Just In
- 3 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 4 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 5 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 5 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Movies Bhagyalakshmi: ಶ್ರೇಷ್ಠಾ-ತಾಂಡವ್ ಮದುವೆಗೆ ಕುಸುಮಾ ಹಾರೈಕೆ; ಸತ್ಯ ಗೊತ್ತಾದ್ರೆ ಐತೆ ಮಾರಿ ಹಬ್ಬ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಶದ ಪ್ರಖ್ಯಾತ ಉದ್ಯಮಿಗಳ ಜನಪ್ರಿಯ ಕಾರುಗಳು
ಈ ತನಕ ಸಾಮಾನ್ಯ ಸುದ್ದಿಗಳಿಗಿಂತಲೂ ವಿಭಿನ್ನವಾಗಿ ಓದುಗರನ್ನು ಸೆಳೆಯುವಂತಹ ಸುದ್ದಿಗಳನ್ನು ಕೊಡುವುದರತ್ತ ಗಮನ ಕೇಂದ್ರಿತವಾಗಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವೀಗ, ದೇಶದ ಪ್ರಖ್ಯಾತ ಉದ್ಯಮಿಗಳ ಜನಪ್ರಿಯ ಕಾರುಗಳ ಬಗ್ಗೆ ಹೇಳಿಕೊಡಲಿದ್ದೇವೆ.
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಉದ್ಯಮಿಗಳ ಪಾಲು ಮಹತ್ತರವಾಗಿದೆ. ಹಾಗೆಯೇ ಉದ್ಯಮಿ ಎಂದಾಕ್ಷಣ ನಮಗೆ ಮೊದಲ ನೋಟದಲ್ಲೇ ರತನ್ ಟಾಟಾ, ಅಂಬಾನಿ ಸೋದರರು ಹಾಗೂ ಪ್ರೇಮ್ ಜೀ ಅವರಂತಹ ಹೆಸರುಗಳು ಮನದಲ್ಲಿ ಹೊಳೆಯುತ್ತವೆ.
ಇದನ್ನೇ
ಆಧಾರವಾಗಿಟ್ಟುಕೊಂಡು
ದೇಶದ
ಉದ್ಯಮಿಗಳು
ಹೊಂದಿರುವ
ಜನಪ್ರಿಯ
ಕಾರುಗಳ
ಬಗ್ಗೆ
ಮಾಹಿತಿ
ಕೊಡಲಿದ್ದೇವೆ.
ಇದಕ್ಕಾಗಿ
ಫೋಟೊ
ಫೀಚರ್
ತಿರುವುತ್ತಾ
ಮುಂದಕ್ಕೆ
ಸಾಗಿರಿ...
ಇತರ ಸೆಲೆಬ್ರಿಟಿಗಳ ರೀತಿಯಲ್ಲಿಯೇ ಭಾರತೀಯ ಉದ್ಯಮಿಗಳು ಸಹ ಕಾರು ಪ್ರೇಮವನ್ನು ಹೊಂದಿದ್ದಾರೆ. ಅಂತವರು ಸಾಮಾನ್ಯ ಸೇರಿದಂತೆ ವಿಶ್ವದ ಐಷಾರಾಮಿ ಕಾರುಗಳಲ್ಲಿ ಪಯಣಿಸುವುದನ್ನು ಇಷ್ಟಪಡುತ್ತಾರೆ.
anil ambani- lamborghini gallardo
ಧೀರುಬಾಯ್ ಅಂಬಾನಿ ಕಿರಿಯ ಪುತ್ರರಾಗಿರುವ ಅನಿಲ್ ಧೀರುಬಾಯ್ ಅಂಬಾನಿ ದೇಶದ ಪ್ರಖ್ಯಾತ ಉದ್ಯಮಿಗಳಲ್ಲಿ ಒಬ್ಬರು. ಅನಿಲ್ ದಿರುಬಾಯ್ ಅಂಬಾನಿ ಗ್ರೂಪ್‌ನ ಮುಖ್ಯಸ್ಥರೂ ಆಗಿರುವ ಅನಿಲ್ ಬಳಿ ಅತ್ಯಾರ್ಷಕ ಲಂಬೋರ್ಗಿನಿ ಗಲರ್ಡೊ ಕಾರಿದೆ. ಇಟಲಿಯ ಈ ವಾಹನ ತಯಾರಕ ಸಂಸ್ಥೆಯು ದುಬಾರಿ ಸೂಪರ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಹೆಸರುವಾಸಿಯಾಗಿದೆ.
mukesh ambani- maybach 62
ಇನ್ನು ಅನಿಲ್ ಅಂಬಾನಿ ಹಿರಿಯ ಸಹೋದರನಾಗಿರುವ ಮುಖೇಶ್ ಧೀರುಬಾಯ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥರು ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಫೋರ್ಚುನ್ ಗ್ಲೋಬಲ್ 500 ರ‌್ಯಾಂಕಿಂಗ್‌ನಲ್ಲಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ 99ನೇ ಸ್ಥಾನ ಪಡೆದಿದೆ. ಅಂದ ಹಾಗೆ ಅಂಬಾನಿ ಬಳಿ ಜರ್ಮನಿಯ ಲಗ್ಷುರಿ ಕಾರು ತಯಾಕರ ಸಂಸ್ಥೆಯಾದ ಮೆಬಾಕ್‌ನ 62 ಕಾರಿದೆ.
azim hashim premji- toyota corolla
ದೇಶದ ಹಿರಿಯ ಉದ್ಯಮಿಗಳಲ್ಲಿ ಒಬ್ಬರಾಗಿರುವ ವಿಪ್ರೋ ಲಿಮಿಟೆಡ್ ಮುಖ್ಯಸ್ಥ ಅಜೀಂ ಹಾಶಮ್ ಪ್ರೇಮ್‌ಜೀ ಮಾನವ ಹಿತಾಕಾಂಕ್ಷಿ ಕೂಡಾ ಹೌದು. ಫೋರ್ಬ್ಸ್ ಪಟ್ಟಿ ಪ್ರಕಾರ ವಿಶ್ವದ ಶ್ರೀಮಂತರ ಪೈಕಿ 41ನೇ ಸ್ಥಾನದಲ್ಲಿರುವ 67ರ ಹರೆಯದ ಪ್ರೇಮ್‌ಜೀ ಬಳಿ ಟೊಯೊಟಾದ ಕರೊಲ್ಲಾ ಕಾರಿದೆ.
kumar mangalam birla- audi 5 series
ದೇಶದ ಮತ್ತೊಬ್ಬ ಪ್ರಖ್ಯಾತ ಕೈಗಾರಿಕೋದ್ಯಮಿ ಆಗಿರುವ ಕುಮಾರ್ ಮಂಗಳಂ ಬಿರ್ಲಾ, ಜನಪ್ರಿಯ ಆದಿತ್ಯ ಬಿರ್ಲ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಬಿರ್ಲ ಗ್ರೂಪ್‌ನ ಈ ಸರ್ವಾಧಿಕಾರಿ ದೇಶದಲ್ಲಿ ಅತಿ ಹೆಚ್ಚು ಸೆಲೆಬ್ರಿಟಿಗಳು ಇಷ್ಟಪಡುವ ಆಡಿ ಕಂಪನಿಯ 5 ಸಿರೀಸ್ ಕಾರನ್ನು ಹೊಂದಿದ್ದಾರೆ.
ratan naval tata- mercedes benz a class
ಇನ್ನು ದೇಶಕ್ಕೆ ಅತಿ ಅಗ್ಗದ ಕಾರು ಪರಿಚಯ ಮಾಡಿಕೊಟ್ಟಿರುವ ಅತ್ಯಂತ ಜನಪ್ರಿಯ ಉದ್ಯಮಿ ರತನ್ ನವಲ್ ಟಾಟಾ, ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಹೊಂದಿದ್ದಾರೆ. ಹಾಗಿದ್ದರೂ ತಮ್ಮದೇ ಆದ ಟಾಟಾ ಮೋಟಾರ್ಸ್ ವಾಹನ ತಯಾರಕ ಸಂಸ್ಥೆ ಇರುವಾಗ ಜರ್ಮನಿಯ ಈ ಐಷಾರಾಮಿ ಕಾರಿನಲ್ಲಿ ಯಾಕೆ ಸಂಚರಿಸುತ್ತಾರೆ ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ..?
shiv nadar- rolls royce phantom
ಭಾರತದ ಕೈಗಾರಿಕೋದ್ಯಮಿ ಹಾಗೂ ಮಾನವ ಹಿತಾಕಾಂಕ್ಷಿ ಆಗಿರುವ ಎಚ್‌ಸಿಎಲ್ ಸ್ಥಾಪಕ ಹಾಗೂ ಮುಖ್ಯಸ್ಥ ಶಿವ ನಾಡಾರ್, ಅತಿ ಪುರಾತನ ಕಾರು ಕಂಪನಿಯಾಗಿರುವ ರೋಲ್ಸ್ ರಾಯ್ಸ್‌ನ ಫಾಂಟಮ್ ಕಾರನ್ನು ಇಷ್ಟಪಡುತ್ತಾರೆ.
subhash chandra- mercedes benz viano
ಝೀ ಮನರಂಜನಾ ಎಂಟರ್‌ಪ್ರೈಸಸ್ ಲಿಮಿಟೆಡ್ ಹಾಗೂ ಎಸ್ಸೆಲ್ ಗ್ರೂಪ್ ಆಫ್ ಕಂಪೆನೀಸ್ ಪ್ರಚಾರಕ ಆಗಿರುವ ಸುಭಾಷ್ ಚಂದ್ರ ಅವರು ಮರ್ಸಿಡಿಸ್ ಬೆಂಝ್ ವಿಯನೊ ಎಂಪಿವಿ ಕಾರನ್ನು ಇಷ್ಟಪಡುತ್ತಾರೆ.
sunil bharti mittal- mercedes benz s500
ಹಾಗೆಯೇ ಭಾರ್ತಿ ಎಂಟರ್‌ಪ್ರೈಸಸ್ ಸ್ಥಾಪಕ, ಮುಖ್ಯಸ್ಥ ಹಾಗೂ ಸಿಇಒ ಆಗಿರುವ ಸುನಿಲ್ ಭಾರ್ತಿ ಮಿತ್ತಲ್, ಅತ್ಯಾಕರ್ಷಕ ಮರ್ಸಿಡಿಸ್ ಬೆಂಝ್ ಎಸ್500 ಕಾರನ್ನು ಹೊಂದಿದ್ದಾರೆ.
vijay mallya- maybach 62
ಇನ್ನು ಲಾಸ್ಟ್ ಬಟ್ ನಾಟ್ ಲೀಸ್ಟ್ ಎನ್ನುವಂತೆಯೇ ಮದ್ಯದೊರೆ ಯುಬಿ ಗ್ರೂಪ್ ಚೆಯರ್‌ಮೆನ್ ವಿಜಯ್ ಮಲ್ಯ ಪ್ರತಿಷ್ಠಿತ ಮೆಬಾಕ್ ಕಂಪನಿಯ ಅದ್ದೂರಿ 62 ಕಾರನ್ನು ಹೊಂದಿದ್ದಾರೆ.
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...