ಕಾರಿನಲ್ಲಿ ಬಿಎಸ್‌ಎನ್‌ಎಲ್‌ ವೈ-ಫೈ ಸೇವೆ ಆರಂಭ

By Nagaraja

ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ಬಿತ್ತರಿಸುವಲ್ಲಿ ಹೆಸರುವಾಸಿಯಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇದೀಗ ಕಾರಿನಲ್ಲಿ ವೈ-ಫೈ ಸೇವೆ ಆರಂಭಿಸಿದೆ. ದೇಶದಲ್ಲೇ ಇದೇ ಮೊದಲ ಬಾರಿಯೆಂಬಂತೆ ಬಿಎಸ್‌ಎನ್‌ಎಲ್ ಇಂಧೋರ್ ವಿಭಾಗವು, ಕಾರಿನಲ್ಲಿ ವೈ-ಫೈ ತಂತ್ರಜ್ಞಾನವನ್ನು ಆಳವಡಿಸಿಕೊಂಡಿದೆ.

ಇನ್ನು ಮುಂದೆ ಗ್ರಾಹಕರು ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ವೈ-ಫೈ ಬಳಕೆ ಮಾಡಬಹುದಾಗಿದೆ. ಪ್ರಸ್ತುತ ವೈ-ಫೈ ತಂತ್ರಜ್ಞಾನ ರು. 5000ದಿಂದ 6,000 ರು.ಗಳಷ್ಟು ದುಬಾರಿಯಾಗಿರುತ್ತದೆ. ಈಗಾಗಲೇ ವೈ-ಫೈ ಸಿದ್ಧಾಂತವನ್ನು ಯಶಸ್ವಿ ಪರೀಕ್ಷೆ ನಡೆಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಇಂಧೋರ್ ಘಟಕ ವ್ಯವಸ್ಥಾಪಕ ನಿರ್ದೇಶಕ ಜಿಸಿ ಪಾಂಡೆ ತಿಳಿಸಿದ್ದಾರೆ.

ಕಾರ್ಯ ನಿರ್ವಹಣೆ ಹೇಗೆ..?
ಕಾರಿಗೆ ಏರಿಯಲ್ ಆಳವಡಿಸಲಾಗಿದ್ದು, ಈ ಮೂಲಕ ವೈ-ಫೈ ಸಿಗ್ನಲ್ ಪಡೆಯಬಹುದಾಗಿದೆ. ಬಿಎಸ್‌ಎನ್‌ಎಲ್ ಪ್ರಕಾರ, ಇಂಟರ್‌ನೆಟ್ 3.5 ಎಂಬಿಪಿಎಸ್ ವೇಗತೆ ಹೊಂದಿರಲಿದ್ದು, ಸಿಡಿಎಂಎ ತಂತ್ರಜ್ಞಾನ ಮೂಲಕ ಕಾರ್ಯಾಚರಿಸಲಿದೆ.

ಪ್ರಸ್ತುತ ಮೊಡ್ಯುಲ್ ಜನಪ್ರಿಯಗೊಳ್ಳುತ್ತಿರುವಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಬಿಎಸ್‌ಎನ್‌ಎಲ್ ಹೊಂದಿದೆ.
ಇವನ್ನೂ ಓದಿ: 2 ಟನ್ ಭಾರತ ಪ್ರಪಂಚದ ಅತಿದೊಡ್ಡ ರೋಬೋಟ್

ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

Most Read Articles

Kannada
English summary
In a development which is probably the first of its kind in the country, BSNL's Indore division launched a Wi-Fi technology module for cars which will enable people to use internet while they are travelling.
Story first published: Saturday, April 6, 2013, 14:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X