ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಉಗ್ರರ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಬಿಎಂಡಬ್ಲ್ಯು ಬುಲೆಟ್ ಫ್ರೂಫ್ ಕಾರು ಯಶಸ್ವಿಯಾಗಿದೆ.

By Nagaraja

ಇರಾಕ್ ನಲ್ಲಿ ನಡೆದ ಐಸಿಎಸ್ ಉಗ್ರರ ದಾಳಿಯಿಂದ 70ರಷ್ಟು ನಾಗರಿಕರನ್ನು ರಕ್ಷಿಸುವಲ್ಲಿ ಬುಲೆಟ್ ಫ್ರೂಫ್ ಕಾರೊಂದು ಯಶಸ್ವಿಯಾಗಿದೆ. ತಮ್ಮ ಜೀವವನ್ನೇ ಪಣತೊಟ್ಟಿದ್ದ ಪೆಶ್ ಮೆರ್ಗಾ ಸೈನಿಕ ಬಿಎಂಡಬ್ಲ್ಯು ಬುಲೆಟ್ ಫ್ರೂಫ್ ಕಾರಿನಲ್ಲಿ ನಾಗರಿಕರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ್ದರು.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಮಧ್ಯ ಪೂರ್ವ ಪ್ರದೇಶಗಳಲ್ಲಿ ಉಗ್ರರ ಅಟ್ಟಹಾಸ ಜೋರಾಗಿ ನಡೆಯುತಿದ್ದು, ಈ ನಡುವೆ ಅಕೊ ಅಬುರಹಮಾನ್ ಎದೆಗಾರಿಕೆಯಿಂದಾಗಿ ಅಮಾಯಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಜಿಹಾದಿ ಶಾರ್ಪ್ ಶೂಟರ್ ಗಳ ಮುಂದೆ ಬಿಎಂಡಬ್ಲ್ಯು ಆರ್ಮರ್ಡ್ ವಾಹನವನ್ನು ಬಳಸದೇ ಅನ್ಯ ಮಾರ್ಗವಿರಲಿಲ್ಲ. ತರುವಾಯ ಓರ್ವ ಧೀರ ಯೋಧನಂತೆ ಸಿನೆಮೇಯಾ ಶೈಲಿಯನ್ನು ನಾಗರಿಕರನ್ನು ಆಪತ್ತಿನಿಂದ ಪಾರು ಮಾಡಿದ್ದಾರೆ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಕಿರ್ಕುಕ್ ನಗರದಲ್ಲಿ ಐಸಿಎಸ್ ಉಗ್ರರು ಕಾರಿನ ಮೇಲೆ ನಿರಂತರ ಗುಂಡು ಹಾರಿಸುತ್ತಲೇ ಇದ್ದರು ಎಂಬುದನ್ನು ಮೂಲಗಳು ಬಹಿರಂಗ ಮಾಡಿದೆ. ಆದರೆ ಈ ಅಲ್ಟಿಮೇಟ್ ಮೆಷಿನ್ ಕಾರು ಚಾಲಕನಿಗೆ ಕೈಕೊಡಲಿಲ್ಲ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಕಾರಿನ ಗಾಜು ಮತ್ತು ದೇಹ ಭಾಗಗಳಿಗೆ ಗುಂಡು ತಗುಲಿದರೂ ಇದರ ಗಟ್ಟಿಯಾದ ದೇಹ ರಚನೆಯಿಂದಾಗಿ ಗುಂಡಿಗೆ ಒಳ ನುಗ್ಗಲು ಸಾಧ್ಯವಾಗಲಿಲ್ಲ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಕಾರಿಗೆ 50ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಗಿದೆ. ಇದರಿಂದಾಗಿ ಸಂಪೂರ್ಣ ಹಾನಿಗೊಂಡರೂ ಒಳಗಡೆಯಿದ್ದ ನಾಗರಿಕರಿಗೆ ಯಾವುದೇ ರೀತಿ ಅಪಾಯವುಂಟಾಗಲಿಲ್ಲ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ನಾಲ್ಕು ತಿಂಗಳುಗಳ ಹಿಂದೆಯಷ್ಟೇ 9000 ಅಮೆರಿಕನ್ ಡಾಲರ್ ಖರ್ಚು ಮಾಡಿ 1990ರ ದಶಕದ ಬಿಎಂಡಬ್ಲ್ಯು ಬುಲೆಟ್ ಫ್ರೂಫ್ ಕಾರನ್ನು ಅಬು ರಹಮಾನ್ ಖರೀದಿ ಮಾಡಿದ್ದರು.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಐಸಿಎಸ್ ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ನಾಯಕ ರೀತಿಯಲ್ಲಿ ಸ್ಥಳಕ್ಕಾಗಮಿಸಿದ ಅಬು ರಹಮಾನ್, ಗಾಯಾಳು ಸೈನಿಕ ಮತ್ತು ನಾಗರಿಕರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ದುರದೃಷ್ಟವಶಾತ್ ಘಟನಾ ಸ್ಥಳದಲ್ಲಿ ತೀವ್ರ ಗಾಯಕ್ಕೊಳಗಾದ ವ್ಯಕ್ತಿಯೋರ್ವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯಲ್ಲಿ ಮೃತಪಟ್ಟಿದ್ದರು ಎಂದು ಅಬು ದುಃಖತಪ್ತರಾಗಿ ತಿಳಿಸುತ್ತಾರೆ. ಗಾಯಾಳುಗಳಲ್ಲಿ ಅರಬ್, ಕುರ್ದ್ ಮತ್ತು ತುರ್ಕ್ ಮೆನ್ಸ್ ಗೆ ಸೇರಿದ್ದವರಾಗಿದ್ದಾರೆ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಪ್ರಸ್ತುತ ಹಾನಿಗೊಂಡ ಕಾರನ್ನು ಮ್ಯೂಸಿಯಂನಲ್ಲಿಡುವ ಉದ್ದೇಶದಿಂದ ಬದಲಾಯಿಸಿಕೊಡುವ ಇರಾದೆಯನ್ನು ಬಿಎಂಡಬ್ಲ್ಯು ವ್ಯಕ್ತಪಡಿಸಿದರೂ ಅಬು ಇದನ್ನು ನಿರಾಕರಿಸಿದ್ದಾರೆ. ಬದಲಾಗಿ ಈ ಕಾರನ್ನು ಕಿರ್ಕುಕ್ ಜನರ ಶೌರ್ಯದ ಸಂಕೇತವಾಗಿ ಸ್ಥಳೀಯ ಮ್ಯೂಸಿಯಂನಲ್ಲಿಡಲು ಬಯಸಿದ್ದಾರೆ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಒಟ್ಟಿನಲ್ಲಿ ಉಗ್ರರ ಅಟ್ಟಹಾಸಕ್ಕೆ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ.

ಬಿಎಂಡಬ್ಲ್ಯು ಸೆಕ್ಯೂರಿಟಿ ವೆಹಿಕಲ್

ಬಿಎಂಡಬ್ಲ್ಯು ಸೆಕ್ಯೂರಿಟಿ ವೆಹಿಕಲ್

ಕಳೆದ 35 ವರ್ಷಗಳಿಂದ ಭದ್ರತಾ ವಾಹನಗಳ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಬಿಎಂಡಬ್ಲ್ಯು, ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ವಿಶ್ವ ದರ್ಜೆಯ ಸೆಕ್ಯೂರಿಟಿ ವಾಹನಗಳನ್ನು ತಯಾರಿಸುತ್ತಿದೆ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಮೂರು ವಲಯದ ಸುರಕ್ಷಾ ಮಟ್ಟವನ್ನು ಬಿಎಂಡಬ್ಲ್ಯು ಖಾತ್ರಿಪಡಿಸುತ್ತದೆ. ಇದು ಸ್ಟ್ರೀಟ್ ಕ್ರೈಮ್, ಓರ್ಗನೈಸ್ಡ್ ಕ್ರೈಮ್ ಮತ್ತು ಸ್ಪೋಟಕ ದಾಳಿಗಳಿಂದ ಪಾರಾಗುವ ಸುರಕ್ಷಾ ವಲಯವನ್ನು ನಿರ್ಮಿಸುತ್ತದೆ.

ಉಗ್ರರ ಗುಂಡಿನ ದಾಳಿಯಿಂದ 70 ಮಂದಿಯನ್ನು ಪಾರು ಮಾಡಿದ ಬುಲೆಟ್ ಫ್ರೂಫ್ ಕಾರು

ಜರ್ಮನಿಯ ಐಕಾನಿಕ್ ವಾಹನ ಸಂಸ್ಥೆಯು ನಿರ್ಮಿಸುತ್ತಿರುವ ಬಿಎಂಡಬ್ಲ್ಯು ಎಕ್ಸ್5 ಸೆಕ್ಯೂರಿಟಿ ಪ್ಲಸ್, ಬಿಎಂಡಬ್ಲ್ಯು ಎಕ್ಸ್5 ಸೆಕ್ಯೂರಿಟಿ, ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಕೆಲವು ಪ್ರಮುಖ ಸುರಕ್ಷಾ ವಾಹನಗಳಾಗಿವೆ. ಈ ಎಲ್ಲ ಕಾರುಗಳಗಳಲ್ಲಿ ಗರಿಷ್ಠ ಸುರಕ್ಷಾ ಪ್ಯಾಕೇಜ್ ಖಾತ್ರಿಪಡಿಸಲಾಗಿದೆ.

Most Read Articles

Kannada
English summary
Bulletproof BMW Used Rescue Vehicle During ISIS Attack
Story first published: Saturday, November 12, 2016, 12:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X