ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

By Nagaraja

ಜಗತ್ತಿನ ಅತಿ ಉದ್ದರ ರೈಲ್ವೆ ಜಾಲವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ ಇಂತಹದೊಂದು ಕನಸು ಇದುವರೆಗೆ ನನಸಾಗಲಿಲ್ಲ ಎಂಬುದು ಖೇದಕರ ಸಂಗತಿ. ಅಲ್ಲಿ ದೂರದ ಬ್ರಿಟನ್‌ನಲ್ಲಿ ರೈಲ್ವೆ ಹಳಿಯಿಂದ ಸ್ಪೂರ್ತಿ ಪಡೆದುಕೊಂಡು ಇದಕ್ಕೆ ಸಮಾನವಾಗಿ ರೈಲ್ ಬಸ್ ಸೇವೆಯನ್ನು ಆರಂಭಿಸಲಾಗಿದೆ.

ಅಂದರೆ ರೈಲು ತರಹನೇ ಹಳಿಯ ಮೇಲೆ ರೈಲ್ ಬಸ್ ಓಡಾಡಲಿದೆ. ಪ್ರಮುಖವಾಗಿಯೂ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೆಯೇ ರಸ್ತೆಗಳಲ್ಲಿ ಕಾರುಗಳ ಸುಗಮ ಸಂಚಾರಕ್ಕಾಗಿ ಇಂತಹದೊಂದು ಮಹತ್ತರ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಬ್ರಿಟನ್‌ನ ಕ್ಯಾಂಬ್ರಿಡ್ಜ್, ಹಂಟಿಂಗ್ಟನ್ ಮತ್ತು ಸೈಂಟ್ ಇವ್ಸ್ ನಗರಗಳನ್ನು ಈ ವಿನೂತನ ರೈಲ್ ಬಸ್ ಬಸ್ ವೇ ಜಾಲವು ಬಂಧಿಸುತ್ತಿದೆ. ಅಲ್ಲದೆ ಜಗತ್ತಿನ ಅತಿ ಉದ್ದರ ರೈಲ್ ಬಸ್ ಎಂಬ ಕೀರ್ತಿಗೂ ಪಾತ್ರವಾಗಿದೆ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಸುಗಮ ಸಾರ್ವಜನಿಕ ಸಂಚಾರದೊಂದಿಗೆ ಸುರಕ್ಷಿತ ಪಯಣವನ್ನು ಗುರಿಯಾಗಿರಿಸಿಕೊಂಡು 2011ನೇ ಇಸವಿಯಲ್ಲಿ ಕ್ಯಾಂಬ್ರಿಡ್ಜ್‌ಶೈರ್ ಗೈಡಡ್ ಬಸ್ ವೇ ಸಂಚಾರವನ್ನು ಆರಂಭಿಸಲಾಗಿತ್ತು.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ರೈಲು ಹಳಿಗೆ ಸಮಾನವಾಗಿ ಇಲ್ಲಿ ಬಸ್ ಹಾದು ಹೋಗಲು ಕಾಂಕ್ರೀಟ್ ಬೀಮ್ ಗಳನ್ನು ಕಟ್ಟಲಾಗಿದೆ. ಹಾಗೆಯೇ ಸ್ಥಿರತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಚಕ್ರಗಳ ಬದಿಯಲ್ಲಿ ಚೊಕ್ಕದಾದ ಹೆಚ್ಚುವರಿ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಈ ಮಹತ್ತರ ಯೋಜನೆ ಆರಂಭಗೊಂಡ ಮೊದಲ ವರ್ಷದಲ್ಲೇ 2,500,000 ಪಯಣಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ ಕ್ಯಾಂಬ್ರಿಡ್ಜ್ ಶೈರ್ ಕಂಟ್ರಿ ಕೌನ್ಸಿಲ್ ಪ್ರಕಾರ ನಿರೀಕ್ಷೆಗೂ ಮೀರಿದ ಯಶ ಸಾಧಿಸಿತ್ತು.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಇದರ ಮಗದೊಂದು ವಿಶೇಷವೆಂದರೆ ಗೈಡಡ್ ಬಸ್ ವೇ ಪ್ರದೇಶಗಳಲ್ಲಿ ಚಾಲಕ ಸ್ಟೀರಿಂಗ್ ವೀಲ್ ಹಿಡಿಯುವ ಅಗತ್ಯವಿರುವುದಿಲ್ಲ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಇನ್ನು 25 ಕೀ.ಮೀ. ಉದ್ದದ ರೈಲ್ ಬಸ್ ಹಳಿಯಲ್ಲಿ ಗಂಟೆಗೆ ಗರಿಷ್ಠ 90 ಕೀ.ಮೀ. ವೇಗದಲ್ಲಿ ಬಸ್ ವೇ ಸಂಚರಿಸಲಿದೆ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಅಲ್ಲದೆ ಆರಾಮದಾಯಕ ಪಯಣಕ್ಕಾಗಿ ಬಸ್ಸಿನೊಳಗೆ ಎಸಿ, ಲೆಥರ್ ಸೀಟು, ಉಚಿತ ವೈಫೈ ಮುಂತಾದ ಸೇವೆಗಳನ್ನು ಒದಗಿಸಲಿದೆ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಇವೆಲ್ಲದಕ್ಕೂ ಮಿಗಿಲಾಗಿ ಹೆಚ್ಚು ಪರಿಸರ ಸ್ನೇಹಿ ಎಂಜಿನ್ ಆಳವಡಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಬ್ರಿಟನ್‌ನಲ್ಲಿ ಜಗತ್ತಿನ ಅತಿ ಉದ್ದದ 'ರೈಲ್‌ಬಸ್' ಸೇವೆ

ಅಷ್ಟಕ್ಕೂ ಇಂತಹದೊಂದು ಸೇವೆಯೂ ನಮ್ಮ ಭಾರತದಲ್ಲಿ ಅಗತ್ಯವಿದೆಯೇ? ಇದರ ಯಶಸ್ಸು ಎಷ್ಟರ ಮಟ್ಟಿಗಿರಬಹುದು? ಈ ಬಗ್ಗೆ ವಿವರವಾಗಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.

Most Read Articles

Kannada
Read more on ಬಸ್
English summary
Cambridgeshire Guided Busway in UK has emerged connecting Cambridge, Hutington and St Ives.
Story first published: Tuesday, September 1, 2015, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X