ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

By Nagaraja

ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನದಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಜಪಾನ್‌ನಿಂದ ಮಗದೊಂದು ಆಸಕ್ತಿದಾಯಕ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಲ್ಯಾಪ್ ಟಾಪ್ ಆಕಾರದಲ್ಲಿರುವ ಕಾರೊಂದನ್ನು ಜಪಾನ್ ಎಂಜಿನಿಯರ್‌ಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ.

ವಿಶೇಷವೆಂದರೆ ವಿಶ್ವದಲ್ಲೇ ಪ್ರಥಮ ಬಾರಿಗೆ ಎನ್ನಬಹುದಾದ ಈ ಕಾರನ್ನು ನಿಮ್ಮ ಕೈಚೀಲದಲ್ಲೇ ಹೊತ್ತುಕೊಂಡು ಸಾಗಬಹದುದಾಗಿದೆ. ಹೆಚ್ಚಿನ ಆಸಕ್ತಿದಾಯ ಮಾಹಿತಿ ಹಾಗೂ ಆಕರ್ಷಕ ಚಿತ್ರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ...

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಮೂಲ ವಿನ್ಯಾಸವು ಸ್ಕೇಟ್ ಬೋರ್ಡ್ ತರಹನೇ ಇರುವ ಈ ವಾಕ್ ಕಾರ್ (WalkCar) ಗಂಟೆಗೆ 10 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಭವಿಷ್ಯತ್ತಿನತ್ತ ಸಂಚಾರ ವಾಹಕ ಹುಡುಕುವ ಪ್ರಯತ್ನದಲ್ಲಿರುವ 26ರ ಹರೆಯದ ಯುವ ಎಂಜಿನಿಯರ್ ಕುನಿಯಾಕೊ ಸಾಟೋ (Kuniako Sato)ಎಂಬವರು ಈ ವೈಯಕ್ತಿಕ ಸಂಚಾರದ ಕಾರನ್ನು ಅವಿಷ್ಕರಿಸಿದ್ದಾರೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ನಿಮ್ಮ ಪಾಕೆಟ್ ನಲ್ಲಿಟ್ಟುಕೊಂಡು ಸಾಗಬಹುದಾದ ಈ ಕಾರು ಈಗ ಜಗತ್ತಿನ ಮೊತ್ತ ಮೊದಲ 'ಕಾರ್ ಇನ್ ಎ ಬ್ಯಾಗ್' (car in a bag) ಅಥವಾ ಚೀಲದಲ್ಲಿ ಕಾರು ಎಂಬ ಮನ್ನಣೆಗೆ ಪಾತ್ರವಾಗಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಸಾಟೋ ಅವರ ಈ ಪ್ರಯತ್ನಕ್ಕೆ ಕೊಕೊವಾ ಮೋಟಾರ್ಸ್ (Cocoa Motors) ಬೆಂಗಾವಲಾಗಿ ನಿಂತಿತ್ತು.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ನೋಡಲು ಟ್ಯಾಬ್ಲೆಟ್ ಅಥವಾ ಲ್ಯಾಪ್ ಟಾಪ್ ತರಹನೇ ಇರುವ ಈ ಅತಿ ಚಿಕ್ಕ ಕಾರು ಎರಡರಿಂದ ಮೂರು ಕೆ.ಜಿಗ ಭಾರವನ್ನಷ್ಟೇ ಹೊಂದಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ತಮ್ಮ ಈ ನೂತನ ತಂತ್ರಗಾರಿಕೆಯನ್ನು ಭವಿಷ್ಯದಲ್ಲಿ ಹೆಚ್ಚಿನ ಗ್ರಾಹಕರು ಬಳಕೆ ಮಾಡಲಿದ್ದಾರೆ ಎಂಬ ನಂಬಿಕೆಯನ್ನು ಸಾಟೋ ಹೊಂದಿದ್ದಾರೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಹಗುರ ಭಾರದ ಅಲ್ಯೂಮಿನಿಯಂ ಪರಿಕರಗಳನ್ನು ಹೊಂದಿರುವ ಈ ಟ್ಯಾಬ್ಲೆಟ್ 120 ಕೆ.ಜಿ ತೂಕವನ್ನು ಹೊರುವಷ್ಟು ಸಕ್ಷಮವಾಗಿದೆ. ಅಂದರೆ ಇದು ಓರ್ವ ವ್ಯಕ್ತಿಯನ್ನು ಹೊತ್ತುಕೊಂಡು ಸಾಗಲು ಬೇಕಾದಷ್ಟಾಗಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಮೂರು ತಾಸಿನಲ್ಲಿ ಚಾರ್ಜ್ ಮಾಡಿಸಬಲ್ಲ ಈ ಕಾರು ಗರಿಷ್ಠ 12 ಕೀ.ಮೀ. ವ್ಯಾಪ್ತಿ ವರೆಗೆ ಸಂಚರಿಸಬಹುದಾಗಿದೆ. ಈ ಮೂಲಕ ಸಿಟಿ ರೈಡಿಂಗ್ ಗೆ ಹೆಚ್ಚು ಸೂಕ್ತವೆನಿಸಲಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಇದರ ಬಳಕೆ ಕೂಡಾ ಅಷ್ಟೇ ಸುಲಭವಾಗಿದ್ದು, ಪ್ರಯಾಣಿಕ ಇದರ ಮೇಲೆ ನಿಂತುಕೊಂಡಾಗ ಸ್ವಯಂಚಾಲಿತವಾಗಿ ಸ್ಟ್ಯಾರ್ಟ್ ಆಗಲಿದ್ದು, ಬಳಿಕ ಕಾಲು ಕೆಳಗಿಳಿಸಿದರೆ ನಿಲುಗಡೆಯಾಗಲಿದೆ ಎಂದವರು ವಿವರಿಸುತ್ತಾರೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಇನ್ನು ಅತ್ತಿತ್ತ ತಿರುಗಬೇಕಾದ್ದಲ್ಲಿ ನಿರ್ದಿಷ್ಟ ಬದಿಗೆ ಹೆಚ್ಚು ಭಾರವನ್ನು ನೀಡಿದರಾಯಿತು. ಅಲ್ಲದೆ ಪಾರ್ಕಿಂಗ್ ಜಾಗದ ಕಿರಿಕಿರಿಯೂ ಇರುವುದಿಲ್ಲ. ನಿಮ್ಮ ಗುರಿ ತಲುಪಿದ ಬಳಿಕ ಬ್ಯಾಗಲ್ಲಿ ಹಾಕಿಕೊಂಡು ಸಾಗಬಹುದಾಗಿದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ವಿದ್ಯುತ್ ಕಾರು ಮೋಟಾರು ನಿಯಂತ್ರಣ ವ್ಯವಸ್ಥೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವೇಳೆ ತಮ್ಮ ಮನದಲ್ಲಿ ಇಂತಹದೊಂದು ನಾವೀನ್ಯ ಯೋಚನೆ ಹೊಳಿಯಿತು ಎಂದು ಸಾಟೋ ತಿಳಿಸುತ್ತಾರೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ಲ್ಯಾಪ್ ಟಾಪ್ ಮಾದರಿಯ ಪುಟ್ಟ ಕಾರು

ಅಷ್ಟಕ್ಕೂ ಈ ಪುಟ್ಟ ಕಾರನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ ಸರಿ ಸುಮಾರು 50,000 ರು.ಗಳಷ್ಟು ($800 USD) ದುಬಾರಿಯೆನಿಸಲಿದೆ. ಅಲ್ಲದೆ ಆಸಕ್ತರು ಮುಂಗಡವಾಗಿ ಬುಕ್ ಮಾಡಿಕೊಳ್ಳುವ ವ್ಯವಸ್ಥೆಯಿದ್ದು, 2016ರಲ್ಲಿ ಮಾರಾಟ ಆರಂಭವಾಗಲಿದೆ.

Most Read Articles

Kannada
English summary
Pocket-sized personal transporter Car-in-a-bag created in Japan
Story first published: Thursday, August 13, 2015, 12:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X