ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು!

By Nagaraja

ದೇಶದ ಸಾಮಾನ್ಯ ವಾಹನ ಸವಾರರ ದೃಷ್ಟಿಕೋನದಲ್ಲಿ 'ಮೈಲೇಜ್' ಅತಿ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಒಂದು ಹೊಸ ವಾಹನ ಖರೀದಿಗೂ ಮುನ್ನ ಹಿಂದು ಮುಂದು ನೋಡದೆ ಮೊದಲು ತಟಕ್ಕನೆ ಕೇಳುವ ಪ್ರಶ್ನೆಯೆಂದರೆ ಗಾಡಿ ಮೈಲೇಜ್ ಎಷ್ಟು ಕೊಡುತ್ತದೆ? ಎಂದಾಗಿರುತ್ತದೆ.

ಇವನ್ನೂ ಓದಿ: ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಇನ್ನೊಂದೆಡೆ ಇಂಧನ ಬೆಲೆಗಳು ಪದೇ ಪದೇ (ಕಳೆದ ಕೆಲವು ತಿಂಗಳನ್ನು ಹೊರತುಪಡಿಸಿ) ಏರಿಕೆಯಾಗುತ್ತಲೇ ಇದೆ. ಇದು ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಿದೆ. ಹಾಗಿರುವಾಗ ವಾಹನಗಳ ಇಂಧನ ಕ್ಷಮತೆಗೆ ಸಂಬಂಧಿಸಿದಂತೆ ಗ್ರಾಹಕರಲ್ಲಿರುವ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳನ್ನು ಇಲ್ಲಿ ಪಟ್ಟಿ ಮಾಡುವ ಪ್ರಯತ್ನ ಮಾಡಿದ್ದೇವೆ.

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಇಡೀ ವಾಹನ ಜಗತ್ತೇ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳಿಗೆ ಬದಲಿ ವ್ಯವಸ್ಥೆ ಕಂಡುಹುಡುಕುವ ನಿರಂತರ ಪ್ರಯತ್ನದಲ್ಲಿದೆ. ಸುಸ್ಥಿರ ಪರಿಸರ ಬೆಳವಣಿಗೆ ನಿಟ್ಟಿನಲ್ಲಿ ಅದು ಅತಿ ಅಗತ್ಯ ಕೂಡಾ. ಸದ್ಯ ವಾಹನಗಳಿಗೆ ಸಂಬಂಧಪಟ್ಟ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳತ್ತ ಗಮನ ಹಾಯಿಸಿರಿ.

1. ಬೆಳಗಿನ ಜಾವದಲ್ಲಿ ಇಂಧನ ತುಂಬಬೇಕು

1. ಬೆಳಗಿನ ಜಾವದಲ್ಲಿ ಇಂಧನ ತುಂಬಬೇಕು

ಹೌದು ತಾಪಮಾನ ಕಡಿಮೆಯಿರುವುದರಿಂದ ಬೆಳಗ್ಗಿನ ಜಾವದಲ್ಲಿ ಇಂಧನ ತುಂಬಬೇಕು ಎಂಬ ನಂಬಿಕೆಯಿದೆ. ಈ ಸಂದರ್ಭದಲ್ಲಿ ಇಂಧನ ಹೆಚ್ಚು ದಪ್ಪವಾಗಿರುತ್ತದೆ.

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಹೌದು, ತಾಪಮಾನ ಹೆಚ್ಚಿದ್ದರೆ ಇಂಧನ ಬತ್ತಿ ಹೋಗುವುದು ಆಗುವುದು ಗ್ಯಾರಂಟಿ. ಆದರೆ ಸತ್ಯಾಂಶ ಏನೆಂದರೆ ಆಧುನಿಕ ಬಹುತೇಕ ಎಲ್ಲ ಪೆಟ್ರೋಲ್ ಬಂಕ್‌ಗಳು ಸರಾಸರಿ ತಾಪಮಾನ ಕಾಯ್ದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ನೆಲದಡಿಯಲ್ಲಿ ಬೃಹತ್ ಟ್ಯಾಂಕ್‌ನಲ್ಲಿ ಇಂಧನ ಶೇಖರಣೆ ಮಾಡಲಾಗುತ್ತದೆ. ಇದರಿಂದ ಇಂಧನ ನಷ್ಟವಾಗುವ ಯಾವುದೇ ಭೀತಿಯುಂಟಾಗುವುದಿಲ್ಲ.

2. ಎಸಿ ಆಫ್ ಮಾಡಿ

2. ಎಸಿ ಆಫ್ ಮಾಡಿ

ಚಾಲನೆ ವೇಳೆ ಎಸಿ ಆಫ್ ಮಾಡಿಟ್ಟರೆ ಹೆಚ್ಚು ಇಂಧನ ಉಳಿಸಬಹುದೇ?

ಸತ್ಯಾಂಶ

ಸತ್ಯಾಂಶ

ಆಧುನಿಕ ಎಸಿ ಘಟಕಗಳು ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಇಂಧನ ಕ್ಷಮತೆ ಕಾಪಾಡುವಲ್ಲಿ ಸಕ್ಷಮವೆನಿಸಿದೆ. ಜೊತೆಗೆ ಈಗಿನ ಕಾರುಗಳು ಏರೋಡೈನಾಮಿಕ್ ವಿನ್ಯಾಸ ಹೊಂದಿರುವ ಹಿನ್ನೆಲೆಯಲ್ಲಿ ಎಸಿ ಆಫ್ ಮಾಡಿಟ್ಟು, ಕಾರಿನ ಗಾಜು ಅರ್ಧ ಕೆಲಕ್ಕೆ ಸರಿಸಿ ಸಂಚರಿಸುವುದು ಸರಿಯಾದ ಪ್ರವೃತ್ತಿಯಲ್ಲ. ಇದರಿಂದ ಎಸಿ ಉಳಿಸುವ ಬದಲು ಏರೋಡೈನಾಮಿಕ್ ಕಾರ್ಯ ಕ್ಷಮತೆಗೆ ಧಕ್ಕೆಯನ್ನುಂಟುಮಾಲಿದೆ.

3. ಐಡಲ್

3. ಐಡಲ್

ಟ್ರಾಫಿಕ್‌ ಸಿಗ್ನಲ್‌ನಲ್ಲಿ ಎಂಜಿನ್ ಸ್ಟಾರ್ಟ್- ಸ್ಟಾಪ್ ಮಾಡುವುದರಿಂದ ಇಂಧನ ನಷ್ಟ?

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಕಳೆದ ಕೆಲವು ವರ್ಷಗಳ ಹಿಂದಿನ ವರೆಗೂ ಇದರಲ್ಲಿ ಏನೋ ಮರ್ಮ ಅಡಿಗಿತ್ತು. ಆದರೆ ಆಧುನಿಕ ಕಾರ್ಬ್ಯೂರೇಟರ್ ಎಂಜಿನ್ ಹಾಗೂ ಗಣಕಯಂತ್ರ ನಿಯಂತ್ರಣದ ಎಂಜಿನ್ ಆಗಮನದೊಂದಿಗೆ ಎಂಜಿನ್ ಐಡಲ್‌ನಲ್ಲಿಡುವುದು ಹೆಚ್ಚಿನ ಇಂಧನ ವ್ಯಯವಾಗಲು ಕಾರಣವಾಗಲಿದೆ. ಕನಿಷ್ಠ 90 ಸೆಕೆಂಡುಗಿಂತಲೂ ಹೆಚ್ಚು ಹೊತ್ತು ನೀವು ಸಿಗ್ನಲ್‌ನಲ್ಲಿ ಗಾಡಿ ನಿಲ್ಲಿಸುವುದಾದ್ದಲ್ಲಿ ಎಂಜಿನ್ ಆಫ್ ಮಾಡಿಟ್ಟುಕೊಳ್ಳಿ.

4. ಟೈಲ್ ಗೇಟ್ ಕೆಳಕ್ಕೆ ಸರಿಸುವುದು

4. ಟೈಲ್ ಗೇಟ್ ಕೆಳಕ್ಕೆ ಸರಿಸುವುದು

ಗಾಳಿ ತಡೆಯನ್ನುಂಟು ಮಾಡುವ ಕಾರಣ ಪಿಕಪ್ ಟ್ರಕ್‌ನ ಟೈಲ್ ಗೇಟ್ ಕೆಳಕ್ಕೆ ಸರಿಸಲಾಗುತ್ತದೆ. ಇದರಿಂದ ಇಂಧನ ಉಳಿತಾಯ ಮಾಡಬಹುದೇ?

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಆಧುನಿಕ ಪಿಕಪ್ ಟ್ರಕ್‌ಗಳಲ್ಲಿ ಏರೋಡೈನಾಮಿಕ್ ವಿನ್ಯಾಸ ಹೊಂದಿದ್ದು, ಗಾಳಿ ಹಾಯಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿರುತ್ತದೆ.

5. ಆಟೋಮ್ಯಾಟಿಕ್ ಕಾರು

5. ಆಟೋಮ್ಯಾಟಿಕ್ ಕಾರು

ಆಟೋಮ್ಯಾಟಿಕ್ ವಾಹನಗಳಲ್ಲಿ ಮೈಲೇಜ್ ಕಡಿಮೆ?

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವಾಹನಗಿಂತಲೂ ಮ್ಯಾನುವಲ್ ಗಾಡಿಗಳಲ್ಲಿ ಹೆಚ್ಚಿನ ಮೈಲೇಜ್ ದೊರಕುತ್ತದೆ ಎಂಬ ಭಾವನೆಯಿದೆ. ಒಂದು ಹಂತದ ವರೆಗೂ ಇದು ನಿಜವಾದರೂ ತಂತ್ರಗಾರಿಕೆಯ ಸುಧಾರಣೆಯೊಂದಿಗೆ ಇದರಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.

6. ಪೆಟ್ರೋಲ್‌ಗೆ ಕಲಬೆರಕೆ

6. ಪೆಟ್ರೋಲ್‌ಗೆ ಕಲಬೆರಕೆ

ಮೈಲೇಜ್ ಹೆಚ್ಚಿಸುವ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ದೊರಕುವ ವಿವಿಧ ತರಹದ ಕಲಬೆರಕೆ ( additives)ಬಳಕೆ.

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ತಜ್ಞರೇ ವಿವರಣೆ ನೀಡುವಂತೆ ಇಂಧನಗಳಿಗೆ ಬಾಹ್ಯ ಸಂಯೋಜನೆಗಳ ಅಗತ್ಯವಿರುವುದಿಲ್ಲ. ಹೀಗಾಗಿ ಇಂತಹ ತಪ್ಪು ಕಲ್ಪನೆಗಳಿಗೆ ಮಾರು ಹೋಗದಿರಿ.

7. ಚಕ್ರಗಳಿಗೆ ಗಾಳಿ ತುಂಬುವುದು

7. ಚಕ್ರಗಳಿಗೆ ಗಾಳಿ ತುಂಬುವುದು

ಚಕ್ರಗಳ ಮಿತಿಗಿಂತಲೂ ಹೆಚ್ಚಿನ ಗಾಳಿ ತುಂಬುವುದರಿಂದ ಮುಂದಕ್ಕೆ ಚಲನೆ ಸುಲಭ? ಇದರಿಂದ ಪೆಟ್ರೋಲ್ ಉಳಿತಾಯ?

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಇಂತಹ ತಪ್ಪು ಕಲ್ಪನೆಗಳಿಗೆ ಆಸ್ಪದ ಕೊಡದೆ ಯಾವತ್ತೂ ತಯಾರಕರು ನೀಡಿರುವ ಸೂಚನೆಯಂತೆ ಚಕ್ರಗಳಿಗೆ ಗಾಳಿಯನ್ನು ಭರ್ತಿ ಮಾಡಬೇಕು. ಇಲ್ಲವಾದ್ದಲ್ಲಿ ಚಕ್ರಗಳ ಥ್ರೆಡ್‌ಗಳಿಗೆ ಅಪಾಯ ತಪ್ಪಿದ್ದಲ್ಲ.

8. ಪ್ರೀಮಿಯಂ ಪೆಟ್ರೋಲ್

8. ಪ್ರೀಮಿಯಂ ಪೆಟ್ರೋಲ್

ಪ್ರೀಮಿಯಂ ಪೆಟ್ರೋಲ್ ಬಳಕೆಯಿಂದ ಹೆಚ್ಚು ಮೈಲೇಜ್?

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಬಳಕೆಯಿಂದಾಗಿ ಹೆಚ್ಚಿನ ಮೈಲೇಜ್ ಗಿಟ್ಟಿಸಿಕೊಳ್ಳಬಹುದು ಎಂಬ ಮಾರಾಟ ತಂತ್ರ ಅನುಸರಿಸಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆಯಾಗಿದ್ದು, ತಯಾರಕರು ನೀಡುವ ವಾಹನ ಮ್ಯಾನುವಲ್ ಪುಸಕ್ತವನ್ನೇ ತೆರೆದು ನೋಡಿದರೆ ಸಾಮಾನ್ಯ ಇಂಧನದಲ್ಲೂ ಉತ್ತಮ ಇಂಧನ ಕ್ಷಮತೆ ಪಡೆಯಬಹುದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ.

ಕಾರು ಮೈಲೇಜ್ ತಪ್ಪು ಕಲ್ಪನೆ ಹಾಗೂ ಸತ್ಯಾಂಶಗಳು

ಮೈಲೇಜ್ ಬಗೆಗಿನ ತಪ್ಪು ಕಲ್ಪನೆಗಳು ನಿಮ್ಮ ಮನದಲ್ಲೂ ಹರಡಿದ್ದರೆ ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ. ಖಂಡಿತವಾಗಿಯೂ ನಮ್ಮ ಮುಂದಿನ ಲೇಖನದಲ್ಲಿ ಇದನ್ನು ಆಳವಡಿಸುವ ಪ್ರಯತ್ನ ಮಾಡಲಿದ್ದೇವೆ.

Most Read Articles

Kannada
English summary
Here are the myths and facts about the mileage of cars.
Story first published: Friday, November 28, 2014, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X