ಹಕ್ಕಿಗಳಿಗೆ ವೇಗದ ಮಿತಿ ಗ್ರಹಿಸುವ ಶಕ್ತಿಯಿದೆ!

By Nagaraja

ವೇಗದ ಇತಿ ಮಿತಿಗಳ ಬಗ್ಗೆ ಸ್ಪಷ್ಟ ಜ್ಞಾನವಿಲ್ಲದ ಇಂದಿನ ಯುಗ ಜನಾಂಗ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುತ್ತಿರುವ ಪ್ರಕರಣವನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಹಾಗಿರುವಾಗ ಯಾವುದೇ ನೈಸರ್ಗಿಕ ವಿಪತ್ತುಗಳನ್ನು ಮಾನವನಿಗಿಂತ ಮುಂಚಿತವಾಗಿ ಗ್ರಹಿಸಬಲ್ಲ ಹಕ್ಕಿಗಳು ಸ್ಪೀಡ್ ಲಿಮಿಟ್ ಬಗ್ಗೆಯೂ ಸ್ಪಷ್ಟ ಜ್ಞಾನವನ್ನು ಹೊಂದಿದೆ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಜತೆಯಾಗಿ ಅಧ್ಯಯನ ನಡೆಯಿಸಿರುವ ಫ್ರಾನ್ಸ್‌ನ ಇಬ್ಬರು ವಿಜ್ಞಾನಿಗಳು ಇದನ್ನು ಬಹಿರಂಗಪಡಿಸಿದ್ದು, ಮಾನವ ನಿರ್ಮಿತ ರಸ್ತೆಗಳ ವೇಗದ ಮಿತಿಯನ್ನು ಅರಿಯುವಲ್ಲಿ ಹಕ್ಕಿಗಳು ಸಕ್ಷಮವಾಗಿದೆ ಎಂದು ತಿಳಿಸಿದ್ದಾರೆ. ಇದರರ್ಥ ರಸ್ತೆಗಳಲ್ಲಿ ನೀಡಲಾಗಿರುವ ಸಂಕೇತಗಳನ್ನು ಸಂಪೂರ್ಣವಾಗಿ ಹಕ್ಕಿಗಳು ಗ್ರಹಿಸಬಲ್ಲದು ಎಂದಲ್ಲ. ಬದಲಾಗಿ ಯಾವ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಚಲಿಸಬಹುದು, ಯಾವುದರಲ್ಲಿ ನಿಧಾನವಾಗಿ ಚಲಿಸಬಹುದು ಎಂಬುದನ್ನು ಗ್ರಹಿಸುವ ಸಾಮರ್ಥ್ಯವನ್ನು ಹಕ್ಕಿಗಳು ಹೊಂದಿರುತ್ತವೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.


Pierre Legagneux ಹಾಗೂ Simon Ducatez ಎಂಬವರೇ ಈ ಸತ್ಯಾಂಶವನ್ನು ಬಹಿರಂಗಪಡಿಸಿದ್ದಾರೆ. ಅಂದರೆ ಗಂಟೆಗೆ 50 ಕೀ.ಮೀ. ವೇಗದ ಮಿತಿ ಹೊಂದಿರುವ ರಸ್ತೆಗಳಲ್ಲಿ ವಾಹನಗಳು 15 ಮೀಟರ್ ದೂರವಿರುವಾಗಲೇ ಹಕ್ಕಿಗಳು ರೆಕ್ಕೆಬಿಚ್ಚಿ ಹಾರಲಿದೆ. ಹಾಗೆಯೇ ಗಂಟೆಗೆ 110 ಕೀ.ಮೀ ವೇಗ ಪರಿಮಿತಿ ಹೊಂದಿರುವ ರಸ್ತೆಗಳಲ್ಲಿ 75 ಮೀಟರ್ ದೂರದಿಂದಲೇ ಹಕ್ಕಿಗಳು ಹಾರಲಿದೆ.

ಇವೆಲ್ಲವೂ ಹಕ್ಕಿಗಳು ರಸ್ತೆ ಸಂಕೇತಗಳನ್ನು ಗ್ರಹಿಸುತ್ತಿದೆ ಎಂಬುದನ್ನು ನಿರೂಪಿಸುತ್ತಿದೆ. ಒಟ್ಟಿನಲ್ಲಿ ವಾಹನಗಳು ಬರುವ ವೇಗತೆಗೆ ಅನುಸಾರವಾಗಿ ರಸ್ತೆಗಳಲ್ಲಿರುವ ಹಕ್ಕಿಗಳು ಆಕಾಶಕ್ಕೆ ಹಾರುತ್ತಿದೆ. ವಿಜ್ಞಾನದಲ್ಲಿ ಹಕ್ಕಿಗಳ ಗ್ರಹಿಕೆಯ ಶಕ್ತಿಯನ್ನು ಇದು ಸಾಬೀತುಪಡಿಸುತ್ತದೆ.

Most Read Articles

Kannada
English summary
Two scientists working together in France have concluded that birds can comprehend the different speed limits on roads set by humans.
Story first published: Monday, August 26, 2013, 15:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X