಸಿದರೂ ವಿಜ್ಞಾನ ಲೋಕ ಒಪ್ಪಲು ತಯಾರಿರಲಿಲ್ಲ. ಆರಂಭದಲ್ಲಿ ನೈಸರ್ಗಿಕ ವಿಕೋಪ, ಯುದ್ಧ ಪರಿಸ್ಥಿತಿ ಅಥವಾ ಕಡಲ್ಗಳ್ಳತನಕ್ಕೆ ಸಿಲುಕಿರಬಹುದೆಂದು ನಂಬಿದರೂ ಪದೇ ಪದೇ ಆಗುತ್ತಿರುವ ಕಣ್ಮರೆ ಪ್ರಕರಣ ಬೆಚ್ಚಿ ಬೀಳಿಸುವಂತೆ ಮಾಡಿತ್ತು.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ತ್ರಿಕೋನದ ಆಕೃತಿಯಲ್ಲಿರುವ ಈ ಪ್ರದೇಶದ ವ್ಯಾಪ್ತಿ ಇತಿಹಾಸಗಾರರಿಂದ ಇತಿಹಾಸಗಾರಿಗೆ ಬದಲಾಗುತ್ತಿದೆ. ಪ್ರಸ್ತುತ ಗಡಿ ಪ್ರದೇಶವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ, ಬಹಾಮಾ ಮತ್ತು ಸಂಪೂರ್ಣ ಕೆರೆಬಿಯನ್ ದ್ಪೀಪ ಮತ್ತು ಪೂರ್ವ ಅಟ್ಲಾಂಟಿಕ್ ನಿಂದ ಅಜೋರ್ಸ್ ಮತ್ತು ಗಲ್ಫ್ ಆಫ್ ಮೆಕ್ಸಿಕೊದ ಇತರೆ ಪ್ರದೇಶಗಳು ಒಳಗೊಳ್ಳುತ್ತದೆ. ಆದರೆ ಅತಿ ಹೆಚ್ಚು ಕಡೆ ಉಲ್ಲೇಖಿತವಾಗಿರುವ ಅಟ್ಲಾಂಟಿಕ್ ತೀರದ ಮಿಯಾಮಿ, ಸಾನ್ ಜುವಾನ್, ಪೊರ್ಟೊರಿಕೊ ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪವಾಗಿರುವ ಬರ್ಮುಡಾ ಪ್ರದೇಶಗಳಲ್ಲಿ ಇದರ ವ್ಯಾಪ್ತಿ ಕಂಡುಬಂದಿದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಇನ್ನು ಕೆಲವರ ಪ್ರಕಾರ ಆಯಸ್ಕಾಂತೀಯ ಶಕ್ತಿಯ ಕೇಂದ್ರ ಇದಾಗಿದ್ದು, ಸ್ವಾಭಾವಿಕ ಆಯಸ್ಕಾಂತೀಯ ಏರಿಳಿತಗಳನ್ನು ಹೊಂದಿರಬಹುದು ಎಂದಿದ್ದಾರೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಗಲ್ಫ್ ಸ್ಟ್ರೀಮ್ ಸಾಗರ ಪ್ರವಾಹದ ಶಕ್ತಿಯನ್ನು ತಳ್ಳಿಹಾಕುವಂತಿಲ್ಲ ಎಂಬುದು ಇನ್ನಷ್ಟು ವಿಜ್ಞಾನಿಗಳ ವಾದವಾಗಿದೆ. ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಹುಟ್ಟುವ ಈ ಪ್ರವಾಹವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ ಮೂಲಕ ಉತ್ತರ ಅಟ್ಲಾಂಟಿಕ್ ಗೆ ಹರಿಯುತ್ತದೆ.

ಬರ್ಮುಡಾ ಟ್ರಯಾಂಗಲ್; ಜಗತ್ತಿನ ನಿಗೂಢ ರಹಸ್ಯ ಬಯಲು

ಬರ್ಮುಡಾ ಟ್ರಯಾಂಗಲ್ ಪ್ರದೇಶದಲ್ಲಿ ಅನೇಕ ಅವಘಡಗಳು ಸಂಭವಿಸಿದೆ. ಇವುಗಳಲ್ಲಿ 1872ರ ಮೇರಿ ಸೆಲೆಸ್ಟ್, 1945ರ ಫ್ಲೈಟ್ 19, 1881ರ ಎಲೆನ್ ಆಸ್ಟಿನ್, 1918ರ ಯುಎಸ್ ಎಸ್ ಸೈಕ್ಲೋಫ್ಸ್, 1812ರ ಥಿಯೊಡೋಸಿಯಾ ಬರ್ ಅಲ್ಸಟನ್, 1909ರ ಸ್ಪ್ರೇ, 1921ರ ಕ್ಯಾರೊಲ್ ಎ.ಡೀರಿಂಗ್, 1948ರಲ್ಲಿ ಡಗ್ಲಾಸ್ ಡಿಸಿ3 ವಿಮಾನ, 1949ರ ಸ್ಟಾರ್ ಟೈಗರ್ ಮತ್ತು ಸ್ಟಾರ್ ಏರಿಯಲ್, 1963ರ ಕೆಸಿ 135 ಸ್ಟ್ರ್ಯಾಟೊ ಟ್ಯಾಂಕರ್ಸ್, 1964ರ ಎಸ್ ಎಸ್ ಮರೈನ್ ಸಲ್ಪರ್ ಕ್ವೀನ್, ರಾಯ್ ಫುಕ್ ಮಾರು, 1955ರ ಕನ್ನೆಮಾರಾ IV ಮತ್ತು 1964ರ ಕ್ಯಾರೊಲಿನ್ ಕ್ಯಾಸ್ಕಿಯೋ ಪ್ರಮುಖವಾಗಿದೆ.

ಇವನ್ನೂ ಓದಿ:

ಇವನ್ನೂ ಓದಿ:

01. ಮೋಕ್ಷಕ್ಕಾಗಿ ಪರಿತಪಿಸುತ್ತಿರುವ ದೈವ್ವ ಬಾಧಿತ ಹಡಗುಗಳು

02. ರೋಚಕತೆಗೆ ಸಾಕ್ಷಿಯಾದ ಜಗತ್ತಿನ ಮಹಾ ಅದ್ಭುತ ಸುಯೆಜ್ ಕಾಲುವೆ

03. 200 ವರ್ಷದಷ್ಟು ಹಳೆಯ ಹಡಗಿನ ಅವಶೇಷಗಳು ನಿಗೂಢ ರೀತಿಯಲ್ಲಿ ಪತ್ತೆ!



Most Read Articles

Kannada
English summary
Bermuda Triangle caused by 170mph 'air bombs'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X