ನಿಮ್ಮನ್ನು ಬೆರಗುಗೊಳಿಸುವ 8 ಕಾರು ತಂತ್ರಜ್ಞಾನಗಳು

By Nagaraja

ಆಧುನಿಕ ಕಾಲಘಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಅತ್ಯುನ್ನತ್ತ ಮಟ್ಟ ತಲುಪಿರುವಂತೆಯೇ ಹಲವಾರು ಹೊಸ ತಂತ್ರಗಾರಿಕೆಯ ಪ್ರವೇಶವಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಕೊಡುಗೆ ಮಹತ್ತರವಾಗಿದೆ. ನಾವು ಹಳೆಯ ಕಾರುಗಳನ್ನು ಹೋಲಿಸಿದಾಗ ಹೊಸ ಕಾರುಗಳಲ್ಲಿನ ನೂತನ ತಂತ್ರಜ್ಞಾನವು ನಮ್ಮನ್ನು ಬೆರಗುಗೊಳಿಸುತ್ತದೆ.

ಹೀಗೆ ನಿಮ್ಮ ಆಶ್ಚರ್ಯಗೊಳಿಸಲಿರುವ ಎಂಟು ಅದ್ಭುತ ವಾಹನ ತಂತ್ರಜ್ಞಾನದ ಬಗ್ಗೆ ನಾವಿಲ್ಲಿ ಮಾತನಾಡಲಿದ್ದೇವೆ. ಎರಡು ದಶಕಗಳ ಹಿಂದೆಯೇ ಇಂತಹ ತಂತ್ರಜ್ಞಾನ ಅವಿಷ್ಕರವಾಗಿದ್ದರೆ ಹೇಗಿರುತ್ತಿತ್ತು? ಖಂಡಿತವಾಗಿಯೂ ನಿಮಗೆ ಈ ಲೇಖನ ಇಷ್ಟವಾಗುವ ಭರವಸೆ ನಮ್ಮದ್ದು. ನಿಮ್ಮ ಸ್ನೇಹಿತರಿಗೂ ಇದನ್ನು ಹಂಚಿಕೊಳ್ಳಲು ಮರೆಯದಿರಿ.

08. ಅಡಾಪ್ಟಿವ್ ಡಿಜಿಟಲ್ ಡಿಸ್ ಪ್ಲೇ

08. ಅಡಾಪ್ಟಿವ್ ಡಿಜಿಟಲ್ ಡಿಸ್ ಪ್ಲೇ

ನಿಮ್ಮ ಚಾಲನೆಯನ್ನು ಸುಲಭಗೊಳಿಸುವುದು ಪ್ರತಿಯೊಂದು ವಾಹನ ತಂತ್ರಜ್ಞಾನದ ಕರ್ತವ್ಯವಾಗಿರುತ್ತದೆ. ಇಲ್ಲಿ ಡಿಜಿಟಲ್ ಅಡಾಪ್ಟಿವ್ ಡಿಸ್ ಪ್ಲೇಗಳು ಚಾಲಕನಿಗೆ ಅಗತ್ಯ ಮಾಹಿತಗಳನ್ನು ರವಾನಿಸುತ್ತದೆ. ಇದು ಎಲೆಗನ್ಸ್, ಇಕೊ ಹಾಗೂ ನಿರ್ವಹಣೆ ಮೋಡ್ ಗಳಲ್ಲಿ ಸಂಚರಿಸುವಾಗ ಬೇಕಾಗುವ ಎಲ್ಲ ಅಗತ್ಯ ಮಾಹಿತಗಳನ್ನು ಒದಗಿಸುತ್ತದೆ.

07. ಒಳಗಡೆಯ ಮಿರರ್

07. ಒಳಗಡೆಯ ಮಿರರ್

ಹಿಂಬದಿ ಕಾರಿನಿಂದ ನೇರವಾಗಿ ಅಪ್ಪಳಿಸುವ ಹೈ ಬೀಮ್ ಬೆಳಕುಗಳು ನಿಮ್ಮ ಮಿರರ್ ಗೋಚರತೆಗೆ ತೊಂದರೆಯನ್ನುಂಟು ಮಾಡಲಿದೆ. ಆದರೆ ಈ ತಂತ್ರಜ್ಞಾನವು ತೀವ್ರತರಹದ ಬೆಳಕಿನ ಪ್ರಭಾವವನ್ನು ಆಟೋಮ್ಯಾಟಿಕ್ ಆಗಿ ಕಡಿಮೆ ಮಾಡುತ್ತಿದ್ದು, ಚಾಲಕನ ಚಾಲನೆಯನ್ನು ಸುಲಭಗೊಳಿಸುತ್ತದೆ.

06. ಎಲೆಕ್ಟ್ರಾನಿಕ್ ಸೀಟು

06. ಎಲೆಕ್ಟ್ರಾನಿಕ್ ಸೀಟು

ಆಧುನಿಕ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆಯೆಂದರೆ ನೀವು ಕುಳಿತಲ್ಲಿಂದ ಒಂದು ಬಟನ್ ಒತ್ತಿದ್ದರೆ ಸಾಕು ಸೀಟುಗಳು ಆಟೋಮ್ಯಾಟಿಕ್ ಆಗಿ ಹೊಂದಾಣಿಕೆಯಾಗಲಿದೆ. 20 ವರ್ಷಗಳ ಹಿಂದೆ ಇಂತಹ ತಂತ್ರಜ್ಞಾನವನ್ನು ಊಹಿಸಲು ಸಾಧ್ಯವೆ?

05. ರಸ್ತೆ ಸಂಚಾರ ಚಿಹ್ನೆ ಮಾಹಿತಿ

05. ರಸ್ತೆ ಸಂಚಾರ ಚಿಹ್ನೆ ಮಾಹಿತಿ

ಹಿಂದೆಲ್ಲ ಯಾವ ಕಡೆ ತೆರಳಬೇಕು. ಮುಂದುಗಡೆಯ ರಸ್ತೆ ಹೇಗಿರುತ್ತೇ? ಎಂಬುದು ಯಾರಿಗೂ ಗೊತ್ತಿಲ್ಲ. ಸ್ವಲ್ಪನೂ ಎಡವಟ್ಟಾದರೂ ಅಪಘಾತ ಕಟ್ಟಿಟ್ಟ ಬುತ್ತಿ. ಆದರೆ ಆಧುನಿಕ ಕಾರುಗಳು ರಸ್ತೆ ಸಂಚಾರ ಚಿಹ್ನೆ ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುತ್ತದೆ.

04. ವೇಗ ನಿಯಂತ್ರಣ

04. ವೇಗ ನಿಯಂತ್ರಣ

ಆಧುನಿಕ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ವೇಗವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸಬಹುದಾಗಿದೆ. ಇದರಿಂದ ಸಂಭವನೀಯ ಅಪಘಾತವನ್ನು ತಡೆಗಟ್ಟಬಹುದು.

03. ಬಹು ಕ್ರಿಯಾತ್ಮಕ ಹೆಡ್ ಲೈಟ್

03. ಬಹು ಕ್ರಿಯಾತ್ಮಕ ಹೆಡ್ ಲೈಟ್

ಬಹು ಕ್ರಿಯಾತ್ಮಕ ಹೆಡ್ ಲೈಟ್ ಗಳು ಆಧುನಿಕ ವಾಹನಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಉದಾಹರಣೆಗೆ ಡ್ಯುಯಲ್ ಕ್ಸೆನನ್ ಲೈಟ್ಸ್ (ಲೊ ಹಾಗೂ ಹೈ ಬೀಮ್ ಲೈಟ್ಸ್).

02. ಹೆಡ್ ಅಪ್ ಡಿಸ್ ಪ್ಲೇ

02. ಹೆಡ್ ಅಪ್ ಡಿಸ್ ಪ್ಲೇ

ವಿದೇಶಗಳಲ್ಲಿ ವಾಹನಗಳ ವಿಂಡ್ ಸ್ಕ್ರೀನ್ ಪರದೆ ಮೇಲೆ ಪಾರದರ್ಶಕ ಮಾಹಿತಿ ಒದಗಿಸುವ ಹೆಡ್ ಅಪ್ ಪ್ಲೇ ತಂತ್ರಜ್ಞಾನವು ಸಾಮಾನ್ಯ ಸಂಗತಿಯಾಗಿದೆ. ಆದರೆ ಭಾರತಕ್ಕಿದು ಇನ್ನು ಹೊಸತನದ ಅನುಭವವಾಗಿದೆ.

01. ಪಾದಚಾರಿ ಗ್ರಹಿಕಾ ತಂತ್ರಜ್ಞಾನ

01. ಪಾದಚಾರಿ ಗ್ರಹಿಕಾ ತಂತ್ರಜ್ಞಾನ

ಆಧುನಿಕ ಕಾರುಗಳಲ್ಲಿ ಪಾದಚಾರಿ ಹಾಗೂ ಸೈಕಲ್ ಗ್ರಹಿಕಾ ತಂತ್ರಜ್ಞಾನಗಳನ್ನು ಆಳವಡಿಸಲಾಗುತ್ತದೆ. ಇದಕ್ಕಾಗಿ ರಾಡಾರ್ ಸೆನ್ಸಾರ್ ಆಳವಡಿಸಲಾಗುತ್ತದೆ. ಇದು ಸಿಟಿ ಡ್ರೈವಿಂಗ್ ಅನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ.


Most Read Articles

Kannada
English summary
Eight Car Features That Would Have Blown Your Mind In The Past
Story first published: Friday, March 27, 2015, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X