ಮುಖೇಶ್ ಅಂಬಾನಿ ಶತಕೋಟಿ ಅರಮನೆಯೊಳಗೆ ಇಣುಕು ನೋಟ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಧೀರುಬಾಯ್ ಅಂಬಾನಿ, ವಿಶ್ವದ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಓರ್ವರಾಗಿದ್ದಾರೆ. ಉದ್ಯಮದ ಹೊರತಾಗಿ ಕಪ್ಪು ಹಣ ಸಂಗ್ರಹಕ್ಕಾಗಿ ವಿವಾದದ ಕೇಂದ್ರ ಬಿಂದುವಾಗಿರುವ ಅಂಬಾನಿ ಮುಂಬೈನ ಕೇಂದ್ರ ಭಾಗದಲ್ಲಿ ಶತಕೋಟಿ ಬೆಲೆಬಾಳುವ ಅರಮನೆಯನ್ನು ಹೊಂದಿದ್ದಾರೆ.

Also Read: ಮೋದಿಗೆ ಸಮವಾಗಿ ತೊಡೆ ತಟ್ಟಿ ನಿಂತ ಅಂಬಾನಿ

ಲಂಡನ್ ರಾಣಿ ಎಲಿಜಬೆತ್ ಅವರ ಬಕ್ಕಿಂಗ್ ಹ್ಯಾಮ್ ಅರಮನೆ ಬಳಿಕ (9300 ಕೋಟಿ ರು.) ಬಳಿಕ ವಿಶ್ವದ ಎರಡನೇ ಅತ್ಯಂತ ವೈಭವೋಪೇತ ಮನೆಯೆಂಬ ಗೌರವಕ್ಕೆ ಅಂಬಾನಿ ಅವರ 'ಅಂಟಿಲಿಯಾ' ಕಟ್ಟಡ ಸೇರಿದೆ. ಇದು ಸರಿ ಸುಮಾರು 6000 ಕೋಟಿ ರು.ಗಳಷ್ಟು ಬೆಲೆ ಬಾಳುತ್ತದೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

27 ಮಹಡಿಯಷ್ಟು ಬೆಳೆದು ನಿಂತಿರುವ ಅಂಬಾರಿ ಅಂಟಿಲಿಯಾ ಕಟ್ಟಡವನ್ನು ಅಟ್ಲಾಂಟಿಕಾ ಸಾಗರದ ಪೌರಾಣಿಕ ಹಿನ್ನೆಲೆಯ ದ್ವೀಪ 'ಅಂಟಿಲಿಯಾ' ಹೆಸರನ್ನಿಡಲಾಗಿದೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಇಲ್ಲಿ ಆರು ಅಂತಸ್ತಿನ ನೆಲಮಾಳಿಗೆ ವಾಹನ ನಿಲುಗಡೆಗಾಗಿ ನಿರ್ಮಿಸಲಾಗಿದೆ. ಈ ಸುಸ್ಸಜಿತ ಕಟ್ಟಡದಲ್ಲಿ 160 ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಮನೆಯಲ್ಲಿ ದೈನಂದಿನ ನಿರ್ವಹಣೆಗಾಗಿ 600ರಷ್ಟು ನೌಕರರನ್ನು ನೇಮಕ ಮಾಡಲಾಗಿದೆ. ಇವರ ವಾಸ್ತವ್ಯಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಕಟ್ಟಡದ ಮೇಲ್ಬಾಗದಲ್ಲಿ ಮೂರು ಹೆಲಿ ಪ್ಯಾಡ್ ಗಳಿದ್ದು, ಸದಾ ಪ್ರವಾಸದಲ್ಲಿರುವ ಅಂಬಾನಿ ತಮಗೆ ಬೇಕಾದಾಗ ಬಂದು ಹೋಗಲಿದ್ದಾರೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಇದರ ಹೊರತಾಗಿ ಭೋಜನಾಲಯ, ವಿಶ್ರಾಂತಿ ಕೊಠಡಿ, ವಿಶಾಲವಾದ ಜಿಮ್, ಆತಿಥಿ ಕೊಠಡಿ, ನೃತ್ಯ ಸ್ಟುಡಿಯೋ, ಆರೋಗ್ಯ ಕ್ಲಬ್, ಈಜು ಕೊಳ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಎಂಟು ರಿಕ್ಟರ್ ಪ್ರಮಾಣದ ಪ್ರಬಲವಾದ ಭೂಕಂಪವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಈ ಅರಮನೆಯನ್ನು ಶಿಕಾಗೊ ಮೂಲದ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದಾರೆ. ಅಲ್ಲದೆ ಕಟ್ಟಡದೊಳಗೆ ಬಳಸಲಾಗಿರುವ ಸಸ್ಯಗಳು ಹೆಚ್ಚು ತಂಪಾದ ವಾತಾವರಣ ನೀಡಲಿದೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಮುಂಬೈ ಸಮುದ್ರ ತಟದಲ್ಲಿ ಸ್ಥಿತಗೊಂಡಿರುವ ಅಂಬಾನಿ ಕಟ್ಟಡದಲ್ಲಿ ಸಾಗರ ವೀಕ್ಷಣೆಗಾಗಿ ಮೇಲ್ಚಾವಣಿ, ವಿಶೇಷ ಕೊಠಡಿಗಳು ಹಾಗೂ 50 ಮಂದಿಗೆ ಕುಳಿತುಕೊಂಡು ವೀಕ್ಷಿಸಬಹುದಾದ ಸಿನೆಮಾ ಮಂದಿರಗಳು ಇವೆ.

ಮುಖೇಶ್ ಅಂಬಾನಿ ಶತಕೋಟಿ ಬಂಗಲೆ

ಮುಂಬೈನ ಅಲ್ಟಮೌಂಟ್ ರಸ್ತೆಯಲ್ಲಿ ಸ್ಥಿತಗೊಂಡಿರುವ ಇಲ್ಲಿನ ಬಂಗಲೆಯಲ್ಲಿ ಮುಖೇಶ್ ಅವರು ಪತ್ನಿ ನೀತಾ ಅಂಬಾನಿ ಹಾಗೂ ಮಕ್ಕಳಾದ ಅನಂತ್, ಆಕಾಶ್ ಮತ್ತು ಇಶಾ ಜೊತೆ ವಾಸಿಸುತ್ತಾರೆ. ಇತಿಹಾಸ ಪುಟ ಸೇರಿರುವ ಅಂಟಿಲಿಯಾ ಮನೆ ನಾಲ್ಕು ಲಕ್ಷ ಚದರ ಅಡಿಯಷ್ಟು ವಿಸ್ತಾರವಾಗಿ ಹರಡಿದೆ.

ಫಾಲ್ಕನ್ 900 ಇಎಕ್ಸ್

ಫಾಲ್ಕನ್ 900 ಇಎಕ್ಸ್

ಕೇವಲ ಐಷಾರಾಮಿ ಕಾರುಗಳು ಮಾತ್ರವಲ್ಲದೆ ದುಬಾರಿ ಖಾಸಗಿ ವಿಮಾನಗಳನ್ನು ಮುಖೇಶ್ ಹೊಂದಿದ್ದಾರೆ. ಇದರಲ್ಲಿ ಫಾಲ್ಕನ್ 900 ಇಎಕ್ಸ್ ಒಂದಾಗಿದೆ.

ಫಾಲ್ಕನ್ 900 ಇಎಕ್ಸ್

ಫಾಲ್ಕನ್ 900 ಇಎಕ್ಸ್

ಪ್ರಸ್ತುತ ಫಾಲ್ಕನ್ 900 ಇಎಕ್ಸ್ ವಿಮಾನದಲ್ಲಿ ಕಚೇರಿ ವ್ಯವಸ್ಥೆಗಳಿದ್ದು, ತಮ್ಮ ಪ್ರಯಾಣದ ವೇಳೆಯಲ್ಲೇ ವಾಣಿಜ್ಯ ವ್ಯವಹಾರಗಳನ್ನು ಮುಂದುವರಿಸಬಹುದಾಗಿದೆ. ಅಂತೆಯೇ ಮನರಂಜನೆಗಾಗಿ ಮ್ಯೂಸಿಕ್ ಸಿಸ್ಟಂ ಹಾಗೂ ಸ್ಯಾಟಲೈಟ್ ಟೆಲಿವಿಷನ್ ಹಾಗೂ ವೈರಲೆಸ್ ಸಂಪರ್ಕದಂತಹ ಅತ್ಯಾಧುನಿಕ ವ್ಯವಸ್ಥೆಗಳಿವೆ.

ಬೋಯಿಂಗ್ ಬ್ಯುಸಿನೆಸ್ ಜೆಟ್ 2

ಬೋಯಿಂಗ್ ಬ್ಯುಸಿನೆಸ್ ಜೆಟ್ 2

ಮುಖೇಶ್ ಅಂಬಾನಿ ಅವರು ಬೋಯಿಂಗ್ ಬ್ಯುಸಿನೆಸ್ ಜೆಟ್ 2 ವಿಮಾನದ ಒಡೆಯ ಕೂಡಾ ಆಗಿದ್ದು, ತಮ್ಮ ಖಾಸಗಿ ಕಾರ್ಯಕ್ರಮಗಳನ್ನು ಇದರಲ್ಲೇ ಆಯೋಜಿಸಬಹುದಾಗಿದೆ. ಯಾಕೆಂದರೆ 78 ಪ್ರಯಾಣಿಕರಿಗೆ ಸಂಚರಿಸುವಷ್ಟು ಸಾಮರ್ಥ್ಯ ಇದು ಹೊಂದಿದೆ.

ಏರ್ ಬಸ್ 319

ಏರ್ ಬಸ್ 319

2007ರಲ್ಲಿ ಧರ್ಮಪತ್ನಿ ನೀತಾ ಅವರ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಏರ್ ಬಸ್ 319 ಉಡುಗೊರೆಯಾಗಿ ನೀಡಿದ್ದ ಅಂಬಾನಿ, ತಮ್ಮ ಲಗ್ಷುರಿ ಪಯಣಕ್ಕೆ ಮಗದೊಂದು ಕೋಡು ಸೇರಿಸಿದ್ದರು. ಪ್ರಸ್ತುತ ವಿಮಾನದಲ್ಲಿ ಪತ್ನಿ ನೀತಾ ಅವರ ಮೇಕಪ್ ಗಾಗಿ ವಿಶೇಷ ಕೊಠಡಿ ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಮೇಬ್ಯಾಕ್ 62

ಮೇಬ್ಯಾಕ್ 62

ಮುಖೇಶ್ ಅಂಬಾನಿ ಬಳಿಯಿರುವ ಕಾರು ಸಂಗ್ರಹಗಳಲ್ಲಿ ಐದು ಕೋಟಿ ಬೆಲೆ ಬಾಳುವ ಮೇಬ್ಯಾಕ್ 62 ಪ್ರಮುಖವಾಗಿದೆ. ಇದನ್ನು ತಮ್ಮ ವೈಯಕ್ತಿಕ ಬಯಕೆಗಳಂತೆ ಮಾರ್ಪಾಡುಗೊಳಿಸಲಾಗಿದೆ.

ಮರ್ಸಿಡಿಸ್ ಬೆಂಝ್ ಎಸ್‌ಎಲ್500

ಮರ್ಸಿಡಿಸ್ ಬೆಂಝ್ ಎಸ್‌ಎಲ್500

ಹೈ ಎಂಡ್ ವೈಶಿಷ್ಟ್ಯಗಳಿಂದ ಕಂಗೊಳಿಸುತ್ತಿರುವ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರು ಅಂಬಾನಿ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ.

ದುಬಾರಿ ಕಾರುಗಳು

ದುಬಾರಿ ಕಾರುಗಳು

ಇನ್ನುಳಿದಂತೆ ಬೆಂಟ್ಲಿ, ಪೋರ್ಷೆ, ಬುಗಾಟಿ, ಲಂಬೋರ್ಗಿನಿ ಇತ್ಯಾದಿ ಕಾರುಗಳ ಸಂಗ್ರಹವು ಅಂಬಾನಿ ಕಾರು ಗ್ಯಾರೇಜ್ ನಲ್ಲಿದೆ. ಇದನ್ನೆಲ್ಲ ಯಾವಾಗ ಸದುಪಯೋಗಪಡಿಸುತ್ತಾರೋ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ವಿಹಾರ ನೌಕೆ

ವಿಹಾರ ನೌಕೆ

ಇಲ್ಲಿಗೂ ಮುಖೇಶ್ ವಾಹನ ಪ್ರೇಮ ಮುಗಿಯುದಿಲ್ಲ. ಸಮುದ್ರದಲ್ಲಿ ತಮ್ಮ ಐಷಾರಾಮಿ ಪಯಣಕ್ಕಾಗಿ ಖಾಸಗಿ ಬೋಟ್, ವಿಹಾರ ನೌಕೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇವನ್ನೂ ಓದಿ

01. ದೇಶದ ಪ್ರಖ್ಯಾತ ಉದ್ಯಮಿಗಳ ಕಾರು ಪ್ರೇಮ

02. ಜಗತ್ತಿನ ಶ್ರೀಮಂತ ವ್ಯಕ್ತಿಗಳ ಕಾರು ಪ್ರೇಮ

03. ಜಗತ್ತಿನ 10 ಅಗ್ರಗಣ್ಯ ಕಾರು ಸಂಗ್ರಹಗಾರರು

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X