ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

By Nagaraja

16ನೇ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭವಾಗಿರುವಂತೆಯೇ ನಮ್ಮ ಕರ್ನಾಟಕ ರಾಜ್ಯದಲ್ಲೂ ಪ್ರಚಾರ ಭರಾಟೆ ಜೋರಾಗಿಯೇ ಸಾಗುತ್ತಿದೆ. ಇನ್ನೇನು ಪ್ರಚಾರದ ಅಬ್ಬರ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿರುವಂತೆಯೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸಿದೆ.

ನಿಮ್ಮ ಮಾಹಿತಿಗಾಗಿ, ಕರ್ನಾಟಕದಲ್ಲಿ ಐದನೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ರಾಜ್ಯದೆಲ್ಲೆಡೆ ಮೇ 17ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ಪ್ರಚಾರಕ್ಕೆ ಬೆರಳಣಿಕೆಯಷ್ಟು ದಿನಗಳಷ್ಟು ಮಾತ್ರ ಬಾಕಿ ಉಳಿದಿರುವಂತೆಯೇ ಬಿಜೆಪಿ, ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ 'ವಿಜಯ ಭಾರತ ರಥ' ಎಂಬ ಲಗ್ಷುರಿ ಬಸ್ಸನ್ನು ರಸ್ತೆಗಿಳಿಸಿದೆ. ಅಷ್ಟಕ್ಕೂ ಬಿಜೆಪಿಯಿಂದ ಬಿಡುಗಡೆಯಾಗಿರುವ ಹೈಟೆಕ್ ಕ್ಯಾಂಪರ್ ವ್ಯಾನ್‌ನಲ್ಲಿರುವ ವೈಶಿಷ್ಟ್ಯಗಳೇನು? ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಈ ಹೈಟೆಕ್ ಬಸ್ಸಿಗೆ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಉತ್ತರ ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ವಿದ್ಯುಕ್ತ ಚಾಲನೆ ನೀಡಿದರು.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಇನ್ನೇನು ರಾಜ್ಯ ನಾಯಕರ ಪ್ರವಾಸಕ್ಕೆ ಬಳಕೆಯಾಗಲಿರುವ ಈ ಹೈಟೆಕ್ ಬಸ್ಸು ಅನ್ನು ಮಾಜಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೊಡುಗೆಯಾಗಿ ನೀಡಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಸ್ವರಾಜ್ ಮಾಜ್ದಾ ಕಂಪನಿಯ ಈ ಬಸ್ಸನ್ನು ಪಂಜಾಬ್‌ನಿಂದ ತಯಾರಿಸಲಾಗಿದ್ದು, ಚಾಸೀಗೆ ಮುಂಬೈನ ಡಿಸಿ ಡಿಸೈನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿಶೇಷ ವಿನ್ಯಾಸಗೊಳಿಸಿದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಇದರಲ್ಲಿ ಆಧುನಿಕ ಸೌಲಭ್ಯಗಳಿದ್ದು, ಎಂಟು ಜನರಿಗೆ ಆರಾಮದಾಯಕವಾಗಿ ಪ್ರವಾಸ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಹೈಡ್ರಾಲಿಕ್ ಲಿಫ್ಟ್ ಮುಖಾಂತರ ಮೇಲ್ಛಾವಣಿಯಿಂದಲೇ ಭಾಷಣ ಮಾಡುವ ವ್ಯವಸ್ಥೆಯಿರುತ್ತದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ನಾಯಕರು ಪ್ರವಾಸದ ಮಧ್ಯೆ ಗ್ರಾಮ ಹಾಗೂ ತಾಲೂಕು ಪ್ರದೇಶಗಳಲ್ಲಿ ರೋಡ್ ಶೋ ಜತೆ ಬಿರುಸಿನ ಪ್ರಚಾರ ನಡೆಸಲು ಅನುಕೂಲವಾಗಲಿದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಇನ್ನು ನಾಯಕರು ವಾಹನದಲ್ಲಿಯೇ ಪ್ರವಾಸದ ಮಧ್ಯೆ ಮಾಧ್ಯಮಗಳಿಗೆ ಸಂದರ್ಶನವನ್ನು ಸಹ ನೀಡಬಹುದಾಗಿದೆ. ಇನ್ನುಳಿದಂತೆ ಡಿಶ್ ಟಿ.ವಿ ಸೌಲಭ್ಯವನ್ನು ಹೊಂದಿದ್ದು, ನಾಯಕರು ವಾಹನದಲ್ಲಿರುವ ಎರಡು ಎಲ್‌ಸಿಡಿ ಮುಖಾಂತರ ಟಿ.ವಿಯನ್ನು ವೀಕ್ಷಿಸಬಹುದು.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಹಾಗೆಯೇ ಸಮರ್ಪಕ ಜನರೇಟರ್, ಎಸಿ, ಫ್ರಿಡ್ಜ್, ಸಿಸಿ ಟಿವಿ, ಧ್ವನಿವರ್ಧಕ, ಟೇಬಲ್, ಕಪ್ ಹೋಲ್ಡರ್ ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಈ ಹೈಟೆಕ್ ಬಸ್ ಹೊಂದಿರುತ್ತದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ವಾಹನದ ಹೊರಗಡೆ ಎಲ್ಲ ಪ್ರಮುಖ ನಾಯಕರ ಭಾವಚಿತ್ರಗಳು, ಬಿಜೆಪಿ ಲಾಂಛನ ಜತೆಗೆ 'ಈ ಬಾರಿ ಮೋದಿ ಸರ್ಕಾರ' ಎಂಬ ದೊಡ್ಡಕ್ಷರದ ಘೋಷವಾಕ್ಯವನ್ನು ನೋಡಬಹುದಾಗಿದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಹಾಗೆಯೇ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾವಚಿತ್ರ ಮತ್ತು 'ನಾನು ಜನನಾಯಕನಲ್ಲ, ಜನಸೇವಕ' ಎಂಬ ಘೋಷವಾಕ್ಯವನ್ನು ಉಲ್ಲೇಖಿಸಲಾಗಿದೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

'ಕೇವಲ ಬದಲಾವಣೆಯನ್ನು ಅಪೇಕ್ಷಿಸಬೇಡಿ, ಬದಲಾವಣೆಗಾಗಿ ಮತ ನೀಡಿ, ಬಿಜೆಪಿಯನ್ನು ಚುನಾಯಿಸಿ'. 'ಭಾರತಕ್ಕಾಗಿ ಮತ ನೀಡಿ, ಭಾರತ ಗೆಲ್ಲಿಸಿ' ಎಂಬ ಉಲ್ಲೇಖವನ್ನು ಕಾಣಬಹುದು.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿಜೆಪಿ ಹೈಟೆಕ್ ಗಾಡಿ

ಒಟ್ಟಿನಲ್ಲಿ ಈ ಹೈಟೆಕ್ ಗಾಡಿಯ ಬೆಲೆ ಎಷ್ಟು ಎಂಬುದು ತಿಳಿದು ಬಂದಿಲ್ಲ. ಪ್ರಸ್ತುತ ಬಸ್ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಬಿಸಿ ಮುಟ್ಟಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
Former Chief Minister DV Sadananda Gowda today launched a hi tech bus which will be exclusively used for election campaign
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X