ಮೆಟ್ರೋ ಅಧಿಕಾರಿಗಳ ಎಡವಟ್ಟು- ನಡುರಸ್ತೆಯಲ್ಲಿ ಹೂತು ಹೋದ ಬಸ್, ಕಾರ್

ಭೂ ಕುಸಿತ ಉಂಟಾದ ಪರಿಣಾಮ 25 ಪ್ರಯಾಣಿಕರಿದ್ದ ಸಾರಿಗೆ ಬಸ್ ಹಾಗೂ ಹೋಂಡಾ ಸಿಟಿ ಕಾರೊಂದು ನಡುರಸ್ತೆಯಲ್ಲಿ ಹೂತು ಹೋದ ಘಟನೆ ಚೆನ್ನೈನ ಅಣ್ಣಾಸಾಲೈ ಪ್ರದೇಶದಲ್ಲಿ ನಡೆದಿದೆ.

Written By:

ಚೆನ್ನೈನ ಅಣ್ಣಾಸಾಲೈ ಪ್ರದೇಶದಲ್ಲಿ ಭಾನುವಾರ ಭೂ ಕುಸಿತ ಉಂಟಾಗಿದೆ. ಇಂಥದ್ದೊಂದು ಘಟನೆಯನ್ನು ಕಂಡು ಸಾರ್ವಜನಿಕರು ಅಚ್ಚರಿಗೊಳಗಾಗಿದ್ದು, 25 ಪ್ರಯಾಣಿಕರಿದ್ದ ಸಾರಿಗೆ ಬಸ್ ಹಾಗೂ ಹೋಂಡಾ ಸಿಟಿ ಕಾರೊಂದು ನಡುರಸ್ತೆಯಲ್ಲಿ ಹೂತು ಹೋಗಿವೆ.

ಆದ್ರೆ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಉಂಟಾಗಿಲ್ಲ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆದ್ರೆ ಘಟನೆಯಿಂದ ಅಣ್ಣಾಸಾಲೈ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು.

ಅಣ್ಣಾಸಾಲೈ ಪ್ರದೇಶದಲ್ಲಿ ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಪ್ರತಿಷ್ಠಿತ ಕಚೇರಿಗಳಿದ್ದು, ಇಂಥ ಘಟನೆ ನಡೆದಿರುವುದು ಆತಂಕವಲ್ಲದೇ ಅಚ್ಚರಿ ಉಂಟು ಮಾಡಿದೆ.

ಅಣ್ಣಾಸಾಲೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಭೂ ಕುಸಿತ ಉಂಟಾಗಿದೆ.

ಘಟನೆಯಲ್ಲಿ ತಮಿಳುನಾಡು ಸಾರಿಗೆ ಇಲಾಖೆ ಒಂದು ಬಸ್ ಮತ್ತು ಒಂದು ಹೊಂಡಾ ಸಿಟಿ ಕಾರು ರಸ್ತೆ ಮಧ್ಯೆದಲ್ಲೇ ಸಿಲುಕಿಕೊಂಡಿದ್ದು, ಜನರು ಅಪಾಯದಿಂದ ಪಾರಾಗಿದ್ದಾರೆ.

ಮೆಟ್ರೊ ಸುರಂಗ ಕಾಮಗಾರಿ ವೇಳೆ ಆದ ಕಂಪನದಿಂದ ರಸ್ತೆಯಲ್ಲಿ ಮಣ್ಣು ಸಡಿಲಗೊಂಡಿದ್ದು, ಇದು ಯಾವುದೇ ನೈಸರ್ಗಿಕ ವಿಕೋಪ ಅಲ್ಲ ಎಂಬುವುದು ತಿಳಿದು ಬಂದಿದೆ.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮೆಟ್ರೋ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸುರಂಗ ಮಾರ್ಗದ ಕಾಮಾಗಾರಿಗೆ ಇದಕ್ಕೆ ಕಾರಣವೆಂದಿದ್ದಾರೆ. ಇನ್ನು ಘಟನೆಯಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಟುವಂತಾಯಿತು.

ಸದ್ಯ ಘಟನಾ ಸ್ಥಳದಲ್ಲಿ ಸಿಲುಕಿಕೊಂಡಿದ್ದ ಕಾರು ಮತ್ತು ಬಸ್ ಅನ್ನು ಕ್ರೇನ್ ಮೂಲಕ ತೆರವುಗೊಳಿಸಲಾಗಿದ್ದು, ಟ್ರಾಫಿಕ್ ಪೊಲೀಸರು ಈಗ ರಸ್ತೆಯ ಮಾರ್ಗವನ್ನು ಬದಲಾಯಿಸಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿದ ತಮಿಳುನಾಡು ಸಾರಿಗೆ ಸಚಿವ ಡಿ.ಜಯಕುಮಾರ್, ಅಣ್ಣಾಸಾಲೈ ನಗರದಲ್ಲಿ ಮೆಟ್ರೋ ಕಾಮಗಾರಿ ಆರಂಭಗೊಂಡಿದ್ದು, ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಎಂದಿದ್ದಾರೆ.

ಮೆಟ್ರೋ ಕಾಮಗಾರಿ ಹಿನ್ನೆಲೆ ಭೂಕುಸಿತ ನಡೆದಿರುವುದು ಸಾಬೀತಾದ ಹಿನ್ನೆಲೆ ಸಚಿವ ಡಿ ಜಯಕುಮಾರ್, ಈ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಜೊತೆಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ. 

ಭೂಕುಸಿತ ಬಗ್ಗೆ ಮಾಧ್ಯಮಗಳ ಜೊತೆ ಅನುಭವ ಹಂಚಿಕೊಂಡ ಬಸ್ ಪ್ರಯಾಣಿಕರು ನಡೆದ ಘಟನೆ ಬಗ್ಗೆ ಇನ್ನು ಆತಂಕದಲ್ಲಿದ್ದಾರೆ. ಅದಲ್ಲದೇ ಬಹುತೇಕ ಪ್ರಯಾಣಿಕರು ಆ ಭಯಾನಕ ಘಟನೆಯ ಶಾಕ್‌ನಿಂದ ಇನ್ನು ಹೊರಬಂದಿಲ್ಲಾ.

ಆದ್ರೆ ಮೆಟ್ರೋ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೇ ಇಂತಹ ಅನಾಹುತ ತಪ್ಪಬಹುದಿತ್ತು. ಇನ್ನು ಬೇಜವಾಬ್ದಾರಿ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಬಡವರು ಜೀವವನ್ನೇ ಕಳೆದುಕೊಳ್ಳಬೇಕಿತ್ತು. 

ಇನ್ನು ಬೆಂಗಳೂರಿನಲ್ಲೂ ವಿವಿಧಡೆ ಮೆಟ್ರೋ ಕಾಮಗಾರಿಗಳು ಜೋರಾಗಿಯೇ ನಡೆದಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಂಜಾಗ್ರತ ಕ್ರಮ ವಹಿಸುವುದು ಒಳಿತು. ಇಲ್ಲವಾದಲ್ಲಿ  ಅಣ್ಣಾಸಾಲೈ ಘಟನೆಗಿಂತ ಹೆಚ್ಚಿನ ಅನಾಹುತವಾದ್ರೂ ಅಚ್ಚರಿ ಪಡಬೇಕಿಲ್ಲ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Story first published: Monday, April 10, 2017, 14:31 [IST]
English summary
Bus and Car Trapped in Giant Crater. It's Happening in Chennai Anna Salai Main Road.
Please Wait while comments are loading...

Latest Photos