ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

By Nagaraja

'ಎದುರಾಳಿಯನ್ನು ಸೋಲಿಸಲಸಾಧ್ಯವಾದರೆ ಅವರ ಜೊತೆಗೆ ಕೈಜೋಡಿಸಿಕೊಳ್ಳಿ' - ಇಂದೊಂದು ಯುದ್ಧ ತಂತ್ರ ಮಾತ್ರ; ಹೌದು, ಇಂದಿನ ದಿನಗಳಲ್ಲಿ ಕಾರುಗಳ ಮಾರುಕಟ್ಟೆಯಲ್ಲೂ ಭಾರಿ ಪೈಪೋಟಿ ಕಂಡುಬರುತ್ತಿದೆ. ಇದೇ ಕಾರಣಕ್ಕಾಗಿ ನಕಲಿ ಜಾಲ ವ್ಯಾಪಕವಾಗುತ್ತಿದೆ. ಪ್ರಮುಖವಾಗಿಯೂ ಕಾರಿನ ವಿನ್ಯಾಸವನ್ನು ಕಾಪಿ ಮಾಡಲಾಗುತ್ತಿದೆ.

ಅಮಿತ ಭಾರ ಅಪಾಯವೇ?

ಚೀನಾ ವಸ್ತುಗಳೆಂದರೆ 'ನೊ ಗ್ಯಾರಂಟಿ ನೊ ವ್ಯಾರಂಟಿ' ಎಂಬ ಅಪವಾದವಿದ್ದಂತೆ ಕಾರುಗಳ ನಕಲಿ ಮಾಡುವುದರಲ್ಲಿ ಎತ್ತಿದ ಕೈ. ಇನ್ನೊಂದೆಡೆ ಭಾರತೀಯ ಕಾರು ಮಾರುಕಟ್ಟೆಯತ್ತ ಗಮನ ಹಾಯಿಸಿದಾಗ ಸ್ವಲ್ಪ ಮಟ್ಟಿಗಾದರೂ ನೈತಿಕತೆ ಕಾಪಾಡಿಕೊಂಡು ಬಂದಿರುವುದು ಪ್ರಶಂಸನೀಯ. ಹಾಗಿದ್ದರೂ ಒಂದೆರಡು ಇಂತಹ ಪ್ರಕರಣಗಳು ಇಲ್ಲೂ ದಾಖಲಾಗಿವೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಇಂದಿನ ಈ ಲೇಖನದಲ್ಲಿ ಜಗತ್ತಿನಾದ್ಯಂತ ಕಾರುಗಳ ನಕಲಿ ವಿನ್ಯಾಸ ಮಾಡಿರುವುದರ ಬಗ್ಗೆ ವಿವರವಾಗಿ ಹೇಳಿಕೊಡಲಿದ್ದೇವೆ. ಇಲ್ಲಿ ಚೀನಾ ಸಂಸ್ಥೆಗಳೇ ಮುಂದಿರುವುದು ವಿಪರ್ಯಾಸವೇ ಸರಿ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಇದನ್ನು ಸೂಕ್ಷ್ಮವಾಗಿ ಗಮನಿಸಿ...ಇದು ಗೀಲಿ ಪಂಡಾ (Geely Panda). ನಿಜವಾಗ್ಲು ಇದು ಯಾವ ಕಾರಿನ ನಕಲಿ ಎಂಬುದು ಗೊತ್ತೇ? ಉತ್ತರಕ್ಕಾಗಿ ಮುಂದಿನ ಸ್ಲೈಡರ್ ಕ್ಲಿಕ್ಕಿಸಿ...

ಮಾರುತಿ ಎಸ್ಟಾರ್/ಸುಜುಕಿ ಆಲ್ಟೊ

ಮಾರುತಿ ಎಸ್ಟಾರ್/ಸುಜುಕಿ ಆಲ್ಟೊ

ಚೀನಾದಲ್ಲಿರುವ ಗೀಲಿ ಪಂಡಾ ಕಾರನ್ನು ಪ್ರತ್ಯೇಕವಾಗಿ ನೋಡಿದಾಗ ಯಾವುದೇ ಕುಂದು ಕೊರತೆಗಳು ಕಾಣಿಸುವುದಿಲ್ಲ. ಬದಲಾಗಿ ಇದರ ವೃತ್ತಕಾರಾದ ಗ್ರಿಲ್ ಹಾಗೂ ಹೆಡ್‌ಲ್ಯಾಂಪ್‌ಗಳು ಆಕರ್ಷಕವೆನಿಸಿದೆ. ಆದರೆ ಇಲ್ಲಿ ಕೊಟ್ಟಿರುವ ಎಸ್ಟಾರ್ ಕಾರಿನೊಂದಿಗೆ ಹೋಲಿಸಿದಾಗ ಬಹುತೇಕ ವಿನ್ಯಾಸವು ನಕಲಿ ಎಂಬುದನ್ನು ನೀವೇ ಗಮನಿಸಬಹುದು.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಡೊಂಗ್‌ಫೆಂಗ್ ಇಕ್ಯೂ 2050 ( Dongfeng EQ 2050). ಇದ್ಯಾವ ನಕಲಿಯೋ?

ಹಮ್ಮರ್ ಎಚ್1

ಹಮ್ಮರ್ ಎಚ್1

ಅಮೆರಿಕದ ಐಕಾನಿಕ್ ವಾಹನವಾಗಿರುವ ಹಮ್ಮರ್ ಎಚ್1 ತದ್ರೂಪ ಸೃಷ್ಟಿಸಲು ಡೊಂಗ್‌ಫೆಂಗ್ ಇಕ್ಯೂ 2050 ಯಾವುದೇ ಕನಿಕರವನ್ನು ತೋರಿಲ್ಲ. ಇಲ್ಲಿ ಹೆಡ್‌ಲೈಟ್ ಹಾಗೂ ಗ್ರಿಲ್ ಹೊರತುಪಡಿಸಿ ಇತರೆಲ್ಲ ವಿನ್ಯಾಸವು ತದ್ರೂಪವಾಗಿದೆ. ನಿಸ್ಸಂಶವಾಗಿಯೂ ಮಿಲಿಟರಿ ವಾಹನಗಳಿಗೆ ಕಾಸ್ಮೆಟಿಕ್‌ಗಳ ಅಗತ್ಯವಿರುವುದಿಲ್ಲ. ಹಾಗಿದ್ದರೂ ಚೀನಾದ ಈ ವಾಹನವು ಸ್ವಲ್ಪ ನೈತಿಕತೆ ಬೀರಿದ್ದಲ್ಲಿ ಚೆನ್ನಾಗಿತ್ತು.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ದಿ ಗ್ರೇಟ್ ವಾಲ್ ಫ್ಲೋರಿಡ್ (Great Wall Florid) ವರ್ಸಸ್...

ಟೊಯೊಟಾ ಫಸ್ಟ್

ಟೊಯೊಟಾ ಫಸ್ಟ್

ಹೆಸರಿನಲ್ಲೆನೋ ಧಮ್ ಇದೆ. ಆದರೆ ಅಷ್ಟೇ ಜಾಣ ಕುರುಜುತಣ ಇಲ್ಲಿ ವ್ಯಕ್ತವಾಗುತ್ತಿದೆ. ಟೊಯೊಟಾ ಫಸ್ಟ್ ತದ್ರೂಪ ಆಗಿರುವ ದಿ ಗ್ರೇಟ್ ವಾಲ್ ಫ್ಲೋರಿಡ್‌‍ನ ವಿನ್ಯಾಸಗಾರರು ಬುದ್ಧಿಯೇ ಪ್ರಯೋಗಿಸಿಲ್ಲ ಎಂಬುದಂತೂ ಸ್ಪಷ್ಟ. ಒಟ್ಟಿನ್ಲಲಿ ಕಾಪಿ ಪೇಸ್ಟ್ ಕೆಲಸವಂತೂ ನಾಜೂಕಾಗಿ ಮಾಡುವಲ್ಲಿ ಯಶಶ್ವಿಯಾಗಿದ್ದಾರೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಟೆಂಪೊ ಟ್ರಾಕ್ಸ್ ಜುಡೋ (Tempo Trax Judo) ಇದರಲ್ಲೇನಿದೆ?

ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್

ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್

ನಕಲಿ ಕಾಯಕದಿಂದ ಐಷಾರಾಮಿ ವಾಹನಗಳನ್ನು ಹೊರತುಪಡಿಸಿಲ್ಲ. ವಿಭಿನ್ನ ಗ್ರಾಹಕರನ್ನು ಗುರಿಯಾಗಿರಿಸಿಕೊಂಡರೂ ಟೆಂಪೊ ಟ್ರಾಕ್ಸ್ ಜುಡೋ ವಿನ್ಯಾಸ ಗಮನಿಸಿದಾಗ ಭೆಂಝ್‌ನ ಜಿ ವ್ಯಾಗನ್‌ನಿಂದ ಪ್ರೇರಣೆ ಪಡೆದಂತಿದೆ. ಇದರ ಹೆಡ್‌ಲ್ಯಾಂಪ್, ವೀಲ್ ಆರ್ಚ್, ದೇಹ ವಿನ್ಯಾಸ ಎಲ್ಲವೂ ಅನುಕರಣೆ ಮಾಡುವುದರಲ್ಲಿ ಸಂಸ್ಥೆ ಯಶಸ್ವಿಯಾಗಿದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಲೈಫನ್ 320 (Lifan 320) : ಏನೋ ಮಾಡಲು ಹೋಗಿ ಏನು ಮಾಡಿದೆ ನೀನು?

ಮಿನಿ ಕೂಪರ್

ಮಿನಿ ಕೂಪರ್

ಜಗತ್ತಿನ ಅತ್ಯಂತ ಸುಂದರ ಕಾರುಗಳಲ್ಲಿ ಮಿನಿ ಕೂಪರ್ ಒಂದಾಗಿದೆ. ಆದರೆ ಕೂಪರ್ ವಿನ್ಯಾಸ ನಕಲಿ ಮಾಡುವಲ್ಲಿ ಲೈಫನ್ ಸಂಪೂರ್ಣ ವಿಫಲವಾಗಿರುವುದಂತೂ ಕಟು ಸತ್. ಇದು ಚೀನಾದ ನಕಲಿ ಪರಿಪಾಠಕ್ಕೆ ಮಗದೊಂದು ಉದಾಹರಣೆಯಷ್ಟೇ. ಇಲ್ಲಿ ನಕಲಿಯ ಮೌಢ್ಯತೆ ಎಷ್ಟಿತೆಂದರೆ ಲೈಸನ್ಸ್ ಪ್ಲೇಟ್ ಸಹ ಅದೇ ರೀತಿ ಕಾಪಿ ಪೇಸ್ಟ್ ಮಾಡುವ ಪ್ರಯತ್ನ ಮಾಡಲಾಗಿತ್ತು.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ದಿ ಅರೈನೆರಾ ಆಟೋಮೋಟಿವ್ ಹುಸ್ಸರಾಯಾ (Arrinera Automotive Hussaraya): ಹೆಸರು ಉಚ್ಛರಿಸುವುದೇ ದೊಡ್ಡ ಪೇಚಿಗೆ ಸಿಲುಕಿದಂತಾಗುತ್ತದೆ. ಇದನ್ನು ವಿನ್ಯಾಸವೇನೋ ಹೇಗಿರಬಹುದು?

ಲಂಬೋರ್ಗಿನಿ ರೆವೆಂಟನ್

ಲಂಬೋರ್ಗಿನಿ ರೆವೆಂಟನ್

ಈ ಎರಡು ಚಿತ್ರಗಳನ್ನು ನೋಡಿ ಅಸಲಿ ಲಂಬೋರ್ಗಿನಿ ಯಾವುದು ಎಂಬುದನ್ನು ಗುರುತಿಸಬಲ್ಲೀರಾ?. ನಕಲಿ ಎಂಬುದು ಚೀನಾಕ್ಕೆ ಮಾತ್ರ ಸೀಮಿತವಲ್ಲ. ಯಾಕೆಂದರೆ ಪೊಲೆಂಡ್‌ನ ಅರೈನೆರಾ ಆಟೋಮೋಟಿವ್ ಸಂಸ್ಥೆಯು, ಲಂಬೋರ್ಗಿನಿ ನಕಲಿ ಹುಸ್ಸರಾಯಾ ನಿರ್ಮಿಸಲು ಯಶಸ್ವಿಯಾಗಿದೆ. ಇದರ ಚಪ್ಪಟೆ ವಿನ್ಯಾಸ ಎಲ್ಲವೂ ನಕಲಿಯಾಗಿದೆ. ಇದು ಪೊಲೆಂಡ್‌ನ ಮೊದಲ ಸೂಪರ್ ಕಾರು ಸಹ ಹೌದು.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ನೀವೇ ಉಚ್ಚರಿಸಿ Shuanghuan CEO

ಬಿಎಂಡಬ್ಲ್ಯು ಎಕ್ಸ್5

ಬಿಎಂಡಬ್ಲ್ಯು ಎಕ್ಸ್5

ಜರ್ಮನಿಯ ಕಾರು ತಯಾರಿಕ ಸಂಸ್ಥೆಗಳು ಸಹ ಚೀನಾದ ನಕಲಿ ಕಾಟದಿಂದ ಹೊರತಾಗಿರಲಿಲ್ಲ. ಇಲ್ಲಿ ಕೊಟ್ಟಿರುವ ಶುವಾನ್‌ಗುವಾನ್ ಆವೃತ್ತಿಯು ಬಹುತೇಕ ಬಿಎಂಡಬ್ಲ್ಯು ಎಕ್ಸ್5 ವಿನ್ಯಾಸದ ನಕಲಿಯಾಗಿದೆ. ಇದು ಬದಿಯ ದೇಹ ವಿನ್ಯಾಸ, ಟೈಲ್ ಲ್ಯಾಂಪ್, ಪಿಲ್ಲರ್ ಎಲ್ಲವೂ ನಕಲಿಯೆನಿಸಿದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಹೌತೈ ಬೊಲಿಗರ್ (Hawtai Boliger)

ಪೋರ್ಷೆ ಕಯಿನ್

ಪೋರ್ಷೆ ಕಯಿನ್

ನಿಮಗೆಲ್ಲರಿಗೂ ತಿಳಿದಂತೆಯೇ ಪೋರ್ಷೆ ವಿಶ್ವದ ಪ್ರತಿಷ್ಠಿತ ಕಾರುಗಳಲ್ಲಿ ಒಂದಾಗಿದೆ. ಆದರೆ ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯು ನಕಲಿ ಕಾಟಕ್ಕೆ ಬಲಿಯಾಗಿದೆ. ಇದರ ಏರ್‌ಡ್ಯಾಮ್ ಎಲ್‌ಇಡಿ, ಎ,ಬಿ,ಸಿ ಪಿಲ್ಲರ್ ಎಲ್ಲವೂ ಅನುಕರಿಸಲ್ಪಟ್ಟಿದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಬಿಎಡಬ್ಲ್ಯು ಬಿ 90

ರೇಂಜ್ ರೋವರ್

ರೇಂಜ್ ರೋವರ್

ಚೀನಾದ ಮತ್ತೊಂದು ವಾಹನ ತಯಾರಕ ಸಂಸ್ಥೆಯಾಗಿರುವ ಬಿಎಡಬ್ಲ್ಯು, ಐಕಾನಿಕ್ ರೇಂಜ್ ರೋವರ್ ಕಾಪಿ ಮಾಡುವುದಕ್ಕೆ ಕಂಚಿತ್ತೂ ನಾಚಿಕೆ ತೋರಿಲ್ಲ. ಯಾಕೆಂದರೆ ಸಂಪೂರ್ಣ ವಿನ್ಯಾಸವು ಕಾಪಿ ಪ್ರಿಂಟ್ ತರಹನೇ ಇದೆ. ಇದು ನಿಜ್ಜಕ್ಕೂ ಅಚ್ಚರಿ ಮೂಡಿಸುತ್ತದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಗೀಲಿ ಜಿಇ (Geely GE)

ರೋಲ್ಸ್ ರಾಯ್ಸ್ ಫಾಟಂ

ರೋಲ್ಸ್ ರಾಯ್ಸ್ ಫಾಟಂ

ಅಪ್ಪಾ ನೋಡಿ, ಅಲ್ಲೊಂದು ರೋಲ್ಸ್ ರಾಯ್ಸ್! ಅಲ್ಲ ಮಗ ಅದು ಗೀಲಿ ಎಂಬ ಮಾತು ಅಪ್ಪನ ಬಾಯಿಯಿಂದ ಕೇಳುವಾಗ ಮಗನ ಮನಸ್ಸಲ್ಲಿ ಬೇಸರವುಂಟಾಗಬಹುದು. ಆದರೆ ಇದನ್ನು ಒಪ್ಪಲೇಬೇಕು. ಶ್ರೀಮಂತರ ಘನತೆಯ ಕಾರಾಗಿರುವ ರೋಲ್ಸ್ ರಾಯ್ಸ್ ಅನುಕರಿಸುವುದರಲ್ಲಿ ಗೀಲಿ ಯಶಸ್ವಿಯಾಗಿರುವುದಂತೂ ನಿಜ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಮಸ್ತಾಂಗ್ ಎಫ್16

ಆಡಿ ಎ4 ಅವಂತ್

ಆಡಿ ಎ4 ಅವಂತ್

ಒನ್, ಟು, ತ್ರಿ...ಮಗದೊಮ್ಮೆ ನೀವು ಭ್ರಮೆಗೊಳಗಾಗುವಿರಿ. ಚೀನಾದ ಮಸ್ತಾಂಗ್ 16 ಯುದ್ಧ ವಿಮಾನಗಳಿಂದ ಸ್ಫೂರ್ತಿ ಪಡೆದಿದ್ದಂತೆ? ಆದರೆ ನಿಜವಾಗ್ಲೂ ಇದು ಖೇದಕರ. ಯಾಕೆಂದರೆ ಇದು ಆಡಿ ವಿನ್ಯಾಸದಿಂದ ಕಾಪಿ ಮಾಡಲಾಗಿದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಟಾಟಾ ಸಫಾರಿ

ಲ್ಯಾಂಡ್ ರೋವರ್ ಡಿಸ್ಕವರಿ

ಲ್ಯಾಂಡ್ ರೋವರ್ ಡಿಸ್ಕವರಿ

ನಿಮಗೆಲ್ಲರಿಗೂ ತಿಳಿದಂತೆಯೇ ಟಾಟಾ ಸಫಾರಿ ದೇಶದ ಜನಪ್ರಿಯ ವಾಹನಗಳಲ್ಲಿ ಒಂದಾಗಿದೆ. ಆದರೆ ಎರಡು ಚಿತ್ರಗಳನ್ನು ಗಮನಿಸಿದಾಗ ನಿಮಗೆ ನೈಜತೆಯ ಬಣ್ಣ ಬಯಲಾಗಲಿದೆ. ಇದರ ದೇಹ ವಿನ್ಯಾಸ, ರೂಫ್ ಲೈನ್, ಗ್ರೀನ್‌ಹೌಸ್ ಹಾಗೂ ವಿಂಡೋ ಎಲ್ಲವೂ ನಕಲಿ ರೂಪವಾಗಿದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಬಿವೈಡಿ ಎಫ್8

ಮರ್ಸಿಡಿಸ್ ಬೆಂಝ್ ಸಿಎಲ್‌ಕೆ

ಮರ್ಸಿಡಿಸ್ ಬೆಂಝ್ ಸಿಎಲ್‌ಕೆ

ಇಷ್ಟೆಲ್ಲ ಆದ ಮೇಲೆ ತಾವೇಕೆ ಕಮ್ಮಿ ಎಂಬಂತೆ ವರ್ತಿಸಿರುವ ಚೀನಾದ ಬಿವೈಡಿ, ಲಗ್ಷುರಿ ಬೆಂಝ್ ಗಾಡಿಯನ್ನೇ ನಕಲಿ ಮಾಡಿದೆ. ಇದು ದೇಹ ಭಾಷೆಯಿಂದ ಹಿಡಿದು ಎಲ್ಲವನ್ನು ಅನುಕರಣೆ ಮಾಡುವ ಪ್ರಯತ್ನ ಮಾಡಿದೆ.

ನಕಲಿ, ನಕಲಿ ಕಾರುಗಳೇ ನಕಲಿ; ಹೀಂಗಾದ್ರೆ ಹೇಂಗೆ?

ಶುವನ್‌ಗುವಾನ್ ನೋಬ್ಲ್ (Shuanguan Noble)

ಸ್ಮಾರ್ಟ್ ಫಾರ್ ಟು

ಸ್ಮಾರ್ಟ್ ಫಾರ್ ಟು

ಸಂಪೂರ್ಣ ಡಿಸೈನ್ ಮರುಕಲ್ಪಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇಲ್ಲಿ ವಿನ್ಯಾಸಗಾರರು ಎಷ್ಟು ಸೋಮರಿಗಳು ಎಂಬುದು ಇದರಿಂದಲೇ ವ್ಯಕ್ತವಾಗುತ್ತದೆ.

ನಕಲಿ ನಕಲಿ...

ನಕಲಿ ನಕಲಿ...

ಅಂತಿಮವಾಗಿ ವಾಹನ ತಯಾರಕ ಸಂಸ್ಥೆಯು ಸಣ್ಣ ಬಜೆಟ್‌ನಲ್ಲಿ ಹೆಚ್ಚು ಲಾಭ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದಾಗ ಅಥವಾ ರೇಖಾಚಿತ್ರ ಚಿತ್ರಿಕರಿಸಲು ನುರಿತ ವಿನ್ಯಾಸಗಾರರ ಕೊರತೆ ಕಾಡಿದಾಗ ಇಂತಹ ನಕಲಿ ಸಿದ್ಧಾಂತಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಚೀನಾದ ವಿಚಾರಕ್ಕೆ ಬಂದಾಗ ಸರಕಾರವೇ ಇಂತಹ ವಾಹನ ಸಂಸ್ಥೆಗಳ ಪರವಾಗಿರುವುದು ನಿಜಕ್ಕೂ ವಿಪರ್ಯಾಸ... ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

Most Read Articles

Kannada
English summary
We have compiled a list of cars for you to go through and guess which car they resemble. While most of these vehicles are from China, we did find a couple of Indian cars too that just might have been closely ‘inspired' by models from other automakers.
Story first published: Wednesday, April 30, 2014, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X